Authentication Services Agencies

ಪರಿಚಯ

ಭಾವಿಗುಪ್ರಾದ ಪ್ರಮಾಣಕಗಳು ಹಾಗೂ ಸಿಐಡಿಆರ್ ನ ಜೊತೆ ಭದ್ರತೆಯಿಂದ ಕೂಡಿದ ಗುತ್ತಿಗೆ ಆಧಾರಿತ ಮಾರ್ಗದ ಸಂಪರ್ಕತೆಯನ್ನು ಸ್ಥಾಪಿಸಿದಂತಹ ಸಂಸ್ಥೆಗಳು ದೃಢೀಕರಣ ಸೇವಾ ಸಂಸ್ಥೆಗಳಾಗಿರುತ್ತವೆ. ಕೋರಿಕೆಯನ್ನು ಮಾಡುವ ಸಂಸ್ಥೆಗಳಿಗೆ (ಎಯುಎಗಳು/ಕೆಯುಎಗಳು) ದೃಢೀಕರಣ ಸೇವಾ ಸಂಸ್ಥೆಗಳು ತಮ್ಮ ಭಾವಿಗುಪ್ರಾ-ಅನುಸರಣಾ ಜಾಲಸಂಪರ್ಕ ಸಂಪರ್ಕತೆಯನ್ನು ಒಂದು ಸೇವೆಯಾಗಿ ನೀಡುತ್ತವೆ

ದೃಢೀಕರಣ ಸೇವಾ ಸಂಸ್ಥೆಗಳು ಮಧ್ಯವರ್ತಿಗಳಿಗೆ ಅನುಕೂಲ ಕಲ್ಪಿಸುವ ಪಾತ್ರವನ್ನು ನಿರ್ವಹಿಸುತ್ತವೆ. ಭಾವಿಗುಪ್ರಾದ ಜೊತೆ ದೃಢೀಕರಣ ಸೇವಾ ಸಂಸ್ಥೆಗಳ ರೀತಿಯಲ್ಲಿ ಸಹಭಾಗಿಗಳಾಗಿರುವಂತಹ ಸಂಸ್ಥೆಗಳು ಮಾತ್ರ ಭಾವಿಗುಪ್ರಾದ ತಂತ್ರಾಂಶ ಅನ್ವಯಗಳ ಪ್ರವೇಶವನ್ನು ಪಡೆಯಬಹುದು ಹಾಗೂ ಭಾವಿಗುಪ್ರಾದ ಸಿಐಡಿಆರ್ ಗೆ ದೃಢೀಕರಣ ಕೋರಿಕೆಗಳನ್ನು ಕಳುಹಿಸಬಹುದು, ಇತರೆ ಯಾವುದೇ ಸಂಸ್ಥೆಯೂ ಸಿಐಡಿಆರ್ ನ ಜೊತೆ ನೇರವಾಗಿ ಸಂಪರ್ಕವನ್ನು ಸಾಧಿಸಲು ಸಾಧ್ಯವಿಲ್ಲ. ಒಂದು ದೃಢೀಕರಣ ಸೇವಾ ಸಂಸ್ಥೆಯು ಕೋರಿಕೆಗಳನ್ನು ಮಾಡುವ ಅನೇಕ ಅಸ್ತಿತ್ವಗಳಿಗೆ ಸೇವೆಯನ್ನು ಸಲ್ಲಿಸಬಹುದು; ಹಾಗೂ ಅಲ್ಲದೇ ವಿವಿಧ-ತಂಡಗಳ ದೃಢೀಕರಣ, ಅನುಮೋಧನೆ ಹಾಗೂ ಎಂಐಎಸ್ ವರದಿಗಳಂತಹ ಮೌಲ್ಯ ವರ್ಧಿತ ಸೇವೆಗಳನ್ನೂ ಸಹ ನೀಡಬಹುದು.

ದೃಢೀಕರಣ ಸೇವಾ ಸಂಸ್ಥೆಗಳ ಉದಾಹರಣೆಗಳು

 • ಪ್ರಸ್ತುತದೇಶದಲ್ಲಿನಚಿಲ್ಲರೆ/ಸಣ್ಣಪುಟ್ಟ ಪಾವತಿ ವ್ಯವಸ್ಥೆಗಳನ್ನು ಕಾರ್ಯಾಚಣೆಗೊಳಿಸುವ ಸಲುವಾಗಿ ಒಂದುಆಶ್ರಯಸಂಸ್ಥೆಯಾಗಿಅಧಿಕಾರವನ್ನುಪಡೆದಿರುವಭಾರತೀಯರಾಷ್ಟ್ರೀಯಪಾವತಿಗಳನಿಗಮ (ಏನ್ ಪಿ ಸಿಐ)
 • ವಿವಿಧಕೇಂದ್ರಹಾಗೂರಾಜ್ಯಸರ್ಕಾರಿ ಸಚಿವಾಲಯಗಳು/ಇಲಾಖೆಗಳಿಗೆಸಂಪರ್ಕತೆಯಪರಿಹಾರವನ್ನುಒದಗಿಸುವಂತಹಡಿಐಟಿ/ಎನ್ಐಸಿ
 • ವಿವಿಧ ಸಂಸ್ಥೆಗಳಿಗೆ ಸಂಬಂಧಿತ ಸೇವೆಗಳನ್ನು ಒದಗಿಸುವಂತಹ ದೂರಸಂಪರ್ಕ ವಾಹಕಭಂಡಾರಸಂಸ್ಥೆಗಳು, ಇತ್ಯಾದಿಗಳು

