Operation Model

ಈ ಕಾರ್ಯಾಚರಣೆಯ ಮಾದರಿಯು ಆಧಾರ್ ದೃಢೀಕರಣ ಪರಿಸರ ವ್ಯವಸ್ಥೆಯಲ್ಲಿ ತೊಡಗಿರುವ ಪಾತ್ರಧಾರಿಗಳನ್ನು ಸ್ಥೂಲವಾಗಿ ವಿವರಿಸಿರುವುದು. ಈ ಕೆಳಗಿನ ಚಿತ್ರಣವು ಆಧಾರ್ ದೃಢೀಕರಣ ಮಾದರಿಯಲ್ಲಿನ ಪ್ರಮುಖ ಪಾತ್ರಧಾರಿಗಳನ್ನು ಗುರುತಿಸುವುದು ಹಾಗೂ ಪ್ರಮುಖ ಪಾತ್ರಧಾರಿಗಳು ಪರಸ್ಪರ ನಿರತರಾಗಬಹುದಾದ/ತೊಡಗಿಸಿಕೊಳ್ಳಬಹುದಾದ ರೀತಿಯಲ್ಲಿ ಮಾಹಿತಿಯ ಹರಿವನ್ನು ತೋರಿಸುವುದು. ಪ್ರಮುಖ ಪಾತ್ರಧಾರಿಗಳ ಸಂಕ್ಷಿಪ್ತ ವಿವರಣೆಗಳು ಮತ್ತು ಅವರುಗಳು ಪರಸ್ಪರ ತೊಡಗಿಸಿಕೊಳ್ಳಬಹುದಾದ ಸನ್ನಿವೇಶಗಳನ್ನು ಈ ಕೆಳಗಿನ ಚಿತ್ರಣದಲ್ಲಿ ತೋರಿಸಲಾಗಿದೆ.

 

Aadhaar Authentication Framework

ಆಧಾರ್ ದೃಢೀಕರಣ ಪರಿಸರ ವ್ಯವಸ್ಥೆಯಲ್ಲಿ ಸಹಭಾಗಿಗಳು

ಆಧಾರ್ ಸಂಖ್ಯೆಯನ್ನು ಹೊಂದಿರುವವರು ಎಂದರೆ ಅಧಿನಿಯಮದ ಅಡಿಯಲ್ಲಿ ಯಾವ ವೈಯಕ್ತಿಕ ವ್ಯಕ್ತಿಗೆ ಆಧಾರ್ ಸಂಖ್ಯೆಯನ್ನು ನೀಡಲಾಗಿದೆಯೋ ಅಂತಹ ವೈಯಕ್ತಿಕ ವ್ಯಕ್ತಿ.

ದೃಢೀಕರಣ ಎಂದರೆ ಓರ್ವ ವೈಯಕ್ತಿಕ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ಅದರ ಪರಿಶೀಲನೆಗಾಗಿ ಡೆಮೋಗ್ರಾಫಿಕ್ ಅಥವಾ ಬಯೋಮೆಟ್ರಿಕ್ ಮಾಹಿತಿಯೊಂದಿಗೆ ಕೇಂದ್ರ ಗುರುತಿಸುವಿಕೆಗಳ ಮಾಹಿತಿ ಭಂಡಾರಕ್ಕೆ (ಸಿಐಡಿಆರ್) ಸಲ್ಲಿಸುವ ಪ್ರಕ್ರಿಯೆಯಾಗಿರುತ್ತದೆ ಹಾಗೂ ಅಂತಹ ಭಂಡಾರವು ತನ್ನಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇರೆಗೆ ಯಥಾರ್ಥತೆಯನ್ನು ಅಥವಾ ಅದರಲ್ಲಿರಬಹುದಾದ ಲೋಪದೋಷಗಳನ್ನು ಪರಿಶೀಲಿಸುತ್ತದೆ.

