ಕುಂದುಕೊರತೆಗಳ ನಿವಾರಣೆ

Grievances at UIDAI are received through following channels:

ಭಾವಿಗುಪ್ರಾದ ಸಂಪರ್ಕ ಕೇಂದ್ರದ ಮೂಲಕ

ಆಧಾರ್ ನೋಂದಣಿ, ಅಪ್ ಡೇಟ್ ಮಾಡುವಿಕೆ ಹಾಗೂ ಇತರೆ ಸೇವೆಗಳಿಗೆ ಸಂಬಂಧಿತ ಪ್ರಶ್ನೆಗಳು ಮತ್ತು ಕುಂದುಕೊರತೆಗಳ ನಿರ್ವಹಣೆಗಾಗಿ ಭಾವಿಗುಪ್ರಾವು ಒಂದು ಸಂಪರ್ಕ ಕೇಂದ್ರವನ್ನು ಸ್ಥಾಪಿಸಿರುವುದು. ನೋಂದಣಿ ಕೇಂದ್ರದಲ್ಲಿ, ನೋಂದಣಿ ನಿರ್ವಾಹಕರು ನೋಂದಣಿ ಪ್ರಕ್ರಿಯೆಯು ಪೂರ್ಣಗೊಂಡನಂತರ ನಿವಾಸಿಗೆ ಒಂದು ಸ್ವೀಕೃತಿ ಚೀಟಿಯನ್ನು ನೀಡುವರು, ಆ ಚೀಟಿಯು ನೋಂದಣಿ ಸಂಖ್ಯೆಯನ್ನು ಒಳಗೊಂಡಿರುವುದು. ನೋಂದಣಿ ಸಂಖ್ಯೆಯನ್ನು ಉಪಯೋಗಿಸಿಕೊಳ್ಳುವ ಮೂಲಕ ಓರ್ವ ನಿವಾಸಿಯು ಈ ಕೆಳಗಿನ ಮಾಧ್ಯಮಗಳ ಮೂಲಕ ಭಾವಿಗುಪ್ರಾದ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು.

ಒಂದು ದೂರನ್ನು ನೀಡಿರಿ

ಅಂಚೆಯ ಮೂಲಕ

ಭಾವಿಗುಪ್ರಾದ ಪ್ರಧಾನ ಕಚೇರಿಯಲ್ಲಿ ಮತ್ತು ಪ್ರಾದೇಶಿಕ ಕಚೇರಿಗಳಲ್ಲಿ/ನೋಂದಣಿ ಕೇಂದ್ರಗಳಲ್ಲಿ ಕುಂದುಕೊರತೆಗಳು ಅಂಚೆಯ ಮೂಲಕ/ಕಾಗದದ ಖಾಯಂ ಪ್ರತಿಯಲ್ಲಿ ಸ್ವೀಕರಿಸಲ್ಪಡುವವು. ಕುಂದುಕೊರತೆಗಳನ್ನು ಪರಿಶೀಲಿಸಲಾಗುವುದು ಹಾಗೂ ತದನಂತರ ಭಾವಿಗುಪ್ರಾದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಅಧಿಕಾರಿಯಾಗಿರುವ ಸಹಾಯಕ ಮಹಾನಿರ್ದೇಶಕರ ಅನುಮೋದನೆಯ ನಂತರ ಕಾಗದದ /ಖಾಯಂ ಪ್ರತಿಗಳಲ್ಲಿ ಸಂಬಂಧಿತ ಪ್ರಾದೇಶಿಕ ಕಚೇರಿ/ಪ್ರಧಾನ ಕಚೇರಿಯ ಸಂಬಂಧಿತ ವಿಭಾಗಗಳಿಗೆ ಕಳುಹಿಸಲಾಗುವುದು. ಸಂಬಂಧಿತ ಪ್ರಾದೇಶಿಕ ಕಚೇರಿ/ಸಂಬಂಧಿತ ವಿಭಾಗಗಳು, ಇದಕ್ಕೆ ಸಂಬಂಧಿಸಿದಂತೆ ಭಾವಿಗುಪ್ರಾದ ಪ್ರಧಾನ ಕಚೇರಿಗೆ ಮಾಹಿತಿಯನ್ನು ನೀಡುವುದರೊಂದಿಗೆ ದೂರುದಾರರುಗಳಿಗೆ ನೇರವಾಗಿ ಉತ್ತರಿಸುವ ಮೂಲಕ ಅಂತಹ ದೂರುಗಳನ್ನು ವಿಲೇವಾರಿ ಮಾಡುತ್ತವೆ.

