ಆಧಾರ್ ಮುದ್ರಣ
View AllAadhaar Brochure June 2023
Aadhaar authentication transactions climbed to 2.31 billion in March
आधार धारकों ने मार्च में 2.31 बिलियन का किया लेन-देन
Aadhaar authentication rose to 2.31 bn in Mar 2023
Going digital has played a special role as a catalyst in our economy
ಆಧಾರ್ ದೂರದರ್ಶನ ಪ್ರಸಾರ
View Allಪ್ರೆಸ್ ಬಿಡುಗಡೆ
View All
Aadhaar authentication clocks 1.96 billion transactions in April, 19% more than same month last fiscal
29 May 2023

UIDAI scaling up capacity building of Aadhaar operators to further improve residents’ experience
29 May 2023

UIDAI allows residents to verify email/mobile number seeded with Aadhaar
8 May 2023

Aadhaar authentication transactions climb to 2.31 billion in March; Aadhaar enabled e-KYC jumps by 16 per cent
27 Apr 2023

UIDAI - IIT Bombay join hands to develop touchless biometric capture system
11 Apr 2023
ಆಧಾರ್ ಸಂಖ್ಯೆ
ಎಫ್ ಎ ಕ್ಯೂಗಳು
ನಿವಾಸಿಯು, ಭಾವಿಗುಪ್ರಾದ ಜಾಲತಾಣಗಳು - https://uidai.gov.in/ ಅಥವಾ https://eaadhaar.uidai.gov.inಗೆ ಭೇಟಿ ನೀಡುವ ಮೂಲಕ ಇ-ಆಧಾರ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ನಿವಾಸಿಯು ಈ ಕೆಳಗಿನ ಮಾರ್ಗಗಳನ್ನು ಅನುಸರಿಸುವ ಮೂಲಕ ಇ-ಆಧಾರ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
- ನೋಂದಣಿ ಸಂಖ್ಯೆಯನ್ನು ಬಳಸುವ ಮೂಲಕ: ನಿವಾಸಿಯು 28 ಅಂಕೆಗಳ ನೋಂದಣಿ ಸಂಖ್ಯೆಯನ್ನು ಸಂಪೂರ್ಣ ಹೆಸರು ಮತ್ತು ಪಿನ್ ಕೋಡಿನೊಂದಿಗೆ ಉಪಯೋಗಿಸುವ ಮೂಲಕ ಇ-ಆಧಾರ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಡೌನ್ ಲೋಡ್ ಪ್ರಕ್ರಿಯೆಯಲ್ಲಿ, ಒಂದು ಸಲದ ಸಂಕೇತ ಪದವನ್ನು (ಒಟಿಪಿ) ನೋಂದಣಿ ಮಾಡಲಾಗಿರುವ ಮೊಬೈಲು ಸಂಖ್ಯೆಗೆ ಸ್ವೀಕರಿಸಲಾಗುವುದು. ನಿವಾಸಿಯು, ಇ-ಆಧಾರ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವ ಸಲುವಾಗಿ ಒಂದು ಸಲದ ಸಂಕೇತಪದಕ್ಕೆ ಬದಲಾಗಿ ಟಿಒಟಿಪಿಯನ್ನೂ ಸಹ ಉಪಯೋಗಿಸಿಕೊಳ್ಳಬಹುದು. ಎಂ-ಮೊಬೈಲ್ ಅನ್ವಯವನ್ನು ಬಳಸುವ ಮೂಲಕ ಟಿಒಟಿಪಿಯನ್ನು ತಂತ್ರಾಂಶ ಅನ್ವಯದಿಂದ ಪಡೆದುಕೊಳ್ಳಬಹುದು.
- ಆಧಾರ್ ಸಂಖ್ಯೆಯನ್ನು ಬಳಸುವ ಮೂಲಕ: ನಿವಾಸಿಯು 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಸಂಪೂರ್ಣ ಹೆಸರು ಮತ್ತು ಪಿನ್ ಕೋಡ್ ನೊಂದಿಗೆ ಬಳಸಿಕೊಳ್ಳುವ ಮೂಲಕ ಇ-ಆಧಾರ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಡೌನ್ ಲೋಡ್ ಪ್ರಕ್ರಿಯೆಯಲ್ಲಿ, ಒಂದು ಸಲದ ಸಂಕೇತ ಪದವನ್ನು (ಒಟಿಪಿ) ನೋಂದಣಿ ಮಾಡಲಾಗಿರುವ ಮೊಬೈಲು ಸಂಖ್ಯೆಗೆ ಸ್ವೀಕರಿಸಲಾಗುವುದು. ನಿವಾಸಿಯು, ಇ-ಆಧಾರ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವ ಸಲುವಾಗಿ ಒಂದು ಸಲದ ಸಂಕೇತ ಪದಕ್ಕೆ ಬದಲಾಗಿ ಟಿಒಟಿಪಿಯನ್ನೂ ಸಹ ಉಪಯೋಗಿಸಿಕೊಳ್ಳಬಹುದು. ಎಂ-ಮೊಬೈಲ್ ಅನ್ವಯವನ್ನು ಬಳಸುವ ಮೂಲಕ ಟಿಒಟಿಪಿಯನ್ನು ತಂತ್ರಾಂಶ ಅನ್ವಯದಿಂದ ಪಡೆದುಕೊಳ್ಳಬಹುದು.