“ದೃಢೀಕರಣ ಅನುಕೂಲತೆ” ಎಂದರೆ ಆಧಾರ್ ಸಂಖ್ಯೆಯನ್ನು ಹೊಂದಿರುವವರ ಗುರುತಿನ ಮಾಹಿತಿಯನ್ನು ದೃಢೀಕರಣ ಪ್ರಕ್ರಿಯೆಯ ಮೂಲಕ ಹೌದು/ಇಲ್ಲ ಎಂಬುದಾಗಿ ಪ್ರತಿಕ್ರಿಯೆ ನೀಡುವ ಮೂಲಕ ಅಥವಾ ಇ-ಕೆವೈಸಿ ಮಾಹಿತಿಯ ಮೂಲಕ ಅನ್ವಯಗೊಳ್ಳುವ ರೀತಿಯಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ಪರಿಶೀಲಿಸುವ ಪ್ರಕ್ರಿಯೆಯಾಗಿರುತ್ತದೆ.

ದೃಢೀಕರಣ ಸೇವಾ ಸಂಸ್ಥೆ ಎಂದರೆ ಪ್ರಾಧಿಕಾರವು ಒದಗಿಸಿರುವ ದೃಢೀಕರಣ ಅನುಕೂಲತೆಯನ್ನು ಬಳಸಿಕೊಂಡು ದೃಢೀಕರಣವನ್ನು ಮಾಡುವುದಕ್ಕಾಗಿ ಕೋರಿಕೆಯನ್ನು ಸಲ್ಲಿಸುವ ಸಂಸ್ಥೆಗೆ ಅನುಕೂಲ ಕಲ್ಪಿಸುವ ಸಲುವಾಗಿ ಭದ್ರತೆಯಿಂದ ಕೂಡಿದ ಜಾಲ ಸಂಪರ್ಕತೆ ಮತ್ತು ಸಂಬಂಧಿತ ಸೇವೆಗಳನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಒಂದು ಸಂಸ್ಥೆಯಾಗಿರುತ್ತದೆ.

“ದೃಢೀಕರಣ ಬಳಕೆದಾರ ಸಂಸ್ಥೆ” ಎಂದರೆ ಪ್ರಾಧಿಕಾರವು ಒದಗಿಸುವ ಹೌದು/ಇಲ್ಲ ದೃಢೀಕರಣ ಅನುಕೂಲತೆಯನ್ನು ಉಪಯೋಗಿಸಿಕೊಳ್ಳುವ ಕೋರಿಕೆಯನ್ನು ಸಲ್ಲಿಸುವ ಸಂಸ್ಥೆ.

“ಕೇಂದ್ರ ಗುರುತಿಸುವಿಕೆಗಳ ಮಾಹಿತಿ ಭಂಡಾರ” ಅಥವಾ “ಸಿಐಡಿಆರ್"”ಎಂದರೆ ಆಧಾರ್ ಸಂಖ್ಯೆಯನ್ನು ಹೊಂದಿರುವ ವೈಯಕ್ತಿಕ ವ್ಯಕ್ತಿಗಳ ಡೆಮೋಗ್ರಾಫಿಕ್ ಮತ್ತು ಬಯೋಮೆಟ್ರಿಕ್ ಮಾಹಿತಿಯೊಂದಿಗೆ ಹಾಗೂ ಅವುಗಳಿಗೆ ಸಂಬಂಧಿತ ಇತರೆ ಮಾಹಿತಿಯೊಂದಿಗೆ ಆಧಾರ್ ಸಂಖ್ಯೆಗಳನ್ನು ಹೊಂದಿದವರಿಗೆ ನೀಡಲಾಗಿರುವ ಎಲ್ಲಾ ಆಧಾರ್ ಸಂಖ್ಯೆಗಳನ್ನು ಒಳಗೊಂಡಂತೆ ಒಂದು ಅಥವಾ ಹೆಚ್ಚಿನ ಸ್ಥಳಗಳಲ್ಲಿ ಸ್ಥಾಪಿಸಲಾಗಿರುವ ಒಂದು ಕೇಂದ್ರೀಕೃತ ದತ್ತಸಂಚಯವಾಗಿರುತ್ತದೆ.

