ಮಾಹಿತಿಗಾಗಿ ಹಕ್ಕು

ನಾಗರಿಕರುಗಳಿಗಾಗಿ ಯಾವುದೇ ಸಾರ್ವಜನಿಕ ಪ್ರಾಧಿಕಾರದ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ಪ್ರೋತ್ಸಾಹಿಸುವುದಕ್ಕಾಗಿ,ಸಾರ್ವಜನಿಕ ಪ್ರಾಧಿಕಾರಗಳ ಅಡಿಯಲ್ಲಿನ ಮಾಹಿತಿಯನ್ನು ಸುಲಭವಾಗಿ ಪಡೆಯುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ನಾಗರಿಕರಿಗೆ ಮಾಹಿತಿಗಾಗಿ ಹಕ್ಕಿನ ಕಾರ್ಯತ: ಪ್ರಚಲಿತ ಪದ್ಧತಿಯನ್ನು ಸ್ಥಾಪಿಸುವ ಉದ್ದೇಶದಿಂದ “ ಮಾಹಿತಿಗಾಗಿ ಹಕ್ಕು ಅಧಿನಿಯಮ,2005" ನ್ನು ಭಾರತ ಸರ್ಕಾರವು ಕಾಯಿದೆಯ ಮೂಲಕ ಜಾರಿಗೆ ತಂದಿತು.

ಮಾಹಿತಿಗಾಗಿ ಹಕ್ಕು ಎಂದರೆ ಏನು?

ಯಾವುದೇ ಸಾರ್ವಜನಿಕ ಪ್ರಾಧಿಕಾರದಿಂದ ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಮಾಹಿತಿಯನ್ನು ತಿಳಿದುಕೊಳ್ಳುವಲ್ಲಿ/ಪಡೆದುಕೊಳ್ಳುವಲ್ಲಿ ಮಾಹಿತಿಗಾಗಿ ಹಕ್ಕು ಅನುವು ಮಾಡುತ್ತದೆ ಹಾಗೂ ಇದು ಕಾಮಗಾರಿಗಳು/ಕೆಲಸಕಾರ್ಯಗಳು,ದಾಖಲೆಗಳು, ಟಿಪ್ಪಣಿಗಳನ್ನು ತೆಗೆದುಕೊಂಡಿರುವುದು, ಪ್ರತಿಗಳು ಅಥವಾ ದಾಖಲೆ/ದಸ್ತಾವೇಜುಗಳ ಪ್ರಮಾಣೀಕೃತ ಪ್ರತಿಗಳು ಹಾಗೂ ಸಾಮಗ್ರಿಗಳ ಪ್ರಮಾಣೀಕೃತ ಮಾದರಿಗಳ ಪರಿಶೀಲನೆ ಹಾಗೂ ವಿದ್ಯುನ್ಮಾನೀಯ ಮಾದರಿಯಲ್ಲಿ ಸಂಗ್ರಹಿಸಲ್ಪಟ್ಟಿರುವ ಮಾಹಿತಿಯನ್ನು ಪಡೆದುಕೊಳ್ಳುವುದು, ಇವುಗಳನ್ನೂ ಒಳಗೊಂಡಿದೆ. ಮಾಹಿತಿಗಾಗಿ ಹಕ್ಕಿಗೆ ಸಂಬಂಧಿತ ಅರ್ಜಿಗಳನ್ನು rtionline.gov.inನಲ್ಲಿ ಸಲ್ಲಿಸಬಹುದು.

ಮಾಹಿತಿಯನ್ನು ಯಾರು ಕೇಳಬಹುದು?

ಯಾವುದೇ ನಾಗರಿಕರು, ಲಿಖಿತ ರೂಪದಲ್ಲಿ ಅಥವಾ ವಿದ್ಯುನ್ಮಾನೀಯವಾಗಿ ಆಂಗ್ಲ /ಹಿಂದಿ/ಪ್ರಾದೇಶಿಕ ಸರ್ಕಾರಿ/ಅಧಿಕೃತ ಆಡಳಿತ ಭಾಷೆಯಲ್ಲಿ ನಿರ್ದಿಷ್ಟ ದರದ ಶುಲ್ಕಗಳನ್ನು ಪಾವತಿಸುವುದರೊಂದಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಮಾಹಿತಿಗಾಗಿ ಕೋರಿಕೆಯನ್ನು ಸಲ್ಲಿಸಬಹುದು

ಮಾಹಿತಿಯನ್ನು ಯಾರು ಒದಗಿಸುವರು?

ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರವೂ ವಿವಿಧ ಹಂತಗಳಲ್ಲಿ ಒರ್ವ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯವರನ್ನು (ಸಿಎಪಿಐಒ) ನಾಮನಿರ್ದೇಶನ ಮಾಡುವರು,ಆ ರೀತಿ ನಾಮನಿರ್ದೇಶನಗೊಂಡವರು ಸಾರ್ವಜನಿಕರಿಂದ ಮಾಹಿತಿಗಾಗಿ ಕೋರಿಕೆಗಳನ್ನು ಸ್ವೀಕರಿಸುವರು. ಎಲ್ಲಾ ಆಡಳಿತಾತ್ಮಕ ಘಟಕಗಳು/ಕಚೇರಿಗಳಲ್ಲಿನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಸಾರ್ವಜನಿಕರಿಗೆ ಅಗತ್ಯ ಮಾಹಿತಿಯನ್ನು ಒದಗಿಸುವುದಕ್ಕಾಗಿ ವ್ಯವಸ್ಥೆಯನ್ನು ಮಾಡುವರು. ಮಾಹಿತಿಗಾಗಿ ಸಲ್ಲಿಸಲಾದ ಅರ್ಜಿಗಳು/ಕೋರಿಕೆಗಳನ್ನು 30 ದಿನಗಳ ಒಳಗೆ ಮಾಹಿತಿಯನ್ನು ಒದಗಿಸುವ ಮೂಲಕ ಅಥವಾ ಕೋರಿಕೆಯನ್ನು ತಿರಸ್ಕರಿಸುವ ಮೂಲಕ ವಿಲೆವಾರಿಗೊಳಿಸತಕ್ಕದ್ದು

ಮಾಹಿತಿಯನ್ನು ಬಹಿರಂಗಗೊಳಿಸುವುದರಿಂದ ವಿನಾಯಿತಿ ( ಮಾಹಿತಿಗಾಗಿ ಹಕ್ಕು ಅಧಿನಿಯಮ, 2005ರ ಪರಿಚ್ಚೇದ 8(1) (ಜೆ)

“ಈ ಅಧಿನಿಯಮದಲ್ಲಿ ಪ್ರತಿಬಂಧಿಸದಿರುವ ಯಾವುದೇ ಮಾಹಿತಿಯನ್ನಾಗಲೀ, ಯಾವುದೇ ನಾಗರಿಕರಿಗೆ ನೀಡುವಲ್ಲಿ ಯಾವುದೇ ಕಟ್ಟುಪಾಡುಗಳಿರುವುದಿಲ್ಲ” ಎಂಬುದಾಗಿ ಈ ಪರಿಚ್ಚೇದವು ತಿಳಿಸುತ್ತದೆ. ವೈಯಕ್ತಿಕ ವ್ಯಕ್ತಿಗೆ ಸಂಬಂಧಿತ ಮಾಹಿತಿಯನ್ನು, ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಗಳಿಗೆ ಸಂಬಂಧಿಸಿರದ, ಅಥವಾ ವೈಯಕ್ತಿಕ ವ್ಯಕ್ತಿಯ ಗೌಪ್ಯತೆಯ ಮೇಲೆ ಅನಗತ್ಯವಾಗಿ ದಾಳಿ ಮಾಡುವಲ್ಲಿ ಕಾರಣವಾಗುವುದೋ, ಅಂತಹ ಮಾಹಿತಿಯನ್ನು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯವರು ಅಥವಾ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯವರು ಅಥವಾ ಮನವಿ ಪ್ರಾಧಿಕಾರವು, ಯಾವುದು ಅನ್ವಯವೋ ಅದು ವಿಸ್ತೃತ ಸಾರ್ವಜನಿಕ ಹಿತಾಸಕ್ತಿಯು ಅಂತಹ ಮಾಹಿತಿಯ ಬಹಿರಂಗಪಡಿಸುವಿಕೆಯನ್ನು ಸಮರ್ಥಿಸಿಕೊಳ್ಳುತ್ತದೆ ಎಂಬುದಾಗಿ ತೃಪ್ತಿಯನ್ನು ಹೊಂದಿದ ಹೊರತು ನೀಡಬೇಕಾಗಿಲ್ಲ. ಲೋಕಸಭೆಗೆ ಅಥವಾ ಒಂದು ರಾಜ್ಯದ ಶಾಸಕಾಂಗಕ್ಕೆ ತಿರಸ್ಕರಿಸಲು ಸಾಧ್ಯವಿಲ್ಲದ ಮಾಹಿತಿಯನ್ನು ಯಾವುದೇ ವ್ಯಕ್ತಿಗೂ ತಿರಸ್ಕರಿಸಲು ಸಾಧ್ಯವಿಲ್ಲ