ನಿವಾಸಿಯು ಇ-ಆಧಾರ್ ಅನ್ನು ವೀಕ್ಷಿಸುವ ಸಲುವಾಗಿ ’ಅಡೋಬ್ ರೀಡರ್’ನ ಅಗತ್ಯತೆಯಿರುತ್ತದೆ. ನಿಮ್ಮ ತಂತ್ರಾಂಶ ಅನ್ವಯದಲ್ಲಿ ಅಳವಡಿಸಲಾಗಿರುವ ’ಅಡೋಬ್ ರೀಡರ್’ನ್ನು ನೀವು ಹೊಂದಿರುವಿರಿ. ತಂತ್ರಾಂಶ ಅನ್ವಯದಲ್ಲಿ ಅಡೋಬ್ ರೀಡರನ್ನು ಅಳವಡಿಸುವ ಸಲುವಾಗಿ https://get.adobe.com/reader/ಗೆ ಭೇಟಿ ನೀಡಿರಿ.
ದೊಡ್ಡ ಅಕ್ಷರಗಳಲ್ಲಿರುವ ಹೆಸರಿನ ಮೊದಲ 4 ಅಕ್ಷರಗಳು ಮತ್ತು ಹುಟ್ಟಿದ ವರ್ಷದ (YYYY) ಸಂಯೋಜನೆಯನ್ನು ಸಂಕೇತಪದವನ್ನಾಗಿ ಬಳಸಬಹುದು.
ಉದಾಹರಣೆಗೆ
ಉದಾಹರಣೆ 1
ಹೆಸರು: SURESH KUMAR
ಹುಟ್ಟಿದ ವರ್ಷ: 1990
ಸಂಕೇತಪದ: SURE1990
ಉದಾಹರಣೆ 2
ಹೆಸರು: SAI KUMAR
ಹುಟ್ಟಿದ ವರ್ಷ: 1990
ಸಂಕೇತಪದ: SAIK1990
ಉದಾಹರಣೆ 3
ಹೆಸರು: P. KUMAR
ಹುಟ್ಟಿದ ವರ್ಷ: 1990
ಸಂಕೇತಪದ: P.KU1990
ಉದಾಹರಣೆ 4
ಹೆಸರು: RIA
ಹುಟ್ಟಿದ ವರ್ಷ: 1990
ಸಂಕೇತಪದ: RIA1990
ಅಂಕೀಯ ಸಹಿಯನ್ನು ದೃಢೀಕರಿಸುವ ಸಮಯದಲ್ಲಿ ಗಣಕ ಯಂತ್ರವು ಅಂತರಜಾಲ ಸಂಪರ್ಕವನ್ನು ಹೊಂದಿರತಕ್ಕದ್ದು.
- ’ದೃಢೀಕರಣವು ತಿಳಿದಿರುವುದಿಲ್ಲ’ ಬಿಂಬದ ಮೇಲೆ ಬಲ ಕ್ಲಿಕ್ ಮಾಡಿರಿ ಹಾಗೂ ’ಸಹಿಯನ್ನು ದೃಢೀಕರಿಸಿ’ ಇದರ ಮೇಲೆ ಕ್ಲಿಕ್ ಮಾಡಿರಿ
- ನೀವು ಸಹಿಯ ದೃಢೀಕರಣ ಸ್ಥಿತಿಗತಿಯ ವಿಂಡೋ ಅನ್ನು ಪಡೆಯುವಿರಿ, ’ಸಹಿಯ ಗುಣಲಕ್ಷಣಗಳ ಮೇಲೆ ಕ್ಲಿಕ್ ಮಾಡಿರಿ.
- ’ಪ್ರಮಾಣಪತ್ರವನ್ನು ತೋರಿಸು’ ಇದರ ಮೇಲೆ ಕ್ಲಿಕ್ ಮಾಡಿರಿ
- 'NIC sub-CA for NIC 2011, ಎಂಬುದಾಗಿ ಕರೆಯಲ್ಪಡುವ ಒಂದು ಪ್ರಮಾಣೀಕರಣ ಮಾರ್ಗವು ಇದೆಯೇ ಎಂಬುದನ್ನು ಪರಿಶೀಲಿಸಿರಿ. ಇದು, ದಾಖಲೆಗೆ ಸಹಿ ಮಾಡುವ ವೇಳೆಯಲ್ಲಿ ಬಳಸಿಕೊಳ್ಳಲಾದ ಅಂಕೀಯ ಪ್ರಮಾಣಪತ್ರದ ಮಾಲೀಕರನ್ನಾಗಿ 'NIC sub-CA for NIC 2011, ರಾಷ್ಟ್ರೀಯ ಮಾಹಿತಿ ಕೇಂದ್ರವನ್ನು ಗುರುತಿಸುತ್ತದೆ.