ದೃಢೀಕರಣ ಸಾಧನಗಳು: ಈ ಸಾಧನಗಳು ಆಧಾರ್ ಹೊಂದಿರುವವರಿಂದ ವೈಯಕ್ತಿಕ ಗುರುತಿನ ಮಾಹಿತಿಯನ್ನು ಸಂಗ್ರಹಿಸುತ್ತವೆ, ವೈಯಕ್ತಿಕ ಗುರುತಿನ ಮಾಹಿತಿಯನ್ನು ಸಂಕೇತಿಕರಿಸುತ್ತವೆ, ದೃಢೀಕರಣ ಪ್ಯಾಕೇಟುಗಳನ್ನು ಸಾಗಾಣಿಕೆ ಮಾಡುತ್ತವೆ ಮತ್ತು ದೃಢೀಕರಣ ಫಲಿತಾಂಶಗಳನ್ನು ಸ್ವೀಕರಿಸುತ್ತವೆ. ಉದಾಹರಣೆಗಳು ವೈಯಕ್ತಿಕ ಗಣಕಯಂತ್ರಗಳು (ಪಿಸಿಗಳು), ಕಿಯಾಸ್ಕೋಗಳು, ಕೈಯಿಂದ ನಿರ್ವಹಿಸಲಾಗುವ ಸಾಧನಗಳು, ಇತ್ಯಾದಿಗಳನ್ನು ಒಳಗೊಂಡಿರುತ್ತವೆ. ಅವುಗಳನ್ನು ದೃಢೀಕರಣ ಬಳಕೆದಾರ ಸಂಸ್ಥೆಗಳು/ಉಪ-ದೃಢೀಕರಣ ಬಳಕೆದಾರ ಸಂಸ್ಥೆಗಳು ಸ್ಥಾಪಿಸುತ್ತವೆ, ಕಾರ್ಯಾಚರಣೆಗೊಳಿಸುತ್ತವೆ ಮತ್ತು ನಿರ್ವಹಿಸುತ್ತವೆ.

ದೃಢೀಕರಣ ಕೋರಿಕೆಗಳನ್ನು ಕಳುಹಿಸುವ ಪ್ರಕ್ರಿಯೆ

1)ಕೋರಿಕೆಯನ್ನು ಸಲ್ಲಿಸುವ ಸಂಸ್ಥೆಯು ಒದಗಿಸಿದ ಆಧಾರ್ ಸಂಖ್ಯೆಯನ್ನು ಅಥವಾ ಆಧಾರ್ ಸಂಖ್ಯೆಗೆ ಸಂಪರ್ಕ ಕಲ್ಪಿಸಲಾಗಿರುವ ಇತರೆ ಯಾವುದೇ ಗುರುತಿಸುವಿಕೆ ಸಾಧನವನ್ನು ಹಾಗೂ ಆಧಾರ್ ಸಂಖ್ಯೆಯನ್ನುಹೊಂದಿರುವವರಿಂದ ಅಗತ್ಯ ಡೆಮೋಗ್ರಾಫಿಕ್ ಮತ್ತು ಬಯೋಮೆಟ್ರಿಕ್ ಮಾಹಿತಿ ಮತ್ತು/ಅಥವಾ ಆಧಾರ್ ಸಂಖ್ಯೆಯನ್ನು ಹೊಂದಿರುವವರಿಂದ ಒಂದು ಸಲದ ಪಿನ್ ಅನ್ನು ಸಂಗ್ರಹಿಸಿದನಂತರ ಕ್ಲೈಂಟ್ ಕೋರಿಕೆಯನ್ನು ತತ್ ಕ್ಷಣವೇ ಪ್ಯಾಕೇಜ್ ಮಾಡಲಾಗುವುದು ಹಾಗೂ ಈ ಒಳಸೇರ್ಪಡೆ ಪರಿಮಿತಿಗಳನ್ನು ಯಾವುದೇ ಪ್ರಸರಣಕ್ಕೆ ಮುಂಚಿತವಾಗಿ ಪ್ರಾಧಿಕಾರವು ನಿರ್ದಿಷ್ಟಪಡಿಸಿರುವ ನಿರ್ದಿಷ್ಟ ನಿರೂಪಣೆಗಳ ಅನುಸಾರ ಪಿಐಡಿ ಬ್ಲಾಕಿನ ಒಳಕ್ಕೆ ಸಂಕೇತಿಕರಿಸಲಾಗುವುದು ಹಾಗೂ ಪ್ರಾಧಿಕಾರವು ಈ ಉದ್ದೇಶಕ್ಕಾಗಿ ನಿರ್ದಿಷ್ಟಪಡಿಸಬಹುದಾದ ಭದ್ರತಾ ಶಿಷ್ಟಾಚಾರಗಳನ್ನು ಬಳಸಿಕೊಂಡು ಅದನ್ನು ಕೋರಿಕೆಯನ್ನು ಸಲ್ಲಿಸುವ ಸಂಸ್ಥೆಯ ಸರ್ವರಿಗೆ ಕಳುಹಿಸಲಾಗುವುದು.

