ಕೋರಿಕೆಯನ್ನು ಸಲ್ಲಿಸುವ ಅಸ್ತಿತ್ವಗಳು/ಸಂಸ್ಥೆಗಳು

ಪರಿಚಯ

ಆಧಾರ್ ಅಧಿನಿಯಮ, 2016ರ ಅನುಸಾರ, ಕೋರಿಕೆಯನ್ನು ಸಲ್ಲಿಸುವ ಅಸ್ತಿತ್ವ ಅಥವಾ ಸಂಸ್ಥೆ ಎಂದರೆ ಓರ್ವ ವ್ಯಕ್ತಿಯ ಆಧಾರ್ ಸಂಖ್ಯೆ ಹಾಗೂ ಜೀವಸಂಖ್ಯಾಶಾಸ್ತ್ರಕ್ಕೆ ಅಥವಾ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ದೃಢೀಕರಣಕ್ಕಾಗಿ ಸಿಐಡಿಆರ್ ಗೆ ಸಲ್ಲಿಸುವ ಒಂದು ಸಂಸ್ಥೆ ಅಥವಾ ಓರ್ವ ವ್ಯಕ್ತಿ

ದೃಢೀಕರಣ ಬಳಕೆದಾರ ಸಂಸ್ಥೆಯು ದೃಢೀಕರಣ ಸೇವಾ ಸಂಸ್ಥೆಯು ಅನುಕೂಲ ಕಲ್ಪಿಸಿರುವ ರೀತಿಯಲ್ಲಿ ದೃಢೀಕರಣವನ್ನು ಬಳಸಿಕೊಂಡು ಆಧಾರ್ ಸಾಧ್ಯತೆಯಿರುವ ಸೇವೆಗಳನ್ನು ಆಧಾರ್ ಸಂಖ್ಯೆಯನ್ನು ಹೊಂದಿರುವವರಿಗೆ ಒದಗಿಸುವಲ್ಲಿ ನಿರತವಾಗಿರುವ ಸಂಸ್ಥೆ. ದೃಢೀಕರಣ ಬಳಕೆದಾರ ಸಂಸ್ಥೆಯು , ಭಾವಿಗುಪ್ರಾದ ಆಧಾರ್ ದೃಢೀಕರಣ ಸೇವೆಗಳನ್ನು ಬಳಸಿಕೊಳ್ಳುವ ಹಾಗೂ ತನ್ನ ಸೇವೆಗಳು/ವ್ಯವಹಾರ ಕಾರ್ಯಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ದೃಢೀಕರಣ ಕೋರಿಕೆಗಳನ್ನು ಕಳುಹಿಸುವ ಹಾಗೂ ಒಂದು ಸರ್ಕಾರಕ್ಕೆ/ಸಾರ್ವಜನಿಕರಿಗೆ/ಭಾರತದಲ್ಲಿ ನೋಂದಣಿ ಮಾಡಿಸಿಕೊಂಡಿರುವ ಕಾನೂನಾತ್ಮಕ ಖಾಸಗಿ ಸಂಸ್ಥೆಗೆ ಸಂಬಂಧಿಸಿರಬಹುದು

ನಿಮ್ಮ ಗ್ರಾಹಕರ ಬಗ್ಗೆ ತಿಳಿದುಕೊಳ್ಳಿರಿ (ಕೆವೈಸಿ) ನಿಮ್ಮ ಬಳಕೆದಾರ ಸಂಸ್ಥೆಯನ್ನು ತಿಳಿದುಕೊಳ್ಳಿರಿ (ಕೆಯುಎ) – ಇದು ಒಂದು ಕೋರಿಕೆಯನ್ನು ಸಲ್ಲಿಸುವ ಅಸ್ತಿತ್ವ/ಸಂಸ್ಥೆಯಾಗಿದ್ದು, ಸರ್ಕಾರಕ್ಕೆ/ಸಾರ್ವಜನಿಕರಿಗೆ/ಭಾರತದಲ್ಲಿ ನೋಂದಣಿ ಮಾಡಿಸಿಕೊಂಡಿರುವ ಕಾನೂನಾತ್ಮಕ ಖಾಸಗಿ ಸಂಸ್ಥೆಗೆ ಸಂಬಂಧಿಸಿರಬಹುದು ಹಾಗೂ ಉದ್ದೇಶಿತ ಫಲಾನುಭವಿಗಳಿಗೆ ತನ್ನ ಸಹಾಯಧನ, ಪ್ರಯೋಜನಗಳು ಅಥವಾ ಸೇವೆಗಳನ್ನು ಒದಗಿಸುವುದಕ್ಕಾಗಿ ಭಾವಿಗುಪ್ರಾದ ವಿದ್ಯುನ್ಮಾನೀಯ –ಕೆವೈಸಿ (ಇ-ಕೆವೈಸಿ) ಸೇವೆಗಳನ್ನು ಬಳಸುವುದಕ್ಕಾಗಿ ಕೋರಿಕೆಯನ್ನು ಸಲ್ಲಿಸುತ್ತವೆ.

ಉಪ-ದೃಢೀಕರಣ ಬಳಕೆದಾರ ಸಂಸ್ಥೆಗಳು, ಪ್ರಸ್ತುತ ಇರುವಂತಹ ಕೋರಿಕೆಯನ್ನು ಸಲ್ಲಿಸುವ ಅಸ್ತಿತ್ವ/ಸಂಸ್ಥೆಗಳ ಮೂಲಕ ತಮ್ಮ ಸೇವೆಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಆಧಾರ್ ದೃಢೀಕರಣವನ್ನು ಬಳಸುವ ಸಂಸ್ಥೆಗಳಾಗಿರುತ್ತವೆ

ಒಂದು ಕೋರಿಕೆಯನ್ನು ಸಲ್ಲಿಸುವ ಅಸ್ತಿತ್ವ/ಸಂಸ್ಥೆಯು (ದೃಢೀಕರಣವನ್ನು ಬಳಸುವ ಸಂಸ್ಥೆಗಳು, ಕೆಯುಎ ಮುಂತಾದವು), ಒಂದು ದೃಢೀಕರಣ ಸೇವಾ ಸಂಸ್ಥೆಯ ಮೂಲಕ ( ಸ್ವತ: ತಾನೇ ದೃಢೀಕರಣ ಸೇವಾ ಸಂಸ್ಥೆಯಾಗುವ ಮೂಲಕ ಅಥವಾ ಪ್ರಸ್ತುತ ಇರುವ ಒಂದು ದೃಢೀಕರಣ ಸೇವಾ ಸಂಸ್ಥೆಯಿಂದ ಗುತ್ತಿಗೆ ಆಧಾರಿತ ಸೇವೆಗಳ ಮೂಲಕ) ಸಿಐಡಿಆರ್ ಗೆ ಸಂಪರ್ಕವನ್ನು ಹೊಂದುತ್ತದೆ

