ಭಾವಿಗುಪ್ರಾದ ಭದ್ರತಾ ವ್ಯವಸ್ಥೆ
ವೈಯಕ್ತಿಕ ವ್ಯಕ್ತಿಗಳ ರಕ್ಷಣೆ ಮತ್ತು ಅವರ ಮಾಹಿತಿಯ ಸಂರಕ್ಷಣೆಯು ವಿಶಿಷ್ಟ ಗುರುತು ಯೋಜನೆಯ ರೂಪುರೇಖೆ/ವಿನ್ಯಾಸದಲ್ಲಿ ಅಂತರ್ಗತವಾಗಿ ಬಂದಿದೆ. ಈ ಕೆಳಗೆ ಪಟ್ಟಿ ಮಾಡಲಾಗಿರುವ ಇತರೆ ವೈಲಕ್ಷಣಗಳ ಜೊತೆ ಯಾವುದನ್ನೂ ಬಹಿರಂಗಪಡಿಸದಂತಹ ಒಂದು ಯಾದೃಚ್ಛಿಕ ಸಂಖ್ಯೆಯನ್ನು ಹೊಂದುವ ಮೂಲಕ, ವಿಶಿಷ್ಟ ಗುರುತು ಯೋಜನೆಯು ನಿವಾಸಿಯ ಹಿತಾಸಕ್ತಿಯನ್ನು ಅದರ ಉದ್ದೇಶ ಮತ್ತು ಗುರಿಗಳ ಅಂತರಂಗದಲ್ಲಿ ಇಟ್ಟುಕೊಳ್ಳುತ್ತದೆ
ಸೀಮಿತ ಮಾಹಿತಿಯ ಸಂಗ್ರಹಣೆ: ಭಾವಿಗುಪ್ರಾವು ಸಂಗ್ರಹಿಸುವ ಮಾಹಿತಿಯು ಕೇವಲ ಆಧಾರ್ ಅನ್ನು ನೀಡುವುದಕ್ಕಾಗಿ ಹಾಗೂ ಆಧಾರ್ ಅನ್ನು ಹೊಂದಿರುವವರ ಗುರುತನ್ನು ಖಚಿತಪಡಿಸುವುದಕ್ಕಾಗಿ. ಭಾವಿಗುಪ್ರಾವು ಗುರುತನ್ನು ಸಾಬೀತುಪಡಿಸಲು ಸಾಧ್ಯವಾಗುವ ರೀತಿಯಲ್ಲಿ ಮೂಲ ಮಾಹಿತಿ ಕ್ಷೇತ್ರಗಳನ್ನು ಸಂಗ್ರಹಿಸುತ್ತದೆ, ಇವು, ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸ, ತಂದೆತಾಯಿ/ಪೋಷಕರ ಹೆಸರು – ಮಕ್ಕಳಿಗೆ ಸಂಬಂಧಿಸಿದಂತೆ ಅತ್ಯಗತ್ಯ, ಆದರೆ ಇತರರಿಗೆ ಅಲ್ಲ, ಮೊಬೈಲು ಸಂಖ್ಯೆ ಮತ್ತು ಇ-ಮೈಲು ವಿಳಾಸ ಕೂಡ. ಭಾವಿಗುಪ್ರಾವು ವೈಶಿಷ್ಟತೆಯನ್ನು ಸಾಬೀತುಪಡಿಸುವುದಕ್ಕಾಗಿ/ಸ್ಥಿರೀಕರಿಸುವುದಕ್ಕಾಗಿ 10 ಬೆರಳುಗಳ ಮುದ್ರೆಗಳು ಮತ್ತು ಕಣ್ಣಿನ ಪಾಪೆಯ ಸ್ಕ್ಯಾನು, ಇವುಗಳನ್ನು ಸಂಗ್ರಹಿಸುತ್ತದೆ