ದೃಢೀಕರಣಸೇವಾಸಂಸ್ಥೆಗಳಅರ್ಹತೆಗೆಮಾನದಂಡಗಳು

 • ಒಂದು ಕೇಂದ್ರ/ರಾಜ್ಯ ಸರ್ಕಾರದ ಸಚಿವಾಲಯ/ಇಲಾಖೆ ಅಥವಾ ಕೇಂದ್ರ/ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿರುವ ಒಂದು ಉದ್ದಿಮೆ ಅಥವಾ
 • ಕೇಂದ್ರ/ರಾಜ್ಯ ಸರ್ಕಾರದ ಅಡಿಯಲ್ಲಿ ರಚಿಸಲಾಗಿರುವ ಒಂದು ಪ್ರಾಧಿಕಾರ ಅಥವಾ
 • ಒಂದು ಲಾಭಕ್ಕಾಗಿ ಆಗಿರದ ಕಂಪನಿ/ ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಹೊಂದಿರುವ ವಿಶೇಷ ಉದ್ದೇಶವನ್ನು ಹೊಂದಿರುವ ಸಂಸ್ಥೆ ಅಥವಾ
 • ಈ ಕೆಳಗಿನ ಅಗತ್ಯತೆಗಳನ್ನು ಪೂರೈಸುವಂತಹ, ಭಾರತೀಯ ಕಂಪನಿಗಳ ಅಧಿನಿಯಮ 1956ರ ಅಡಿಯಲ್ಲಿ ಭಾರತದಲ್ಲಿ ನೋಂದಣಿಯಾಗಿರುವ ಒಂದು ಕಂಪನಿ::
  • ಹಣಕಾಸಿನ ಸಾಮರ್ಥ್ಯತೆಗಳು – ಕಳೆದ ಮೂರು ಹಣಕಾಸು ಸಾಲುಗಳಲ್ಲಿ ವಾರ್ಷಿಕ ವಹಿವಾಟು ಕಡೆಯ ಪಕ್ಷ ರೂ.100 ಕೋಟಿ ಆಗಿರತಕ್ಕದ್ದು ಹಾಗೂ
  • ತಾಂತ್ರಿಕ ಸಾಮರ್ಥ್ಯತೆಗಳು :
   • ದೂರಸಂಪರ್ಕ ಸೇವೆಯನ್ನು ಒದಗಿಸುವವರು, ಪಾನ್ ಇಂಡಿಯಾ ಫೈಬರ್ ಆಪ್ಟಿಕ್ಸ್ ನೆಟ್ ವರ್ಕ್ ಅನ್ನು ಕಾರ್ಯಾಚರಣೆ ಮಾಡುತ್ತಿರುವವರು ಹಾಗೂ ಎಲ್ಲಾ ರಾಜ್ಯಗಳ ಉದ್ದಗಲಕ್ಕೂ ಕನಿಷ್ಠ ಎಂಪಿಎಲ್ಎಸ್ ಅಂಕಗಳನ್ನು ಹೊಂದಿರತಕ್ಕದ್ದು
   • ಮಾಹಿತಿ, ದ್ವನಿ ರವಾನೆಗಾಗಿಸಂಪರ್ಕಜಾಲಸಂಪರ್ಕತೆಯನ್ನುಒದಗಿಸುವಸಾಮರ್ಥ್ಯತೆಯನ್ನುಹೊಂದಿರತಕ್ಕದ್ದುಹಾಗೂ100 ಎಂಪಿಎಲ್ಎಸ್ಒಪ್ಪಿಗಳನ್ನು ಹೊಂದಿರುವ ಟಿಎಸ್ಪಿ ಜೊತೆಯಲ್ಲಿ ಒಂದು ಒಡಂಬಡಿಕೆಯನ್ನು ಮಾಡಿಕೊಂಡಿರಬೇಕು
   • ಮೇಲೆ ವಿವರಿಸಿರುವ ರೀತಿಯಲ್ಲಿ ಟಿ ಎಸ್ ಪಿ/ಎನ್ ಎಸ್ ಪಿ ಜೊತೆಯಲ್ಲಿ ಅಗತ್ಯ ವ್ಯವಸ್ಥೆಯನ್ನು ಹೊಂದಿರುವ ಒಂದು ತಂತ್ರಾಂಶ ಅನ್ವಯ ಸಂಘಟನಾಕಾರರಅಗತ್ಯತೆಯಿರುತ್ತದೆ
 • ಕೇಂದ್ರ/ರಾಜ್ಯಸರ್ಕಾರಗಳು/ ಸಾರ್ವಜನಿಕವಲಯದಕೇಂದ್ರ/ರಾಜ್ಯಸರ್ಕಾರಗಳಉದ್ದಿಮೆಗಳು,ಸಂಸ್ಥೆಯನ್ನು ಕಳೆದ ಐದು ವರ್ಷಗಳಲ್ಲಿ ಕಪ್ಪು ಪಟ್ಟಿಗೆ ಸೇರಿಸಿರಕೂಡದು