ದೃಢೀಕರಣ ಬಳಕೆದಾರ ಸಂಸ್ಥೆಯಾಗಿ ನೇಮಕಗೊಳ್ಳುವ ಸಲುವಾಗಿ ಅರ್ಹತೆಯ ಮಾನದಂಡಗಳು

ಅರ್ಜಿದಾರರು ಈ ಕೆಳಗಿನ ಅರ್ಹತೆಯ ಮಾನದಂಡಗಳನ್ನು ಪೂರೈಸುವ ಅಗತ್ಯತೆಯಿರುತ್ತದೆ:

ದೃಢೀಕರಣ ಬಳಕೆದಾರ ಸಂಸ್ಥೆ ಪ್ರವರ್ಗ 1
2 ದೃಢೀಕರಣ ಬಳಕೆದಾರ ಸಂಸ್ಥೆ ಪ್ರವರ್ಗ 2

ಮಾನದಂಡ

1. ಅಸ್ತಿತ್ವ/ಸಂಸ್ಥೆಯು ಸರ್ಕಾರದ್ದಾಗಿರಬೇಕು (ಕೇಂದ್ರ/ರಾಜ್ಯ) ಅಥವಾ ಮೇಲಿನ ಕೋಷ್ಟಕದಲ್ಲಿ ನಿರ್ದಿಷ್ಟಪಡಿಸಿರುವಂತೆ ನಿಯಂತ್ರಿತ ಅಸ್ತಿತ್ವ/ಸಂಸ್ಥೆಯಾಗಿರಬೇಕು

2. ಆಧಾರ್ ದೃಢೀಕರಣದ ಉದ್ದೇಶಕ್ಕಾಗಿ ನಿರ್ದಿಷ್ಟವಾಗಿ ಬಳಸಲಾಗುವ ಹಿನ್ನಲೆ ಮೂಲಭೂತ ಸೌಕರ್ಯಗಳು ಭಾರತದ ಸೀಮೆಯ ಒಳಗೆ ಇರತಕ್ಕದ್ದು.

3. ಅತ್ಯುತ್ತಮವಾಗಿ ವಿವರಿಸಲ್ಪಟ್ಟ ಮಾಹಿತಿ ಹಂಚಿಕೆ ಹಾಗೂ ಗೌಪ್ಯತೆಯ ಕಾರ್ಯನೀತಿ

ದೃಢೀಕರಣ ಬಳಕೆದಾರ ಸಂಸ್ಥೆ ಪ್ರವರ್ಗ 3

ಮಾನದಂಡ

1. ದಾಖಲೆಗಳ ಅಗತ್ಯತೆಗೆ ದಯವಿಟ್ಟು ಅನುಬಂಧವನ್ನು ಗಮನಿಸಿರಿ

2. ಆಧಾರ್ ದ್ರುಢೀಕರಣಉದ್ದೇಶಕ್ಕಾಗಿನಿರ್ದಿಷ್ಟವಾಗಿಬಳಸಲಾಗುವಹಿನ್ನೆಲೆಮೂಲಭೂತಸೌಕರ್ಯಗಳುಭಾರತದಸೀಮೆಯೊಳಗೆಇರತಕ್ಕದ್ದು

3. ಅತ್ಯುತ್ತಮವಾಗಿ ವಿವರಿಸಲ್ಪಟ್ಟ ಮಾಹಿತಿ ಹಂಚಿಕೆ ಹಾಗೂ ಗೌಪ್ಯತೆಯ ಕಾರ್ಯನೀತಿ

4. ಒಂದು ಸಂಸ್ಥೆಯು ಕನಿಷ್ಟ ರೂಪಾಯಿಗಳು 1 ಕೋಟಿ ಮೊತ್ತದಷ್ಟು ಪಾವತಿಸಲಾಗಿರುವ ಬಂಡವಾಳ ಅಥವಾ ಹಿಂದಿನ ಹಣಕಾಸು ಸಾಲಿನಲ್ಲಿ ಒಂದು ವರ್ಷದ ವಹಿವಾಟು ಕನಿಷ್ಟ ರೂಪಾಯಿಗಲು 5 (ಐದು) ಕೋಟಿ ಆಗಿರತಕ್ಕದ್ದು

5. ಅಸ್ತಿತ್ವವು/ಸಂಸ್ಥೆಯು ವ್ಯವಹಾರವನ್ನು ಪ್ರಾರಂಭಿಸಿದ ದಿನಾಂಕದಿಂದ ಕನಿಷ್ಟ ವರ್ಷ ವ್ಯವಹಾರವನ್ನು ನಡೆಸಿರಬೇಕು

Noteಈ ದಾಖಲೆಯಲ್ಲಿ ತಿಳಿಸಲಾಗಿರುವ ಟಿಪ್ಪಣಿ: ಹಣಕಾಸು, ತಾಂತ್ರಿಕ ಹಾಗೂ ಇತರೆ ಮಾನದಂಡಗಳಲ್ಲಿನ ಯಾವುದೇ ಸಡಿಲಿಕೆಯನ್ನುಸಕ್ಷಮಅಧಿಕಾರಿಗಳಿಂದಪ್ರಕರಣವಾರುಪರಿಗಣಿಸಬಹುದು

** ಪ್ರವರ್ಗ3ಕ್ಕೆ ಮೇಲೆ ತಿಳಿಸಲಾದಂತಹ ಹಣಕಾಸು ಹಾಗೂ ತಾಂತ್ರಿಕ ಮಾನದಂಡಗಳನ್ನು ಪೂರೈಸುವಲ್ಲಿನ ವಿನಾಯಿತಿ:

a) ಕಳೆದ 10 ತಿಂಗಳುಗಳಲ್ಲಿ ತಿಂಗಳು ಒಂದಕ್ಕೆ ಕನಿಷ್ಟ 10,000 ವ್ಯವಹಾರಗಳನ್ನು ಅಥವಾ ಕಳೆದ 4 ತಿಂಗಳುಗಳಲ್ಲಿ ತಿಂಗಳು ಒಂದಕ್ಕೆ ಕನಿಷ್ಟ 25,000 ವ್ಯವಹಾರಗಳನ್ನು ನಡೆಸಿರುವ ಉಪ-ದೃಢೀಕರಣ ಬಳಕೆದಾರ ಸಂಸ್ಥೆಯು ದೃಢೀಕರಣ ಬಳಕೆದಾರ ಸಂಸ್ಥೆಯಾಗಬಹುದು

