ತರಬೇತಿ, ಪರೀಕ್ಷೆ ಮತ್ತು ಪ್ರಮಾಣೀಕರಣ
Introduction
ಭಾವಿಗುಪ್ರಾವು ಹೊಂದಿರುವ ಬದ್ಧತೆ ಎಂದರೆ ಭಾರತದ ಎಲ್ಲಾ ನಿವಾಸಿಗಳಿಗೂ ಆಧಾರ್ ಸಂಖ್ಯೆಯನ್ನು ಒದಗಿಸುವುದು. ಅಂತಹ ಒಂದು ವೈವಿಧ್ಯತೆಯ ಮತ್ತು ಸಹಯೋಗದ ಪ್ರಯತ್ನಕ್ಕಾಗಿ ನಿವಾಸಿಗಳ ದತ್ತಸಂಚಯವನ್ನು ಯಶಸ್ವಿಯಾಗಿ ಸಂಗ್ರಹಿಸುವ ಪ್ರಯತ್ನ, ನೋಂದಣಿ ಮತ್ತು ಅಪ್ಡೇಟ್ ಅಧಿಕಾರಿಗಳ/ಸಂಸ್ಥೆಗಳ ಸಂಪೂರ್ಣ ಪರಿಸರೀಯ-ವ್ಯವಸ್ಥೆಯ ಉದ್ದಗಲಕ್ಕೂ ನೋಂದಣಿ ಪ್ರಕ್ರಿಯೆಯಲ್ಲಿನ ಏಕಪ್ರಕಾರತೆಯು ಅತ್ಯಾವಶ್ಯಕವಾಗಿರುತ್ತದೆ. ಅಂತಹ ಏಕಪ್ರಕಾರತೆಯ ಸಾಧನೆಯು ಕ್ಷೇತ್ರ ಮಟ್ಟದಲ್ಲಿ ನೋಂದಣಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿಗೆ ಅದು ನೋಂದಣಿಯ ಕೆಲಸವನ್ನು ನಿರ್ವಹಿಸುವ ಸಲುವಾಗಿ ಆಮೂಲಾಗ್ರವಾಗಿ ತರಬೇತಿ ನೀಡುವ ಅಗತ್ಯತೆಯನ್ನು ಹೊಂದಿರುತ್ತದೆ.ಈ ಅಗತ್ಯತೆಯನ್ನು ಪೂರೈಸುವ ಸಲುವಾಗಿ, ಭಾವಿಗುಪ್ರಾವು ಒಂದು ಸಮಗ್ರ ತರಬೇತಿ ವಿತರಣಾ ವಿಧಾನವನ್ನು ಮತ್ತು ಎಲ್ಲಾ ಸಹಭಾಗಿಗಳಿಗೂ ತರಬೇತಿ ವಿಷಯಗಳನ್ನು ಅಭಿವೃದ್ಧಿಪಡಿಸಿರುವುದು.
ತರಬೇತಿಯಲ್ಲದೆಯೇ ನೋಂದಣಿ ಸಿಬ್ಬಂದಿಯಾಗಿ ಓರ್ವ ವ್ಯಕ್ತಿಯ ಕೌಶಲ್ಯತೆ ಮತ್ತು ಕೆಲಸ ಮಾಡಲು ಇರುವಂತಹ ದಕ್ಷತೆ/ಕುಶಲತೆಯನ್ನು ನಿರ್ಧಾರಣೆ ಮಾಡುವ ವ್ಯವಸ್ಥೆಯು ಇರತಕ್ಕದ್ದು ಎಂಬುದರಲ್ಲಿ ಭಾವಿಗುಪ್ರಾವು ನಂಬಿಕೆ ಇಟ್ಟಿರುವುದು. ಇದನ್ನು ಪರಿಗಣಿಸಿ, ಭಾವಿಗುಪ್ರಾವು ಗುಣಮಟ್ಟ ಅಂಶಗಳಿಗೆ ಬದ್ಧತೆಯಿಂದ ಕೂಡಿರುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಕಡ್ಡಾಯ ಪರೀಕ್ಷೆ ಮತ್ತು ಪ್ರಮಾಣೀಕರಣವನ್ನು ನಿರ್ದಿಷ್ಟಪಡಿಸಿರುವುದು.
