ದೃಷ್ಟಿ ಮತ್ತು ಮಿಷನ್

ದೂರದೃಷ್ಟಿ

ಒಂದು ವಿಶಿಷ್ಟ ಗುರುತಿನೊಂದಿಗೆ ಮತ್ತು ಯಾವುದೇ ಸಮಯದಲ್ಲಿಯೂ ಯಾವುದೇ ಸ್ಥಳದಲ್ಲಿಯೂ ದೃಢೀಕರಿಸುವ ಸಲುವಾಗಿ ಒಂದು ಅಂಕೀಯ ವೇದಿಕೆಯೊಂದಿಗೆ ಭಾರತದ ನಿವಾಸಿಗಳಿಗೆ ಅಧಿಕಾರವನ್ನು ನೀಡುವುದು.

ಧ್ಯೇಯೋದ್ದೇಶ

 • ಭಾರತದಲ್ಲಿ ನೆಲೆಸಿರುವ ನಿವಾಸಿಗಳಿಗೆ/ವೈಯಕ್ತಿಕ ವ್ಯಕ್ತಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡುವ ಮೂಲಕ ಭಾರತದ ಸಂಚಿತ ನಿಧಿಯಿಂದ ವೆಚ್ಚಗಳನ್ನು ಭರಿಸುವ ಮೂಲಕ ಗುರಿಯಾಗಿಸಿಕೊಳ್ಳಲಾಗಿರುವ ಸಹಾಯಧನಗಳು, ಪ್ರಯೋಜನಗಳು ಮತ್ತು ಸೇವೆಗಳನ್ನು ಉತ್ತಮವಾಗಿ ನಿರ್ವಹಿಸುವ ಸಲುವಾಗಿ, ದಕ್ಷ ಹಾಗೂ ಪಾರದರ್ಶಕ ರೀತಿಯಲ್ಲಿ ಆಡಳಿತ ನಿರ್ವಹಣೆಯನ್ನು ಒದಗಿಸುವುದು.
 • ನೋಂದಣಿ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ತಮ್ಮ ಡೆಮೋಗ್ರಾಫಿಕ್ ಮಾಹಿತಿ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಸಲ್ಲಿಸುವ ಮೂಲಕ ಕೋರುವ ವೈಯಕ್ತಿಕ ವ್ಯಕ್ತಿಗಳಿಗೆ ಆಧಾರ್ ಸಂಖ್ಯೆಯನ್ನು ನೀಡುವುದಕ್ಕಾಗಿ ಕಾರ್ಯನೀತಿ, ಕಾರ್ಯವಿಧಾನ ಮತ್ತು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು.
 • ತಮ್ಮ ಅಂಕೀಯ ಗುರುತನ್ನು ಅಪ್ ಡೇಟ್ ಮಾಡುವ ಮತ್ತು ದೃಢೀಕರಿಸುವ ಸಲುವಾಗಿ ಆಧಾರ್ ಅನ್ನು ಹೊಂದಿರುವವರಿಗಾಗಿ ಕಾರ್ಯನೀತಿ, ಕಾರ್ಯವಿಧಾನ ಮತ್ತು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು.
 • ತಂತ್ರಜ್ಞಾನ ಮೂಲಸೌಕರ್ಯಗಳ ಲಭ್ಯತೆ, ಆರೋಹ್ಯತೆ ಮತ್ತು ಸ್ಥಿತಿಸ್ಥಾಪಕತ್ವ/ಚೇತರಿಸಿಕೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವುದು.
 • ಭಾವಿಗುಪ್ರಾದ ದೂರದೃಷ್ಟಿ ಮತ್ತು ಮೌಲ್ಯಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಸಲುವಾಗಿ ಒಂದು ಸುದೀರ್ಘ ಕಾಲದಲ್ಲಿ ಊರ್ಜಿತಗೊಳ್ಳಬಲ್ಲಂತಹ ಸಂಸ್ಥೆಯನ್ನು ನಿರ್ಮಿಸುವುದು.
 • ವೈಯಕ್ತಿಕ ವ್ಯಕ್ತಿಗಳ ಗುರುತಿನ ಮಾಹಿತಿ ಮತ್ತು ದೃಢೀಕರಣ ದಾಖಲೆಗಳ ಭದ್ರತೆ ಮತ್ತು ಗೋಪ್ಯತೆಯನ್ನು ಖಚಿತಪಡಿಸಿಕೊಳ್ಳುವುದು.
 • ಎಲ್ಲಾ ವೈಯಕ್ತಿಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ಕಾನೂನು-ನಿಯಮಾವಳಿಗಳ ಇಂಗಿತವನ್ನು ತತ್ವಶ: ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವುದು.
 • ಆಧಾರ್ ಅಧಿನಿಯಮದ ಅನುವುಗಳನ್ನು ಮುನ್ನಡೆಸಿಕೊಂಡು ಹೋಗುವ ಸಲುವಾಗಿ ನಿಯಂತ್ರಣಗಳು ಮತ್ತು ನಿಯಮಗಳು ಆಧಾರ್ ಅಧಿನಿಯಮದ ಜೊತೆ ಸಮಂಜಸತೆಯಿಂದ ಕೂಡಿರುವಂತೆ ಮಾಡುವುದು.

