ಆಧಾರ್ ನ ಬಳಕೆ
ಭಾರತ ಸರ್ಕಾರವು ಸಮಾಜದ ಆರ್ಥಿಕವಾಗಿ ಹಿಂದುಳಿದ ಹಾಗೂ ಸಮಾಜದಲ್ಲಿ ಕಡೆಗಣಿಸಲ್ಪಟ್ಟಿರುವ ವರ್ಗವನ್ನು ಗುರಿಯಾಗಿಸಿಕೊಂಡು ಅನೇಕ ಸಂಖ್ಯೆಯ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಹಣಕಾಸನ್ನು ಒದಗಿಸುತ್ತದೆ. ಆಧಾರ್ ಹಾಗೂ ಅದರ ವೇದಿಕೆಯು ಸರ್ಕಾರಕ್ಕೆ ಅದರ ವಿತರಣಾ ವ್ಯವಸ್ಥೆ ಹಾಗೂ ಅದರಿಂದಾಗಿ ಪಾರದರ್ಶಕತೆ ಮತ್ತು ಉತ್ತಮ ಆಡಳಿತವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಒಂದು ವಿಶಿಷ್ಟ ಅವಕಾಶವನ್ನು ನೀಡುತ್ತದೆ
ಸರ್ಕಾರಗಳು ಹಾಗೂ ಸೇವಾ ಸಂಸ್ಥೆಗಳಿಗಾಗಿ
ಭಾವಿಗುಪ್ರಾವು ಅದರ ಸಂಪೂರ್ಣ ದತ್ತಸಂಚಯದ ಪ್ರತಿಯಾಗಿ, ನಿವಾಸಿಗಳಿಗೆ, ಅವರುಗಳ ಜನಸಂಖ್ಯಾಶಾಸ್ತ್ರ ಹಾಗೂ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯಲ್ಲಿನ ನಕಲುಗಳನ್ನು ಹೊರತೆಗೆದನಂತರವಷ್ಟೇ ಆಧಾರ್ ಸಂಖ್ಯೆಯನ್ನು ನೀಡುತ್ತದೆ . ಆಧಾರ್ ದೃಢೀಕರಣವು ವಿವಿಧ ಯೋಜನೆಗಳ ಅಡಿಯಲ್ಲಿ ನಕಲುಗಳನ್ನು ಹೊರತೆಗೆಯುವುದನ್ನು ಸಾಧ್ಯಗೊಳಿಸುತ್ತದೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ಗಮನಾರ್ಹ ಉಳಿತಾಯವಾಗುವುದನ್ನು ನಿರೀಕ್ಷಿಸಲಾಗುತ್ತದೆ. ಅದು ಸರ್ಕಾರಕ್ಕೆ ನಿವಾಸಿಗಳ ಯಥಾರ್ಥತೆಯಿಂದ ಕೂಡಿದ ಮಾಹಿತಿಯನ್ನು ಒದಗಿಸುತ್ತದೆ, ನೇರ ಪ್ರಯೋಜನ ಕಾರ್ಯಕ್ರಮಗಳನ್ನು ಸಾಧ್ಯಗೊಳಿಸುತ್ತದೆ, ಹಾಗೂ ಸರ್ಕಾರದ ಇಲಾಖೆಗಳು/ಸೇವೆಗಳನ್ನು ಒದಗಿಸುವವರಿಗೆ ಸಮನ್ವಯಗೊಳಿಸುವಿಕೆಯನ್ನು ಅನುವು ಮಾಡುತ್ತದೆ ಹಾಗೂ ವಿವಿಧ ಯೋಜನೆಗಳನ್ನು ಅತ್ಯುತ್ತಮಗೊಳಿಸುತ್ತದೆ. ಕಾರ್ಯಗತಗೊಳಿಸುವ ಸಂಸ್ಥೆಗಳಿಗೆ ಫಲಾನುಭವಿಗಳನ್ನು ಪರಿಶೀಲಿಸಲು ಹಾಗೂ ಪ್ರಯೋಜನಗಳ ಗುರಿಯಾಗಿಸಿಕೊಳ್ಳಲಾಗಿರುವ ವಿತರಣೆಯನ್ನು ಖಚಿತಪಡಿಸಿಕೊಳ್ಳುವುದನ್ನು ಆಧಾರ್ ಸಾಧ್ಯಗೊಳಿಸುತ್ತದೆ ಈ ಎಲ್ಲಾ ಕಾರ್ಯಚಟುವಟಿಕೆಗಳು ಈ ಕೆಳಗಿನವುಗಳ ಕಡೆಗೆ ದಾರಿಮಾಡಿಕೊಡುತ್ತವೆ