ಯಾವುದೇ ಪಾರ್ಶ್ವಚಿತ್ರಣ ಮತ್ತು ಜಾಡನ್ನು ಹಿಡಿಯುವ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಜಾತಿ, ಧರ್ಮ, ಸಮುದಾಯ, ವರ್ಗ, ಜನಾಂಗ, ವರಮಾನ ಮತ್ತು ಆರೋಗ್ಯ, ಇವೇ ಮುಂತಾದ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದನ್ನು ಭಾವಿಗುಪ್ರಾದ ಕಾರ್ಯನೀತಿಯು ಪ್ರತಿಬಂಧಿಸಿದೆ. ಆದ್ದರಿಂದ, ಸಂಗ್ರಹಿಸಲಾದ ಮಾಹಿತಿಯು ಗುರುತಿಸುವಿಕೆ ಮತ್ತು ಗುರುತು ದೃಢೀಕರಣಕ್ಕಾಗಿ ಮಾತ್ರ ಸೀಮಿತಗೊಂಡಿರುವುದರಿಂದ ವೈಯಕ್ತಿಕ ವ್ಯಕ್ತಿಗಳ ಪಾರ್ಶ್ವಚಿತ್ರಣವು ವಿಶಿಷ್ಟ ಗುರುತು ವ್ಯವಸ್ಥೆಯ ಮೂಲಕ ಸಾಧ್ಯವಿರುವುದಿಲ್ಲ. ಭಾವಿಗುಪ್ರಾವು, ವಾಸ್ತವಿಕವಾಗಿ, ಸಂಗ್ರಹಿಸುವ ಸಲುವಾಗಿ ಮೂಲತ: ಯೋಜಿಸಿದ್ದ ಪಟ್ಟಿಯ ಭಾಗವಾಗಿದ್ದ ಹುಟ್ಟಿದ ಸ್ಥಳವನ್ನು, ಅದು ಪಾರ್ಶ್ವಚಿತ್ರಣಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದಾಗಿ ಸಿ ಎಸ್ ಒಗಳು ನೀಡಿದ ಪ್ರತಿಕ್ರಿಯೆಯ ಕಾರಣ ಕೈಬಿಡಲಾಯಿತು. ಭಾವಿಗುಪ್ರಾವು ವೈಯಕ್ತಿಕ ವ್ಯಕ್ತಿಗಳ ವ್ಯವಹಾರ ದಾಖಲೆಗಳನ್ನೂ ಸಹ ಸಂಗ್ರಹಿಸುವುದಿಲ್ಲ. ಓರ್ವ ವೈಯಕ್ತಿಕ ವ್ಯಕ್ತಿಯ ಆಧಾರ್ ಮೂಲಕ ಗುರುತನ್ನು ಖಚಿತಪಡಿಸುವುದಕ್ಕೆ ಸಂಬಂಧಿತ ದಾಖಲೆಗಳು ಮಾತ್ರ ಅಂತಹ ಒಂದು ಖಚಿತತೆಯು ಆಯಿತು ಎಂಬುದನ್ನು ಪ್ರತಿಬಿಂಭಿಸುತ್ತವೆ. ನಿವಾಸಿಗಳು ತಮ್ಮ ಯಾವುದಾದರೂ ವಿವಾದಗಳು ವುದಾದರೂ ಇದ್ದಲ್ಲಿ, ಅವುಗಳನ್ನು ಬಗೆಹರಿಸಿಕೊಳ್ಳುವ ಸಲುವಾಗಿ ಈ ಸೀಮಿತ ಮಾಹಿತಿಯನ್ನು ಒಂದು ಅಲ್ಪಾವಧಿಯವರೆಗೆ ಮಾತ್ರ ಉಳಿಸಿಕೊಳ್ಳಲಾಗುವುದು.