ಹೆಚ್ಚಿನ ವಿವರಗಳಿಗೆ ಎ ಎಸ್ ಎ ಆನ್ ಬೋರ್ಡಿಂಗ್ ಪ್ರಕ್ರಿಯೆ ದಾಖಲೆಯನ್ನು ದಯವಿಟ್ಟು ಉಲ್ಲೇಖಿಸಿರಿ

 

ಅಸ್ತಿತ್ವ/ಸಂಸ್ಥೆಯು ಒಂದು ಒಪ್ಪಿಗೆ ಪತ್ರವನ್ನು ನೀಡತಕ್ಕದ್ದು ಹಾಗೂ ದೃಢೀಕರಣ ಸೇವಾ ಸಂಸ್ಥೆಗಳ ಕೈಪಿಡಿಯಲ್ಲಿ ನಿರ್ದಿಷ್ಟಪಡಿಸಲಾಗಿರುವ ಮಾರ್ಗಸೂಚಿಗಳ ಅನುಸಾರ ದೃಢೀಕರಣ ಸೇವಾ ಸಂಸ್ಥೆಗೆ ಅಗತ್ಯವಿರುವ ಮೂಲಭೂತಸೌಕರ್ಯಗಳು ಹಾಗೂ ತಂತ್ರಾಂಶ ಅನ್ವಯಗಳ ವಿನ್ಯಾಸ, ರೂಪರೇಖೆ/ವ್ಯವಸ್ಥಾರೀತಿ, ಕಾರ್ಯಗತಗೊಳಿಸುವಿಕೆಹಾಗೂನಿರ್ವಹಣೆ, ಇವುಗಳಬಗ್ಗೆಪ್ರಾತ್ಯಕ್ಷಿಕೆಯನ್ನುತೋರಿಸತಕ್ಕದ್ದು

ಪ್ರಸಕ್ತಇರುವಂತಹದೃಢೀಕರಣಸೇವೆಗಳನ್ನುಒದಗಿಸುವವರು, ತಮ್ಮಗ್ರಾಹಕರಿಗೆಇ-ಕೆವೈಸಿಸೇವೆಗಳನ್ನುಒದಗಿಸುವುದಕ್ಕೆಅನುಕೂಲಕಲ್ಪಿಸುವುದಕ್ಕಾಗಿಭಾವಿಗುಪ್ರಾದಜೊತೆಯಲ್ಲಿಸ್ಪಷ್ಟವಾಗಿನೋಂದಣಿಮಾಡಿಸಿರತಕ್ಕದ್ದು. ಇ-ಕೈವೈಸಿಸೇವೆಯು ಆಧಾರ್ ಸಂಖ್ಯೆಯನ್ನುಹೊಂದಿರುವವರಛಾಯಾಚಿತ್ರದೊಂದಿಗೆಜೀವಸಂಖ್ಯಾಶಾಸ್ತ್ರಕ್ಕೆಸಂಬಂಧಿತಮಾಹಿತಿಗೆಪ್ರತಿಕ್ರಿಯೆನೀಡುತ್ತದೆಹಾಗೂದೃಢೀಕರಣಸೇವಾಸಂಸ್ಥೆಗಳುಮಾಹಿತಿಯನ್ನುಕೋರಿಕೆಯನ್ನುಮಾಡುವಅಸ್ತಿತ್ವಗಳಿಗೆರವಾನಿಸುತ್ತವೆಹಾಗೂ<ಮಾಹಿತಿಯನ್ನುಹೆಚ್ಚುವರಿಸೇವೆಗಳನ್ನುಒದಗಿಸುವುದಕ್ಕಾಗಿಉಪಯೋಗಿಸಿಕೊಳ್ಳುತ್ತವೆ/p>

ದೃಢೀಕರಣ ಸೇವಾ ಕೇಂದ್ರವನ್ನು ನೇಮಕ ಮಾಡಿಕೊಳ್ಳುವುದರ ಬಗ್ಗೆ ಭಾವಿಗುಪ್ರಾದ ನಿರ್ಣಯವು ಅಂತಿಮವಾಗಿರುತ್ತದೆ.