- 'NIC sub-CA for NIC 2011, ರಾಷ್ಟ್ರೀಯ ಮಾಹಿತಿ ಕೇಂದ್ರ ಎಂಬುದಾಗಿ ಕರೆಯಲ್ಪಡುವ ಪ್ರಮಾಣೀಕರಣ ಮಾರ್ಗವನ್ನು ಗುರುತಿಸಿ, ’ಟ್ರಸ್ಟ್’ ಟ್ಯಾಬ್ ಅನ್ನು ಕ್ಲಿಕ್ ಮಾಡಿ ಹಾಗೂ ತದನಂತರ ‘ವಿಶ್ವಾಸಾರ್ಹತೆಯ ಗುರುತಿಸುವಿಕೆಗಳಿಗೆ ಸೇರಿಸಿರಿ’
- ತದನಂತರದಲ್ಲಿ ಬರುವ ಯಾವುದೇ ಭದ್ರತಾ ಪ್ರಶ್ನೆಗೆ ’ಒಕೆ’ ಎಂಬುದಾಗಿ ಉತ್ತರಿಸಿರಿ.
- ‘ಈ ಪ್ರಮಾಣಪತ್ರವನ್ನು ಒಂದು ವಿಶ್ವಾಸಾರ್ಹತೆ ಮೂಲವಾಗಿ ಬಳಸಿ’ ಇದಕ್ಕಾಗಿ (✔) ಕ್ಷೇತ್ರವನ್ನು ಪರಿಶೀಲಿಸಿರಿ ಹಾಗೂ ಈ ವಿಂಡೊ ಮತ್ತು ಮುಂದಿನ ವಿಂಡೋವನ್ನು ಮುಚ್ಚುವುದಕ್ಕಾಗಿ ’ಒಕೆ’ಯನ್ನುಎರಡು ಸಲ ಕ್ಲಿಕ್ ಮಾಡಿರಿ.
- ದೃಢೀಕರಣವನ್ನು ಕಾರ್ಯಗತಗೊಳಿಸುವುದಕ್ಕಾಗಿ ’ದೃಢೀಕರಣ ಸಹಿ’ಯ ಮೇಲೆ ಕ್ಲಿಕ್ ಮಾಡಿರಿ.
ಟಿಪ್ಪಣಿ - 'NIC sub-CA for NIC 2011, ರಾಷ್ಟ್ರೀಯ ಮಾಹಿತಿ ಕೇಂದ್ರ’ ವನ್ನು ವಿಶ್ವಾಸಾರ್ಹ ಗುರುತು ಎಂಬುದಾಗಿ, ಸಿಸಿಎಯಿಂದ ಅಂಕೀಯ ಸಹಿಗಳೊಂದಿಗೆ ಯಾವುದೇ ತದನಂತರದ ದಾಖಲೆಗಳನ್ನು ತೆರೆದಾಗ ಸ್ವಯಂಚಾಲಿತವಾಗಿ ದೃಢೀಕರಿಸಲಾಗುವುದು.
As per Aadhaar Act, e-Aadhaar is equally valid like Physical Copy of Aadhaar for all purposes. For UIDAI circular on validity of e Aadhaar, please visit https://uidai.gov.in/images/uidai_om_on_e_aadhaar_validity.pdf
- ಎ) ನಿಮ್ಮ ಪಾರ್ಶ್ವಚಿತ್ರಣವನ್ನು ತೆರೆಯಿರಿ
- ಬಿ) ಮೇಲ್ತುದಿಯ ಆರ್ ಎಚ್ ಎಸ್ ಮೂಲೆಯ ಮೇಲೆ ಕ್ಲಿಕ್ ಮಾಡಿರಿ
- ಸಿ) ‘ಕ್ಯೂಆರ್-ಸಂಕೇತ (ಕೋಡ್) ತೋರಿಸಿ’ – ಇದನ್ನು ಆಯ್ಕೆ ಮಾಡಿರಿ
- ಡಿ) ಪಾರ್ಶ್ವಚಿತ್ರಣವು ಸಂಕೇತಪದದ ರಕ್ಷಣೆಯನ್ನು ಹೊಂದಿದ್ದಲ್ಲಿ ಸಂಕೇತಪದವನ್ನು ಪುನರ್-ಊಡಿಕೆ ಮಾಡುವ ಸಲುವಾಗಿ ಒಂದು ಪಾಪ್-ಅಪ್ ಕಾಣಿಸಿಕೊಳ್ಳುವುದು
- ಇ) ಕ್ಯೂಆರ್ ಸಂಕೇತವು ಕಾಣಿಸಿಕೊಳ್ಳುವುದು
- ಎಫ್) ಲಭ್ಯವಿರುವ ಆಯ್ಕೆಗಳಿಂದ ಹಂಚಿಕೊಳ್ಳುವ ಒಂದು ಆಯ್ಕೆಯನ್ನು ಆಯ್ದುಕೊಳ್ಳಿರಿ.
ನಿವಾಸಿಯು ಬಯೋಮೆಟ್ರಿಕ್ ಮಾಹಿತಿಯನ್ನು ವೀಕ್ಷಣೆಗಾಗಿ ಎರಡು ರೀತಿಗಳಲ್ಲಿ ಮುಕ್ತಗೊಳಿಸಿಕೊಳ್ಳಬಹುದು.
