ಬಯೊಮೀಟ್ರಿಕ್ ಸಾಧನಗಳು
ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಗೆ ಸಂಬಂಧಿತ ಸಾಧನಗಳು ಎಂದರೆ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಅವೆಂದರೆ ಆಧಾರ್ ಸಂಖ್ಯೆಯನ್ನು ಹೊಂದಿರುವವರಿಂದ ಬೆರಳುಮುದ್ರಿಕೆಗಳು/ಕಣ್ಣುಪಾಪೆಗಳು/ಇವೆರಡು ಮಾಹಿತಿಯನ್ನು ಸೆರೆಹಿಡಿಯುವುದಕ್ಕಾಗಿ ಬಳಸಲಾಗುವ ಸಾಧನಗಳು. ಈ ಬಯೋಮೆಟ್ರಿಕ್ ಮಾಹಿತಿಗೆ ಸಂಬಂಧಿತ ಸಾಧನಗಳು ಎರಡು ಪ್ರವರ್ಗಗಳು ಅವೆಂದರೆ ಪ್ರತ್ಯೇಕ ಸಾಧನಗಳು ಮತ್ತು ಅಂತರ್ಗತ ಸಾಧನಗಳು.
ಪ್ರತ್ಯೇಕ ಸಾಧನಗಳು: ಈ ಮಾದರಿಯ ಸಾಧನಗಳು ವೈಯಕ್ತಿಕ ಗಣಕಯಂತ್ರಗಳು/ಲ್ಯಾಪ್ ಟಾಪ್ ಮೈಕ್ರೋ ಎಟಿಎಂ ಮುಂತಾದ ಆತಿಥೇಯ ಸಾಧನ ಸಂಪರ್ಕತೆಯ ಅಗತ್ಯತೆ ಇರುವ ಬಯೋಮೆಟ್ರಿಕ್ (ಬೆರಳುಮುದ್ರಿಕೆಗಳು, ಕಣ್ಣುಪಾಪೆಗಳು) ಸಂಬಂಧಿತ ಮಾಹಿತಿಗೆ ಸಂಬಂಧಿತ ಸಾಧನಗಳಿಗೆ ಉಲ್ಲೇಖಿಸಲ್ಪಡುತ್ತವೆ.
ಅಂತರ್ಗತ ಸಾಧನಗಳು: ಅಂತರ್ಗತ ಸಾಧನಗಳು ಸಾಧನ ಪ್ಯಾಕೇಜಿನಲ್ಲಿ ಅಂದರೆ ದೂರವಾಣಿ/ಟ್ಯಾಬ್ಲೆಟ್, ಇತ್ಯಾದಿಗಳಿಗೆ ಅಂತರ್ಗತಗೊಂಡಿರುವ ಸಂವೇದಕವನ್ನು ಹೊಂದಿರುತ್ತವೆ.