b) ಆಧಾರ್ ಆಧಾರಿತ ಕನಿಷ್ಟ100ಜನ ಭಾಗವಹಿಸಿರುವಂತಹ ಹೆಕಾಥಾನ್ ಆಧಾರಿತ ಆಧಾರ್ ನಲ್ಲಿ ಮೊದಲ 3 ಬಹುಮಾನಗಳನ್ನು ಪಡೆದವರ ಪೈಕಿ ಇರುವಂತಹ ಪ್ರಾರಂಭಗೊಂಡಿರುವಿಕೆಗಳು (ಸ್ಟಾರ್ಟ್ ಅಪ್ಸ್) ತಾಂತ್ರಿಕ ಹಾಗೂ ಹಣಕಾಸಿನ ಅರ್ಹತೆಯ ಮಾನದಂಡವನ್ನು ಸಡಿಲಗೊಳಿಸುವುದರೊಂದಿಗೆ, ತಾತ್ಕಾಲಿಕ ದೃಢೀಕರಣ ಬಳಕೆದಾರ ಸಂಸ್ಥೆಯಾಗಲು ಅರ್ಹತೆಯನ್ನು ಪಡೆಯುತ್ತವೆ. ಪ್ರಾರಂಭಗೊಂಡಿರುವಿಕೆಗಳು (ಸ್ಟಾರ್ಟ್ ಅಪ್ಸ್) ದೃಢೀಕರಣ ಬಳಕೆದಾರ ಸಂಸ್ಥೆಯ ಉತ್ಪಾದನಾ ಪ್ರವೇಶವನ್ನು ನಿಯತಕಾಲಿಕ ದೃಢೀಕರಣ ಬಳಕೆದಾರ ಸಂಸ್ಥೆಯಾಗುವುದಕ್ಕಾಗಿ ಪಡೆದನಂತರ 18ತಿಂಗಳುಗಳ ಒಂದು ಗರಿಷ್ಟ ಅವಧಿಯಲ್ಲಿ, ಕನಿಷ್ಟ 1 ಲಕ್ಷ ದೃಢೀಕರಣ ವ್ಯವಹಾರಗಳನ್ನು ಮಾಡುವ ಅಗತ್ಯತೆ ಇರುತ್ತದೆ

ಟಿಪ್ಪಣಿ:ಪರೀಕ್ಷಣಾ ಮಾಹಿತಿಯನ್ನು ವ್ಯವಹಾರಗಳ ಸಂಖ್ಯೆಯಿಂದ ತೆಗೆದುಹಾಕಬೇಕು. ದೃಢೀಕರಣಕ್ಕಾಗಿ ಯಾವುದೇ ಮಾದರಿಯನ್ನು ಬಳಸಿಕೊಂಡು ಉತ್ಪಾದನಾ ಪರಿಸರದಲ್ಲಿ ಸಕ್ರಿಯ ವ್ಯವಹಾರ ಮಾಹಿತಿಯನ್ನು ಈ ಉದ್ದೇಶಕ್ಕಾಗಿ ಲೆಕ್ಕಹಾಕಲಾಗುವುದು

ಇ-ಕೆವೈಸಿಬಳಕೆದಾರಸಂಸ್ಥೆಯಾಗಿ(ಕೆಯುಎ) ನೇಮಕಗೊಳ್ಳಲುಅರ್ಹತೆಯಮಾನದಂಡ

ಕೆಯುಎ ಪ್ರವರ್ಗ 1
ಕೆಯುಎ ಪ್ರವರ್ಗ 2

ಮಾನದಂಡ

1. ಅಸ್ತಿತ್ವ/ಸಂಸ್ಥೆಯು ಸರ್ಕಾರದ್ದಾಗಿರಬೇಕು (ಕೇಂದ್ರ/ರಾಜ್ಯ) ಅಥವಾ ಮೇಲಿನ ಕೋಷ್ಟಕದಲ್ಲಿ ನಿರ್ದಿಷ್ಟಪಡಿಸಿರುವಂತೆ ನಿಯಂತ್ರಿತ ಅಸ್ತಿತ್ವ/ಸಂಸ್ಥೆಯಾಗಿರಬೇಕು

2. ಆಧಾರ್ ದ್ರುಢೀಕರಣಉದ್ದೇಶಕ್ಕಾಗಿನಿರ್ದಿಷ್ಟವಾಗಿಬಳಸಲಾಗುವಹಿನ್ನೆಲೆಮೂಲಭೂತಸೌಕರ್ಯಗಳುಭಾರತದಸೀಮೆಯೊಳಗೆಇರತಕ್ಕದ್ದು

3. ಅತ್ಯುತ್ತಮವಾಗಿ ವಿವರಿಸಲ್ಪಟ್ಟ ಮಾಹಿತಿ ಹಂಚಿಕೆ ಹಾಗೂ ಗೌಪ್ಯತೆಯ ಕಾರ್ಯನೀತಿ

4. ಕೆವೈಸಿ ಅಸ್ತಿತ್ವ/ಸಂಸ್ಥೆಯು ನಿಯಮಗಳ ಪ್ರಕಾರ ಅಗತ್ಯತೆಯಿರುವ ಕೈವೈಸಿ ಪ್ರಮಾಣಕಗಳನ್ನು ಪೂರೈಸುವ ಅಗತ್ಯತೆಯಿರುತ್ತದೆ.

Noteಟಿಪ್ಪಣಿ: ಈ ದಾಖಲೆಯಲ್ಲಿ ತಿಳಿಸಲಾಗಿರುವ ಹಣಕಾಸು, ತಾಂತ್ರಿಕಹಾಗೂಇತರೆಮಾನದಂಡಗಳಲ್ಲಿನಯಾವುದೇಸಡಿಲಿಕೆಯನ್ನುಸಕ್ಷಮಅಧಿಕಾರಿಗಳಿಂದಪ್ರಕರಣವಾರುಪರಿಗಣಿಸಬಹುದು.

ದೃಢೀಕರಣ ಬಳಕೆದಾರ ಸಂಸ್ಥೆಗಳ ಉದಾಹರಣೆಗಳು

ಆದಾಯ ತೆರಿಗೆ ಇಲಾಖೆಯು ಆಧಾರ್ ನ ಒಂದು ಸಲದ ಸಂಕೇತಪದ (ಒಟಿಪಿ) ದೃಢೀಕರಣವನ್ನು ಬಳಸಿಕೊಂಡು ಇ-ಸಲ್ಲಿಕೆಯನ್ನು ಅಳವಡಿಸಿಕೊಳ್ಳುವ ಮೂಲಕ ಕರದಾತರಿಂದ ಆದಾಯ ತೆರಿಗೆ ಸಲ್ಲಿಕೆಗಳನ್ನು ಸಲ್ಲಿಸುವಂತೆ ಕೋರುತ್ತದೆ

ಹೊರ ರೋಗಿಗಳ ಮಾಹಿತಿಯನ್ನು ತ್ವರಿತ ಹಾಗೂ ಅನುಕೂಲಕರವಾದ ರೀತಿಯಲ್ಲಿ ನೋಂದಣಿಯನ್ನು ಮಾಡುವ ಅಗತ್ಯತೆಯನ್ನು ಹೊಂದಿರುವ ಒಂದು ಆಸ್ಪತ್ರೆಯ ಆಡಳಿತ ಇಲಾಖೆಯು ಆಧಾರ್ ಆಧಾರಿತ ದೃಢೀಕರಣವನ್ನು ಬಳಸುತ್ತದೆ. ಈ ಪ್ರಕ್ರಿಯೆಯ ಮೂಲಕ, ರೋಗಿಯ ಗುರುತನ್ನು, ಆಸ್ಪತ್ರೆಯಲ್ಲಿ ಆತನ/ಆಕೆಯ ನೋಂದಣಿಗೆ ಮೊದಲೇ ದೃಢೀಕರಿಸಲಾಗುವುದು