ದೃಢೀಕರಣ ಸೇವಾ ಕೇಂದ್ರದ ಸಿದ್ಧತೆಯ ಹಂತಗಳು

 • ಆನ್ ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವುದು: ದೃಢೀಕರಣ ಸೇವಾ ಸಂಸ್ಥೆಯಾಗಿ ನೇಮಕಗೊಳ್ಳುವುದಕ್ಕಾಗಿ ಭಾವಿಗುಪ್ರಾವು ನಿರ್ದಿಷ್ಟಪಡಿಸಿರುವ ಅರ್ಹತೆಯ ಮಾನದಂಡವನ್ನು ಪೂರೈಸುವ ಯಾವುದೇ ಸಂಸ್ಥೆಯು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸತಕ್ಕದ್ದು. ದೃಢೀಕರಣ ಸೇವಾ ಸಂಸ್ಥೆಯನ್ನು ನೇಮಕ ಮಾಡಿಕೊಳ್ಳುವುದಕ್ಕಾಗಿ, ಭಾವಿಗುಪ್ರಾವು ಒಂದು ಆನ್ ಲೈನ್ ಕಾರ್ಯಚಟುವಟಿಕೆಗಳ ಹರಿವಿನ ಆಧಾರದ ಮೇರೆಗೆ ಅರ್ಜಿನಮೂನೆಯನ್ನು ಪ್ರಕಟಿಸಿದೆ
 • ಭಾವಿಗುಪ್ರಾಕ್ಕೆ ಸಹಿ ಮಾಡಲ್ಪಟ್ಟಿರುವ ಗುತ್ತಿಗೆ ಕರಾರು ಪತ್ರವನ್ನು ಹಾಗೂ ಬೆಂಬಲಿತ ದಾಖಲೆಗಳನ್ನು ಕಳುಹಿಸುವುದು : ದೃಢೀಕರಣ ಸೇವಾ ಸಂಸ್ಥೆಯು ಸಹಿಮಾಡಲ್ಪಟ್ಟಿರುವಗುತ್ತಿಗೆಕರಾರುಪತ್ರದಹಾಳೆಯಮೇಲೆಮುದ್ರಿತಪ್ರತಿಯನ್ನುಬೆಂಬಲಿತದಾಖಲೆಗಳಜೊತೆಯಲ್ಲಿ ಭಾವಿಗುಪ್ರಾಕ್ಕೆ ಕಳುಹಿಸತಕ್ಕದ್ದು. ಅಗತ್ಯ ದಾಖಲೆಗಳು ಸ್ವೀಕೃತಗೊಂಡನಂತರ ಭಾವಿಗುಪ್ರಾವು ಆನ್ ಲೈನ್ ಅರ್ಜಿಯನ್ನು ಅನುಮೋದಿಸುವುದು
 • ಸಿಐಡಿಆರ್ ಜೊತೆ ಗುತ್ತಿಗೆ ಆಧಾರಿತ ಸಂಪರ್ಕ ಮಾರ್ಗವನ್ನು ಸ್ಥಾಪಿಸುವುದು: ದೃಢೀಕರಣ ಸೇವಾ ಸಂಸ್ಥೆಯು ತನ್ನ ಮಾಹಿತಿ ಕೇಂದ್ರದಿಂದ ಸಿಐಡಿಆರ್ ಗೆ ಭದ್ರತೆಯಿಂದ ಕೂಡಿದ ಗುತ್ತಿಗೆ ಆಧಾರಿತ ಮಾರ್ಗ ಅಥವಾ ಎಂ ಪಿ ಎಲ್ ಎಸ್ ಸಂಪರ್ಕತೆಯನ್ನು ಪಡೆದುಕೊಳ್ಳುವ ಅಗತ್ಯತೆಯಿರುತ್ತದೆ. ದೃಢೀಕರಣ ಸೇವಾ ಸಂಸ್ಥೆಗಳು ತಮ್ಮ ವ್ಯವಹಾರದ ಅಗತ್ಯತೆಗಳಿಗೆ ಅನುಸಾರವಾಗಿಬ್ಯಾಂಡ್ ವಿಡ್ತ್, ರಿಡಂಡೆನ್ಸಿ, ಇತ್ಯಾದಿಗಳ ಬಗ್ಗೆ ಪೂರ್ವಭಾವಿಯಾಗಿ ಯೋಜಿಸತಕ್ಕದು. ಸಿಐಡಿಆರ್ ನಲ್ಲಿಗುತ್ತಿಗೆಆಧಾರಿತಮಾರ್ಗವನ್ನುಮುಕ್ತಾಯಗೊಳಿಸುವವೇಳೆಯಲ್ಲಿಉದ್ಯಮ ವರ್ಗ ಮಾರ್ಗನಿರ್ದೇಶಕಗಳು (ವಿಫಲತೆಯಏಕೈಕಅಂಶವನ್ನುತೆಗೆದುಹಾಕುವುದಕ್ಕಾಗಿ) ಸಕ್ರಿಯಬದಲಿವ್ಯವಸ್ಥೆಮಾದರಿಕಡೆಯಪಕ್ಷ1ಜೋಡಿಯನ್ನುದೃಢೀಕರಣಸೇವಾಸಂಸ್ಥೆಗಳುಅನುವುಮಾಡುವಅಗತ್ಯತೆಯಿರುತ್ತದೆ
  ದೃಢೀಕರಣ ಸೇವಾ ಸಂಸ್ಥೆಗಳು ಗುತ್ತಿಗೆ ಆಧಾರಿತ ಮಾರ್ಗದ ಆಯ್ಕೆಯನ್ನು ಮಾಡಿಕೊಳ್ಳಬಹುದಾದರೂ, ದೃಢೀಕರಣ ಸೇವಾ ಸಂಸ್ಥೆಗಳು, ತಮಗೆ ಕೋರಿಕೆಗಳನ್ನು ಮಾಡುವ ಸಂಸ್ಥೆಗಳಿಗೆ ನೀಡುವ ಆಧಾರ್ ಸೇವೆಗಳ ಅತ್ಯುತ್ತಮ ಮಟ್ಟದ ಲಭ್ಯತೆ ಹಾಗೂ ವಿಶ್ವಸನೀಯತೆಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ, ಮಾಹಿತಿ ಕೇಂದ್ರಗಳಿಗೆ, ಅಂದರೆ ಹೆಬ್ಬಾಳ ಮಾಹಿತಿ ಕೇಂದ್ರ ಹಾಗೂ ಮನೆಸರ್ ಮಾಹಿತಿ ಕೇಂದ್ರ, ಈ ಎರಡಕ್ಕೂ ಅಧಿಕ ಮಟ್ಟದಲ್ಲಿ ಲಭ್ಯತೆಯನ್ನು ಹಾಗೂ ಜೋಡಿ ಅವಶ್ಯಕತೆಯನ್ನು ಮೀರಿದ (redundant) ಸಂಪರ್ಕಗಳನ್ನು ಅನುವು ಮಾಡುವ ಅಗತ್ಯತೆಯಿರುತ್ತದೆ .