- ನೋಂದಣಿ ಮೇಲ್ವಿಚಾರಕ/ನಿರ್ವಾಹಕ
- ಚೈಲ್ಡ್ ಎನ್ರೊಲ್ಮೆಂಟ್ ಲೈಟ್ ಕ್ಲೈಂಟ್ ನಿರ್ವಾಹಕ
ತರಬೇತಿ ವಿತರಣೆ
ಗುಣಮಟ್ಟದ ನೋಂದಣಿಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಮತ್ತು ನೋಂದಣಿ ಪರಿಸರೀಯ ವ್ಯವಸ್ಥೆಯಲ್ಲಿ ಒಳಗೊಂಡಿರುವ ಪ್ರಕ್ರಿಯೆಗಳ ಬಗ್ಗೆ ಅವರಲ್ಲಿ ಅರಿವನ್ನು ಮೂಡಿಸುವ ಸಲುವಾಗಿ ನೋಂದಣಿ ಸಿಬ್ಬಂದಿಗೆ ತರಬೇತಿಯನ್ನು ಪ್ರಮುಖವಾಗಿ ನೋಂದಣಿ ಅಧಿಕಾರಿಗಳು/ಸಂಸ್ಥೆಯಿಂದ ಮತ್ತು ನೋಂದಣಿ ಸಂಸ್ಥೆಯಿಂದ ನೀಡಲಾಗುವುದು. ಭಾವಿಗುಪ್ರಾದ ಪ್ರಾದೇಶಿಕ ಕಚೇರಿಗಳೂ ಸಹ ತರಗತಿ ಕೊಠಡಿ ತರಬೇತಿ, ಮಾಸ್ಟರ್ ತರಬೇತುದಾರರ ತರಬೇತಿ/ಟಿಒಟಿ ಮತ್ತು ನೋಂದಣಿ ಸಂಸ್ಥೆಗಳ ಸಿಬ್ಬಂದಿಗೆ.
ಪರಿಚಯಾತ್ಮಕ/ಪುನರ್-ಮನನ ಕಾರ್ಯಕ್ರಮ ಮುಂತಾದ ವಿವಿಧ ಕಾರ್ಯಕ್ರಮಗಳ ಮೂಲಕ ಅಗತ್ಯತೆಯ ಆಧಾರದ ಮೇರೆಗೆ ತರಬೇತಿಯನ್ನು ನೀಡುತ್ತಿರುವುದು.ಪಂಚಾಯತಿ ರಾಜ್ ಸಂಸ್ಥೆಗಳು/ನಗರ ಸ್ಥಳೀಯ ಸಂಸ್ಥೆಗಳಿಂದ ಸಿಬ್ಬಂದಿ/ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳು, ಪರಿಚಯಿಸುವವರು ಮತ್ತು ಪರಿಶೀಲಿಸುವವರು, ಮುಂತಾದ ಸಹಭಾಗಿಗಳು ಇರುವರು, ಅವರುಗಳಿಗೆ ಆಧಾರ್ ಕಾರ್ಯಕ್ರಮದ ಬಗ್ಗೆ ಹಾಗೂ ಆಧಾರ್ ನೋಂದಣಿ ಪ್ರಕ್ರಿಯೆಯಲ್ಲಿ ಅವರುಗಳ ಪಾತ್ರದ ಬಗ್ಗೆ ಸಂವೇಧನಾಶೀಲರನ್ನಾಗಿ ಮಾಡುವ ಅಗತ್ಯತೆಯಿರುತ್ತದೆ. ಕಾಲಾನುಕಾಲಕ್ಕೆ, ನೋಂದಣಿ ಅಧಿಕಾರಿಗಳು/ಸಂಸ್ಥೆಗಳು ಈ ಸಹಭಾಗಿಗಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡುತ್ತಾರೆ.
ಮಾಸ್ಟರ್ ತರಬೇತುದಾರರ ತರಬೇತಿ/ಟಿಒಟಿ
ಮಾಸ್ಟರ್ ತರಬೇತಿದಾರರ ತರಬೇತಿ ಕಾರ್ಯಕ್ರಮ ಅಥವಾ ಟಿಒಟಿ (ತರಬೇತಿದಾರರ ತರಬೇತಿ) ಕಾರ್ಯಕ್ರಮಗಳು ತಮ್ಮ ಸಂಬಂಧಿತ ಕಾರ್ಯಕ್ಷೇತ್ರದಲ್ಲಿ ಇತರರಿಗೆ ಹೆಚ್ಚಿನ ತರಬೇತಿ ನೀಡಬಲ್ಲಂತಹ ಮಾಸ್ಟರ್ ತರಬೇತಿದಾರರುಗಳಿಗೆ ತರಬೇತಿ ನೀಡುವ ಉದ್ದೇಶವನ್ನು ಹೊಂದಿರುತ್ತವೆ. ನೋಂದಣಿ ಅಧಿಕಾರಿಗಳು/ಸಂಸ್ಥೆಗಳು, ತಮ್ಮ ಸಂಬಂಧಿತ ಇಲಾಖೆಗಳು/ಸಂಸ್ಥೆಗಳಿಂದ “ಮಾಸ್ಟರ್ ತರಬೇತಿದಾರರುಗಳನ್ನು ನಾಮನಿರ್ದೇಶನ ಮಾಡಬಹುದು ಅಥವಾ ಆಧಾರ್ ನೋಂದಣಿ ಪರಿಸರ ವ್ಯವಸ್ಥೆಯಲ್ಲಿನ ಯಾವುದೇ ಬದಲಾವಣೆಗೆ ಸಂಬಂಧಿತ ಅರಿವನ್ನು ಪಡೆದುಕೊಳ್ಳುವ ಸಲುವಾಗಿ ವಿಶೇಷ ತರಬೇತಿ ಸಂಸ್ಥೆಯ ಅನುಕೂಲತೆಗಳನ್ನು ಬಳಸಿಕೊಳ್ಳಬಹುದು. ನೋಂದಣಿ ಅಧಿಕಾರಿಗಳು/ಸಂಸ್ಥೆಗಳು ಉನ್ನತ ತರಬೇತಿ ಸಂಸ್ಥೆಯಿಂದ ಮಾಸ್ಟರ್ ತರಬೇತುದಾರರನ್ನೂ ಸಹ ಬಳಸಬಹುದು ಹಾಗೂ ನಾಮನಿರ್ದೇಶಿತ ಮಾಸ್ಟರ್ ತರಬೇತುದಾರರಲ್ಲದೆಯೇ ಎಸ್ ಎಸ್ ಎ ಗಳು, ಪಿ ಎಸ್ ಎ ಗಳು ಮತ್ತು ಎ ಡಿ ಜಿ ಗಳಂತಹ ತಮ್ಮ ಸ್ವಂತ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು.