ಮಾಹಿತಿಯ ಬಿಡುಗಡೆ – ಹೌದು ಅಥವಾ ಇಲ್ಲ ಪ್ರತಿಕ್ರಿಯೆ: ಆಧಾರ್ ದತ್ತಸಂಚಯದಲ್ಲಿರುವ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಲು ಭಾವಿಗುಪ್ರಾವು ಪ್ರತಿಬಂಧಿಸಿದೆ, ಅದು ನೀಡುವ ಒಂದೇ ಒಂದು ಪ್ರತಿಕ್ರಿಯೆ ಎಂದರೆ ಹೌದು ಅಥವಾ ಇಲ್ಲ ಎಂಬುದಾಗಿ. ಇದಕ್ಕೆ ಒಂದೇ ಒಂದು ವಿನಾಯಿತಿ ಎಂದರೆ ಒಂದು ನ್ಯಾಯಾಲಯದ ಆದೇಶ ಅಥವಾ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಓರ್ವ ಜಂಟಿ ಕಾರ್ಯದರ್ಶಿಯವರ ಆದೇಶ. ಇದು ಒಂದು ನ್ಯಾಯಸಮ್ಮತ ವಿನಾಯಿತಿಯಾಗಿರುತ್ತದೆ ಮತ್ತು ಸುಸ್ಪಷ್ಟವಾಗಿರುತ್ತದೆ ಮತ್ತು ಕರಾರುವಾಕ್ಕಾಗಿದೆ. ಭದ್ರತಾ ಅಪಾಯದ ಸಂದರ್ಭದಲ್ಲಿ ಮಾಹಿತಿಯ ವೀಕ್ಷಣೆಗೆ ಸಂಬಂಧಿಸಿದಂತೆ ಅಮೇರಿಕಾ ಮತ್ತು ಯೂರೋಪ್ ರಾಷ್ಟ್ರಗಳಲ್ಲಿ ಅನುಸರಿಸಲಾಗುವ ಭದ್ರತಾ ಪ್ರಮಾಣಕಗಳ ಅನುಸಾರವೇ ಈ ಅನುಸರಣೆಯಾಗಿರುತ್ತದೆ
ಮಾಹಿತಿ ಸಂರಕ್ಷಣೆ ಮತ್ತು ಗೋಪ್ಯತೆ: ಸಂಗ್ರಹಿಸಲಾದ ಮಾಹಿತಿಯ ಭದ್ರತೆ ಮತ್ತು ಗೋಪ್ಯತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಭಾವಿಗುಪ್ರಾವು ಬದ್ಧತೆಯನ್ನು ಹೊಂದಿದೆ. ಮಾಹಿತಿಯನ್ನು ಭಾವಿಗುಪ್ರಾವು ಒದಗಿಸಿರುವ ತಂತ್ರಾಂಶ ಅನ್ವಯದಲ್ಲಿ ಸಂಗ್ರಹಿಸಲಾಗುವುದು ಮತ್ತು ರವಾನೆಯಲ್ಲಿ ಸೋರಿಕೆಗಳನ್ನು ತಡೆಯುವುದಕ್ಕಾಗಿ ಸಂಕೇತಿಕರಿಸಲಾಗುವುದು. ತರಬೇತಿ ಹೊಂದಿದ ಮತ್ತು ಪ್ರಮಾಣೀಕೃತ ನೋಂದಣಿದಾರರು ಮಾಹಿತಿಯನ್ನು ಸಂಗ್ರಹಿಸುವರು, ಅವರು ಸಂಗ್ರಹಿಸಿದ ಮಾಹಿತಿಯನ್ನು ವೀಕ್ಷಿಸಲು ಸಾಧ್ಯವಾಗದು. ಭಾವಿಗುಪ್ರಾವು, ತನ್ನ ಮಾಹಿತಿಯ ಭದ್ರತೆ ಮತ್ತು ಪ್ರಾಮಾಣಿಕತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಒಂದು ಸಮಗ್ರ ಭದ್ರತಾ ಕಾರ್ಯನೀತಿಯನ್ನು ಹೊಂದಿದೆ. ಸಿಐಡಿಆರ್ ಗಾಗಿ ಮಾಹಿತಿ ಭದ್ರತಾ ಯೋಜನೆ ಮತ್ತು ಕಾರ್ಯನೀತಿಯನ್ನು ಮತ್ತು ಭಾವಿಗುಪ್ರಾದ ಅನುಸರಣೆಯನ್ನು ಲೆಕ್ಕಪರಿಶೋಧನೆ ಮಾಡುವ ಸಲುವಾಗಿ ವ್ಯವಸ್ಥೆಗಳು ಮತ್ತು ಅದರ ಗುತ್ತಿಗೆ ಸಂಸ್ಥೆಗಳನ್ನು ಒಳಗೊಂಡಂತೆ ಅದು ಈ ಬಗ್ಗೆ ಇನ್ನೂ ಹೆಚ್ಚಿನ ವಿವರಗಳನ್ನು ಪ್ರಕಟಿಸುತ್ತದೆ. ಅಲ್ಲದೆಯೇ, ಕಟ್ಟುನಿಟ್ಟಿನ ಭದ್ರತೆ ಮತ್ತು ಸಂಗ್ರಹಣಾ ಸೂತ್ರಗಳು/ಶಿಷ್ಟಾಚಾರಗಳು ಇರುತ್ತವೆ. ಭದ್ರತೆಯ ಯಾವುದೇ ಉಲ್ಲಂಘನೆಯಾಗಿದ್ದಲ್ಲಿ, ದಂಡಗಳು ಕಠಿಣವಾಗಿರುತ್ತವೆ ಹಾಗೂ ಗುರುತಿನ ಮಾಹಿತಿಯ ಬಹಿರಂಗಪಡಿಸಿದ್ದಕ್ಕಾಗಿ ದಂಡವನ್ನೂ ಒಳಗೊಂಡಿರುತ್ತದೆ. ಮಾಹಿತಿಯ ಅತಿಕ್ರಮ ವೀಕ್ಷಣೆ, ಸಿಐಡಿಆರ್ ನಲ್ಲಿನ ಮಾಹಿತಿಯನ್ನು ಅಕ್ರಮವಾಗಿ ತಿದ್ದುವುದು ಸೇರಿದಂತೆ ಸಿಐಡಿಆರ್ ಗೆ ಅನಧಿಕೃತ ಪ್ರವೇಶಕ್ಕಾಗಿ ದಂಡನೀಯ ಪರಿಣಾಮಗಳೂ ಇರುತ್ತವೆ.