ಭಾರತ ಸರ್ಕಾರದ ಸಾರ್ವಜನಿಕ ಕುಂದುಕೊರತೆಗಳ ಪೋರ್ಟಲಿನ ಮೂಲಕ ಸ್ವೀಕರಿಸಲಾದ ಕುಂದುಕೊರತೆಗಳು

ಸಾರ್ವಜನಿಕ ಪೋರ್ಟಲು pgportal.gov.inಮೂಲಕವೂ ಭಾವಿಗುಪ್ರಾದಲ್ಲಿ ದೂರುಗಳನ್ನು ಸ್ವೀಕರಿಸಲಾಗುವುದು. ಸಾರ್ವಜನಿಕ ಪೋರ್ಟಲಿನಲ್ಲಿ ಈ ಕೆಳಗಿನ ಮಾದರಿಗಳಿರುತ್ತವೆ:

  • ಸಾರ್ವಜನಿಕ ದೂರುಗಳ ನಿರ್ದೇಶನಾಲಯ
  • ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ
  • ಮಾತೃ ಇಲಾಖೆ
  • ನೇರ ಸ್ವೀಕೃತಿಗಳು
  • ರಾಷ್ಟ್ರಪತಿಯವರ ಸಚಿವಾಲಯ
  • ಪಿಂಚಣಿ
  • ಸಚಿವರ ಕಚೇರಿ
  • ಪ್ರಧಾನ ಮಂತ್ರಿಯವರ ಕಚೇರಿ

ಕುಂದುಕೊರತೆಗಳನ್ನು ಪರಿಶೀಲಿಸಲಾಗುವುದು ಹಾಗೂ ತದನಂತರ ಭಾವಿಗುಪ್ರಾದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಅಧಿಕಾರಿಯಾಗಿರುವ ಸಹಾಯಕ ಮಹಾನಿರ್ದೇಶಕರ ಅನುಮೋದನೆಯ ನಂತರ ಕಾಗದದ /ಖಾಯಂ ಪ್ರತಿಗಳಲ್ಲಿ ಸಂಬಂಧಿತ ಪ್ರಾದೇಶಿಕ ಕಚೇರಿ/ಪ್ರಧಾನ ಕಚೇರಿಯ ಸಂಬಂಧಿತ ವಿಭಾಗಗಳಿಗೆ ಕಳುಹಿಸಲಾಗುವುದು. ಸಂಬಂಧಿತ ಪ್ರಾದೇಶಿಕ ಕಚೇರಿ/ಸಂಬಂಧಿತ ವಿಭಾಗಗಳು, ಕುಂದುಕೊರತೆಗಳನ್ನು ಆನ್ ಲೈನ್ ಮೂಲಕ ವಿಲೆವಾರಿ ಮಾಡುತ್ತವೆ. ಅಗತ್ಯ ಬಿದ್ದಲ್ಲಿ ಸಂಬಂಧಿತ ಪ್ರಾದೇಶಿಕ ಕಚೇರಿ/ಪ್ರಧಾನ ಕಚೇರಿಯ ಸಂಬಂಧಿತ ವಿಭಾಗಗಳು ತಾತ್ಕಾಲಿಕ ಉತ್ತರಗಳನ್ನು ನೀಡುತ್ತವೆ.

ಇಮೈಲ್ ಮೂಲಕ

ಅನೇಕ ವೇಳೆಗಳಲ್ಲಿ, ಕುಂದುಕೊರತೆಗಳನ್ನು ಭಾವಿಗುಪ್ರಾದ ಅಧಿಕಾರಿಗಳು/ಸಿಬ್ಬಂದಿ ಇಮೈಲ್ ಮೂಲಕವೂ ಸ್ವೀಕರಿಸುತ್ತಾರೆ. ಈ ಇಮೈಲುಗಳನ್ನು ಪರಿಶೀಲಿಸಲಾಗುವುದು ಹಾಗೂ ಸಂಬಂಧಿತ ಪ್ರಾದೇಶಿಕ ಕಚೇರಿ/ಪ್ರಧಾನ ಕಚೇರಿಯ ಸಂಬಂಧಿತ ವಿಭಾಗಗಳಿಗೆ ಕಳುಹಿಸಲಾಗುವುದು. ಸಂಬಂಧಿತ ಪ್ರಾದೇಶಿಕ ಕಚೇರಿ/ಪ್ರಧಾನ ಕಚೇರಿಯ ಸಂಬಂಧಿತ ವಿಭಾಗಗಳು, ಈ ನಿಟ್ಟಿನಲ್ಲಿ ಕುಂದುಕೊರತೆಗಳ ಕೋಶಕ್ಕೆ ಮಾಹಿತಿಯನ್ನು ನೀಡುವುದರೊಂದಿಗೆ, ಇಮೈಲ್ ಮೂಲಕ ದೂರುಗಳಿಗೆ ಉತ್ತರವನ್ನು ನೀಡುವ ಮೂಲಕ ವಿಲೆವಾರಿ ಮಾಡುತ್ತವೆ.