ಪ್ರಿಯ ನಿವಾಸಿ,
ನಿಮಗೆ ತೃಪ್ತಿ ತರುವ ವಿಷಯವೇನೆಂದರೆ ,ಈಗ ಆಧಾರ್ ಕುಟುಂಬದಲ್ಲಿ 90 ಕೋಟಿಗಿಂತ ಹೆಚ್ಚು ಆಧಾರ್ ಹೊಂದಿದ್ದಾರೆ!
ನಿಮ್ಮ ಆಧಾರ್, ಸರ್ಕಾರ (ಮತ್ತು ಖಾಸಗಿ ಸಂಸ್ಥೆಗಳು) ಒದಗಿಸುವ ವಿವಿಧ ಸೇವೆಗಳನ್ನು ಪಡೆಯಲು ಪರಿಣಾಮಕಾರಿಯಾದ ಸಾಧನವಾಗಿದೆ. ನಿಮ್ಮ ಮಾಹಿತಿಯನ್ನು ಆಧಾರ್ ನಲ್ಲಿ ಕಾಲ ಕಾಲಕ್ಕೆ ಅಪ್ಡೇಟ್ ಮಾಡಿಕೊಳ್ಳುವುದು ಸಹ ಬಹು ಮುಖ್ಯವಾಗಿರುತ್ತದೆ.
ನೀವು ನಿಮ್ಮ ವಿಳಾಸಬದಲಿಸಿದ್ದಲ್ಲಿ ; ಅಥವಾ, ಇತ್ತೀಚಿಗೆ ನಿಮ್ಮ ಮಗುವಿಗೆ 5 ವರ್ಷ (ಅಥವಾ 15 ವರ್ಷ) ತುಂಬಿದ್ದಲ್ಲಿ; ಅಥವಾ ನಿಮ್ಮ ಆಧಾರ್ ನಲ್ಲಿರುವ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆ ಬದಲಾಗಿದ್ದಲ್ಲಿ; ಅಥವಾ, ಹೊಸದಾಗಿ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆಯನ್ನು ಸೇರಿಸಲು ಬಯಸಿದಲ್ಲಿ - ನೀವು ನಿಮ್ಮ ವಿವರಗಳನ್ನು ಆಧಾರ್ ಡೇಟಾಬೇಸ್ ನಲ್ಲಿ “ಅಪ್ಡೇಟ್”ಮಾಡಿಕೊಳ್ಳತಕ್ಕದ್ದು.
ಈ ಕೆಳಗಿನ ಮೂರು ಸರಳ ವಿಧಾನಗಳಲ್ಲಿ ಯಾವುದಾದರೊಂದನ್ನು ಬಳಸಿ ನಿಮ್ಮ ಮಾಹಿತಿಯನ್ನು ಆಧಾರ್ ಡೇಟಾಬೇಸ್ ನಲ್ಲಿ ಅಪ್ಡೇಟ್ ಮಾಡಬಹುದು;:
ಎ. ಆನ್ ಲೈನ್ ಸೆಲ್ಫ್ ಸರ್ವೀಸ್ ಪೋರ್ಟಲ್(ಡೆಮೊಗ್ರಾಫಿಕ್ ಮಾಹಿತಿಗಳನ್ನು ಅಪ್ಡೇಟ್ ಮಾಡಲು)
ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ನಲ್ಲಿ ನೊಂದಣಿಯಾಗಿದ್ದಲ್ಲಿ, ನೀವು https://resident.uidai.net.in ಭೇಟಿಮಾಡಿ ಅಲ್ಲಿರುವ ಸೂಚನೆಗಳನ್ನ ಅನುಸರಿಸಿ ನಿಮ್ಮ ವಿಳಾಸದ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳಬಹುದು(ಅಥವಾ ವಿವಾಹದ ನಂತರ ಹೆಸರು ಬದಲಿಸಲು ಇತ್ಯಾದಿ).