2)ದೃಢೀಕರಣದ ನಂತರ, ಕೋರಿಕೆಯನ್ನು ಸಲ್ಲಿಸುವ ಸಂಸ್ಥೆಯ ಸರ್ವರು ಪ್ರಾಧಿಕಾರದ ನಿರ್ದಿಷ್ಟ ನಿರೂಪಣೆಗಳ ಪ್ರಕಾರ, ದೃಢೀಕರಣ ಕೋರಿಕೆಯನ್ನು ದೃಢೀಕರಣ ಸೇವಾ ಸಂಸ್ಥೆಯ ಸರ್ವರಿನ ಮೂಲಕ ಸಿಐಡಿಆರ್ ಗೆ ಕಳುಹಿಸಲಾಗುವುದು. ದೃಢೀಕರಣ ಕೋರಿಕೆಗೆ ಕೋರಿಕೆಯನ್ನು ಸಲ್ಲಿಸುವ ಸಂಸ್ಥೆಯು ಮತ್ತು/ಅಥವಾ ದೃಢೀಕರಣ ಸೇವಾ ಸಂಸ್ಥೆಯು ಅವುಗಳ ನಡುವೆ ಪರಸ್ಪರ ಮಾಡಿಕೊಳ್ಳಲಾಗಿರುವ ಒಡಂಬಡಿಕೆಯ ಅನುಸಾರ ಅಂಕೀಯವಾಗಿ ಸಹಿ ಮಾಡಲಾಗುವುದು.

3)ದೃಢೀಕರಣ ಕೋರಿಕೆಯ ಮಾದರಿಯ ಆಧಾರದ ಮೇರೆಗೆ, ಸಿಐಡಿಆರ್ ತನ್ನಲ್ಲಿ ಸಂಗ್ರಹಿಸಲಾಗಿರುವ ಮಾಹಿತಿಯ ಪರಿಮಿತಿಗಳ ಪ್ರತಿಯಾಗಿ ದೃಢೀಕರಿಸತಕ್ಕದ್ದು ಹಾಗೂ ಅಂಕೀಯವಾಗಿ ಸಹಿ ಮಾಡಲಾದ ಹೌದು ಅಥವಾ ಇಲ್ಲ ಎಂಬುದಾಗಿ ದೃಢೀಕರಣ ಪ್ರತಿಕ್ರಿಯೆಯನ್ನು ಅಥವಾ ಅಂಕೀಯವಾಗಿ ಸಹಿ ಮಾಡಲಾದ ಇ-ಕೆವೈಸಿ ದೃಢೀಕರಣ ಪ್ರತಿಕ್ರಿಯೆಯನ್ನು ಸಂಕೇತಿಕರಿಸಲ್ಪಟ್ಟ ಇ-ಕೆವೈಸಿ ಮಾಹಿತಿಯೊಂದಿಗೆ, ಯಾವುದು ಅನ್ವಯವೋ ಅದನ್ನು ದೃಢೀಕರಣ ವ್ಯವಹಾರಗಳಿಗೆ ಸಂಬಂಧಿತ ಇತರೆ ತಾಂತ್ರಿಕ ವಿವರಗಳ ಜೊತೆಯಲ್ಲಿ ಹಿಂತಿರುಗಿಸತಕ್ಕದ್ದು.