- ಎ) ತಾತ್ಕಾಲಿಕವಾಗಿ ಮುಕ್ತಗೊಳಿಸುವುದು – 10 ನಿಮಿಷಗಳಿಗಾಗಿ ಮುಕ್ತಗೊಳಿಸಲಾಗುವುದು
- ಬಿ) ಶಾಶ್ವತವಾಗಿ ಮುಕ್ತಗೊಳಿಸುವುದು- ಶಾಶ್ವತವಾಗಿ ಮುಕ್ತಗೊಳಿಸಲಾಗುವುದು.
ಟಿಪ್ಪಣಿ: ಬಯೋಮೆಟ್ರಿಕ್ ಮಾಹಿತಿಯ ವೀಕ್ಷಣೆಗಾಗಿ ಶಾಶ್ವತವಾಗಿ ಮುಕ್ತಗೊಳಿಸಲು ಅದು 6 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ನಿವಾಸಿಯು ಮುಂದಿನ 6 ಗಂಟೆಗಳವರೆಗೆ ದೃಢೀಕರಣವನ್ನು ಮಾಡಲು ಸಾಧ್ಯವಾಗುವುದಿಲ್ಲ.
ಹೌದು, ನೋಂದಾಯಿತ ಮೊಬೈಲು ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ. ಒಂದು ಸಲದ ಸಂಕೇತಪದವನ್ನು ಹಂಚಿಕೊಳ್ಳಲಾಗುವುದು ಮತ್ತು ಎಂ-ಆಧಾರ್ ಆಪ್ ನಲ್ಲಿರುವ ನೋಂದಾಯಿತ ಮೊಬೈಲು ಸಂಖ್ಯೆಯ ಮೂಲಕ ಸ್ವಯಂಚಾಲಿತವಾಗಿ ಭರ್ತಿ ಮಾಡಲಾಗುವುದು. ಒಂದು ವೇಳೆ ನಿಮ್ಮ ಮೊಬೈಲು ಸಂಖ್ಯೆಯನ್ನು ಆಧಾರ್ ಜೊತೆ ನೋಂದಣಿ ಮಾಡಿಸಿಕೊಂಡಿಲ್ಲವಾದಲ್ಲಿ, ನಿಮ್ಮ ಸಮೀಪದ ಆಧಾರ್ ನೋಂದಣಿ/ಇಂದಿನದಿನದನ್ನಾಗಿ ಮಾಡುವಿಕೆಯ ಕೇಂದ್ರಕ್ಕೆ ಭೇಟಿಕೊಡಿರಿ.
ನೋಂದಾಯಿತ ಮೊಬೈಲು ಸಂಖ್ಯೆ ಎಂದರೆ ನಿಮ್ಮ ಆಧಾರ್ ಸಂಖ್ಯೆಯ ಜೊತೆ ಸಂಪರ್ಕಿಸಲಾಗಿರುವ ಮೊಬೈಲು ಸಂಖ್ಯೆ.
ಆಂಡ್ರಾಯ್ಡ್ ಪಾಠಾಂತರಗಳು (ವರ್ಷನ್) 5.0 ಮತ್ತು ಅಧಿಕ
ಓರ್ವ ಬಳಕೆದಾರರು ತಮ್ಮ ಸಾಧನದಲ್ಲಿ ತಮ್ಮ ಆಧಾರ್ ನಲ್ಲಿ ಎಲ್ಲವೂ ಒಂದೇ ಮೊಬೈಲು ಸಂಖ್ಯೆಯನ್ನು ಹೊಂದಿರುವಂತಹ ಗರಿಷ್ಠ 3 ಪಾರ್ಶ್ವಚಿತ್ರಣಗಳನ್ನು ಸೇರಿಸಬಹುದು. ಸ್ವಯಂಚಾಲಿತವಾಗಿ ಭರ್ತಿಯಾಗಿರುವ ಒಂದು ಸಲದ ಸಂಕೇತಪದವು ಊರ್ಜಿತವಾಗಿರುತ್ತದೆ ಮತ್ತು ಆದ್ದರಿಂದ ಬಳಕೆದಾರರು ಇತರೆ ಮೊಬೈಲು ಸಂಖ್ಯೆಯೊಂದಿಗೆ ನೋಂದಣಿ ಮಾಡಿಸಿಕೊಂಡಿರುವ ಇತರೆ ಪಾರ್ಶ್ವಚಿತ್ರಣಗಳನ್ನು ಸೇರಿಸಲು ಸಾಧ್ಯವಿರುವುದಿಲ್ಲ. ನಿಮ್ಮ ಕುಟುಂಬದ ಸದಸ್ಯರುಗಳು, ನೀವು ನಿಮ್ಮ ಆಧಾರ್ ನಲ್ಲಿ ನೋಂದಣಿ ಮಾಡಿಸಿರುವ ಮೊಬೈಲು ಸಂಖ್ಯೆಯನ್ನೇ ಹೊಂದಿದ್ದಲ್ಲಿ, ಅವರುಗಳ ಪಾರ್ಶ್ವಚಿತ್ರಣವನ್ನು ನೀವು ನಿಮ್ಮ ಸಾಧನದಲ್ಲಿ ಸೇರಿಸಬಹುದು.