ತರಬೇತುದಾರರು ಸ್ಥಳೀಯ ಭಾಷೆಗಳಲ್ಲಿ ದಕ್ಷತೆ/ಕುಶಲತೆಯನ್ನು ಹೊಂದಿರುವರು ಹಾಗೂ ಸ್ಥಳೀಯ ಮಟ್ಟದಲ್ಲಿ ಕ್ಷೇತ್ರ ಕಲಿಕೆಯ ಬಗ್ಗೆ ಅರಿವನ್ನು ಹೊಂದಿರುವರು ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ, ತಮ್ಮ ಸಂಬಂಧಿತ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ನಿರೂಪಿಸುವ ಜವಾಬ್ದಾರಿಯನ್ನು ಪ್ರಾದೇಶಿಕ ಕಚೇರಿಗಳಿಗೆ ನೀಡಲಾಗಿದೆ. ಗುರುತಿಸಲ್ಪಟ್ಟಿರುವ ಎಲ್ಲಾ ಸಂಪನ್ಮೂಲಗಳು ಈಗಾಗಲೇ ಆಧಾರ್ ಸಂಸ್ಕರಣೆಗಳು ಮತ್ತು ವ್ಯವಸ್ಥೆಗಳ ಬಗ್ಗೆ ಮೂಲ ಅರಿವನ್ನು ಹೊಂದಿರುವುದರಿಂದ ಈ ಕಾರ್ಯಕ್ರಮಗಳ ಅವಧಿಯನ್ನು 1-2 ದಿನಗಳವರೆಗೆ ನಿಗದಿಗೊಳಿಸಲಾಗುತ್ತದೆ.
ತಮ್ಮ ಸಂಬಂಧಿತ ಇಲಾಖೆಗಳು/ಸಂಸ್ಥೆಗಳಲ್ಲಿ ಇತರೆ ಸಹಭಾಗಿಗಳಿಗೆ ತರಬೇತಿ ನೀಡುವ ಸಲುವಾಗಿ ತರಬೇತಿದಾರರಿಗಾಗಿ ತರಬೇತಿಯಲ್ಲಿ ತರಬೇತಿ ಹೊಂದಿದ ಮಾಸ್ಟರ್ ತರಬೇತುದಾರರ ತಂಡದ ಪಟ್ಟಿಯು ನೋಂದಣಿ ಕಚೇರಿಗಳು, ನೋಂದಣಿ ಅಧಿಕಾರಿಗಳು/ಸಂಸ್ಥೆಗಳು/ಸರ್ಕಾರಿ ಇಲಾಖೆಗಳಿಗೆ ಲಭ್ಯವಿರುವುದು, ಈ ರೀತಿಯಾಗಿ ಶ್ರೇಣಿ ಮತ್ತು ಗಾತ್ರದ ಪ್ರಯೋಜನಗಳನ್ನು ನೀಡಲಾಗುತ್ತಿದೆ.