ಭಾವಿಗುಪ್ರಾದ ಮಾಹಿತಿಯನ್ನು ಇತರೆ ದತ್ತಸಂಚಯಗಳ ಜೊತೆ ಒಮ್ಮುಖಗೊಳಿಸುವಿಕೆ ಮತ್ತು ಸಂಪರ್ಕಗೊಳಿಸುವಿಕೆ: ವಿಶಿಷ್ಟ ಗುರುತಿನ ದತ್ತಸಂಚಯವನ್ನು ಇತರೆ ಯಾವುದೇ ದತ್ತಸಂಚಯಗಳಿಗೆ ಅಥವಾ ಇತರೆ ದತ್ತಸಂಚಯಗಳು ಹೊಂದಿರುವಂತಹ ಮಾಹಿತಿಯ ಜೊತೆ ಸಂಪರ್ಕಿಸಿರುವುದಿಲ್ಲ. ಅದರ ಏಕೈಕ ಉದ್ದೇಶವೆಂದರೆ ಸೇವೆಯನ್ನು ಸ್ವೀಕರಿಸುವ ಸ್ಥಳದಲ್ಲಿ ಓರ್ವ ವ್ಯಕ್ತಿಯ ಗುರುತನ್ನು ಪರಿಶೀಲಿಸುವುದು, ಅದೂ ಕೂಡ ಆಧಾರ್ ಅನ್ನು ಹೊಂದಿರುವವರ ಒಪ್ಪಿಗೆಯೊಂದಿಗೆ. ವಿಶಿಷ್ಟ ಗುರುತು ದತ್ತಸಂಚಯವನ್ನು ಉನ್ನತ ಮಟ್ಟದ ಒಪ್ಪಿಗೆಯೊಂದಿಗೆ ಕೆಲವೇ ಕೆಲವು ಆಯ್ದ ವೈಯಕ್ತಿಕ ವ್ಯಕ್ತಿಗಳಿಂದ ಭೌತಿಕವಾಗಿ ಮತ್ತು ವಿದ್ಯುನ್ಮಾನೀಯವಾಗಿ ಸಂರಕ್ಷಿಸಲಾಗುವುದು. ಅದು ವಿಶಿಷ್ಟ ಗುರುತು ಪ್ರಾಧಿಕಾರದ ಸಿಬ್ಬಂದಿಯ ಪೈಕಿ ಬಹಳಷ್ಟು ಸದಸ್ಯರಿಗೆ ಲಭ್ಯವಿರುವುದಿಲ್ಲ ಮತ್ತು ಅತ್ಯುತ್ತಮವಾಗಿ ಲಿಪ್ಯಂತರಣಗೊಳಿಸಲಾಗಿರುವುದು ಹಾಗೂ ಅಧಿಕ ಮಟ್ಟದ ಭದ್ರತಾ ಮಾಹಿತಿ ಕೊಠಡಿ/ಛಾವಣಿಯಲ್ಲಿ. ಎಲ್ಲಾ ಪ್ರವೇಶ ವಿವರಗಳನ್ನು ಸಮರ್ಪಕವಾಗಿ ದಾಖಲಿಸಲಾಗಿರುವುದು.