ಬಿ. ಶಾಶ್ವತ ನೋಂದಣಿ ಕೇಂದ್ರಗಳು (ಡೆಮೊಗ್ರಾಫಿಕ್ ಅಥವಾ ಬಯೋಮೆಟ್ರಿಕ್ಸ್ ಅಥವಾ ಭಾವಚಿತ್ರ ಅಪ್ಡೇಟ್ ಮಾಡಲು)
ನೀವುಹತ್ತಿರದ ಶಾಶ್ವತ ನೋಂದಣಿ ಕೇಂದ್ರಕ್ಕೆ (Permanent Enrolment Center) ಸಂಬಂಧಿತ ಗುರುತು/ವಿಳಾಸದ ದಾಖಲೆಗಳ ಪ್ರತಿಯೊಂದಿಗೆ ಭೇಟಿ ನೀಡಿ, ನಿಮ್ಮ ಭಾವಚಿತ್ರ ಮತ್ತು ಬಯೋಮೆಟ್ರಿಕ್ಸ್ ಗಳನ್ನು ಸಹ ಅಪ್ಡೇಟ್ ಮಾಡಿಕೊಳ್ಳಬಹುದು ಶಾಶ್ವತ ನೋಂದಣಿ ಕೇಂದ್ರಗಳ ಪಟ್ಟಿ /ವಿವರಗಳನ್ನು ಕೆಳಕಂಡ ಲಿಂಕ್ ಮೂಲಕ ಲಭ್ಯವಿರುತ್ತದೆ. https://appointments.uidai.gov.in/easearch.aspx
ಸಿ. ಅಂಚೆ ಮೂಲಕ
ಆಧಾರ್ ಡೇಟಾ ಅಪ್ಡೇಟ್ / ತಿದ್ದುಪಡಿ ಅರ್ಜಿಯನ್ನು ಅಂಚೆ ಮೂಲಕ ಕಳುಹಿಸಿ. ಅರ್ಜಿಯನ್ನು ಈ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು http://uidai.gov.in/images/application_form_11102012.pdf ಈ ಲಿಂಕ್ ನಲ್ಲಿ ಲಗತ್ತಿಸಬೇಕಾದ ದಾಖಲೆಗಳ ಪಟ್ಟಿಯು ಲಭ್ಯವಿರುತ್ತದೆ https://resident.uidai.net.in/update-data.. ಪೂರ್ಣಗೊಳಿಸಿದ ಅರ್ಜಿಯನ್ನು ಸಂಬಂಧಿತ ದಾಖಲೆಗಳೊಂದಿಗೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ(UIDAI) ಕೆಳಕಂಡ ಎರಡರಲ್ಲಿ ಯಾವುದಾದರೊಂದು ವಿಳಾಸಕ್ಕೆ ಕಳುಹಿಸಿ.
Post Box No. 10, Chhindwara, Madhya Pradesh – 480001 (India)

or

Post Box No. 99, Banjara Hills, Hyderabad– 500034 (India)
ನಿಮ್ಮ ಆಧಾರ್ ವಿವರಗಳು ಸದಾ ಅಪ್ಡೇಟಾಗಿರುತ್ತದೆಂದು ಭಾವಿಸುತ್ತೇವೆ.
ನಿಮ್ಮ ನಂಬುಗೆಯ ,
ನೋಂದಣಿ ಮತ್ತು ಅಪ್ಡೇಟ್ ತಂಡ, ಯು.ಐ.ಡಿ.ಎ.ಐ ಮುಖ್ಯ ಕಾರ್ಯಾಲಯ
1947
Email : help@uidai.gov.in
ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ ಸಾರ್ವಜನಿಕ ಹಿತಾಸಕ್ತಿಗಾಗಿ ನೀಡಲಾಗಿದೆ
www.uidai.gov.in
Disclaimer: This e-mail may contain confidential and/or legally privileged information and is meant for the intended recipient only. If you have received this e-mail in error and are not the intended recipient, kindly notify us at help@uidai.gov.in and then delete this e-mail immediately from your system. You are also hereby notified that any use, any form of re-production, dissemination, copying, disclosure, modification, distribution and/or publication of this e-mail, its contents or its attachment/s other than by its intended recipient is strictly prohibited and may be unlawful.