Orientation/Refresher program of Enrolment Agency Staff
ಪರಿಚಯಾತ್ಮಕ/ಪುನರ್-ಮನನ ತರಬೇತಿ ಕಾರ್ಯಕ್ರಮವು ನೋಂದಣಿ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ನೋಂದಣಿ ಸಂಸ್ಥೆಯ ಸಿಬ್ಬಂದಿ ಅವರೆಂದರೆ ಮೇಲ್ವಿಚಾರಕರು ಅಥವಾ ನಿರ್ವಾಹಕರು ಅಥವಾ ಶಿಶು ನೋಂದಣಿ ಲೈಟ್ ನಿರ್ವಾಹಕರುಗಳಿಗೆ ಮಾತ್ರ ಆಗಿರುತ್ತದೆ. ಈ ಕಾರ್ಯಕ್ರಮಗಳು ಒಂದು ನ್ಯಾಯಸಮ್ಮತ ದೃಢವಾದ ಬುನಾದಿಯನ್ನು ಹೊಂದಿರುವಂತಹ ಒಂದು ಗುರಿಯಾಗಿಸಿಕೊಳ್ಳಲಾಗಿರುವ ಗುಂಪಿಗಾಗಿ ಆಗಿರುವುದರಿಂದ, ಕಾರ್ಯಕ್ರಮವನ್ನು ಒಂದು ದಿನಕ್ಕೆ ನಿಗದಿಗೊಳಿಸಲಾಗಿದೆ. ಈ ಕಾರ್ಯಕ್ರಮಗಳನ್ನು ತರಗತಿ ಕೊಠಡಿ ಮಾದರಿಯಲ್ಲಿ ನಡೆಸಲಾಗುವುದು ಮತ್ತು ಪ್ರತಿಯೋರ್ವ ನೋಂದಣಿ ಅಧಿಕಾರಿ/ಸಂಸ್ಥೆಯು ಪ್ರತೀ ತ್ರೈಮಾಸಿಕದಲ್ಲಿ ಒಂದು ಸಲ ನಡೆಸಬಹುದು.
ಈ ಕಾರ್ಯಕ್ರಮಗಳನ್ನು ನೋಂದಣಿ ಅಧಿಕಾರಿಗಳ/ಸಂಸ್ಥೆಯ ಕಟ್ಟಡದಲ್ಲಿ ಅಥವಾ ರಾಜ್ಯ ತರಬೇತಿ ಸಂಸ್ಥೆಗಳು, ಇತ್ಯಾದಿ ಇತರೆ ಸ್ಥಳಗಳಲ್ಲಿ ನಡೆಸಲಾಗುವುದು. ಮಾಸ್ಟರ್ ತರಬೇತಿದಾರರುಗಳು ಪುನರ್-ಮನನ ತರಬೇತಿಯನ್ನು ನೀಡುವ ಸಲುವಾಗಿ ಸಂಪನ್ಮೂಲ ವ್ಯಕ್ತಿಯಾಗಿ ಪಾತ್ರವಹಿಸುವರು ಮತ್ತು ಇದಕ್ಕೆ ಸಂಬಂಧಿತ ವಿಷಯಗಳನ್ನು ನಿಖರವಾದ ಬದಲಾವಣೆ/ಪ್ರಕ್ರಿಯೆಯನ್ನು ಇಂದಿನದಿನದನ್ನಾಗಿ ಮಾಡುವಿಕೆಯನ್ನು ವ್ಯಾಪಿಸಿದಂತೆ ನೋಂದಣಿ ವಿಭಾಗವು ತಯಾರಿಸುವುದು. ಭಾಗವಹಿಸುವವರು ಕಲಿತಿರುವ ಬಗ್ಗೆ ಖಚಿತಪಡಿಸಿಕೊಳ್ಳುವ ಸಲುವಾಗಿ, ಈ ಕಾರ್ಯಕ್ರಮಗಳು, ಕಾರ್ಯಕ್ರಮದ ಅಂತ್ಯದಲ್ಲಿ ಒಂದು ಪರೀಕ್ಷಾ ಅವಧಿಯನ್ನು ಒಳಗೊಂಡಿರುವುದು.
ಮೆಗಾ ತರಬೇತಿ ಮತ್ತು ಪ್ರಮಾಣೀಕರಣ ಕಾರ್ಯಕ್ರಮ
ಇವರುಗಳ ಅಗತ್ಯತೆಯ ದೊಡ್ಡ ಪ್ರಮಾಣದಲ್ಲಿನ ಬೇಡಿಕೆಯು ಇರುವ ಸ್ಥಳಗಳಲ್ಲಿ ನಡೆಸಲಾಗುವುದು. ತರಬೇತಿ ಅವಧಿಯನ್ನು ಭಾವಿಗುಪ್ರಾದ ಜಾಲತಾಣದಲ್ಲಿ ಲಭ್ಯವಿರುವ ತರಬೇತಿ ವಿಷಯಗಳನ್ನು ಬಳಸಿಕೊಂಡು ಪ್ರಾದೇಶಿಕ ಕಚೇರಿಗಳಲ್ಲಿ ಲಭ್ಯವಿರುವ ಮಾಸ್ಟರ್ ತರಬೇತಿದಾರರುಗಳಿಂದ ನಡೆಸಬಹುದು, ಈ ತರಬೇತಿಯ ನಂತರ ಒಂದು ಪರೀಕ್ಷೆಯ ಮತ್ತು ಭಾವಿಗುಪ್ರಾವು ನೇಮಕ ಮಾಡಿರುವ ಪ್ರಮಾಣೀಕರಣ ಸಂಸ್ಥೆಯ ಮೂಲಕ ಪ್ರಮಾಣೀಕರಣ ಪ್ರಕ್ರಿಯೆಯು ನಡೆಯುವುದು..