ಬಯೋಮೆಟ್ರಿಕ್ ಮಾಹಿತಿಯ ಸಾಧನಗಳನ್ನು ಅಳವಡಿಸಲಾಗುವ ಯಂತ್ರಾಂಶಗಳು ಈ ಕೆಳಗಿನವುಗಳನ್ನು ಒಳಗೊಂಡಿರಬಹುದು:
- ಕೈಯಿಂದ ಹಿಡಿದು ನಿರ್ವಹಿಸುವ/ ಮೈಕ್ರೋ ಎಟಿಎಂಗಳು, ಹಾಜರಾತಿ ಸಾಧನಗಳು, ಇವೇ ಮುಂತಾದ ಪಿಒಎಸ್ ಸಾಧನಗಳು
- ವೈಯಕ್ತಿಕ ಗಣಕಯಂತ್ರಕ್ಕೆ (ಪಿಸಿ) ಅಳವಡಿಸಲಾಗುವ ಯು ಎಸ್ ಬಿ ಸಾಧನ
- ಬಯೋಮೆಟ್ರಿಕ್ ಮಾಹಿತಿಯ ಸಂವೇದಕದೊಂದಿಗಿನ ಮೊಬೈಲು ಫೋನು
- ಎಟಿಎಂಗಳು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ (ಎಂ ಜಿ ಎನ್ ಆರ್ ಇ ಜಿ ಎ) ಉದ್ಯೋಗ ಕೋರಿಕೆ ಕಿಯಾಸ್ಕೋಗಳು
ಕೋರಿಕೆಯನ್ನು ಸಲ್ಲಿಸುವ ಸಂಸ್ಥೆಗಳು ತಮ್ಮ ಸೇವಾ ವಿತರಣೆಯ ಅಗತ್ಯತೆಗಳಿಗೆ ತಕ್ಕಂತೆ, ವ್ಯವಹಾರಗಳ ಗಾತ್ರ, ಅಪೇಕ್ಷಿತ ಯಥಾರ್ಥತೆಯ ಮಟ್ಟಗಳು ಮತ್ತು ತಮ್ಮ ಸೇವಾ ವಿತರಣೆಯ ಜೊತೆಯಲ್ಲಿರಬಹುದಾದ ಸಂಭಾವ್ಯ ಅಪಾಯಗಳ ಅಂಶಗಳು, ಇತ್ಯಾದಿಗಳನ್ನು ಅವಲಂಭಿಸಿದಂತೆ ಸೂಕ್ತ ದೃಢೀಕರಣ ಮಾದರಿಯನ್ನು (ಬಯೋಮೆಟ್ರಿಕ್ ಮಾಹಿತಿಯ ಮಾದರಿಗೆ ಸಂಬಂಧಿಸಿದಂತೆ ಬೆರಳುಮುದ್ರಿಕೆ/ಕಣ್ಣುಪಾಪೆ) ಆಯ್ಕೆ ಮಾಡಿಕೊಳ್ಳಬಹುದು. ಬೆರಳುಮುದ್ರಿಕೆ/ಕಣ್ಣುಪಾಪೆ/ಇವೆರಡರ ಸಂಯೋಜನೆ/ಬಯೋಮೆಟ್ರಿಕ್ ಮಾಹಿತಿ (ಬೆರಳುಮುದ್ರಿಕೆ/ಕಣ್ಣುಪಾಪೆ/ಇವೆರಡು), ಇವುಗಳ ಜೊತೆಯಲ್ಲಿ ಒಂದುಸಲದ ಸಂಕೇತಪದವನ್ನು ಆಯ್ಕೆ ಮಾಡಿಕೊಂಡನಂತರ, ಕೋರಿಕೆಯನ್ನು ಸಲ್ಲಿಸುವ ಸಂಸ್ಥೆಯು ಪ್ರಮಾಣೀಕೃತ ಬಯೋಮೆಟ್ರಿಕ್ ಸಾಧನಗಳ (ಬೆರಳುಮುದ್ರಿಕೆ/ಕಣ್ಣುಪಾಪೆ) ಖರೀದಿಯ ಉದ್ದೇಶಕ್ಕಾಗಿ ಪ್ರಮಾಣೀಕರಿಸಲ್ಪಟ್ಟಿರುವ ಸಾಧನ ಸರಬರಾಜುದಾರರ (ಮೇಲೆ ತಿಳಿಸಲಾಗಿರುವ ಜಾಲತಾಣ ಸಂಪರ್ಕದಲ್ಲಿ ಎತ್ತಿ ತೋರಿಸಿರುವಂತೆ) ಪ್ರಕಟಿತ ಪಟ್ಟಿಯ ಉಪಯೋಗವನ್ನು ಮಾಡಿಕೊಳ್ಳಬಹುದು.
ದೃಢೀಕರಣ ಪರಿಸರ ಸಹಭಾಗಿಗಳು ಕೇವಲ ನೋಂದಾಯಿತ ಸಾಧನಗಳನ್ನು ಮಾತ್ರ ಬಳಸತಕ್ಕದ್ದು ಎಂಬುದನ್ನು ಭಾವಿಗುಪ್ರಾವು ಅಗತ್ಯತೆಯನ್ನು ಹೊಂದಿರುತ್ತದೆ.