 • ಸಂಸ್ಕರಣೆ/ಪ್ರಕ್ರಿಯೆ ಹಾಗೂ ತಾಂತ್ರಿಕ ಅನುಸರಣೆಗಳನ್ನು ಖಚಿತಪಡಿಸಿಕೊಳ್ಳುವುದು: ದೃಢೀಕರಣ ಸೇವಾ ಸಂಸ್ಥೆಗಳು, ಭಾವಿಗುಪ್ರಾವು ದೃಢೀಕರಣ ಸೇವಾ ಸಂಸ್ಥೆಗಳ ಕೈಪಿಡಿಯಲ್ಲಿ ನಿರ್ದಿಷ್ಟಪಡಿಸಿರುವ ಪ್ರಮಾಣಕಗಳು ಹಾಗೂ ನಿರ್ದಿಷ್ಟ ನಿರೂಪಣೆಗಳನ್ನು ಅನುಸರಿಸುವ ನಿಟ್ಟಿನಲ್ಲಿ ಅಗತ್ಯ ತಂತ್ರಾಂಶ ಅನ್ವಯಗಳು, ಸಂಸ್ಕರಣೆಗಳು, ಮೂಲಭೂತಸೌಕರ್ಯಗಳನ್ನು ಸ್ಥಾಪಿಸುವ ಅಗತ್ಯತೆ ಇರುತ್ತದೆ. ವಿವಿಧ ಅಗತ್ಯತೆಗಳನ್ನು ಅನುಸರಿಸುವುದರ ಬಗ್ಗೆ ಆನ್ ಲೈನ್ ಅರ್ಜಿಯ ಮೂಲಕ ಭಾವಿಗುಪ್ರಾಕ್ಕೆ ಖಚಿತಪಡಿಸುವ ಅಗತ್ಯತೆಯಿರುತ್ತದೆ
 • ಭಾವಿಗುಪ್ರಾದಿಂದ ಅನುಮೋದನೆಗಳನ್ನು ಪಡೆಯುವುದು: ವಿವಿಧಅನುಸರಣಾಅಗತ್ಯತೆಗಳನ್ನುಪೂರೈಕೆಗೊಂಡನಂತರಭಾವಿಗುಪ್ರಾವುದೃಢೀಕರಣಸೇವಾಸಂಸ್ಥೆಯಅರ್ಜಿಗೆಅನುಮೋದನೆಯನ್ನುನೀಡುವುದು. ಒಂದುದೃಢೀಕರಣಸೇವಾಸಂಸ್ಥೆಯುಸಂಸ್ಕರಣೆಯವೇಳೆಯಲ್ಲಿಭಾವಿಗುಪ್ರಾದಜೊತೆತೊಡಗಿಸಿಕೊಂಡಿರತಕ್ಕದ್ದುಹಾಗೂಅಗತ್ಯಸ್ಪಷ್ಟನೆಗಳನ್ನುಒದಗಿಸತಕ್ಕದ್ದು.
 • ತುದಿಯಿಂದತುದಿಗೆಸೇರಿದಪರೀಕ್ಷಣೆಯನ್ನುನಡೆಸುವುದು: ಭಾವಿಗುಪ್ರಾದಿಂದ ಪಡೆಯಲಾದ ಒಂದು ಅನುಮೋದನೆಯು ದೃಢೀಕರಣ ಸೇವಾ ಸಂಸ್ಥೆಗಳಿಗೆ ಭಾವಿಗುಪ್ರಾದ ಉತ್ಪಾದನಾ ಪೂರ್ವ ಪರಿಸರದಲ್ಲಿ ಸಿಐಡಿಆರ್ ಜೊತೆ ಅವುಗಳ ಸಂಪರ್ಕತೆಯನ್ನು ತುದಿಯಿಂದ ತುದಿಗೆ ಪರಿಶೀಲನೆಯನ್ನು ನಡೆಸಿಕೊಂಡು ಹೋಗುವುದಕ್ಕೆ ಅನುವು ಮಾಡುತ್ತದೆ. ವಿದ್ಯುಕ್ತವಾಗಿ ಕಾರ್ಯಾರಂಭಗೊಳಿಸುವ ಮೊದಲು, ಸಾಧನಗಳಿಂದ ಕೋರಿಕೆಯನ್ನು ಮಾಡುವ ಅಸ್ತಿತ್ವಗಳಿಗೆ ಸಂಪರ್ಕತೆಯನ್ನು ತುದಿಯಿಂದ ತುದಿಗೆ ಪರೀಕ್ಷಣೆಯನ್ನು ನಡೆಸಿಕೊಂಡು ಹೋಗುವುದಕ್ಕಾಗಿ ದೃಢೀಕರಣ ಸೇವಾ ಸಂಸ್ಥೆಗಳು ಕೋರಿಕೆಯನ್ನು ಮಾಡುವ ಸಂಸ್ಥೆಗಳ ಜೊತೆ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದನ್ನು ಅಧಿಕವಾಗಿ ಶಿಫಾರಸು ಮಾಡಲಾಗುತ್ತದೆ. ಒಂದು ದೃಢೀಕರಣ ಸೇವಾ ಸಂಸ್ಥೆಯು ಬ್ಯಾಂಡ್ ವಿಡ್ತ್ ಸಮರ್ಪಕತೆಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಹೊರೆ ಪರೀಕ್ಷಣೆಯನ್ನು ನಡೆಸಿಕೊಂಡು ಹೋಗತಕ್ಕದ್ದು. ದೃಢೀಕರಣ ಸೇವಾ ಸಂಸ್ಥೆಗಳು ವಿದ್ಯುಕ್ತವಾಗಿ ಕಾರ್ಯಾರಂಭಗೊಳಿಸುವ ಮೊದಲು, ಒಂದು ಮಾನ್ಯತೆಯನ್ನು ಹೊಂದಿರುವ ಸಂಸ್ಥೆಯಿಂದ ಪ್ರಮಾಣೀಕರಿಸಲ್ಪಟ್ಟಿರುವ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳ ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೋಧನೆ ಮಾಡಲ್ಪಟ್ಟ ಆಧಾರ್ ದೃಢೀಕರಣ ತಂತ್ರಾಂಶ ಅನ್ವಯಗಳನ್ನು ಪಡೆದುಕೊಳ್ಳುವ ಅಗತ್ಯತೆಯಿರುತ್ತದೆ
 • ವಿದ್ಯುಕ್ತವಾಗಿ ಕಾರ್ಯಾರಂಭ ಮಾಡುವುದು/ಉತ್ಪಾದನಾ ಹಂತ: ಉತ್ಪಾದನಾ-ಪೂರ್ವ ಪರಿಸರದಲ್ಲಿ ಭಾವಿಗುಪ್ರಾದ ಎಲ್ಲಾ ಪ್ರಕ್ರಿಯೆ ಸಂಸ್ಕರಣೆಗಳಿಗೆ ಬದ್ಧವಾಗಿರುವುದನ್ನು ಖಚಿತಪಡಿಸಿಕೊಂಡನಂತರವಷ್ಟೇ ಒಂದು ದೃಢೀಕರಣ ಸೇವಾ ಸಂಸ್ಥೆಯು ವಿದ್ಯುಕ್ತವಾಗಿ ಕಾರ್ಯಾರಂಭಗೊಳಿಸಬಹುದು/ಉತ್ಪಾದನಾ ಹಂತಕ್ಕೆ ಬರಬಹುದು. ಭಾವಿಗುಪ್ರಾವು ಅದನ್ನು ಆನ್ ಲೈನ್ ಕಾರ್ಯಚಟುವಟಿಕೆಗಳ ಹರಿವಿನ ಆಧಾರದ ಮೇಲಿನ ತಂತ್ರಾಂಶ ಅನ್ವಯದ ಮೂಲಕ ನಿರ್ವಹಿಸುತ್ತದೆ. ಅಲ್ಲದೆಯೇ, ಒಂದು ದೃಢೀಕರಣ ಸೇವಾ ಸಂಸ್ಥೆಯು ಕೋರಿಕೆಯನ್ನು ಮಾಡುವ ಅಸ್ತಿತ್ವದ ಜೊತೆಯಲ್ಲಿ ತೊಡಗಿಸಿಕೊಂಡನಂತರವಷ್ಟೇ ದೃಢೀಕರಣ ಪೊಟ್ಟಣವನ್ನು ರವಾನೆ ಮಾಡಬಹುದು.
 • ಕೋರಿಕೆಯನ್ನು ಮಾಡುವ ಅಸ್ತಿತ್ವಗಳ ಜೊತೆಗೆ ತೊಡಗಿಸಿಕೊಳ್ಳುವುದು: ಒಂದು ದೃಢೀಕರಣ ಸೇವಾ ಸಂಸ್ಥೆಯು, ತಾನು ಬೆಂಬಲಿಸುವ ಕೋರಿಕೆಯನ್ನು ಮಾಡುವ ಸಂಸ್ಥೆಯ ಜೊತೆ ಒಂದು ಔಪಚಾರಿಕ ಒಡಂಬಡಿಕೆಯನ್ನು ಮಾಡಿಕೊಳ್ಳಬೇಕು. ದೃಢೀಕರಣ ಸೇವಾ ಸಂಸ್ಥೆ ಹಾಗೂ ದೃಢೀಕರಣ ಸೇವೆಯನ್ನು ಬಳಸಿಕೊಳ್ಳುವ ಸಂಸ್ಥೆಗಳ ನಡುವಿನ (ದೃಢೀಕರಣ ಸೇವಾ ಸಂಸ್ಥೆ ಹಾಗೂ ದೃಢೀಕರಣ ಸೇವೆಯನ್ನು ಬಳಸಿಕೊಳ್ಳುವ ಸಂಸ್ಥೆಗಳ ನಡುವಿನ ಒಡಂಬಡಿಕೆಗೆ ಮಾರ್ಗಸೂಚಿಗಳು) ಒಡಂಬಡಿಕೆಯಲ್ಲಿ ಸೇರಿಸಬೇಕಾದ ಪ್ರಸ್ತಾಪಿತ ಮಾರ್ಗಸೂಚಿಗಳ ಒಂದು ಸೆಟ್ಟನ್ನು ಭಾವಿಗುಪ್ರಾವು ಹೊಂದಿದೆ. ಆದಾಗ್ಯೂ, ದೃಢೀಕರಣ ಸೇವಾ ಸಂಸ್ಥೆ ಹಾಗೂ ದೃಢೀಕರಣ ಸೇವೆಯನ್ನು ಬಳಸಿಕೊಳ್ಳುವ ಸಂಸ್ಥೆಗಳ ನಡುವಿನ ಒಡಂಬಡಿಕೆಯು ಸಹಿಯನ್ನು ಮಾಡುವ ತಂಡಗಳ ಏಕೈಕ ವಿವೇಚನೆಗೆ ಬಿಟ್ಟ ವಿಚಾರವಾಗಿರುತ್ತದೆ ಹಾಗೂ ಭಾವಿಗುಪ್ರಾವು ಅದರ ಬಗ್ಗೆ ಯಾವುದೇ ಜವಾಬ್ದಾರಿಯನ್ನೂ ಹೊಂದಿರುವುದಿಲ್ಲ. ಅದೇ ರೀತಿ ಒಂದು ದೃಢೀಕರಣ ಸೇವಾ ಸಂಸ್ಥೆಯು ದೃಢೀಕರಣವನ್ನು ಬಳಸಿಕೊಳ್ಳುವ ಸಂಸ್ಥೆಗೆ ಆಧಾರ್ ಆಧಾರಿತ ದೃಢೀಕರಣವನ್ನು ಮೀರಿದಂತೆ ಯಾವುದಾದರೂ ಮೌಲ್ಯವರ್ಧಿತ ಸೇವೆಗಳನ್ನು ಒದಗಿಸಿದಲ್ಲಿ, ಅಂತಹ ಸೇವೆಗಳಿಗೆ ಭಾವಿಗುಪ್ರಾವು ಜವಾಬ್ದಾರಿಯುತವಾಗಿರುವುದಿಲ್ಲ

