ದೃಢೀಕರಣ ಸಾಧನಗಳು ಮತ್ತು ದಾಖಲೆಗಳು

ದೃಢೀಕರಣ ಸಾಧನಗಳು

ದೃಢೀಕರಣ ಸಾಧನಗಳು ಆಧಾರ್ ದೃಢೀಕರಣ ಪರಿಸರ ವ್ಯವಸ್ಥೆಯಲ್ಲಿ ಒಂದು ನಿರ್ಣಯಕ ಸಂಪರ್ಕವಾಗಿರುವಂತಹ ಆತಿಥೇಯ ಸಾಧನಗಳು/ವಿದ್ಯುನ್ಮಾನ ಪಾತ್ರಧಾರಿಗಳು. ಈ ಸಾಧನಗಳು ಆಧಾರ್ ಸಂಖ್ಯೆಯನ್ನು ಹೊಂದಿರುವವರಿಂದ ವೈಯಕ್ತಿಕ ಗುರುತಿಸುವಿಕೆ ಮಾಹಿತಿಯನ್ನು ಸಂಗ್ರಹಿಸುತ್ತವೆ, ರವಾನೆಗಾಗಿ ಮಾಹಿತಿಯನ್ನು ಸಿದ್ಧಪಡಿಸುತ್ತದೆ, ದೃಢೀಕರಣ ಪಾಕೇಟುಗಳನ್ನು ದೃಢೀಕರಣಕ್ಕಾಗಿ ರವಾನಿಸುತ್ತದೆ ಮತ್ತು ದೃಢೀಕರಣ ಫಲಿತಾಂಶಗಳನ್ನು ಸ್ವೀಕರಿಸುತ್ತದೆ. ಡೆಸ್ಕ್ ಟಾಪ್ ಗಣಕಯಂತ್ರದಿಂದ ಪ್ರಾರಂಭಗೊಂಡು, ಲ್ಯಾಪ್ ಟಾಪ್ ಗಳು, ಕಿಯಾಸ್ಕೋಗಳಿಂದ ಮಾರಾಟದ ಕೇಂದ್ರಬಿಂದು (ಪಿಒಎಸ್)/ಕೈಯಿಂದ ಹಿಡಿದು ನಿರ್ವಹಿಸಲಾಗುವ ಮೊಬೈಲು ಸಾಧನಗಳು (ಮೈಕ್ರೋ ಎಟಿಎಂಗಳು) ಮತ್ತು ಟ್ಯಬ್ಲೆಟ್ಟುಗಳು ಒಳಗೊಂಡಿರುತ್ತವೆ. ಅಂತಹ ಸಾಧನಗಳನ್ನು ಕೋರಿಕೆಯನ್ನು ಸಲ್ಲಿಸುವ ಸಂಸ್ಥೆಯ ಅಗತ್ಯತೆಗಳಿಗೆ ತಕ್ಕಂತೆ ವಿವಿಧ ನಿರ್ದಿಷ್ಟ ಉದ್ದೇಶಗಳಿಗಾಗಿ ಬಳಸುವುದನ್ನು ನಿರೀಕ್ಷಿಸಲಾಗುವುದು.

ಪ್ರಮುಖ ಕಾರ್ಯಚಟುವಟಿಕೆಗಳು

ದೃಢೀಕರಣ ಸಾಧನಗಳು ಈ ಕೆಳಗಿನ ಕಾರ್ಯಚಟುವಟಿಕೆಗಳನ್ನು ಮಾಡುತ್ತವೆ:

 • ಅಂತಹ ಸಾಧನಗಳಲ್ಲಿ ನೀಡಲಾಗಿರುವ ಕ್ಷೇತ್ರ/ ಕ್ಲೈಂಟ್ ತಂತ್ರಾಂಶ ಅನ್ವಯದ ಮೂಲಕ ಆಧಾರ್ ಸಂಖ್ಯೆಯನ್ನು ಹೊಂದಿರುವವರಿಂದ ವೈಯಕ್ತಿಕ ವ್ಯಕ್ತಿಗಳ ಗುರುತಿನ ಮಾಹಿತಿಯನ್ನು ಸಂಗ್ರಹಿಸುತ್ತದೆ.
 • ಪರಿಪೂರ್ಣತೆಗಾಗಿ ಮತ್ತು ಅನುಪಾಲನೆಗಾಗಿ ಸಂಗ್ರಹಿಸಲಾಗಿರುವ ಮಾಹಿತಿಯ ಮೇಲೆ ಮೂಲ ಪರಿಶೀಲನೆಗಳನ್ನು ಮಾಡುವುದು.
 • ದೃಢೀಕರಣ ಪಾಕೇಟುಗಳನ್ನು ರವಾನಿಸುವುದು ಮತ್ತು ದೃಢೀಕರಣದ ಫಲಿತಾಂಶಗಳನ್ನು ಸ್ವೀಕರಿಸುವುದು.