ಪಾಸ್ ಪೋರ್ಟ್ ಸೇವಾ ಕೇಂದ್ರವು, ಅರ್ಜಿದಾರರಿಗೆ ಪಾಸ್ ಪೋರ್ಟ್ ಅನ್ನು ನೀಡುವ ಮೊದಲು, ಅವರ ಗುರುತನ್ನು ಪರಿಶೀಲಿಸುವುದಕ್ಕಾಗಿ ಆಧಾರ್ ದೃಢೀಕರಣ ಸೇವೆಗಳನ್ನು ಕೋರುತ್ತದೆ

ಒಂದು ಉನ್ನತ ಮಟ್ಟದ ಭದ್ರತೆಯನ್ನು ಹೊಂದಿನ ಕಟ್ಟಡ/ವಲಯದ ಆಡಳಿತಾತ್ಮಕ/ಭದ್ರತಾ ಇಲಾಖೆಯು, ಆ ಕಟ್ಟಡಕ್ಕೆ/ವಲಯಕ್ಕೆ ಪ್ರವೇಶವನ್ನು ಬಯಸುವ ಯಾವುದೇ ಆಧಾರ್ ಸಂಖ್ಯೆಯನ್ನು ಹೊಂದಿರುವವರಗುರುತನ್ನು ಪರಿಶೀಲಿಸಬಯಸುತ್ತದೆ