ಪ್ರಮುಖ ಟಿಪ್ಪಣಿ:
1. ಆಧಾರ್ ಮೇಲ್ವಿಚಾರಕ / ಆಪರೇಟರ್ ಮತ್ತು ಚೈಲ್ಡ್ ಎನ್ರೊಲ್ಮೆಂಟ್ ಲೈಟ್ ಕ್ಲೈಂಟ್ ಆಪರೇಟರ್ (ಸಿ ಇ ಎಲ್ ಸಿ) ಯನ್ನು ತೆಗೆದುಕೊಳ್ಳಲು ಹೊಸ ಪರೀಕ್ಷೆ ರಚನೆ ಮತ್ತು ಪ್ರಶ್ನೆ ಬ್ಯಾಂಕ್ 04.02.2 019 ರಿಂದ ಅನ್ವಯವಾಗುತ್ತದೆ. ಪರೀಕ್ಷೆ ಮತ್ತು ಸರ್ಟಿಫಿಕೇಶನ್ ಏಜನ್ಸಿ (ಎಂ/ಎಸ್ ಎನ್ಎಸ್ಐಐಟಿ ಲಿಮಿಟೆಡ್)ನಲ್ಲಿ ನಡೆಸಿದ ಎಲ್ಲಾ ಸರ್ಟಿಫಿಕೇಶನ್ ಪರೀಕ್ಷೆಗಳು ಹೊಸ ಮಾದರಿಯಂತೆ ಇರಬೇಕು. 04.02.2019 ರಂದು ಅಥವಾ ನಂತರ ಅವರ ಪ್ರಮಾಣೀಕರಣ ಪರೀಕ್ಷೆಯನ್ನು ನಿಗದಿಪಡಿಸಿದ ಎಲ್ಲಾ ಅಭ್ಯರ್ಥಿಗಳು ಸ್ವಯಂ ಅಧ್ಯಯನಕ್ಕಾಗಿ ಕೆಳಗೆ ನೀಡಲಾದ ಟೇಬಲ್ ನಲ್ಲಿ ಹೊಸ ಪರೀಕ್ಷೆಗೆ ರಚನೆಯಾದ, ಪ್ರೆಶ್ನೆ ಬ್ಯಾಂಕ್ (ಗಳು) ಮತ್ತು ಸಂಬಂಧಿತ ಕಲಿಕೆ ಕೈಪಿಡಿ (ಗಳು) ಅನ್ನು ಡೌನ್ಲೋಡ್ ಮಾಡಿ ಮಾಣೀಕರಣ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳಬಹುದು.
2. ಪರಿಶೀಲನೆ ಉದ್ದೇಶಕ್ಕಾಗಿ, ಅಭ್ಯರ್ಥಿಗಳು ತಮ್ಮ ಇತ್ತೀಚಿನ ಇ-ಆಧಾರ್ ನ ಪ್ರತಿಯನ್ನು ಡೌನ್ಲೋಡ್ ಮಾಡಲು ಸಲಹೆ ನೀಡುತ್ತಾರೆ (ಜನವರಿ 1, 2019 ರ ನಂತರ ದಿನದಂದು ಡೌನ್ಲೋಡ್ ಮಾಡಲಾಗಿದೆ) ಈ ಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಬಹುದು www.eaadhaar.uidai.gov.in ಮತ್ತು ಕಪ್ಪು / ಬಿಳಿ / ಬಣ್ಣದ ಆಧಾರ್ ಪ್ರತಿ ಅನ್ನು ಪರೀಕ್ಷೆಯ ದಿನಾಂಕದಂದು ಎನ್ಎಸ್ಇಐಟಿ ಲಿಮಿಟೆಡ್ ಪರೀಕ್ಷಾ ಕೇಂದ್ರಕ್ಕೆ ತರಬೇಕು.
3. ಭಾವಿಗುಪ್ರಾದ ಹೊಸ ಪರೀಕ್ಷೆ ಮತ್ತು ಪ್ರಮಾಣೀಕರಣ ಕಾರ್ಯನೀತಿಯ ಅನುಸಾರ, “ಅಭ್ಯರ್ಥಿಗಳು, ಶುಲ್ಕವನ್ನು ಠೇವಣಿ ಇಟ್ಟ ದಿನಾಂಕದಿಂದ 6 ತಿಂಗಳುಗಳ ಒಳಗೆ ಪರೀಕ್ಷೆಗೆ ಹಾಜರಾಗತಕ್ಕದ್ದು, ಅದಕ್ಕೆ ತಪ್ಪಿದಲ್ಲಿ, ಅವರು ಪಾವತಿಸಿರುವ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಹಾಗೂ ಆ ಶುಲ್ಕದ ಪ್ರತಿಯಾಗಿ ಅವರು ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗುವುದಿಲ್ಲ.”