ಆದ್ದರಿಂದ ಭಾವಿಗುಪ್ರಾದ ಬಹಿರಂಗಪಡಿಸುವಿಕೆ ಪ್ರಮಾಣಕಗಳು ಈ ರೀತಿಯಾಗಿ ತಿಳಿಸುತ್ತವೆ:

ಮಾಹಿತಿಗಾಗಿ ಹಕ್ಕು ಅಧಿನಿಯಮ, 2005ರ ಪರಿಚ್ಚೆದ 8(I) ( ಜೆ) ಪ್ರಕಾರ ಹಾಗೂ ಜನಸಂಖ್ಯಾಶಾಸ್ತ್ರ ಹಾಗೂ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯ (ನಿವಾಸಿಯ ವೈಯಕ್ತಿಕ ಮಾಹಿತಿ) ಗೌಪ್ಯತೆಯ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಮಾಹಿತಿಯು ಯಾವ ವ್ಯಕ್ತಿಗೆ ಸಂಬಂಧಿಸಿರುತ್ತದೆ, ಆ ವ್ಯಕ್ತಿಯು ಮಾತ್ರ ಅಂತಹ ಮಾಹಿತಿಯನ್ನು ಕೋರಬಹುದು. ಇತರೆ ಯಾವುದೇ ಅರ್ಜಿದಾರರೂ ಈ ಮಾಹಿತಿಯನ್ನು ಕೋರುವಂತಿಲ್ಲ. ಆಧಾರ್ ಕಾರ್ಯಕ್ರಮದ ಅಡಿಯಲ್ಲಿ ನೋಂದಣಿಯಾಗಿರುವ ನಿವಾಸಿಗಳ ಗೌಪ್ಯತೆಯನ್ನು ಸಂರಕ್ಷಿಸುವ ಹಾಗೂ ನಿರ್ವಹಿಸಿಕೊಂಡು ಹೋಗುವ ಉದ್ದೇಶದಿಂದ ಇತರೆ ಯಾವುದೇ ಅರ್ಜಿದಾರರಿಗೂ ಓರ್ವ ಮೂರನೇ ವ್ಯಕ್ತಿಗೆ ಅಥವಾ ಇತರೆ ಯಾವುದೇ ನಿವಾಸಿಗೆ ಸಂಬಂಧಿತ ವೈಯಕ್ತಿಕ ಮಾಹಿತಿಯನ್ನು ಒದಗಿಸುವುದಿಲ್ಲ. ಅರ್ಜಿದಾರರು, ಕೆಲವು ಪ್ರಕರಣಗಳಲ್ಲಿ ಗುರುತಿನ ಹೆಚ್ಚುವರಿ ದೃಢೀಕರಣವನ್ನು ಒದಗಿಸುವ ಅಗತ್ಯತೆಯೂ ಇರುತ್ತದೆ

ಸಂಸ್ಕರಣಾ ಹಂತಗಳು, ಆಧಾರ್ ಸಂಖ್ಯೆ ಅಥವಾ ರವಾನೆ ಹಾಗೂ ವಿತರಣೆಗಳಂತಹ ತಮ್ಮ ನೋಂದಣಿಗಳಿಗೆ ಸಂಬಂಧಿತ ವಿವರಗಳನ್ನು ಕೋರುವ ನಿವಾಸಿಗಳು:

ಆಧಾರ್ ಅನ್ನು ತಂತ್ರಾಂಶ ಅನ್ವಯದಿಂದ ಪಡೆದಿರುವಿಕೆ/ಸಂಖ್ಯೆ, ಇವುಗಳಿಗೆ ಸಂಬಂಧಿಸಿದಂತೆ ಸ್ಥಿತಿಗತಿಯನ್ನು ಭಾವಿಗುಪ್ರಾದ ಜಾಲತಾಣ (uidai.gov.in)ಮೂಲಕ ವಿಶಿಷ್ಟ ಗುರುತಿನ (ಇಐಡಿ) ಸಂಖ್ಯೆಯನ್ನು ನೀಡುವ ಮೂಲಕ ಪಡೆಯಬಹುದು. ನಿವಾಸಿಯು ವಿಶಿಷ್ಟ ಗುರುತಿನ (ಇಐಡಿ) ಸಂಖ್ಯೆಯನ್ನು ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯ ಜೊತೆಯಲ್ಲಿ ಒದಗಿಸುವ ಮೂಲಕ ನಿವಾಸಿ ಪೋರ್ಟಲ್ (uidai.gov.in)ನಲ್ಲಿಯೂ ಆಧಾರ್ ಪತ್ರ ಅಂದರೆ ಇ-ಆಧಾರ್ ಅನ್ನು ಪಡೆಯಬಹುದು. ಎಲ್ಲಾ ಮಾಹಿತಿಯೂ ಭಾವಿಗುಪ್ರಾದ ದತ್ತಸಂಚಯದಲ್ಲಿರುವ ಮಾಹಿತಿಯ ಜೊತೆ ತಾಳೆ ಹೊಂದಿದಲ್ಲಿ, ಒಂದು ಸಲದ ಸಂಕೇತಪದವನ್ನು (ಒಟಿಪಿ) ನಿವಾಸಿಯು ನೋಂದಣಿಯ ವೇಳೆಯಲ್ಲಿ ನೀಡಿರುವ ಮೊಬೈಲು ಸಂಖ್ಯೆಗೆ ಅಥವಾ ಇ-ಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು. ಒಂದು ವೇಳೆ ಓರ್ವ ನಿವಾಸಿಯು ನೋಂದಣಿಯ ಸಮಯದಲ್ಲಿ ಮೊಬೈಲು ಸಂಖ್ಯೆ ಹಾಗೂ/ಅಥವಾಇ-ಮೇಲ್ ವಿಳಾಸವನ್ನು ಒದಗಿಸಿರದಿದ್ದಲ್ಲಿ ಅಥವಾ ಆತನ/ಆಕೆಯ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿಕೊಂಡಿದ್ದಲ್ಲಿ, ಪರಿಶೀಲನೆಯ ನಂತರ ಒಂದು ಸಲದ ಸಂಕೇತಪದವನ್ನು (ಒಟಿಪಿ) ಪಡೆಯುವ ಸಲುವಾಗಿ ನಿವಾಸಿಯು ಹೆಸರು, ನೋಂದಣಿ ಸಂಖ್ಯೆ ಹಾಗೂ ಪಿನ್ ಕೋಡ್ ಜೊತೆಯಲ್ಲಿ ಒಂದು ಮೊಬೈಲ್ ಸಂಖ್ಯೆಯನ್ನು ಒದಗಿಸುವ ಅಗತ್ಯತೆಯಿರುತ್ತದೆ. ಇ-ಆಧಾರ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವ ಸಲುವಾಗಿ ಒಂದು ಸಲದ ಸಂಕೇತಪದದ (ಒಟಿಪಿ) ಅಗತ್ಯತೆಯಿರುತ್ತದೆ. ನಿವಾಸಿಯು, ಇ-ಆಧಾರ್ ಅನ್ನು ಭಾವಿಗುಪ್ರಾದ ಪ್ರಾದೇಶಿಕ ಕಚೇರಿಗಳು ಹಾಗೂ ಸಂಪರ್ಕ ಕೇಂದ್ರಗಳ ಮೂಲಕವೂ ಸಂಬಂಧಿತ ಪ್ರಾದೇಶಿಕ ಕಚೇರಿಗಳು ಹಾಗೂ ಸಂಪರ್ಕ ಕೇಂದ್ರಗಳಿಂದ ಕಾರ್ಯವಿಧಾನಗಳ ಪ್ರಕಾರ ಮಾಡಬೇಕಾದ ಪರಿಶೀಲನೆಯ ನಂತರ ಪಡೆದುಕೊಳ್ಳಬಹುದು.

ಮಾಹಿತಿಗಾಗಿ ಹಕ್ಕಿನ ಅಡಿಯಲ್ಲಿ ಅರ್ಜಿ ಶುಲ್ಕಗಳು

'ಅಧಿನಿಯಮದ ಅಡಿಯಲ್ಲಿ ಮಾಹಿತಿಗಾಗಿ ಹಕ್ಕಿನ ಅಡಿಯಲ್ಲಿ ಅರ್ಜಿ ಶುಲ್ಕಗಳನ್ನು ನಗದು/ಡಿಮಾಂಡು ಡ್ರಾಫ಼್ಟ್/ಐಪಿಒ ಮೂಲಕ ಭಾವಿಗುಪ್ರಾದ ಪಿಎಒ ರವರಿಗೆ ಪಾವತಿಸಬೇಕು'