ದೃಢೀಕರಣ ಬಳಕೆದಾರ ಸಂಸ್ಥೆಯ ಸಿದ್ಧತೆಯ ಹಂತಗಳು

    ಕೋರಿಕೆಯನ್ನು ಮಾಡುವ ಅಸ್ತಿತ್ವ/ಸಂಸ್ಥೆಯು ಆಧಾರ್ ದೃಢೀಕರಣವನ್ನು ಬಳಸಿಕೊಳ್ಳಬಹುದಾದ ಸೇವಾ ವಿತರಣಾ ಕ್ಷೇತ್ರಗಳನ್ನು ಗುರುತಿಸುವ ಅಗತ್ಯತೆಯನ್ನು ಹೊಂದಿರುತ್ತದೆ. ಆಧಾರ್ ಸಾಧ್ಯತೆಯನ್ನು ಹೊಂದಿರುವ ವಿವಿಧ ಸೇವಾ ವಿತರಣೆಗಳ ಅಗತ್ಯತೆಗಳಿಗೆ ಅದು ಯಾವ ಮಾದರಿಯ ದೃಢೀಕರಣವನ್ನು ಬಳಸುತ್ತದೆ ಎಂಬುದರ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳುವುದರ ಅಗತ್ಯತೆಯನ್ನೂ ಸಹ ಸಂಸ್ಥೆಯು ಹೊಂದಿರುತ್ತದೆ
  • ಆನ್ ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವುದು: ಒಂದು ಕೋರಿಕೆಯನ್ನು ಮಾಡುವ ಸಂಸ್ಥೆಯಾಗಲು ಆಸಕ್ತಿಯನ್ನು ಹೊಂದಿರುವ ಯಾವುದೇ ಸಂಸ್ಥೆಯು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಅಗತ್ಯತೆಯಿರುತ್ತದೆ. ದೃಢೀಕರಣ ಬಳಕೆದಾರ ಸಂಸ್ಥೆಗಳ ಜೊತೆ ತೊಡಗಿಸಿಕೊಳ್ಳುವುದಕ್ಕಾಗಿ ಭಾವಿಗುಪ್ರಾವು ಒಂದು ಆನ್ ಲೈನ್ ಕಾರ್ಯಚಟುವಟೆಕೆಗಳ ಹರಿವಿನ ಆಧಾರಿತ ಅರ್ಜಿ ನಮೂನೆಯನ್ನು ಹೊಂದಿದೆ
  • ಆಧಾರ್ ಸೇವಾ ಸಂಸ್ಥೆ (ಗಳ) ಜೊತೆ ತೊಡಗಿಸಿಕೊಳ್ಳುವುದು: ಒಂದು ಕೋರಿಕೆಯನ್ನು ಮಾಡುವ ಸಂಸ್ಥೆಯಾಗುವುದಕ್ಕಾಗಿನ ಪ್ರಾರಂಭಿಕ ಹಂತಗಳಲ್ಲಿ ಒಂದೆಂದರೆ, ಪ್ರಸ್ತುತ ಇರುವಂತಹ ಒಂದು ದೃಢೀಕರಣ ಸೇವಾ ಸಂಸ್ಥೆಯ ಜೊತೆ ತೊಡಗಿಸಿಕೊಳ್ಳುವುದು. ಅನುಮೋದನೆಗೊಂಡಿರುವ ದೃಢೀಕರಣ ಸೇವಾ ಸಂಸ್ಥೆಗಳ ಪಟ್ಟಿಯು ಆನ್ ಲೈನ್ ನಲ್ಲಿ ಲಭ್ಯವಿದೆ ಹಾಗೂ ಆಸಕ್ತ ಕೋರಿಕೆಯನ್ನು ಮಾಡುವ ಅಸ್ತಿತ್ವ/ಸಂಸ್ಥೆಯು ಅದರಂತೆಯೇ ತೊಡಗಿಸಿಕೊಳ್ಳಬಹುದು. ಒಂದು ವೇಳೆ ಕೋರಿಕೆಯನ್ನು ಮಾಡುವ ಅಸ್ತಿತ್ವ/ಸಂಸ್ಥೆಯು ದೃಢೀಕರಣ ಸೇವಾ ಸಂಸ್ಥೆ ಹಾಗೂ ಅಲ್ಲದೇ ಕೋರಿಕೆಯನ್ನು ಮಾಡುವ ಸಂಸ್ಥೆಯಾಗಲು ಬಯಸಿದಲ್ಲಿ, ಅದು ಮೊದಲು ಒಂದು ದೃಢೀಕರಣ ಸೇವಾ ಸಂಸ್ಥೆಯಾಗಿ ಅನುಮೋದನೆಯನ್ನು ಪಡೆಯುವ ಅಗತ್ಯತೆಯಿರುತ್ತದೆ ಹಾಗೂ ತದನಂತರ ಒಂದು ಕೋರಿಕೆಯನ್ನು ಮಾಡುವ ಸಂಸ್ಥೆಯಾಗಲು ಅರ್ಜಿಯನ್ನು ಸಲ್ಲಿಸಬಹುದು
  • ಸಹಿ ಮಾಡಿರುವ ಗುತ್ತಿಗೆ ಪತ್ರವನ್ನು ಹಾಗೂ ಬೆಂಬಲಿತ ದಾಖಲೆಗಳನ್ನು ಭಾವಿಗುಪ್ರಾಕ್ಕೆ ಕಳುಹಿಸುವುದು: ಕೋರಿಕೆಯನ್ನು ಮಾಡುವ ಅಸ್ತಿತ್ವ/ಸಂಸ್ಥೆಯುಸಹಿಮಾಡಲ್ಪಟ್ಟಿರುವಗುತ್ತಿಗೆಪತ್ರದಹಾಳೆಯಮೇಲೆಮುದ್ರಿಸಿದಪ್ರತಿಯನ್ನುಅಗತ್ಯಬೆಂಬಲಿತದಾಖಲೆಗಳಜೊತೆಯಲ್ಲಿಭಾವಿಗುಪ್ರಾಕ್ಕೆಕಳುಹಿಸತಕ್ಕದ್ದು. ಅಗತ್ಯದಾಖಲೆಗಳುಸ್ವೀಕೃತಗೊಂಡನಂತರಭಾವಿಗುಪ್ರಾವು ಆನ್ ಲೈನ್ ಅರ್ಜಿಯನ್ನುಅನುಮೋದಿಸುವುದು
  • ಪ್ರಕ್ರಿಯೆ ಹಾಗೂ ತಂತ್ರಜ್ಞಾನ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದು: ಕೋರಿಕೆಯನ್ನು ಮಾಡುವ ಅಸ್ತಿತ್ವ/ಸಂಸ್ಥೆಯು, ದೃಢೀಕರಣ ಬಳಕೆದಾರ ಸಂಸ್ಥೆಯ ಕೈಪಿಡಿಯಲ್ಲಿ ನಿರ್ದಿಷ್ಟಪಡಿಸಲಾಗಿರುವ ಭಾವಿಗುಪ್ರಾದ ಪ್ರಮಾಣಕಗಳು ಹಾಗೂ ನಿರ್ದಿಷ್ಟ ನಿರೂಪಣೆಗಳ ಅನುಸರಣೆಯಂತೆ ಅಗತ್ಯ ತಂತ್ರಾಂಶ ಅನ್ವಯಗಳು, ಸಂಸ್ಕರಣೆಗಳು, ಮೂಲಭೂತಸೌಕರ್ಯಗಳು, ಇತ್ಯಾದಿಗಳನ್ನು ಸ್ಥಾಪಿಸುವ ಅಗತ್ಯತೆಯಿರುತ್ತವೆ. ಅಂತಹ ಕೆಲವು ಅಗತ್ಯತೆಗಳು ಹೊರತುಪಡಿಸುವಿಕೆಗಳನ್ನು ನಿರ್ವಹಿಸುವ ವ್ಯವಸ್ಥೆಯನ್ನು ವಿವರಿಸುವುದು, ಆಧಾರ್ ದೃಢೀಕರಣ ಅನ್ವಯ ಪ್ರೊಗ್ರಾಮಿಂಗ್ ಸಂಪರ್ಕಸಾಧನ(ಎಪಿಐ)ಗಳನ್ನು ಬಳಸಿಕೊಂಡು ತಂತ್ರಾಂಶ ಅನ್ವಯಗಳನ್ನು ಅಭಿವೃದ್ಧಿಪಡಿಸುವುದು, ದೃಢೀಕರಣ ಸಾಧನಗಳಿಂದ ಕೋರಿಕೆಗಳನ್ನು ಮಾಡುವ ಅಸ್ತಿತ್ವ/ಸಂಸ್ಥೆಯ ಸರ್ವರು, ಇತ್ಯಾದಿಗಳಿಗೆ ಸಂಪರ್ಕತೆಯನ್ನು ಖಚಿತಪಡಿಸಿಕೊಳ್ಳುವುದು. ಆನ್ ಲೈನ್ ಅರ್ಜಿಯ ಮೂಲಕ ಭಾವಿಗುಪ್ರಾಕ್ಕೆ ಖಚಿತಪಡಿಸಬೇಕಾದ ವಿವಿಧ ಅಗತ್ಯತೆಗಳ ಅನುಸರಣೆ