4. ಶಿಶು ನೋಂದಣಿ ಲೈಟ್ ಕ್ಲೈಂಟ್ ನಲ್ಲಿ ಪ್ರಮಾಣೀಕರಿಸಲ್ಪಟ್ಟ ಅಭ್ಯರ್ಥಿಗಳು ಶಿಶು ನೋಂದಣಿ ಲೈಟ್ ಕ್ಲೈಂಟ್ ತಂತ್ರಾಂಶ ಅನ್ವಯಕ್ಕೆ ಸಂಬಂಧಿಸಿದಂತೆ ಮಾತ್ರ ಕೆಲಸ ಮಾಡಲು ಸಾಧ್ಯವಿರುತ್ತದೆ. ಅವರುಗಳು ಇತರೆ ಯಾವುದೇ ಮಾದರಿಯ ನೋಂದಣಿಯನ್ನು ಅಂದರೆ ನಿರ್ವಾಹಕರಾಗಿ/ಮೇಲ್ವಿಚಾರಕರಾಗಿ ಇಸಿಎಂಪಿಯಲ್ಲಿ ಮಾಡಲು ಸಾಧ್ಯವಿರುವುದಿಲ್ಲ. ಆದಾಗ್ಯೂ, ನಿರ್ವಾಹಕರು/ಮೇಲ್ವಿಚಾರಕರು ಎಂಬುದಾಗಿ ಪ್ರಮಾಣೀಕರಿಸಲ್ಪಟ್ಟ ಅಭ್ಯರ್ಥಿಗಳು ಇಸಿಎಂಪಿ ಮತ್ತು ಸಿ ಇ ಎಲ್ ಸಿ ಕ್ಲೈಂಟ್ ಸಾಫ್ಟ್ವೇರ್. ಈ ಎರಡರಲ್ಲಿಯೂ ಕೆಲಸ ಮಾಡಲು ಸಾಧ್ಯವಿರುತ್ತದೆ. ಸಿ ಇ ಎಲ್ ಸಿ ನಿರ್ವಾಹಕರಿಗೆ ಕನಿಷ್ಠ ವಿದ್ಯಾರ್ಹತೆಯು 12ನೇ ತರಗತಿಯನ್ನು ತೇರ್ಗಡೆ ಹೊಂದಿರತಕ್ಕದ್ದು. ಆಂಗನವಾಡಿ/ಆಶಾ ಕೆಲಸಗಾರರಿಗೆ ಸಂಬಂಧಿಸಿದಂತೆ ಸಿ ಇ ಎಲ್ ಸಿ ನಿರ್ವಾಹಕರಿಗೆ ಕನಿಷ್ಠ ವಿದ್ಯಾರ್ಹತೆಯು 10ನೇ ತರಗತಿ ಪಾಸಾಗಿರಬೇಕು.
5. ಆಧಾರ್ ದಾಖಲಾತಿ ಮತ್ತು ನವೀಕರಣವನ್ನು ನಿರ್ವಹಿಸಲು ಪ್ರಮಾಣೀಕರಣವು ಕಡ್ಡಾಯ ಅವಶ್ಯಕವಾಗಿದೆ. ಏಕೆಂದರೆ, ಯುಐಡಿಎಐ ನೇರವಾಗಿ ಯಾವುದೇ ಪ್ರಮಾಣೀಕೃತ ಅಭ್ಯರ್ಥಿಯನ್ನು ನೇಮಿಸುವುದಿಲ್ಲ, ಎಲ್ಲಾ ಸರ್ಟಿಫೈಡ್ ಅಭ್ಯರ್ಥಿಗಳು ಸಕ್ರಿಯವಾದ ವಿಧಾನದಲ್ಲಿ ಆಧಾರ್ ನೋಂದಣಿ ಯನ್ನು ಮಾಡಬಹುದು.ಏಜೆನ್ಸಿಯು ನೋಂದಣಿ /ಅಪ್ಡೇಟ್ ಕೆಲಸವನ್ನು ಪ್ರಾರಂಭಿಸಬಹುದು.
ನೋಂದಣಿ ಸಿಬ್ಬಂದಿ ಪರೀಕ್ಷೆ ಮತ್ತು ಪ್ರಮಾಣೀಕರಣ
ಯುಐಡಿಎಐ ಯು ಎನ್ಎಸ್ಇ ಐಟಿಯನ್ನು ಟೆಸ್ಟಿಂಗ್ ಮತ್ತು ಸರ್ಟಿಫಿಕೇಶನ್ ಏಜೆನ್ಸಿ (ಟಿಸಿಎ) ಆಗಿ ನೇಮಿಸಿದೆ. ಯುಐಡಿಎಐ ನಿಗದಿತ ಮಾನದಂಡಗಳಿಗೆ ಅನುಗುಣವಾಗಿ ಹೊಸ ನೋಂದಣಿ ಕೈಗೊಳ್ಳುವ ಮತ್ತು ಹಳೆಯ ಮಾಹಿತಿಯನ್ನು ಅಪ್ಡೇಟ್ ಮಾಡುವ ಸಾಮರ್ಥ್ಯವನ್ನು ಪರೀಕ್ಷಿಸಲು ಆನ್ಲೈನ್ ಪರೀಕ್ಷೆ ನಡೆಸುವುದು.