4)ದೃಢೀಕರಣದ ಎಲ್ಲಾ ಮಾದರಿಗಳಲ್ಲಿಯೂ, ಆಧಾರ್ ಸಂಖ್ಯೆಯು ಕಡ್ಡಾಯವಾಗಿರುತ್ತದೆ ಮತ್ತು ದೃಢೀಕರಣವನ್ನು ಯಾವಾಗಲೂ 1:1 ಪಂದ್ಯಕ್ಕೆ ಇಳಿಸುವ ರೀತಿಯಲ್ಲಿ ಅದನ್ನು ಮೇಲೆ ತಿಳಿಸಲಾದ ಉಪ-ನಿಯಂತ್ರಣ (1)ರಲ್ಲಿ ನಿರ್ದಿಷ್ಟಪಡಿಸಲಾಗಿರುವ ಮಾಹಿತಿ ಪರಿಮಿತಿಗಳ ಜೊತೆಯಲ್ಲಿ ಸಲ್ಲಿಸಲಾಗುವುದು.

5) ಕೋರಿಕೆಯನ್ನು ಸಲ್ಲಿಸುವ ಸಂಸ್ಥೆಯು, ಪ್ರಾಧಿಕಾರವು ನಿರ್ದಿಷ್ಟಪಡಿಸಿರುವ ಸಂಸ್ಕರಣೆಗಳು ಮತ್ತು ನಿರ್ದಿಷ್ಟನಿರೂಪಣೆಗಳ ಪ್ರಕಾರ ಪಿಐಡಿ ಬ್ಲಾಕಿನ ಸಂಕೇತಿಕರಣವು ದೃಢೀಕರಣ ಸಾಧನದ ಮೇಲೆ ಸೆರೆಹಿಡಿಯುವ ಸಮಯದಲ್ಲಿ ಆಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.

ಪ್ರಮುಖ ಪಾತ್ರಧಾರಿಗಳು ವಿವಿಧ ರೀತಿಗಳಲ್ಲಿ ಪರಸ್ಪರ ತೊಡಗಿಸಿಕೊಳ್ಳಬಹುದು. ಉದಾಹರಣೆಗೆ, ದೃಢೀಕರಣವನ್ನು ಬಳಸಿಕೊಳ್ಳುವ ಸಂಸ್ಥೆಯು ಸ್ವತ: ತನ್ನದೇ ಆದಂತಹ ದೃಢೀಕರಣ ಸೇವಾ ಸಂಸ್ಥೆಯಾಗಬಹುದು, ದೃಢೀಕರಣವನ್ನು ಬಳಸಿಕೊಳ್ಳುವ ಸಂಸ್ಥೆಯು ವ್ಯಾಪಾರವ್ಯವಹಾರ ಮುಂದುವರಿಕೆ ಯೋಜನೆಯನ್ನು ತಯಾರಿಸುವುದು, ಇವೇ ಮುಂತಾದ ಕಾರಣಗಳಿಗಾಗಿ ಆಧಾರ್ ದೃಢೀಕರಣ ಸೇವೆಗಳನ್ನು ವಿವಿಧ ದೃಢೀಕರಣ ಸೇವಾ ಸಂಸ್ಥೆಗಳ ಮೂಲಕ ವೀಕ್ಷಿಸಬಹುದು, ದೃಢೀಕರಣವನ್ನು ಬಳಸಿಕೊಳ್ಳುವ ಸಂಸ್ಥೆಯು ದೃಢೀಕರಣ ಕೋರಿಕೆಗಳನ್ನು ತನ್ನ ಸ್ವಂತ ಸೇವಾ ವಿತರಣೆಗಳ ಅಗತ್ಯತೆಗಳಿಗಾಗಿ ಹಾಗೂ ಅಲ್ಲದೆಯೇ ಉಪ-ದೃಢೀಕರಣವನ್ನು ಬಳಸಿಕೊಳ್ಳುವ ಸಂಸ್ಥೆಗಳ ಪರವಾಗಿ ವರ್ಗಾಯಿಸಬಹುದು.