  • ಸಾಧನಗಳ ಸ್ಥಾಪನೆಯ ಬಗ್ಗೆ ಪೂರ್ವಭಾವಿಯಾಗಿ ಯೋಜಿಸುವುದು: ಕೋರಿಕೆಯನ್ನು ಮಾಡುವ ಅಸ್ತಿತ್ವ/ಸಂಸ್ಥೆಯು, ತನ್ನ ವ್ಯವಹಾರದ ಅಗತ್ಯತೆಗಳ ಆಧಾರದ ಮೇರೆಗೆ ದೃಢೀಕರಣ ಸಾಧನಗಳ ನಿರ್ದಿಷ್ಟ ನಿರೂಪಣೆಗಳ ಬಗ್ಗೆ ಹಾಗೂ ಅವುಗಳನ್ನು ಸ್ಥಾಪಿಸುವ ಬಗ್ಗೆ ನಿಶ್ಚಯಿಸುವ ಅಗತ್ಯತೆಯಿರುತ್ತದೆ. ಕೋರಿಕೆಯನ್ನು ಮಾಡುವ ಅಸ್ತಿತ್ವ/ಸಂಸ್ಥೆಯು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ದೃಢೀಕರಣವನ್ನು ಆಯ್ಕೆ ಮಾಡಿಕೊಂಡಲ್ಲಿ, ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಸಾಧನಗಳ ಸೆನ್ಸಾರ್/ಎಕ್ಸ್ ಟ್ರಾಕ್ಟರ್ ಗಳನ್ನು ಭಾವಿಗುಪ್ರಾದಿಂದ ಮನ್ನಣೆಯನ್ನು ಪಡೆದಿರುವ ಎಸ್ ಟಿ ಕ್ಯೂ ಸಿ ಮುಂತಾದ ಒಂದು ಪ್ರಮಾಣೀಕರಿಸುವ ಸಂಸ್ಥೆಯಿಂದ ಪ್ರಮಾಣಪತ್ರವನ್ನು ಪಡೆಯುವ ಅಗತ್ಯತೆಯಿರುತ್ತದೆ. ಕೋರಿಕೆಯನ್ನು ಮಾಡುವ ಅಸ್ತಿತ್ವ/ಸಂಸ್ಥೆಯು ನಿರ್ವಾಹಕರ ಸಹಾಯದಿಂದ ಕಾರ್ಯಾನಿರ್ವಹಿಸುವ ಸಾಧನಗಳನ್ನು ಆಯ್ಕೆ ಮಾಡಿಕೊಂಡಲ್ಲಿ, ಕೋರಿಕೆಯನ್ನು ಮಾಡುವ ಅಸ್ತಿತ್ವ/ಸಂಸ್ಥೆಯು ನಿರ್ವಾಹಕರಿಗೆ ತರಬೇತಿ ಹಾಗೂ ಅವರುಗಳ ಕಾರ್ಯಸಿದ್ಧತೆಯನ್ನೂ ಖಚಿತಪಡಿಸುವ ಅಗತ್ಯತೆಯಿರುತ್ತದೆ
  • ಭಾವಿಗುಪ್ರಾದ ಅನುಮೋದನೆಯನ್ನು ಪಡೆದುಕೊಳ್ಳುವುದು:ಒಂದು ಕೋರಿಕೆಯನ್ನು ಮಾಡುವ ಅಸ್ತಿತ್ವ/ಸಂಸ್ಥೆಯಿಂದ ಬರುವ ಒಂದು ಅರ್ಜಿಗೆ ಅನುಸರಣಾ ಅಗತ್ಯತೆಗಳನ್ನು ಪೂರೈಸಿದನಂತರ ಭಾವಿಗುಪ್ರಾವು ಅನುಮೋದನೆಯನ್ನು ನೀಡುತ್ತದೆ. ಒಂದು ಕೋರಿಕೆಯನ್ನು ಮಾಡುವ ಅಸ್ತಿತ್ವ/ಸಂಸ್ಥೆಯು ಸಂಸ್ಕರಣೆಯ ವೇಳೆಯಲ್ಲಿ ಬಾವಿಗುಪ್ರಾದ ಜೊತೆ ತೊಡಗಿಸಿಕೊಂಡಿರುವ ಹಾಗೂ ಅಗತ್ಯ ಸ್ಪಷ್ಟನೆಗಳನ್ನು ಒದಗಿಸುವಅಗತ್ಯತೆಯಿರುತ್ತದೆ
  • ತುದಿತುದಿಗೂಡಿಸಿದಪರೀಕ್ಷಣೆಯನ್ನುನಡೆಸಿಕೊಂಡುಹೋಗುವುದು: ಭಾವಿಗುಪ್ರಾದಅನುಮೋದನೆಯುಒಂದುಕೋರಿಕೆಯನ್ನುಮಾಡುವಅಸ್ತಿತ್ವಗಳಿಗೆ/ಸಂಸ್ಥೆಗಳಿಗೆಅವುಗಳತಂತ್ರಾಂಶಅನ್ವಯಗಳನ್ನುಸಿಐಡಿಅರ್ ಜೊತೆತುದಿತುದಿಗೂಡಿಸಿದಪರೀಕ್ಷಣೆಗೆ ಅನುವುಮಾಡಿಕೊಡುತ್ತದೆ. ವಾಸ್ತವಿಕ ನಿವಾಸಿ ದೃಢೀಕರಣವನ್ನು ಕಾರ್ಯಾರಂಭಗೊಳಿಸುವ ಮೊದಲು, ಕೋರಿಕೆಯನ್ನು ಮಾಡುವ ಅಸ್ತಿತ್ವ/ಸಂಸ್ಥೆಗಳು ತಮ್ಮ ತಂತ್ರಾಂಶ ಅನ್ವಯಗಳನ್ನು ಆಯ್ದ ದೃಢೀಕರಣ ಸೇವಾ ಸಂಸ್ಥೆಗಳ ಜೊತೆ ಹಾಗೂ ಸಿಐಡಿಆರ್ ಜೊತೆ ತುದಿತುದಿಗೂಡಿಸಿದಪರೀಕ್ಷಣೆಯನ್ನು ನಡೆಸುವುದನ್ನು ಬಹುಮಟ್ಟಿಗೆ ಶಿಫಾರಸು ಮಾಡಲಾಗುತ್ತಿದೆ. ಕೋರಿಕೆಯನ್ನು ಮಾಡುವ ಅಸ್ತಿತ್ವ/ಸಂಸ್ಥೆಯು ತನ್ನ ವ್ಯವಹಾರಗಳನ್ನು ಕಾರ್ಯಾರಂಭಗೊಳಿಸುವ ಮೊದಲು ಆಧಾರ್ ದೃಢೀಕರಣಕ್ಕೆ ಸಂಬಂಧಿತ ತಂತ್ರಾಂಶ ಅನ್ವಯಗಳನ್ನು ಒಂದು ಮಾನ್ಯತೆಯನ್ನು ಪಡೆದ ಸಂಸ್ಥೆಯಿಂದ ಪ್ರಮಾಣೀಕರಿಸಲ್ಪಟ್ಟಿರುವ ಮಾಹಿತಿ ತಂತ್ರಜ್ಞಾನ ತಂತ್ರಾಂಶ ಅನ್ವಯಗಳ ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೋಧನೆ ಮಾಡಿಸಿಕೊಳ್ಳುವುದು
  • ಕಾರ್ಯಾರಂಭಗೊಳಿಸುವಿಕೆ: ಒಂದು ಕೋರಿಕೆಯನ್ನು ಮಾಡುವ ಅಸ್ತಿತ್ವವು/ಸಂಸ್ಥೆಯು ಭಾವಿಗುಪ್ರಾದ ಪ್ರಮಾಣಕಗಳು ಹಾಗೂ ನಿರ್ದಿಷ್ಟ ನಿರೂಪಣೆಗಳಿಗೆ ಬದ್ಧವಾಗಿರುವುದನ್ನು ಖಚಿತಪಡಿಸಿಕೊಂಡನಂತರ ತನ್ನ ವ್ಯವಹಾರಗಳನ್ನು ಕಾರ್ಯಾರಂಭಗೊಳಿಸಬಹುದು. ಭಾವಿಗುಪ್ರಾವು ಅದನ್ನು ಆನ್ ಲೈನ್ ಕಾರ್ಯಚಟುವಟಿಕೆಗಳ ಹರಿವಿನ ಆಧಾರದ ತಂತ್ರಾಂಶ ಅನ್ವಯದ ಮೂಲಕ ನಿರ್ವಹಿಸುವುದನ್ನು ಯೋಜಿಸಿದೆ.