ಏಕ ಕಾಲದಲ್ಲಿ ಒಂದು ಸಾಧನದಲ್ಲಿ ಒಂದು ಆಧಾರ್ ಪಾರ್ಶ್ವಚಿತ್ರಣವು ಮಾತ್ರ ಸಕ್ರಿಯವಾಗಿರುತ್ತದೆ. ಸಿಮ್ ಅನ್ನು ಮತ್ತೊಂದು ಸಾಧನದಲ್ಲಿ ಸೇರಿಸುವ ಮೂಲಕ ಮತ್ತೊಂದು ಸಾಧನದಲ್ಲಿ ನೀವು ಪಾರ್ಶ್ವಚಿತ್ರಣವನ್ನು ಸೃಷ್ಟಿಸಿದ್ದಲ್ಲಿ, ಹಿಂದಿನ ಪಾರ್ಶ್ವಚಿತ್ರಣವು ನಿಷ್ಕ್ರಿಯಗೊಳ್ಳುತ್ತದೆ ಮತ್ತು ಹಳೆಯ ಸಾಧನದಲ್ಲಿ ಕಾರ್ಯಾಚರಣೆಯನ್ನು ಪ್ರಯತ್ನಿಸಿದ್ದಲ್ಲಿ ಹಳೆಯ ಸಾಧನದಿಂದ ಪಾರ್ಶ್ವಚಿತ್ರಣವನ್ನು ತೆಗೆದುಹಾಕಲಾಗುವುದು.
ಸಮಯಾಧಾರಿತ ಒಂದು ಸಲದ ಸಂಕೇತಪದವು ತಂತ್ರಾಂಶ ಅನ್ವಯದಿಂದ ಸ್ವಯಂಚಾಲಿತವಾಗಿ ತಾತ್ಕಾಲಿಕವಾಗಿ ಪಡೆಯಲಾದ ಸಂಕೇತಪದವಾಗಿರುತ್ತದೆ, ಅದನ್ನು ಎಸ್ಎಂಎಸ್ ಆಧಾರಿತ ಒಂದು ಸಲದ ಸಂಕೇತಪದಕ್ಕೆ ಬದಲಾಗಿ ಬಳಸಿಕೊಳ್ಳಬಹುದು.
ಇಲ್ಲ, ಎಂ-ಆಧಾರ್ ಐಒಎಸ್ ಸಾಧನಗಳಿಗೆ ಊರ್ಜಿತವಾಗಿರುವುದಿಲ್ಲ.
ಇಲ್ಲ, ಎಂ-ಆಧಾರ್ ಸ್ಥಿರ ಸಾಧನಗಳ ಮೇಲೆ ಕಾರ್ಯನಿರ್ವಹಿಸುವುದಿಲ್ಲ.
ಈ ವೈಲಕ್ಷಣವು ನಿವಾಸಿಯ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸುರಕ್ಷಿತವಾಗಿಡುವ ಮೂಲಕ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ದೃಢೀಕರಣದ ಸುಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಆಗಿರುತ್ತದೆ. ಬಯೋಮೆಟ್ರಿಕ್ ಮಾಹಿತಿಯನ್ನು ಆಧಾರ್ ಹೊಂದಿರುವವರು ಹೊರತೆಗೆಯುವವರೆಗೆ (ತಾತ್ಕಾಲಿಕವಾಗಿ) ಅಥವಾ ಸುರಕ್ಷಿತವಾಗಿಡುವಿಕೆಯ ವ್ಯವಸ್ಥೆಯನ್ನು ದುರ್ಬಲಗೊಳಿಸುವವರೆಗೆ ಬಯೋಮೆಟ್ರಿಕ್ ಮಾಹಿತಿಯು ಸುರಕ್ಷಿತವಾಗಿರುತ್ತದೆ.
ಎಂ-ಆಧಾರ್ ಅನ್ನು ಸಂಪರ್ಕ ಕಲ್ಪಿಸುವ ಮತ್ತು ಭಾವಿಗುಪ್ರಾದಿಂದ ಮಾಹಿತಿಯನ್ನು ಡೌನ್ ಲೋಡ್ ಮಾಡಿಕೊಳ್ಳುವ ಅಗತ್ಯತೆಯಿರುತ್ತದೆ.
- ಎ) ನಿಮ್ಮ ಪಾರ್ಶ್ವಚಿತ್ರಣವನ್ನು ತೆರೆಯಿರಿ
- ಬಿ) ಆರ್ ಎಚ್ ಎಸ್ ಮೂಲೆಯ ಮೇಲೆ ಕ್ಲಿಕ್ ಮಾಡಿರಿ
- ಸಿ) ಇ-ಕೆವೈಸಿ ಹಂಚಿಕೆಯ ಮೇಲೆ ಆಯ್ಕೆ ಮಾಡಿಕೊಳ್ಳಿರಿ/ಸಂಪರ್ಕವನ್ನು ಪಡೆದುಕೊಳ್ಳಿರಿ. ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ. ಸಂಕೇತಪದವನ್ನು ಪುನ: ಊಡಿಕೆ ಮಾಡಿರಿ.
- ಡಿ) ಲಭ್ಯವಿರುವ ಜಿ-ಮೇಲ್, ಬ್ಲ್ಯೂಟೂತ್, ಶೇರ್ ಇಟ್, ಸ್ಕೈಪ್, ಇತ್ಯಾದಿಗಳಿಂದ ಒಂದು ಹಂಚಿಕೊಳ್ಳುವ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿರಿ.