ಆಧಾರ್ ನೋಂದಣಿ ಮತ್ತು ಅಪ್ಡೇಟ್ ನೋಂದಣಿ ಸಿಬ್ಬಂದಿಗೆ -ದೃಷ್ಟಿಕೋನ / ರಿಫ್ರೆಶ್ ತರಬೇತಿ ನೀಡುವ ಪ್ರಮುಖ ಅಂಶಗಳನ್ನು ಅರ್ಥಮಾಡಿಕೊಳ್ಳಲು ಯುಐಡಿಎಐ "ಆಧಾರ್ ನೋಂದಣಿ ಮತ್ತು ಅಪ್ಡೇಟ್" ಅನ್ನು ಸಾಮಗ್ರವಾಗಿ ಕಲಿಯಲು ಮಾರ್ಗದರ್ಶಿ ಒದಗಿಸಿದೆ. ವಿಶೇಷವಾಗಿ "ಆಧಾರ್ ಅಪ್ಡೇಟ್", "ಚೈಲ್ಡ್ ಎನ್ರೊಲ್ಮೆಂಟ್ ಲೈಟ್ ಕ್ಲೈಂಟ್" ಮತ್ತು "ಪಾತ್ರಗಳು ಮತ್ತು ಜವಾಬ್ದಾರಿ ಆಫ್ ಸಮರ್ಥಕ ಮತ್ತು ಪರಿಚಯಕಾರ" ನಲ್ಲಿ ಪ್ರತ್ಯೇಕವಾದ ಕಲಿಕೆಯ ಮಾರ್ಗದರ್ಶಿ ನಿರ್ದಿಷ್ಟ ತರಬೇತಿಯ ಅವಶ್ಯಕತೆಗಳು ಸಹ ಲಭ್ಯವಿದೆ. ನೋಂದಣಿ ಆಪರೇಟರ್ / ಸೂಪರ್ವೈಸರ್ ಅಥವಾ ಸಿ ಇ ಎಲ್ ಸಿ ಆಪರೇಟರ್, ಪ್ರೆಶ್ನೆ ಬ್ಯಾಂಕ್ ಮತ್ತು ಬಹು ಭಾಷೆಗಳಲ್ಲಿ ಪ್ರೆಶ್ನೆ ಬ್ಯಾಂಕ್ ಮತ್ತು ಸ್ವಯಂ ಅಧ್ಯಯನಕ್ಕಾಗಿ ಪರೀಕ್ಷೆ ಮತ್ತು ಸರ್ಟಿಫಿಕೇಶನ್ ಏಜೆನ್ಸಿ ನಡೆಸಿದ ಆನ್ಲೈನ್ ಎಮ್ ಸಿ ಕ್ಯೂ ಆಧಾರಿತ ಸರ್ಟಿಫಿಕೇಶನ್ ಪರೀಕ್ಷೆಗಾಗಿ ತಯಾರಿ ನಡೆಸುವ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು.
ಪರೀಕ್ಷೆಗೆ ಸಿದ್ಧಗೊಂಡನಂತರ, ನೋಂದಣಿ ಪ್ರಕ್ರಿಯೆಯ ವಿವರಗಳನ್ನು, ನಗರವಾರು ಪರೀಕ್ಷಾ ಕೇಂದ್ರಗಳು, ಬ್ಯಾಂಕು ಚಲನ್ ವಿವರಗಳು, ಪರೀಕ್ಷೆಯನ್ನು ನಡೆಸಲು ಲಭ್ಯವಿರುವ ನಿಗದಿತ ದಿನಾಂಕಗಳು, ಈ ವಿವರಗಳನ್ನು ಪಡೆಯುವುದಕ್ಕಾಗಿ ಆಕಾಂಕ್ಷಿಗಳು NSE.IT Portal ಗೆ ಭೇಟಿ ನೀಡಬಹುದು. ಹೊಸ ನೋಂದಣಿಗಾಗಿ ರೂ.365/- ರಷ್ಟು ಮೊತ್ತದಷ್ಟು ಶುಲ್ಕವನ್ನು ಬ್ಯಾಂಕು ಚಲನ್ನಿನ ಮೂಲಕ ಮತ್ತು ಪುನರ್-ಪರೀಕ್ಷೆಗಾಗಿ ರೂ.200/-ರಷ್ಟು ಮೊತ್ತವನ್ನು ಮತ್ತೊಂದು ಚಲನ್ನಿನ ಮೂಲಕ ಭಾರತೀಯ ಸ್ಟೇಟ್ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಠೇವಣಿ ಇಡತಕ್ಕದ್ದು. ಅರ್ಹತೆಯನ್ನು ಹೊಂದಿದ ಆಕಾಂಕ್ಷಿಗಳಿಗೆ ಪ್ರಮಾಣಪತ್ರವನ್ನು ಆನ್ ಲೈನ್ ಪರೀಕ್ಷೆಯ ದಿನದಂದು ಪರೀಕ್ಷಾ ಕೇಂದ್ರದಲ್ಲಿ ನೀಡಲಾಗುವುದು.