ಆಧಾರ್ ಅಧಿನಿಯಮ, 2016 ಹಾಗೂ ಅದರ ನಿಯಂತ್ರಣಗಳ ಅನುಸರಣೆಯಂತೆ

ದೃಢೀಕರಣ ಸಾಧನಗಳನ್ನು ಕೋರಿಕೆಯನ್ನು ಸಲ್ಲಿಸುವ ಸಂಸ್ಥೆಗಳು (ಎಯುಎ/ಕೆಯುಎ) ಸ್ಥಾಪಿಸುವವು. ಕಾರ್ಯಾಚರಣೆಯ ಮಾದರಿಯ ಆಧಾರದ ಮೇರೆಗೆ ಅಂತಹ ಸಾಧನಗಳನ್ನು ಸ್ವಯಂ-ಸಹಾಯವನ್ನು ಹೊಂದಿದ ಮತ್ತು ನಿರ್ವಾಹಕರ ಸಹಾಯದಿಂದ ಕಾರ್ಯಾಚರಣೆಗೊಳ್ಳುವ ಸಾಧನಗಳು ಎಂಬುದಾಗಿ ವರ್ಗೀಕರಿಸಲಾಗುತ್ತದೆ.

ಸ್ವಯಂ-ಸಹಾಯವನ್ನು ಹೊಂದಿದ ಸಾಧನಗಳೆಂದರೆ ಆಧಾರ್ ದೃಢೀಕರಣ ವ್ಯವಹಾರವನ್ನು ಆಧಾರ್ ಸಂಖ್ಯೆಯನ್ನು ಹೊಂದಿದವರು ಸ್ವಯಂ ಅತನೇ/ಆಕೆಯೇ ಯಾರ ಸಹಾಯವೂ ಇಲ್ಲದೆ ಮಾಡುವ ಸಾಧನಗಳು.

ನಿರ್ವಾಹಕರ ಸಹಾಯದಿಂದ ಕಾರ್ಯಾಚರಣೆಗೊಳ್ಳುವ ಸಾಧನಗಳೆಂದರೆ ಆಧಾರ್ ಸಂಖ್ಯೆಯನ್ನು ಹೊಂದಿರುವವರ ಆಧಾರ್ ದೃಢೀಕರಣ ವ್ಯವಹಾರವನ್ನು ಕೋರಿಕೆಯನ್ನು ಸಲ್ಲಿಸುವ ಸಂಸ್ಥೆಯ ನಿರ್ವಾಹಕರ ಸಹಾಯದಿಂದ ಮಾಡಲಾಗುವ ಸಾಧನಗಳು.

ಅಸಾಧಾರಣ ಸನ್ನಿವೇಶಗಳ ನಿರ್ವಹಣೆಗಾಗಿ ಅನುವುಗಳು

ಸಾಧನ ತಂತ್ರಾಂಶ ಅನ್ವಯವು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯ ದೃಢೀಕರಣದ ವೇಳೆಯಲ್ಲಿ ತಪ್ಪಾಗಿ ತಿರಸ್ಕರಿಸಲ್ಪಟ್ಟಿದ್ದಂತಹ ನಿಜವಾಗಿಯೂ ಆಧಾರ್ ಸಂಖ್ಯೆಯನ್ನು ಹೊಂದಿರುವರಿಗೆ ಸೇವೆಯನ್ನು ನೀಡಲು ಅನುವುಗಳನ್ನು ಹೊಂದಿರತಕ್ಕದ್ದು. ಅಲ್ಲದೆಯೇ, ಜಾಲಸಂಪರ್ಕವು ಇಲ್ಲದಿರುವುದು, ಸಾಧನವು ಕೆಟ್ಟುಹೋಗುವುದು, ಇತ್ಯಾದಿ ಇತರೆ ತಾಂತ್ರಿಕ ಸೀಮಿತಗಳ ಸಂದರ್ಭದಲ್ಲಿಯೂ ಸೇವಾ ವಿತರಣೆಯನ್ನು ಮುಂದುವರೆಸಿಕೊಂಡು ಹೋಗಲು ಕ್ರಮಗಳು ಇರತಕ್ಕದ್ದು. . ತಾಂತ್ರಿಕ ಸೀಮಿತತೆಗಳ ಕಾರಣ ಆಧಾರ್ ಸಂಖ್ಯೆಯನ್ನು ಹೊಂದಿರುವವರಿಗೆ ಸೇವೆಗಳ ನಿರಾಕರಣೆಯಾಗತಕ್ಕದ್ದಲ್ಲ. . ಯಾವುದೇ ವಂಚನೆಯ ಪ್ರಯತ್ನಗಳನ್ನುತಡೆಯುವ ಸಲುವಾಗಿ ಅಸಾಧಾರಣ ಸನ್ನಿವೇಶಗಳನ್ನು ನಿರ್ವಹಿಸುವ ವ್ಯವಸ್ಥೆಯ ಮೂಲಕ ಲಾಗ್ ಮಾಡುವ ಸಲುವಾಗಿ/ಲೆಕ್ಕಪರಿಶೋಧನೆಯ ಕೋರಿಕೆಗೆ ಅನುವು ಮಾಡುವ ಸಲುವಾಗಿ ಅಸಾಧಾರಣ ಸನ್ನಿವೇಶಗಳ ನಿರ್ವಹಣಾ ವ್ಯವಸ್ಥೆಗಳು ನಿರಾಕರಿಸಲಾಗದ ವೈಲಕ್ಷಣಗಳಿಂದ ಬೆಂಬಲಿತಗೊಂಡಿರತಕ್ಕದ್ದು.