“ನೋಂದಾಯಿತ ಸಾಧನಗಳು” ಸಂಕೇತಿಕರಿಸುವಿಕೆಯ ಪ್ರಮುಖ ನಿರ್ವಹಣೆಗಾಗಿ ಆಧಾರ್ ವ್ಯವಸ್ಥೆಯೊಂದಿಗೆ ನೋಂದಣಿ ಮಾಡಿಸಲ್ಪಟ್ಟಿರುವ ಸಾಧನಗಳಿಗೆ ಉಲ್ಲೇಖಿಸಲ್ಪಡುತ್ತವೆ. ಆಧಾರ್ ದೃಢೀಕರಣ ಸರ್ವರು ಈ ಸಾಧನಗಳನ್ನು ವೈಯಕ್ತಿಕವಾಗಿ ಗುರುತಿಸಬಹುದು ಮತ್ತು ಈ ಸಾಧನಗಳನ್ನು ದೃಢೀಕರಿಸಬಹುದು ಹಾಗೂ ಪ್ರತಿಯೊಂದು ನೋಂದಾಯಿತ ಸಾಧನದ ಮೇಲೆ ಸಂಕೇತಿಕರಣ ಕೀಗಳನ್ನು ನಿರ್ವಹಿಸಬಹುದು.
- ಸಾಧನವನ್ನು ಗುರುತಿಸುವಿಕೆ – ಒಂದು ವಿಶಿಷ್ಟ ಗುರುತಿಸುವಿಕೆಯ ಗುಣವನ್ನು ಹೊಂದಿರುವ ಪ್ರತಿಯೊಂದು ಭೌತಿಕ ಸಂವೇದಕ ಸಾಧನ ಸಾಧನದ ದೃಢೀಕರಣ, ಗುರುತಿಸುವಿಕೆ, ವಿಶ್ಲೇಷಣೆ ಮತ್ತು ವಂಚನೆಯ ಪ್ರಕರಣಗಳ ನಿರ್ವಹಣೆ.
- ಸಂಗ್ರಹಿಸಲ್ಪಟ್ಟಿರುವ ಬಯೋಮೆಟ್ರಿಕ್ ಮಾಹಿತಿಯ ಬಳಕೆಯನ್ನು ತೊಡೆದುಹಾಕುವಿಕೆ – ಪ್ರತಿಯೊಂದು ಬಯೋಮೆಟ್ರಿಕ್ ಮಾಹಿತಿಯ ದಾಖಲೆಯನ್ನು ಸಂಸ್ಕರಿಸಲಾಗುವುದು ಮತ್ತು ಸಂಕೇತಿಕರಿಸಲಾಗುವುದು
ಬಯೋಮೆಟ್ರಿಕ್ ಮಾಹಿತಿಗೆ ಸಂಬಂಧಿತ ಸಾಧನಗಳ ಪ್ರಮಾಣೀಕರಣ
ದೃಢೀಕರಣಕ್ಕಾಗಿ ಬಳಸಲಾಗುವ ಬಯೋಮೆಟ್ರಿಕ್ ಮಾಹಿತಿಗೆ ಸಂಬಂಧಿತ ಎಲ್ಲಾ ಸಾಧನಗಳನ್ನು ಪ್ರಮಾಣೀಕರಿಸತಕ್ಕದ್ದು ಮತ್ತು ಇದು ಪ್ರಾಧಿಕಾರವು ಈ ನಿಟ್ಟಿನಲ್ಲಿ ಕಾಲಾನುಕಾಲಕ್ಕೆ ನೀಡಿರುವ ನಿರ್ದಿಷ್ಟ ನಿರೂಪಣೆಗಳ ಪ್ರಕಾರ ಅಗಿರತಕ್ಕದ್ದು