ದೃಢೀಕರಣ ಬಳಕೆದಾರ ಸಂಸ್ಥೆಗಳ ಪ್ರಮುಖ ಜವಾಬ್ದಾರಿಗಳು

  • ವ್ಯವಹಾರ ಹಾಗೂ ನಿಯೋಜನೆಗೆ ಸಂಬಂಧಿತ ಸಂಭಾವ್ಯ ಅಪಾಯದ ನಿರ್ಧಾರಣೆಯನ್ನು ಆಯ್ಕೆ ಮಾಡಿಕೊಳ್ಳುವುದು ಹಾಗೂ ಅದರ ಬಗ್ಗೆ ಭಾವಿಗುಪ್ರಾಕ್ಕೆ ತಿಳಿಸುವುದು
  • ಸಂಬಂಧಿತಕಾರ್ಯಾಚರಣೆಗಳ (ಸಂಸ್ಕರಣೆಗಳು, ತಂತ್ರಜ್ಞಾನ, ಭದ್ರತೆ, ಇತ್ಯಾದಿ) ಅನುಸರಣಾಕ್ರಮಗಳನ್ನುದೃಢೀಕರಣಬಳಕೆದಾರಸಂಸ್ಥೆಯಕೈಪಿಡಿಯಲ್ಲಿನಿರ್ದಿಷ್ಟಪಡಿಸಲಾಗಿರುವಭಾವಿಗುಪ್ರಾದಪ್ರಮಾಣಕಗಳುಹಾಗೂನಿರ್ದಿಷ್ಟನಿರೂಪಣೆಗಳಮಟ್ಟಕ್ಕೆಖಚಿತಪಡಿಸಿಕೊಳ್ಳುವುದು
  • ಅಧಿನಿಯಮ, 2016ರ ಅನುಸಾರಆತನ/ಆಕೆಯ ಮಾಹಿತಿಯನ್ನು ಹಂಚಿಕೊಳ್ಳುವ ಸಲುವಾಗಿ ಹಾಗೂ ದೃಢೀಕರಣದ ಉದ್ದೇಶವನ್ನು, ತಿಳಿಸುವ ಮೂಲಕ ಆಧಾರ್ ಸಂಖ್ಯೆಯನ್ನು ಹೊಂದಿರುವವರಿಂದ ಅನೌಪಚಾರಿಕ ಒಪ್ಪಿಗೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು.
  • ಇತ್ತೀಚಿನ ದೃಡೀಕರಣ ಎಪಿಐ ನಿರ್ದಿಷ್ಟನಿರೂಪಣೆಗಳ ಪ್ರಕಾರ ದೃಢೀಕರಣ ಪೊಟ್ಟಣಗಳನ್ನು ತಯಾರಿಸುವುದು.
  • ಆಧಾರ್ ಅಧಿನಿಯಮ 2016ರ ಅನುವುಗಳ ಅನುಸಾರ ಲಾಗ್ ಆಗುವುದುಹಾಗೂ ಎಲ್ಲಾ ದೃಢೀಕರಣ ವ್ಯವಹಾರಗಳನ್ನೂ ನಿರ್ವಹಿಸುವುದು
  • ಆಧಾರ್ ರ್ಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತದೃಢೀಕರಣವನ್ನುಬಳಸಿದಲ್ಲಿ, ಆಧಾರ್ ಸಂಖ್ಯೆಯನ್ನುಹೊಂದಿರುವವರನ್ನುಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತದೃಢೀಕರಣಕ್ಕಾಗಿ ಆನ್-ಬೋರ್ಡಿಂಗ್ ಗಾಗಿ ಅತ್ಯುತ್ತಮಬೆರಳುಪತ್ತೆಹಚ್ಚುವಿಕೆತಂತ್ರಾಂಶಅನ್ವಯವನ್ನುಕಾರ್ಯಗತಗೊಳಿಸಲಾಗುವುದು
  • ದೃಢೀಕರಣ ಬಳಕೆದಾರ ಸಂಸ್ಥೆಗಳ ಕೈಪಿಡಿಯ ಮೂಲಕ ಶಿಫಾರಸು ಮಾಡಿರುವಂತೆ,ಹೊರತುಪಡಿಸುವಿಕೆಗಳನ್ನುನಿರ್ವಹಿಸುವುದನ್ನುಹಾಗೂಮೀಸಲು/ಬೆಂಬಲಿತ ಗುರುತಿಸುವಿಕೆ ದೃಢೀಕರಣ ವ್ಯವಸ್ಥೆಗಳನ್ನು ಗುರುತಿಸುವುದು
  • ದೃಢೀಕರಣ ಬಳಕೆದಾರರ ಸಂಸ್ಥೆಯ ವ್ಯವಹಾರ ಅಗತ್ಯತೆಗಳ ಪ್ರಕಾರ, ಹೊರತುಪಡಿಸುವಿಕೆಗಳನ್ನು ನಿರ್ವಹಿಸುವ ವ್ಯವಸ್ಥೆಯನ್ನು ನಿರ್ವಾಹಕರು ಹಾಗೂ ಇತರ ಯಾವುದೇ ಪರಿಸರವ್ಯವಸ್ಥೆಯ ಸದಸ್ಯರು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯುವುದಕ್ಕಾಗಿ ಆಧಾರ್ ಅಧಿನಿಯಮ, 2016ರ ಅಧ್ಯಾಯ VIರ ಮೂಲಕ ಕಡ್ಡಾಯಗೊಳಿಸಿರುವಂತೆ ಸಂಭಾವ್ಯ ವಂಚನೆಗಳನ್ನು ತಡೆಯುವುದನ್ನು ಮೇಲ್ವಿಚಾರಣೆ ಮಾಡುವ ವ್ಯವಸ್ಥೆಯನ್ನು,ಸ್ಥಾಪಿಸುವುದು
  • ಆಧಾರ್ ದೃಢೀಕರಣಕ್ಕೆ ಸಂಬಂಧಿತ ಕಾರ್ಯಾಚರಣೆಗಳು ಹಾಗೂ ತಂತ್ರಾಂಶ ಅನ್ವಯಗಳನ್ನು ಆಧಾರ್ ಅಧಿನಿಯಮ, 2016ರ ಜೊತೆಯಲ್ಲಿ ದೃಢೀಕರಣ ಬಳಕೆದಾರ ಸಂಸ್ಥೆಯ ಕೈಪಿಡಿಯಲ್ಲಿ ನಿರ್ದಿಷ್ಟಪಡಿಸಿರುವಂತೆ ಭಾವಿಗುಪ್ರಾದ ನಿರ್ದಿಷ್ಟ ನಿರೂಪಣೆಗಳ ಅನುಸಾರ ಲೆಕ್ಕಪರಿಶೋಧನೆ ಮಾಡಿಸುವುದು
  • ದೃಢೀಕರಣ ಸಾಧನಗಳಿಂದ ದೃಢೀಕರಣ ಬಳಕೆದಾರ ಸಂಸ್ಥೆಯ ಸರ್ವರಿಗೆ ಹಾಗೂ ದೃಢೀಕರಣ ಬಳಕೆದಾರ ಸಂಸ್ಥೆಯ ಸರ್ವರು ಹಾಗೂ ದೃಢೀಕರಣ ಸೇವಾ ಸಂಸ್ಥೆಯ ಸರ್ವರಿನ ನಡುವೆ ಸಂಪರ್ಕತೆಯನ್ನು ಖಚಿತಪಡಿಸಿಕೊಳ್ಳುವುದು
  • ಭಾವಿಗುಪ್ರಾದ ಇತ್ತೀಚಿನ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಸಾಧನಗಳ ನಿರ್ದಿಷ್ಟ ನಿರೂಪಣೆಗಳ ಅನುಸಾರ, ಪ್ರಮಾಣೀಕೃತ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಸಾಧನಗಳನ್ನು ಖರೀದಿಸುವುದು, ಸ್ಥಾಪಿಸುವುದು ಹಾಗೂ ನಿರ್ವಹಿಸುವುದು
  • ದೃಢೀಕರಣ ಸಾಧನಗಳನ್ನು ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸಮರ್ಪಕ ತರಬೇತಿಯನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಆಧಾರ್ ಸಂಖ್ಯೆಯನ್ನು ಹೊಂದಿರುವವರ ಮಾಹಿತಿಯ ಸಂರಕ್ಷಣೆಗೆ ಸಂಬಂಧಿತ ಅಂಶಗಳ ಅನುಸರಣೆಗಾಗಿ ಅರಿವನ್ನು ಮೂಡಿಸುವುದು, ಅನಧಿಕೃತ ಬಳಕೆಗಳಿಗಾಗಿ, ಮಾಹಿತಿಯ ದುರುಪಯೋಗ, ಇತ್ಯಾದಿಗಳಿಗಾಗಿ ಆಧಾರ್ ಅಧಿನಿಯಮ, 2016ರ ಅಧ್ಯಾಯ VI ಹಾಗೂ ಅಧ್ಯಾಯ VII ರ ಅಡಿಯಲ್ಲಿ ಹಾಗೂ ಅಲ್ಲದೇ ಆಧಾರ್ ದೃಢೀಕರಣ ನಿಯಂತ್ರಣಗಳು 2016ರ ಅನುಸಾರ ದಂಡಗಳನ್ನು ವಿಧಿಸುವುದು,
  • ಉಪ-ದೃಢೀಕರಣ ಬಳಕೆದಾರ ಸಂಸ್ಥೆಗಳನ್ನು ನೇಮಕ ಮಾಡಿಕೊಂಡಿರುವುದು, ಪ್ರಸಕ್ತ ಇರುವಂತಹವುಗಳನ್ನು ಕೈಬಿಟ್ಟಿರುವುದರ ಬಗ್ಗೆ ಭಾವಿಗುಪ್ರಾಕ್ಕೆ ತಿಳಿಸುವುದು
  • ಬೆಂಬಲಿತ ಉಪ-ದೃಢೀಕರಣ ಬಳಕೆದಾರ ಸಂಸ್ಥೆಗಳು ಭಾವಿಗುಪ್ರಾದ ಪ್ರಮಾಣಕಗಳು ಹಾಗೂ ನಿರ್ದಿಷ್ಟ ನಿರೂಪಣೆಗಳನ್ನು ಅನುಸರಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವುದು
  • ಯಾವುದೇ ಆಧಾರ್ ಮಾಹಿತಿ, ದೃಢೀಕರಣ ಸೇವೆಗಳು, ಅಥವಾ ಯಾವುದೇ ಆಧಾರ್ ಸಂಬಂಧಿತ ಮಾಹಿತಿ ಅಥವಾ ತಂತ್ರಾಂಶ ಅನ್ವಯಗಳ ಜೊತೆ ರಾಜಿ ಮಾಡಿಕೊಂಡಿರುವುದು, ಯಾವುದಾದರೂ ಇದ್ದಲ್ಲಿ ಆಧಾರ್ ಅಧಿನಿಯಮ, 2016ರ ಅನುಸಾರ ಭಾವಿಗುಪ್ರಾಕ್ಕೆ ತಿಳಿಸುವುದು