ಕಡ್ಡಾಯ ಭದ್ರತೆ

ಭದ್ರತಾ ಅಗತ್ಯತೆಗಳ ಮೇಲಿನ ವಿವರಗಳಿಗಾಗಿ, ಆಧಾರ್ ಅಧಿನಿಯಮ, 2016 ಹಾಗೂ ಅದರ ನಿಯಂತ್ರಣಗಳನ್ನು ಉಲ್ಲೇಖಿಸುವುದು.

ಸಾಧನಗಳ ನಿರ್ವಾಹಕರಿಗೆ ತರಬೇತಿ

ಬಹಳಷ್ಟು ಸಂಖ್ಯೆಯ ದೃಢೀಕರಣ ಸಾಧನಗಳು, ಅದರಲ್ಲೂ ವಿಶೇಷವಾಗಿ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯ ಕೋರಿಕೆಗಳನ್ನು ಪ್ರವರ್ತಿಸುವ ಸಾಧನಗಳು ನಿರ್ವಾಹಕರ ಸಹಾಯದಿಂದ ಕಾರ್ಯಾಚರಣೆಗೊಳ್ಳುವ ಸಾಧನಗಳಾಗಿರತಕ್ಕದ್ದು ಎಂಬುದನ್ನು ನಿರೀಕ್ಷಿಸಲಾಗುತ್ತದೆ. ದೃಢೀಕರಣವನ್ನು ಬಳಸಿಕೊಳ್ಳುವ ಸಂಸ್ಥೆಗಳು ಆಧಾರ್ ದೃಢೀಕರಣ ವ್ಯವಹಾರಗಳನ್ನು ನಡೆಸಿಕೊಂಡು ಹೋಗಲು ನಿರ್ವಾಹಕರಿಗೆ ಸಮರ್ಪಕವಾಗಿ ತರಬೇತಿಯನ್ನು ನೀಡಲಾಗಿದೆ ಎಂಬುದನ್ನು ಹಾಗೂ ಅಲ್ಲದೆಯೇ ಆಧಾರ್ ಸಂಖ್ಯೆಯನ್ನು ಹೊಂದಿರುವವರು ಕೇಳುವ ಪ್ರಶ್ನೆಗಳನ್ನು ಸಮರ್ಪಕವಾಗಿ ನಿರ್ವಹಿಸುವುದನ್ನೂ ಸಹ ಖಚಿತಪಡಿಸಿಕೊಳ್ಳತಕ್ಕದ್ದು.

ನಿರ್ವಾಹಕರ ತರಬೇತಿಯ ಪ್ರಮುಖ ಭಾಗವಾಗಿರತಕ್ಕಂತಹ ಕೆಲವು ಕ್ಷೇತ್ರಗಳು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ:

