ವೈಯಕ್ತಿಕ ವ್ಯಕ್ತಿಗಳನ್ನು ವಿಶಿಷ್ಟ ಗುರುತು ಸಂಖ್ಯೆಗಳಿಗಾಗಿ ನೋಂದಣಿ ಮಾಡಿಸುವ ಉದ್ದೇಶಕ್ಕಾಗಿ ಭಾವಿಗುಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟಿರುವ ಯಾವುದೇ ಸಂಸ್ಥೆಯು ರಿಜಿಸ್ಟ್ರಾರ್ ಅಥವಾ ನೋಂದಣಿ ಸಂಸ್ಥೆಯಾಗಿರಬಹುದು. ನೋಂದಣಿ ಸಂಸ್ಥೆಯು ಪ್ರಾತಿನಿಧಿಕವಾಗಿ/ಸಾಂಕೇತಿಕವಾಗಿ ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶ, ಸಾರ್ವಜನಿಕ ವಲಯದ ಉದ್ದಿಮೆಗಳು ಅಥವಾ ಇತರೆ ಸಂಸ್ಥೆಗಳ ಇಲಾಖೆಗಳು ಅಥವಾ ಸಂಸ್ಥೆಗಳಾಗಿರುತ್ತವೆ, ಅವುಗಳು ತಮ್ಮ ಕಾರ್ಯಕ್ರಮಗಳು, ಕಾರ್ಯಚಟುವಟಿಕೆಗಳು ಅಥವಾ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸುವ ವೇಳೆಯಲ್ಲಿ ನಿವಾಸಿಗಳ ಜೊತೆ ಪರಸ್ಪರ ಚರ್ಚಿಸುತ್ತವೆ. ಅಂತಹ ನೋಂದಣಿ ಸಂಸ್ಥೆಗಳಿಗೆ ಉದಾಹರಣೆಗಳೆಂದರೆ ಗ್ರಾಮೀಣಾಭಿವೃದ್ಧಿ ಇಲಾಖೆ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಾಗಿ) ಅಥವಾ ನಾಗರಿಕ ಸರಬರಾಜುಗಳು ಮತ್ತು ಬಳಕೆದಾರರ ವ್ಯವಹಾರಗಳ ಇಲಾಖೆ (ಗುರಿಯಾಗಿಸಿಕೊಳ್ಳಲಾಗಿರುವ ಸಾರ್ವಜನಿಕ ವಿತರಣಾ ಯೋಜನೆಗಾಗಿ), ಜೀವ ವಿಮಾ ನಿಗಮದಂತಹ ವಿಮಾ ಕಂಪನಿಗಳು ಮತ್ತು ಬ್ಯಾಂಕುಗಳು.
ನೋಂದಣಿ ಸಂಸ್ಥೆಗಳು ಜನಸಂಖ್ಯಾಶಾಸ್ತ್ರಕ್ಕೆ ಮತ್ತು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ನಿವಾಸಿಗಳಿಂದ ನೇರವಾಗಿ ಅಥವಾ ನೋಂದಣಿ ಸಂಸ್ಥೆಗಳ ಮೂಲಕ ಸಂಗ್ರಹಿಸುತ್ತವೆ. ಭಾವಿಗುಪ್ರಾವು ಸಂಪೂರ್ಣ ಆಧಾರ್ ನೋಂದಣಿ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸುವ ಸಲುವಾಗಿ ಪ್ರಮಾಣಕಗಳು, ಕಾರ್ಯವಿಧಾನಗಳು ಮತ್ತು ಪ್ರಕ್ರಿಯೆಗಳು, ಮಾರ್ಗಸೂಚಿಗಳು ಮತ್ತು ತಂತ್ರಜ್ಞಾನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದೆ, ಅವುಗಳಿಗೆ ನೋಂದಣಿ ಸಂಸ್ಥೆಗಳು ಬದ್ಧವಾಗಿರುತ್ತವೆ. ಈ ಪ್ರಕ್ರಿಯೆಯಲ್ಲಿ ನೋಂದಣಿ ಸಂಸ್ಥೆಗಳಿಗೆ ಬೆಂಬಲ ನೀಡುವುದಕ್ಕಾಗಿ ಭಾವಿಗುಪ್ರಾವು ನಿರ್ಮಿಸಿರುವಂತಹ ಪರಿಸರ ವ್ಯವಸ್ಥೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು (leverage).