ಭಾವಿಗುಪ್ರಾದ ಪರಿಸರವ್ಯವಸ್ಥೆಗಳು
ನೋಂದಣಿಮತ್ತು ಇಂದಿನದಿನದನ್ನಾಗಿ ಮಾಡುವಿಕೆಯ ಪರಿಸರವ್ಯವಸ್ಥೆ
ನೋಂದಣಿ ಪರಿಸರವ್ಯವಸ್ಥೆಯು ನೋಂದಣಿ ಅಧಿಕಾರಿಗಳು ಹಾಗೂ ನೋಂದಣಿ ಸಂಸ್ಥೆಗಳನ್ನು ಒಳಗೊಂಡಿರುತ್ತದೆ. ನೋಂದಣಿ ಅಧಿಕಾರಿಯವರು ವೈಯಕ್ತಿಕ ವ್ಯಕ್ತಿಗಳನ್ನು ನೋಂದಣಿ ಮಾಡುವ ಉದ್ದೇಶದಿಂದ ಭಾವಿಗುಪ್ರಾದಿಂದ ಅನುಮತಿಯನ್ನು ಅಥವಾ ಮಾನ್ಯತೆಯನ್ನು ನೀಡಲ್ಪಟ್ಟ ಅಸ್ತಿತ್ವ. ನೋಂದಣಿ ಸಂಸ್ಥೆಗಳನ್ನು ನೋಂದಣಿ ಅಧಿಕಾರಿಯವರು ನೇಮಕ ಮಾಡುತ್ತಾರೆ ಹಾಗೂ ಅವುಗಳು ನಿರ್ವಾಹಕರು/ಮೇಲ್ವಿಚಾರಕರುಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ನೋಂದಣಿ ಪ್ರಕ್ರಿಯೆಯ ಸಮಯದಲ್ಲಿ ವೈಯಕ್ತಿಕ ವ್ಯಕ್ತಿಗಳ ಜನಸಂಖ್ಯಾಶಾಸ್ತ್ರಕ್ಕೆ ಹಾಗೂ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸಲು ಜವಾಬ್ದಾರಿಯುತವಾಗಿರುತ್ತವೆ
ನೋಂದಣಿ ಅಧಿಕಾರಿಗಳ ಸಮನ್ವಯತೆಯೊಂದಿಗೆ, ನೋಂದಣಿ ಸಂಸ್ಥೆಗಳು ನೋಂದಣಿ ಕೇಂದ್ರಗಳನ್ನು ಸ್ಥಾಪಿಸುತ್ತವೆ, ಆ ಕೇಂದ್ರಗಳಲ್ಲಿ ನಿವಾಸಿಗಳು ಆಧಾರ್ ಗಾಗಿ ನೋಂದಣಿ ಮಾಡಿಸಿಕೊಳ್ಳಬಹುದು. ನೋಂದಣಿಗಾಗಿ ಬಳಸಲಾಗುವ ವಿವಿಧ ಬೆರಳು ಮುದ್ರಿಕೆ ಸ್ಕ್ಯಾನರುಗಳು, ಕಣ್ಣುಪಾಪೆ ಸ್ಕ್ಯಾನರುಗಳು ಹಾಗೂ ಕ್ಯಾಮರಾಗಳನ್ನು ಎಸ್ ಟಿ ಕ್ಯೂ ಸಿ ಹಾಗೂ ಭಾವಿಗುಪ್ರಾವು ಪ್ರಮಾಣೀಕರಿಸುತ್ತವೆ ಹಾಗೂ ಎಲ್ಲವೂ ಭಾವಿಗುಪ್ರಾವು ವಿನ್ಯಾಸಗೊಳಿಸಿರುವ ಪ್ರಮಾಣಕ ತಂತ್ರಾಂಶ ಅನ್ವಯ ಕಾರ್ಯಕ್ರಮಗಳ ಅಂತರಕ್ರಿಯೆಗೆ ಸಂಪರ್ಕಿಸಲ್ಪಟ್ಟಿರುತ್ತವೆ. ವಿವಿಧ ನೋಂದಣಿ ಅಧಿಕಾರಿಗಳು, ವಿವಿಧ ನೋಂದಣಿ ಸಂಸ್ಥೆಗಳು ಹಾಗೂ ವಿವಿಧ ತಂತ್ರಜ್ಞಾನವನ್ನು ಒದಗಿಸುವವರ ನೇಮಕವು ಪ್ರಾಧಿಕಾರದ ಒಳಗಡೆಯೇ ಒಂದು ಆರೋಗ್ಯಕರ ಸ್ಪರ್ಧೆಯನ್ನು ಸೃಷ್ಟಿಸಿದೆ
ಭಾವಿಗುಪ್ರಾದ ದೃಢೀಕರಣದಪರಿಸರವ್ಯವಸ್ಥೆ
ಭಾವಿಗುಪ್ರಾವು ನಿವಾಸಿಗಳ ತತ್ ಕ್ಷಣದ ದೃಢೀಕರಣದ ಉದ್ದೇಶಕ್ಕಾಗಿ ಪ್ರಮಾಣವನ್ನು ಅಧಿಕಗೊಳಿಸಬಹುದಾದ ಪರಿಸರವ್ಯವಸ್ಥೆಯನ್ನು ಸ್ಥಾಪಿಸಿದೆ. ಆಧಾರ್ ದೃಢೀಕರಣ ಪರಿಸರವ್ಯವಸ್ಥೆಯು ದೈನಂದಿನ ಆಧಾರದ ಮೇರೆಗೆ ಹತ್ತಾರು ದಶಲಕ್ಷ ದೃಢೀಕರಣಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಹಾಗೂ ಬೇಡಿಕೆಯ ಆಧಾರದ ಮೇರೆಗೆ ಇನ್ನೂ ಅಧಿಕ ಪ್ರಮಾಣಕ್ಕೆ ತೆಗೆದುಕೊಂಡು ಹೋಗಬಹುದಾಗಿದೆ
ಭಾವಿಗುಪ್ರಾವು ವಿವಿಧ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಿಂದಹಲವಾರು ದೃಢೀಕರಣ ಸೇವಾ ಸಂಸ್ಥೆಗಳನ್ನು ಹಾಗೂ ದೃಢೀಕರಣ ಬಳಕೆದಾರ ಸಂಸ್ಥೆಗಳನ್ನು ನೇಮಕ ಮಾಡುತ್ತವೆ. ಭಾವಿಗುಪ್ರಾವು ಎಸ್ ಟಿ ಕ್ಯೂ ಸಿ ಯ ಸಹಭಾಗಿತ್ವದೊಂದಿಗೆ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಸಾಧನಗಳಿಗೆ ತಾಂತ್ರಿಕ ಪ್ರಮಾಣಕಗಳನ್ನು ನಿರ್ದಿಷ್ಟಪಡಿಸಿದೆ ಹಾಗೂ ಅವುಗಳ ಪೈಕಿ ಅನೇಕ ಸಂಖ್ಯೆಯವುಗಳನ್ನು ಪ್ರಮಾಣೀಕರಿಸಿದೆ