ವಿದ್ಯುನ್ಮಾನೀಯ ಅರಿವು ಅಥವಾ ಇ-ಕೆವೈಸಿ ಬ್ಯಾಂಕುಗಳು ಮುಂತಾದ ಸಂಸ್ಥೆಗಳು ಬಳಸಿಕೊಳ್ಳುವ ನಿವಾಸಿ ದೃಢೀಕರಣದ ಒಂದು ಮಾರ್ಗವಾಗಿರುತ್ತದೆ. ಅದನ್ನು ವಿದ್ಯುನ್ಮಾನೀಯವಾಗಿ ಒಂದು ವಿಳಾಸದ ಸಾಕ್ಷಾಧಾರವನ್ನಾಗಿ ಸಲ್ಲಿಸಲು ನಿವಾಸಿಗೆ ಅವಕಾಶ ಮಾಡಿಕೊಡುತ್ತದೆ, ಅದು ಆಧಾರ್ ಕಾರ್ಡಿನ ಒಂದು ಊರ್ಜಿತವಾದಂತಹ ಝೆರಾಕ್ಸ್ ಪ್ರತಿಯಾಗಿರುತ್ತದೆ.
ಎಂ-ಆಧಾರ್ ನಲ್ಲಿ ಒಂದು ಸಲದ ಸಂಕೇತಪದವನ್ನು ಕೈಯಿಂದ ಊಡಿಕೆ ಮಾಡಲು ಅನುವು ಇರುವುದಿಲ್ಲ. ಇದು ಒಂದು ಭದ್ರತಾ ವೈಲಕ್ಷಣವಾಗಿರುತ್ತದೆ. ಅದು ಎಸ್ಎಮ್ಎಸ್ ಗಾಗಿ ನಿರೀಕ್ಷಿಸುತ್ತಿರುವುದಾದಲ್ಲಿ, ದಯವಿಟ್ಟು ತಂತ್ರಾಂಶ ಅನ್ವಯದಿಂದ ದೂರ ಹೋಗಬೇಡಿರಿ. ಒಂದು ಸಲದ ಸಂಕೇತಪದವನ್ನು ಸ್ವೀಕರಿಸಿದ ಕೂಡಲೇ ಆಧಾರ್ ಸ್ವಯಂಚಾಲಿತವಾಗಿ ಅದನ್ನು ಓದುವುದು.
ಪ್ರಥಮ ಹೆಜ್ಜೆಯಾಗಿ ತಂತ್ರಾಂಶ ಅನ್ವಯವು ತೆರೆದುಕೊಂಡ ಕೂಡಲೆಯೇ ಸಂಕೇತಪದವನ್ನು ಕೇಳುವುದು. ಬಳಕೆದಾರರು ಕನಿಷ್ಠ 8 ಹಾಗೂ ಗರಿಷ್ಠ 12 ಅಕ್ಷರಗಳ ಒಂದು ಸಂಕೇತಪದವನ್ನು ಊಡಿಕೆ ಮಾಡತಕ್ಕದ್ದು. ಸಂಕೇತಪದವು ಕಡೆಯ ಪಕ್ಷ 1 ಸಂಖ್ಯೆ, 1 ಅಕ್ಷರ, 1 ವಿಶೇಷ ವೈಲಕ್ಷಣವನ್ನು(@,#,&,%,*,!,-,(,) ) ಹಾಗೂ ದೊಡ್ಡ ಅಕ್ಷರಗಳಲ್ಲಿ 1 ಅಕ್ಷರವನ್ನು ಹೊಂದಿರತಕ್ಕದ್ದು, ಉದಾಹರಣೆಗೆ: Sharma@123.
- Select dropdown from the top left corner of the app.
- ಬಿ) ಸೆಟ್ಟಿಂಗ್ಸ್ ಗೆ ಹೋಗಿರಿ
- ಸಿ) ಪರಿಶೀಲನಾ ಅಂಕಣವನ್ನು ನಿರ್ಬಂಧಿಸಿರಿ: ಪ್ರತಿಯೊಂದು ಬಾರಿಗೂ ಸಂಕೇತಪದವನ್ನು ಕೇಳಿರಿ.
ನಿವಾಸಿಯು ಈ ಕೆಳಗಿನ ಕ್ರಮಗಳನ್ನು ಅನುಸರಿಸುವ ಮೂಲಕ ಪಾರ್ಶ್ವಚಿತ್ರಣವನ್ನು ವೀಕ್ಷಿಸಬಹುದು:
- ಎ) ನಿಮ್ಮ ಪಾರ್ಶ್ವಚಿತ್ರಣವನ್ನು ತೆರೆಯಿರಿ ಹಾಗೂ ಮೇಲ್ತುದಿಯ ಬಲಭಾಗದಲ್ಲಿ ಮೆನು ಮೇಲೆ ಕ್ಲಿಕ್ ಮಾಡಿರಿ
- ಬಿ) ಪಾರ್ಶ್ವಚಿತ್ರಣವನ್ನು ತೆಗೆದುಹಾಕುವ ಆಯ್ಕೆಯನ್ನು ಆಯ್ದುಕೊಳ್ಳಿರಿ
- ಸಿ) ಪಾರ್ಶ್ವಚಿತ್ರಣ ಸಂಕೇತಪದವನ್ನು ಊಡಿಕೆ ಮಾಡುವ ಮೂಲಕ ಸ್ವಯಂ ನೀವೇ ದೃಢೀಕರಣಗೊಳಿಸುವ ಮೊದಲು ನಿಮ್ಮ ಮೊಬೈಲು ಸಾಧನದಲ್ಲಿ ಅಂತರಜಾಲ ಸಂಪರ್ಕವಿರುವುದನ್ನು ಖಚಿತಪಡಿಸಿಕೊಳ್ಳಿರಿ.