ದೃಢೀಕರಣ ಸೇವಾ ಸಂಸ್ಥೆಗಳ ಪ್ರಮುಖ ಜವಾಬ್ದಾರಿಗಳು

 • ದೃಢೀಕರಣ ಸಂಬಂಧಿತ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ದೃಢೀಕರಣ ಸೇವಾ ಸಂಸ್ಥೆಗಳ ಕೈಪಿಡಿಯಲ್ಲಿ ಸೂಚಿಸಿರುವಂತೆ ಭಾವಿಗುಪ್ರಾವು ಶಿಫಾರಸು ಮಾಡಿರುವ ಪ್ರಮಾಣಕಗಳ ಮಟ್ಟಕ್ಕೆ ಅನುಸರಿಸಿರುವುದನ್ನು ಖಚಿತಪಡಿಸಿಕೊಳ್ಳುವುದು.
 • ಭಾವಿಗುಪ್ರಾವು ನಿರ್ದಿಷ್ಟಪಡಿಸಿರುವಂತೆ ಹಾಗೂ ಆಧಾರ್ ಅಧಿನಿಯಮದ ಅನುಸಾರ ದೃಢೀಕರಣ ವ್ಯವಹಾರಗಳ ವಿವರಗಳಿಗೆ ಲಾಗ್ ಆಗುವುದು ಹಾಗೂ ನಿರ್ವಹಿಸುವುದು
 • ಅದರಕಾರ್ಯಾಚರಣೆಗಳುಹಾಗೂತಂತ್ರಾಂಶಅನ್ವಯಗಳಿಗೆಸಂಬಂಧಿಸಿದಂತೆದೃಢೀಕರಣಸೇವಾಸಂಸ್ಥೆಗಳಕೈಪಿಡಿಯಲ್ಲಿನಿರ್ದಿಷ್ಟಪಡಿಸಿರುವಪ್ರಕಾರ ಆಧಾರ್ ದ್ರುಢೀಕರಣಲೆಕ್ಕಪರಿಶೋಧನೆಯನ್ನುಮಾಡಿಸುವುದು.
 • ದೃಢೀಕರಣಕ್ಕಾಗಿ ಊಡಿಕೆ ಮಾಡಲಾಗಿರುವ ಮಾಹಿತಿಗಳ ಮೂಲ ಪರೀಕ್ಷಣೆಗಳನ್ನು ಮಾಡುವುದು ಹಾಗೂ ಅದನ್ನು ಸಿಐಡಿಆರ್ ಗೆ ಕಳುಹಿಸುವುದು
 • ಸಿಐಡಿಆರ್ ನಿಂದ ಸ್ವೀಕರಿಸಲಾಗುವ ದೃಢೀಕರಣದ ಫಲಿತಾಂಶವನ್ನು ಕೋರಿಕೆಯನ್ನು ಮಾಡುವ ಸಂಸ್ಥೆಗೆ ರವಾನಿಸುವುದು
 • ತಾನು ಸೇವೆಗಳನ್ನು ನೀಡುವ ಕೋರಿಕೆಯನ್ನು ಮಾಡುವ ಸಂಸ್ಥೆಯ ಕಾರ್ಯನಿರತವಾಗಿರುವಿಕೆಗಳು/ಕಾರ್ಯನಿರತವಾಗಿರದವುಗಳಬಗ್ಗೆಭಾವಿಗುಪ್ರಾಕ್ಕೆಮಾಹಿತಿಯನ್ನುತಿಳಿಸುವುದು
 • ಆಧಾರ್ ಮಾಹಿತಿಯು ದುರುಪಯೋಗವಾಗಿರುವುದು, ದೃಢೀಕರಣ ಸೇವೆಗಳು, ಅಥವಾ ಆಧಾರ್ ಸಂಬಂಧಿತ ಮಾಹಿತಿ ಅಥವಾ ವ್ಯವಸ್ಥೆಗಳ ಜೊತೆ ಯಾವುದಾದರೂ ರಾಜಿ ಮಾಡಿಕೊಂಡಿರುವುದು ಯಾವುದಾದರೂ ಆವುಗಳ ಬಗ್ಗೆ ಭಾವಿಗುಪ್ರಾಕ್ಕೆ ತಿಳಿಸಕ್ಕದ್ದು.