 • ಬಯೋಮೆಟ್ರಿಕ್ ಮಾಹಿತಿಗೆ ಸಂಬಂಧಿತ ಸಾಧನಗಳು ಮತ್ತು ಉತ್ತಮ ಗುಣಮಟ್ಟದ ಬಯೋಮೆಟ್ರಿಕ್ ಮಾಹಿತಿಯ ಸರೆಹಿಡಿಯುವುಕೆಗಾಗಿ ಮಾಡಬೇಕಾದವುಗಳು/ಮಾಡಬಾರದವುಗಳು
 • ಬಿ ಎಫ್ ಡಿ ಯ ಬಳಕೆ, ಆಧಾರ್ ಸಂಖ್ಯೆಯನ್ನು ಹೊಂದಿರುವವರ ಆನ್-ಬೋರ್ಡಿಂಗ್ ಹಾಗೂ ಮುಂದಿನ ಕ್ರಮಕ್ಕಾಗಿ ಅವರುಗಳಿಗೆ ಮಾರ್ಗದರ್ಶನ ನೀಡುವುದು.
 • ಅಸಾಧಾರಣ ಸನ್ನಿವೇಶಗಳ ನಿರ್ವಹಣೆಯ ಸಂಸ್ಕರಣೆಗಳು ಮತ್ತು ತಾಂತ್ರಿಕ ಸೀಮಿತತೆಗಳ ಕಾರಣ ಆಧಾರ್ ಸಂಖ್ಯೆಯನ್ನು ಹೊಂದಿರುವವರಿಗೆ ಸೇವೆಯನ್ನು ನಿರಾಕರಿಸಲಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು.
 • ಆಧಾರ್ ಸಂಖ್ಯೆಯನ್ನು ಹೊಂದಿರುವವರಿಗೆ ಸೂಕ್ತ ರೀತಿಯಲ್ಲಿ ಮಾಡಬೇಕಾದ ವ್ಯವಹಾರ/ಸಂದೇಶ ರವಾನೆ
 • ವಂಚನೆಯ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ವಂಚನೆಯ ಪ್ರಕರಣಗಳನ್ನು ವರದಿ ಮಾಡುವ ವ್ಯವಸ್ಥೆಗಳು
 • ಮೂಲ ದೋಷ ನಿವಾರಣಾ ಕ್ರಮಗಳು ಮತ್ತು ಎಯುಎಗಳ ಸಾಧನ/ತಂತ್ರಾಂಶ ಅನ್ವಯ ಬೆಂಬಲದ ಸಂಪರ್ಕ ವಿವರಗಳು

ಕಡ್ಡಾಯ ಭದ್ರತಾ ಅಗತ್ಯತೆಗಳು

 • ಆಧಾರ್ ದೃಢೀಕರಣಕ್ಕಾಗಿ ಸೆರೆಹಿಡಿಯಲಾದ ವೈಯಕ್ತಿಕ ಗುರುತಿಸುವಿಕೆ ಮಾಹಿತಿ ಬ್ಲಾಕನ್ನು ಸೆರೆಹಿಡಿಯುವ ಸಮಯದಲ್ಲಿ ಸಂಕೇತಿಕರಿಸತಕ್ಕದ್ದು ಹಾಗೂ ಎಂದೆಂದಿಗೂ ಒಂದು ಜಾಲತಾಣದಲ್ಲಿ ಮುಕ್ತವಾಗಿ ಕಳುಹಿಸಕೂಡದು.
 • ಸಂಕೇತಿಕರಿಸಲ್ಪಟ್ಟ ವೈಯಕ್ತಿಕ ಗುರುತಿಸುವಿಕೆ ಬ್ಲಾಕನ್ನು , ಅದು ಒಂದು ಅಲ್ಪಾವಧಿಗಾಗಿ ವಿನ್ಯಾಸಗೊಳಿಸಲ್ಪಟ್ಟಿರುವ ನಡುಸಮಯದ ಮಧ್ಯವರ್ತಿ ದೃಢೀಕರಣಕ್ಕಾಗಿ ಅಲ್ಲದೆಯೇ ಬೇರೆ ಕಾರಣದಿಂದಾಗಿ ಸಂಗ್ರಹಿಸಿ ಇಡಕೂಡದು.
 • ಆಧಾರ್ ದೃಢೀಕರಣದ ಉದ್ದೇಶಕ್ಕಾಗಿ ಸೆರೆಹಿಡಿಯಲಾದ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿ ಮತ್ತು ಒಂದು ಸಲದ ಸಂಕೇತಪದವನ್ನು ಯಾವುದೇ ಶಾಶ್ವತ ಸಂಗ್ರಹಣಾ ಭಂಡಾರದಲ್ಲಿ ಅಥವಾ ದತ್ತಸಂಚಯದಲ್ಲಿ ಸಂಗ್ರಹಿಸಿ ಇಡಕೂಡದು.
 • ನಿರ್ವಾಹಕರ ಸಹಾಯದಿಂದ ಕಾರ್ಯಾಚರಣೆಗೊಳ್ಳುವ ಸಾಧನಗಳಿಗೆ ಸಂಬಂಧಿಸಿದಂತೆ, ನಿರ್ವಾಹಕರು ಸಂಕೇತಪದ, ಆಧಾರ್ ದೃಢೀಕರಣ, ಇತ್ಯಾದಿ ವ್ಯವಸ್ಥೆಗಳನ್ನು ಬಳಸುವಲ್ಲಿ ವಿಶ್ವಾಸಾರ್ಹತೆಯಿಂದ ಕೂಡಿರತಕ್ಕದ್ದು.