ಕಡ್ಡಾಯ ಭದ್ರತಾ ಅಗತ್ಯತೆಗಳು

  • ಆಧಾರ್ ಸಂಖ್ಯೆಯನ್ನು ಎಂದೆಂದಿಗೂವ್ಯಾಪ್ತಿ/ಕ್ಷೇತ್ರ (ಡೊಮೈನ್) ನಿರ್ದಿಷ್ಟತೆಯಗುರುತಿಸುವ ಸಾಧನವನ್ನಾಗಿ ಬಳಸಕೂಡದು.
  • ನಿರ್ವಾಹಕರ ಸಹಾಯದಿಂದ ಕಾರ್ಯಾಚರಣೆಗೊಳ್ಳುವ ಸಾಧನಗಳಿಗೆ ಸಂಬಂಧಿಸಿದಂತೆ, ನಿರ್ವಾಹಕರು, ಸಂಕೇತಪದ, ಆಧಾರ್ ದೃಢೀಕರಣ, ಇತ್ಯಾದಿ ವ್ಯವಸ್ಥೆಗಳನ್ನು ಬಳಸುವ ಸಲುವಾಗಿ ದೃಢೀಕರಣಗೊಂಡಿರತಕ್ಕದ್ದು.
  • ಆಧಾರ್ ದೃಢೀಕರಣಕ್ಕಾಗಿ ವೈಯಕ್ತಿಕ ಗುರುತು ಮಾಹಿತಿ ಬ್ಲಾಕನ್ನು ಸೆರೆಹಿಡಿಯುವ ಸಮಯದಲ್ಲಿ ಸಂಕೇತೀಕರಿಸಿರತಕ್ಕದ್ದು ಹಾಗೂ ಒಂದು ಜಾಲಸಂಪರ್ಕದಲ್ಲ್ಲಿ ಸ್ಪಷ್ಟವಾಗಿ/ಮುಕ್ತವಾಗಿ ಎಂದಿಗೂ ಕಳುಹಿಸತಕ್ಕದ್ದಲ್ಲ
  • ಸಂಕೇತೀಕರಿಸಲಾದ ಪಿಐಡಿ ಬ್ಲಾಕನ್ನು ಪ್ರಸ್ತುತ ಒಂದು ಅಲ್ಪಾವಧಿಗೆ 24 ಗಂಟೆಗಳಿಗೆಎಂಬುದಾಗಿವಿನ್ಯಾಸಗೊಳಿಸಲಾಗಿರುವ ಮಧ್ಯಂತರ ದೃಡೀಕರಣಕ್ಕಾಗಿಯಲ್ಲದೇ ಸಂಗ್ರಹಿಸಿಡಕೂಡದು
  • ಆಧಾರ್ ದೃಢೀಕರಣದ ಉದ್ದೇಶಕ್ಕಾಗಿ ಸೆರೆಹಿಡಿಯಲಾದಂತಹ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಹಾಗೂ ಒಂದು ಸಲದ ಸಂಕೇತಪದವನ್ನು ಯಾವುದೇ ಶಾಶ್ವತ ಭಂಡಾರದಲ್ಲಿ ಅಥವಾ ದತ್ತಸಂಚಯದಲ್ಲಿ ಸಂಗ್ರಹಿಸಕೂಡದು.
  • ಮೂಲಮಾಹಿತಿ ಹಾಗೂ ಪ್ರತಿಕ್ರಿಯೆಗಳನ್ನುಲೆಕ್ಕಪರಿಶೋಧನೆಯಉದ್ದೇಶಗಳಿಗಾಗಿಲಾಗ್ ಮಾಡಕೂಡದು
  • ಆಧಾರ್ ದೃಢೀಕರಣ ಸಂಸ್ಥೆ ಹಾಗೂ ಆಧಾರ್ ಸೇವಾ ಸಂಸ್ಥೆಗಳ ನಡುವಿನ ಜಾಲಸಂಪರ್ಕವು ಭದ್ರತೆಯಿಂದ ಕೂಡಿರತಕ್ಕದ್ದು