ಕಡ್ಡಾಯ ಭದ್ರತಾ ಅಗತ್ಯತೆಗಳು

 • ದೃಢೀಕರಣ ಸೇವೆ ಕೇಂದ್ರಗಳು ಕೇವಲ ಒಂದು ಗುತ್ತಿಗೆ ಆಧಾರಿತ ಮಾರ್ಗದ ಮೂಲಕ ಅಥವಾ ಎಂಪಿಎಲ್ಎಸ್ ಸಂಪರ್ಕತೆಯ ಮೂಲಕ ಸಿಐಡಿಆರ್ ಗೆ ಸಂಪರ್ಕವನ್ನು ಪಡೆಯಬಹುದು
 • ಆಧಾರ್ ಅಧಿನಿಯಮ 2016ರ ಅನುವುಗಳ ಅನುಸಾರ, ಮೂಲಮಾಹಿತಿ ಹಾಗೂ ಸಿಐಡಿಆರ್ ಪ್ರತಿಕ್ರಿಯೆಗಳನ್ನು ಲೆಕ್ಕಪರಿಶೋಧನೆಯ ಉದ್ದೇಶಗಳಿಗಾಗಿ ಊಡಿಕೆ ಮಾಡತಕ್ಕದ್ದು.
 • ಆಧಾರ್ ಸಂಖ್ಯೆಯನ್ನು ಹೊಂದಿರುವವರ ಸಂಕೇತೀಕರಿಸಲಾದ ವೈಯಕ್ತಿಕ ಗುರುತಿನ ಮಾಹಿತಿಯನ್ನು (ಪಿಐಡಿ) ಹಾಗೂಪರವಾನಗಿ ಕೀಗಳನ್ನು (ಭಾವಿಗುಪ್ರಾವು ತನ್ನ ಸೇವೆಗಳನ್ನು ಪ್ರವೇಶಿಸುವುದಕ್ಕಾಗಿ ಒದಗಿಸಲಾಗಿರುವ), ಅದು ದೃಢೀಕರಣ ಪೊಟ್ಟಣದ ಒಂದು ಭಾಗವಾಗಿ ಬಂದಿದ್ದು, ಅದನ್ನು ತನ್ನ ತಂತ್ರಾಂಶ ಅನ್ವಯದಲ್ಲಿ ಎಲ್ಲಿಯೂ ಸಂಗ್ರಹಿಸಿಡುವಂತಿಲ್ಲ. ಇದು, ಆಧಾರ್ ಅಧಿನಿಯಮ 2016ರ ಮೂಲಕ ಕಡ್ಡಾಯಗೊಳಿಸಿರುವಂತೆ ಆಧಾರ್ ಸಂಖ್ಯೆಯನ್ನು ಹೊಂದಿರುವವರ ಸಂರಕ್ಷಿಸುವುದಕ್ಕಾಗಿ ಸಂಬಂಧಿಸಿದಂತೆ ಅನುಸರಣಾ ಕ್ರಮವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ
 • ಕೋರಿಕೆಯನ್ನು ಮಾಡುವ ಅಸ್ತಿತ್ವ/ಸಂಸ್ಥೆ ಹಾಗೂ ದೃಢೀಕರಣ ಸೇವಾ ಸಂಸ್ಥೆಯ ನಡುವಿನ ಸಂಪರ್ಕಜಾಲವನ್ನು ದೃಢೀಕರಣ ಸೇವಾ ಸಂಸ್ಥೆಯ ಕೈಪಿಡಿಯಲ್ಲಿ ನಿರ್ದಿಷ್ಟಪಡಿಸಿರುವ ರೀತಿಯಲ್ಲಿ ಸೂಕ್ತ ಜಾಲಸಂಪರ್ಕ ಶಿಷ್ಟಾಚಾರಗಳಮೂಲಕಭದ್ರತೆ ಯಿಂದಕೂಡಿರತಕ್ಕದ್ದು