ಪ್ರಮುಖ ಮೌಲ್ಯಗಳು

 • ಉತ್ತಮ ಆಡಳಿತ/ನಿರ್ವಹಣೆಯ ಅನುಕೂಲತೆಯನ್ನು ಒದಗಿಸುವಲ್ಲಿ ನಮಗೆ ವಿಶ್ವಾಸವಿದೆ.
 • ನಾವು ಪ್ರಾಮಾಣಿಕತೆಗೆ ಬೆಲೆಯನ್ನು ಕೊಡುತ್ತೇವೆ
 • ಎಲ್ಲರೂ ಸೇರ್ಪಡೆಗೊಂಡಿರುವಂತಹ ದೇಶ ನಿರ್ಮಾಣದಲ್ಲಿ ನಾವು ಬದ್ಧರಾಗಿರುವೆವು
 • ಒಂದು ಒಟ್ಟುಗೂಡಿದ ಮಾರ್ಗವನ್ನು ಅನುಸರಿಸುತ್ತೇವೆ ಮತ್ತು ನಮ್ಮ ಸಹಭಾಗಿಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತೇವೆ
 • ನಿವಾಸಿಗಳಿಗೆ ಮತ್ತು ಸೇವೆಯನ್ನು ಒದಗಿಸುವವರಿಗೆ ನಾವು ನೀಡುವ ಸೇವೆಗಳಲ್ಲಿ ಉತ್ಕೃಷ್ಟತೆಯನ್ನು ಹೊಂದಿರುವ ಸಲುವಾಗಿ ನಾವು ಶ್ರಮಿಸುತ್ತೇವೆ.
 • ಅವಿರತ ಕಲಿಯುವಿಕೆಗಾಗಿ ಮತ್ತು ಗುಣಮಟ್ಟದ ಉತ್ತಮಗೊಳ್ಳುವಿಕೆಗಳಿಗಾಗಿ ನಾವು ಯಾವಾಗಲೂ ಗಮನಹರಿಸುತ್ತೇವೆ.
 • ನಾವು ಹೊಸ ಆವಿಷ್ಕಾರದೊಂದಿಗೆ ಚಲಿಸುತ್ತಿರುವೆವು ಮತ್ತು ಆವಿಷ್ಕಾರಗಳನ್ನು ಕಂಡುಹಿಡಿಯಲು ನಾವು ನಮ್ಮ ಸಹಭಾಗಿಗಳಿಗೆ ವೇದಿಕೆಯನ್ನು ಕಲ್ಪಿಸುತ್ತೇವೆ.
 • ನಾವು ಒಂದು ಪಾರದರ್ಶಕ ಮತ್ತು ಮುಕ್ತ ಸಂಸ್ಥೆಯಲ್ಲಿ ನಂಬಿಕೆಯನ್ನು ಇಟ್ಟಿರುವೆವು.