ಜಾಲತಾಣದಕಾರ್ಯನೀತಿಗಳು

ಇದು, ಭಾರತ ಸರ್ಕಾರದ ವಿದ್ಯುನ್ಮಾನಗಳು ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯದ ವಿದ್ಯುನ್ಮಾನಗಳು ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಒಂದು ಶಾಸನಬದ್ಧ ಪ್ರಾಧಿಕಾರವಾಗಿರುವಂತಹ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ಅಧಿಕೃತ ಜಾಲತಾಣವಾಗಿರುತ್ತದೆ. ಈ ಪ್ರಾಧಿಕಾರವನ್ನು ಆಧಾರ್ (ವಿತ್ತೀಯ/ಹಣಕಾಸು ಮತ್ತಿತರ ಸಹಾಯಧನಗಳು, ಪ್ರಯೋಜನಗಳು ಮತ್ತು ಸೇವೆಗಳ ಗುರಿಯಾಗಿಸಿಕೊಳ್ಳಲಾಗಿರುವಂತಹ ವಿತರಣೆ) ಅಧಿನಿಯಮ, , 2016 ರ (ಆಧಾರ್ ಅಧಿನಿಯಮ, 2016) ಅಡಿಯಲ್ಲಿ ಸ್ಥಾಪಿಸಲ್ಪಟ್ಟಿದೆ. ಈ ಜಾಲತಾಣವನ್ನು ಭಾವಿಗುಪ್ರಾವು ವಿನ್ಯಾಸಗೊಳಿಸಿದೆ, ಅಭಿವೃದ್ಧಿಪಡಿಸಿದೆ ಹಾಗೂ ನಿರ್ವಹಿಸಿಕೊಂಡು ಹೋಗುತ್ತಿದೆ

ಈ ಜಾಲತಾಣವನ್ನು ಸಾಮಾನ್ಯ ಜನತೆಗೆ ಮಾಹಿತಿಯನ್ನು ಒದಗಿಸುವುದಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ. ಭಾವಿಗುಪ್ರಾದ ಬಗ್ಗೆ ವಿಶ್ವಸನೀಯ ಸಮಗ್ರ ಯಥಾರ್ಥಾತೆಯಿಂದ ಕೂಡಿದ ಮಾಹಿತಿಯನ್ನು ಒದಗಿಸುವುದಕ್ಕಾಗಿ ಈ ಜಾಲತಾಣದ ಮೂಲಕ ಒಂದು ಪ್ರಯತ್ನವನ್ನು ಮಾಡಲಾಗಿದೆ. ಇತರೆ ಭಾರತೀಯ ಸರ್ಕಾರಿ ಪೋರ್ಟಲುಗಳು/ಜಾಲತಾಣಗಳಿಗೆ ವಿವಿಧ ಸ್ಥಳಗಳಲ್ಲಿ ಸಂಪರ್ಕಗಳನ್ನು ಪ್ರಮುಖವಾಗಿ ಒದಗಿಸಲಾಗಿದೆ

ಈ ಜಾಲತಾಣದಲ್ಲಿನ ಅಡಕವು/ವಿಷಯಕವು ಭಾವಿಗುಪ್ರಾದ ವಿವಿಧ ತಂಡಗಳು ಮತ್ತು ವಿಭಾಗಗಳ ಒಂದು ಸಂಘಟಿತ ಪ್ರಯತ್ನವಾಗಿರುತ್ತದೆ. ಒಂದು ನಿಯತವಾದ ಆಧಾರದ ಮೇರೆಗೆ ವಿಷಯಕಗಳ ವ್ಯಾಪ್ತಿ, ವಿನ್ಯಾಸ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಈ ಜಾಲತಾಣವನ್ನು ವಿಸ್ತರಿಸುವಿಕೆ ಹಾಗೂ ಅತ್ಯುತ್ತಮಗೊಳಿಸುವಿಕೆಯು ನಮ್ಮ ಅವಿರತ ಪ್ರಯತ್ನವಾಗಿರುತ್ತದೆ


ಧನ್ಯವಾದಗಳು

ಜಾಲತಾಣ ತಜ್ಞರು
ಭಾವಿಗುಪ್ರಾದ ಜಾಲತಾಣ

ಇಮೇಲ್: This email address is being protected from spambots. You need JavaScript enabled to view it.