ನೋಂದಣಿ, ಅರ್ಜಿ ನಮೂನೆ ಸಲ್ಲಿಕೆ, ಪರೀಕ್ಷೆಯ ಶುಲ್ಕ, ಪರೀಕ್ಷಾ ಕೇಂದ್ರ / ಪರೀಕ್ಷೆ ಸ್ಲಾಟ್ ಮತ್ತು ಪರೀಕ್ಷೆ ಮತ್ತು ಪ್ರಮಾಣೀಕರಣ ಅಪ್ಲಿಕೇಶನ್ ಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ, ಅಭ್ಯರ್ಥಿಗಳು 022-42706500 ಅನ್ನು ಸಂಪರ್ಕಿಸಬಹುದು ಅಥವಾ ಅವರ ಪ್ರಶ್ನೆಗಳನ್ನು This email address is being protected from spambots. You need JavaScript enabled to view it. ನಲ್ಲಿ ಕಳುಹಿಸಬಹುದು. ಸರ್ಟಿಫೈಡ್ ಆಪರೇಟರ್ / ಸೂಪರ್ವೈಸರ್ನ ಆನ್-ಬೋರ್ಡಿಂಗ್ ಪ್ರಕ್ರಿಯೆಯ ಸಂದರ್ಭದಲ್ಲಿ ಸಮಸ್ಯೆಯನ್ನು ಎದುರಿಸಲಾಗುತ್ತದೆ, ತಮ್ಮ ನೋಂದಣಿ ಏಜೆನ್ಸಿಯು 080-23099400 ರಲ್ಲಿ UIDAI ತಾಂತ್ರಿಕ ಸಹಾಯವನ್ನು ಸಂಪರ್ಕಿಸಬಹುದು ಅಥವಾ This email address is being protected from spambots. You need JavaScript enabled to view it. ನಲ್ಲಿ ತಮ್ಮ ಪ್ರಶ್ನೆಗಳಿಗೆ ಕಳುಹಿಸಬಹುದು.
ತರಬೇತಿ ಮತ್ತು ಪರೀಕ್ಷೆ ವಸ್ತುಗಳು
ಪ್ರಮಾಣೀಕರಣ ಪರೀಕ್ಷೆಗೆ ಸಿದ್ಧಗೊಳ್ಳಲು ಆಕಾಂಕ್ಷಿಗಳಿಗೆ ತರಬೇತಿ ಮತ್ತು ಪರೀಕ್ಷೆ ವಿಷಯಗಳು ಹಾಗೂ ಅಲ್ಲದೆಯೇ ನೋಂದಣಿ ಪರಿಸರ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವ ಇತರೆ ಸಹಭಾಗಿಗಳಿಗೆ ಆಧಾರ್ ನೋಂದಣಿ ಮತ್ತು ಇಂದಿನದಿನದನ್ನಾಗಿ ಮಾಡುವಿಕೆಗೆ ಸಂಬಂಧಿಸಿದಂತೆ ತಮ್ಮ ಪಾತ್ರಗಳು ಮತ್ತು ಜವಾಬ್ದಾರಿಗಳು ಮತ್ತು ಇತರೆ ಪ್ರಮುಖ ಅಂಶಗಳನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ವಿಷಯಗಳು ಈ ಕೆಳಗೆ ಲಭ್ಯವಿರುತ್ತವೆ.
S.No. | Course | Published Date | Download |
---|---|---|---|
1 |
New Learner's guide on Aadhaar Enrolment & Update (applicable from 04.02.2019) |
24.01.2019 |
English | Hindi | Assamese | Bengali | Gujarati | Malayalam | Tamil | Kannada | Marathi | Punjabi | Odia | Telugu | Urdu |
2 |
New Question bank for Supervisor/Operator Certification Exam – 510 Questions ( applicable from 04.02.2019) |
24.01.2019 |
English | Hindi | Assamese | Bengali | Gujarati | Malayalam | Tamil | Kannada | Marathi | Punjabi | Odia | Telugu | Urdu |
3 |
Learner's guide on on Child Enrolment Lite Client |
01.11.2017 |
|
4 |
New Question bank for CELC Certification Exam – 75 Questions ( applicable from 04.02.2019) |
24.01.2019 |
English | Hindi | Assamese | Bengali | Gujarati | Malayalam | Tamil | Kannada | Marathi | Punjabi | Odia | Telugu | Urdu |
5 |
New Test Structure for Supervisor/Operator/CELC certification ( applicable from 04.02.2019) |
24.01.2019 |
|
6 |
Manual - Aadhaar Seva Kendra using Online ECMP Client Version 5.5.5.9 |
24.01.2019 |
|
7 |
Learner's guide on on Aadhaar Update |
28.03.2018 |