1. ಸೇವಾ ವಿತರಣೆಗೆ ಮುಂಚಿತವಾಗಿ ಫಲಾನುಭವಿಗಳನ್ನು ಖಚಿತಪಡಿಸಿಕೊಳ್ಳುವ ಅಗತ್ಯತೆಯಿರುವಂತಹ ಜನಕಲ್ಯಾಣ ಕಾರ್ಯಕ್ರಮಗಳು ಭಾವಿಗುಪ್ರಾದ ದೃಢೀಕರಣ ಸೇವೆಗಳಿಂದ ಪ್ರಯೋಜನವನ್ನು ಪಡೆಯುತ್ತವೆ. ಇದು ಸೋರಿಕೆಗಳನ್ನು ತಡೆಯುವಲ್ಲಿ ಪರಿಣಮಿಸುತ್ತದೆ ಹಾಗೂ ಸೇವೆಗಳನ್ನು ಉದ್ದೇಶಿತ ಫಲಾನುಭವಿಗಳಿಗೆ ಮಾತ್ರ ವಿತರಿಸಲಾಗಿದೆ ಎಂಬುದನ್ನು ಖಚಿತಪಡಿಸುತ್ತದೆ. ಉದಾಹರಣೆಗಳು ನಾಗರಿಕ ಸರಬರಾಜು ವ್ಯವಸ್ಥೆಯ (ಪಿಡಿಎಸ್) ಫಲಾನುಭವಿಗಳಿಗೆ ಸಹಾಯಧನವನ್ನು ಒಳಗೊಂಡಿರುವ ಆಹಾರ ಮತ್ತು ಸೀಮೆಎಣ್ಣೆ ವಿತರಣೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಫಲಾನುಭವಿಗಳಿಗೆ ಸಂಬಂಧಿಸಿದಂತೆ ಕಾಮಗಾರಿ ನಿವೇಶನದಲ್ಲಿ ಹಾಜರಿಯನ್ನು ತೆಗೆದುಕೊಳ್ಳುವುದು, ಇತ್ಯಾದಿಗಳನ್ನು ಒಳಗೊಂಡಿವೆ
2. ಸೇವಾ ವಿತರಣಾ ವ್ಯವಸ್ಥೆಯ ಬಗ್ಗೆ ಯಥಾರ್ಥತೆ ಹಾಗೂ ಪಾರದರ್ಶಕತೆಯಿಂದ ಕೂಡಿದ ಮಾಹಿತಿಯನ್ನು ಒದಗಿಸುವಂತಹ ಆಧಾರ್ ವೇದಿಕೆಯೊಂದಿಗೆ ಸರ್ಕಾರವು ವಿತರಣಾ ವ್ಯವಸ್ಥೆಗಳನ್ನು ಉತ್ತಮಗೊಳಿಸಬಹುದು ಹಾಗೂ ಸೇವಾ ವಿತರಣಾ ತಾಣದಲ್ಲಿ ಒಳಗೊಂಡಿರುವ ಉತ್ತಮ ಮಾನವ ಸಂಪನ್ಮೂಲ ಬಳಕೆಯನ್ನು ಅಪೂರ್ವ ಅಭಿವೃದ್ಧಿ ಹಣಕಾಸನ್ನು ಹೆಚ್ಚಿನ ಪರಿಣಾಮಕಾರಿತ್ವದಿಂದ ಹಾಗೂ ದಕ್ಷತೆಯಿಂದ ಬಳಸಬಹುದು
ನಿವಾಸಿಗಳಿಗೆ:
ಆಧಾರ್ ವ್ಯವಸ್ಥೆಯು ನಿವಾಸಿಗಳಿಗೆ ದೇಶದ ಉದ್ದಗಲಕ್ಕೂ ಏಕ ಮೂಲ ಆನ್ ಲೈನ್ ಗುರುತು ಪರಿಶೀಲನೆಯನ್ನು ಒದಗಿಸುತ್ತದೆ. ನಿವಾಸಿಗಳು ನೋಂದಣಿಯನ್ನು ಮಾಡಿಸಿಕೊಂಡ ಕೂಡಲೇ,ಅವರು ವಿದ್ಯುನ್ಮಾನೀಯ ಮಾಧ್ಯಮವನ್ನು ಬಳಸಿಕೊಂಡು ತಮ್ಮ ಗುರುತನ್ನು ದೃಢೀಕರಿಸುವುದಕ್ಕಾಗಿ ಹಾಗೂ ಪ್ರಮಾಣೀಕರಿಸುವುದಕ್ಕಾಗಿ ಆಧಾರ್ ಸಂಖ್ಯೆಯನ್ನು ಅನೇಕ ಬಾರಿ ಬಳಸಿಕೊಳ್ಳಬಹುದು. ಅದು, ಬ್ಯಾಂಕು ಖಾತೆಯನ್ನು ತೆರೆಯುವುದು, ಚಾಲನಾ ಪರವಾನಿಗೆಯನ್ನು ಪಡೆಯುವುದು, ಇತ್ಯಾದಿ ಸೇವೆಗಳನ್ನು ಪಡೆಯುವ ಸಲುವಾಗಿ ನಿವಾಸಿಯು ಪ್ರತಿಯೊಂದು ಬಾರಿಯೂ ಬೆಂಬಲಿತ ಗುರುತು ದಾಖಲೆಗಳನ್ನು ಪದೇಪದೇ ಒದಗಿಸುವ ತೊಂದರೆಯನ್ನು ತೆಗೆದುಹಾಕುತ್ತದೆ. ಆನ್-ಲೈನ್ ಮೂಲಕ ಆಧಾರ್ ದೃಢೀಕರಣವನ್ನು ಯಾವುದೇ ಸಮಯದಲ್ಲಿಯಾದರೂ, ಎಲ್ಲಿಯೇ ಆದರೂ ಒದಗಿಸುವ ಮೂಲಕ, ಆಧಾರ್ ವ್ಯವಸ್ಥೆಯು ದೇಶದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವಲಸೆ ಹೋಗುವಂತಹ ಲಕ್ಷಾಂತರ ಜನತೆಗೆ ಚಲನಶೀಲತೆಯ ಅನುಕೂಲತೆಯನ್ನು ಕಲ್ಪಿಸಿದೆ