- ಡಿ) ಆಪ್ ಪಾರ್ಶ್ವಚಿತ್ರಣವನ್ನು ತೆಗೆದುಹಾಕುವುದು.
- ಎ) ಮುಖ ಪುಟ ಪರದೆಯ ಮೇಲೆ ಮೆನುವಿನಿಂದ “ಸಂಕೇತಪದ ಪುನರ್-ಜೋಡಣೆ”ಯನ್ನು ಆಯ್ಕೆ ಮಾಡಿಕೊಳ್ಳಿರಿ
- ಬಿ) ಎಲ್ಲಾ ಕಡ್ಡಾಯ ಕ್ಷೇತ್ರಗಳನ್ನೂ ಒದಗಿಸಿರಿ, ತದನಂತರ ಪರದೆಯ ಕೆಳಭಾಗದಲ್ಲಿರುವ “ಸಂಕೇತಪದ ಪುನರ್-ಜೋಡಣೆ” ಗುಂಡಿಯ ಮೇಲೆ ಕ್ಲಿಕ್ ಮಾಡಿರಿ
- ಸಿ) ಪುನರ್-ಜೋಡಣೆಗಾಗಿ ಹೊಸ ಸಂಕೇತಪದವನ್ನು ಊಡಿಕೆ ಮಾಡಿರಿ.
- ಎ) ನಿಮ್ಮ ಪಾರ್ಶ್ವಚಿತ್ರಣವನ್ನು ತೆರೆಯಿರಿ
- ಬಿ) ಅಪ್ ಡೇಟ್ ಮಾಡಲಾದ ಆಧಾರ್ ಮಾಹಿತಿಯ ವೀಕ್ಷಣೆಗಾಗಿ ಮೇಲ್ತುದಿಯ ಬಲ ಮೂಲೆಯಲ್ಲಿ ಅಪ್ ಡೇಟ್ ಮಾಡಲಾದ ಪಾರ್ಶ್ವಚಿತ್ರಣವನ್ನು ವೀಕ್ಷಿಸಿ’, ಇದನ್ನು ಆಯ್ಕೆ ಮಾಡಿಕೊಳ್ಳಿರಿ.
- ಸಿ) ಸಂಪರ್ಕತೆಗೊಂಡಾಗ ಒಂದು ಸಲದ ಸಂಕೇತಪದವನ್ನು (OTP) ಕಳುಹಿಸಲಾಗುವುದು ಮತ್ತು ಸ್ವಯಂಚಾಲಿತವಾಗಿ ಭರ್ತಿ ಮಾಡಲಾಗುವುದು, ಪಾರ್ಶ್ವಚಿತ್ರಣವನ್ನು ಖಚಿತಪಡಿಸಿಕೊಳ್ಳಲು ಮತ್ತು ವೀಕ್ಷಿಸಲು ’ಓಕೆ’ಯನ್ನು ಸಂಪರ್ಕಿಸಿ.
- ಪಾರ್ಶ್ವಚಿತ್ರಣ ಸಿಂಕ್ ಅನ್ನು ಪ್ರಾರಂಭಿಸುವುದಕ್ಕೆ ಮುಂಚಿತವಾಗಿ ನಿಮ್ಮ ಮೊಬೈಲು ಸಾಧನದಲ್ಲಿ ಜಾಲಸಂಪರ್ಕ ಇರುವುದನ್ನು ಖಚಿತಪಡಿಸಿಕೊಳ್ಳಿರಿ.
ಈ ಕೆಳಗಿನ ಕ್ರಮಗಳನ್ನು ಅನುಸರಿಸುವ ಮೂಲಕ ನಿವಾಸಿಯು ತಮ್ಮ ಪಾರ್ಶ್ವಚಿತ್ರಣವನ್ನು ವೀಕ್ಷಿಸಬಹುದು.
- ಎ) ಆಪ್ ನ ಮುಖಪುಟದ ಮೇಲೆ ನಿಮ್ಮ ಪಾರ್ಶ್ವಚಿತ್ರಣವನ್ನು ಒತ್ತಿರಿ
- ಬಿ) ಪಾರ್ಶ್ವಚಿತ್ರಣ ಸಂಕೇತಪದವನ್ನು ಊಡಿಕೆ ಮಾಡುವ ಮೂಲಕ ಸ್ವಯಂ ನೀವೇ ದೃಢೀಕರಿಸಿರಿ.
