ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (ಯುಐಡಿಎಐ) (ಹಣಕಾಸು ಮತ್ತು ಇತರ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ) ಅಧಿನಿಯಮ, 2016ರ (“ಆಧಾರ್ ಕಾಯ್ದೆ 2016”) ಭಾರತ ಸರ್ಕಾರದ ವಿದ್ಯುನ್ಮಾನಗಳು ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ 12 ಜುಲೈ 2016 ರಂದು ಸ್ಥಾಪಿಸಲಾದಂತಹ ಒಂದು ಶಾಸನಬದ್ಧ ಪ್ರಾಧಿಕಾರವಾಗಿರುತ್ತದೆ. ಆಧಾರ್ ಆಕ್ಟ್ 2016 ಅನ್ನು ಆಧಾರ್ ಮತ್ತು ಇತರೆ ಕಾನೂನುಗಳ (ತಿದ್ದುಪಡಿ) ಕಾಯಿದೆ, 2019 (14 ರ 2019) w.e.f ನಿಂದ ತಿದ್ದುಪಡಿ ಮಾಡಲಾಗಿದೆ. 25.07.2019.

ಭಾರತದ ಎಲ್ಲಾ ನಿವಾಸಿಗಳಿಗೆ, (ಎ) ನಕಲು ಹಾಗೂ ಖೋಟಾ ಗುರುತುಗಳನ್ನು ತೆಗೆದುಹಾಕುವುದಕ್ಕಾಗಿ ಸಾಕಷ್ಟುದೃಢವಾಗಿರುವ ಹಾಗೂ (ಬಿ) ಒಂದು ಸುಲಭ ರೀತಿಯಲ್ಲಿ ಹಾಗೂ ಮಿತವ್ಯಯತೆಯ ಮಾರ್ಗದಲ್ಲಿ ಪರಿಶೀಲಿಸಬಹುದಾದ ಹಾಗೂ ದೃಢೀಕರಿಸಬಹುದಾದ “ಆಧಾರ್” ಎಂಬುದಾಗಿ ಕರೆಯಲ್ಪಡುವ ಒಂದು ವಿಶಿಷ್ಟ ಗುರುತಿನ ಸಂಖ್ಯೆಗಳನ್ನು ನೀಡುವ ಉದ್ದೇಶದಿಂದ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವನ್ನು ರಚಿಸಲಾಯಿತು. 31 ಮಾರ್ಚ್ 21 ರ ಹೊತ್ತಿಗೆ, ಪ್ರಾಧಿಕಾರವು 128.99 ಕೋಟಿ ಆಧಾರ್ ಸಂಖ್ಯೆಗಳನ್ನು ಭಾರತದ ನಿವಾಸಿಗಳಿಗೆ ನೀಡಿದೆ.

ಆಧಾರ್ ಕಾಯ್ದೆ 2016 ರ ಅಡಿಯಲ್ಲಿ, ಆಧಾರ್ ನೋಂದಣಿ ಮತ್ತು ದೃಢೀಕರಣದ ಜವಾಬ್ದಾರಿಯನ್ನು ಯುಐಡಿಎಐ ಹೊಂದಿದೆ.ಆಧಾರ್ ಜೀವನ ಚಕ್ರದ ಎಲ್ಲಾ ಹಂತಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಸೇರಿದಂತೆ, ವ್ಯಕ್ತಿಗಳಿಗೆ ಆಧಾರ್ ಸಂಖ್ಯೆಗಳನ್ನು ನೀಡುವ ನೀತಿ, ಕಾರ್ಯವಿಧಾನ ಮತ್ತು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಮತ್ತು ದೃಢೀಕರಣ ಮತ್ತು ಗುರುತಿನ ಮಾಹಿತಿಯ ಭದ್ರತೆ ಮತ್ತು ವ್ಯಕ್ತಿಗಳ ದೃಢೀಕರಣ ದಾಖಲೆಗಳನ್ನು ನಿರ್ವಹಿಸುವುದಗಿದೆ.

ಬಾವಿಗುಪ್ರಾದ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳುವುದಕ್ಕಾಗಿ, ಸಾಂಸ್ಥಿಕ ರಚನೆಯನ್ನು ಗಮನಿಸುವುದು.