- ಸಿ) ಪಾರ್ಶ್ವಚಿತ್ರಣ ಪರದೆಯಲ್ಲಿ ವಿಳಾಸವನ್ನು ವೀಕ್ಷಿಸುವ ಸಲುವಾಗಿ ನಿಮ್ಮ ಪಾರ್ಶ್ವಚಿತ್ರಣವನ್ನು ಮೀಟಿರಿ.
- ಎ) 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಊಡಿಕೆ ಮಾಡಿರಿ ಅಥವಾ ನಿಮ್ಮ ಆಧಾರ್ ಕಾರ್ಡ್ ಅನ್ನು ಸ್ಕ್ಯಾನ್ ಮಾಡಿರಿ
- ಬಿ) ನಿಮ್ಮ ಮೊಬೈಲು ಸಂಪರ್ಕವು ಸಕ್ರಿಯವಾಗಿದೆ ಹಾಗೂ ಮೊಬೈಲು ಸಂಖ್ಯೆಯು ಭಾವಿಗುಪ್ರಾದಲ್ಲಿ ನಿಮ್ಮ ನೊಂದಾಯಿತ ಮೊಬೈಲು ಸಂಖ್ಯೆಯೇ ಆಗಿರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ.
- ಸಿ) ಅಗತ್ಯ ಮಾಹಿತಿಯನ್ನು ಊಡಿಕೆ ಮಾಡಿದನಂತರ ಪರದೆಯ ಕೆಳಮಟ್ಟದಲ್ಲಿ ಲಭ್ಯವಿರುವ ’ ಪರಿಶೀಲಿಸಿ’ ಗುಂಡಿಯನ್ನು ಒತ್ತಿರಿ. ’ಪರಿಶೀಲಿಸಿ’ ಗುಂಡಿಯನ್ನು ಒತ್ತಿದನಂತರ ಪರದೆಯಿಂದ ದೂರ ಚಲಿಸಬೇಡಿ.
- ಡಿ) ನೀವು ಒದಗಿಸಿರುವ ವಿವರಗಳು ಸರಿಯಾಗಿವೆ ಎಂಬುದಾಗಿ ಕಂಡುಬಂದಲ್ಲಿ, ತಂತ್ರಾಂಶ ಅನ್ವಯವು ಒಂದು ಸಲದ ಸಂಕೇತಪದವನ್ನು ಸ್ವೀಕರಿಸುವುದು ಮತ್ತು ಒಂದು ಸಲದ ಸಂಕೇತಪದವನ್ನು ದೂರವಾಣಿಯಿಂದ ಸ್ವಯಂಚಾಲಿತವಾಗಿ ಓದುವುದು.
ಎಂ-ಆಧಾರ್ ಆಪ್ ಅನ್ನು ಸ್ಥಾಪಿಸುವ ವೇಳೆಯಲ್ಲಿ ಎಲ್ಲಾ ಅನುಮತಿಗಳನ್ನೂ ಪರಿಶೀಲಿಸಿರಿ (ಎಸ್ಎಂಎಸ್ ಅನ್ನು ಓದುವುದಕ್ಕಾಗಿ ತಂತ್ರಾಂಶ ಅನ್ವಯಕ್ಕೆ ಅವಕಾಶ ಮಾಡಿಕೊಡುವುದು)
ಅಥವಾ
- ಎ) ದೂರವಾಣಿಯ ಸೆಟ್ಟಿಂಗ್ಸ್ ಗೆ ಹೋಗಿರಿ
- ಬಿ) ಅನುಮತಿಗಳ ನಿಯಂತ್ರಣಕ್ಕೆ ಹೋಗಿರಿ
- ಸಿ) ಆಪ್ ಗಳಿಗೆ ಹೋಗಿರಿ
- ಡಿ) ಎಂ-ಆಧಾರ್ ಆಪ್ ಗೆ ಹೋಗಿರಿ
- ಎಸ್ಎಂಎಸ್ ಆಯ್ಕೆಯನ್ನು ಓದಲು ಅವಕಾಶ ಮಾಡಿಕೊಡುವುದು
ಸ್ಥಿರಗೊಳಿಸುವಿಕೆ (ರೂಟಿಂಗ್) ಎಂದರೆ ಸ್ಮಾರ್ಟ್ ಫೋನುಗಳು, ಟ್ಯಾಬ್ಲೆಟ್ ಗಳು ಮತ್ತಿತರೆ ಸಾಧನಗಳ ಬಳಕೆದಾರರುಗಳಿಗೆ ವಿವಿಧ ಆಂಡ್ರಾಯ್ಡ್ ಉಪ-ವ್ಯವಸ್ಥೆಗಳ ಮೇಲೆ ವಿಶೇಷ ನಿಯಂತ್ರಣವನ್ನು (ಸ್ಥಿರ/ಮೂಲ ವೀಕ್ಷಣೆ ಎಂಬುದಾಗಿ ಪರಿಚಿತವಾಗಿರುವ) ಸಾಧಿಸುವ ಸಲುವಾಗಿ ಆಂಡ್ರಾಯ್ಡ್ ಮೊಬೈಲು ಕಾರ್ಯಾಚರಣೆ ವ್ಯವಸ್ಥೆಯನ್ನು ನಡೆಸಲು ಅನುವು ಮಾಡಿಕೊಡುವುದು.