UIDAI ಪ್ರಾಧಿಕಾರದ ಸಂಯೋಜನೆ

Dr. Anand Deshpande, Member (part-time), UIDAI

ಡಾ.ಆನಂದ್ ದೇಶಪಾಂಡೆ

ಸದಸ್ಯ (ಅಲ್ಪಾವಧಿ), ಯುಐಡಿಎಐ

ಡಾ. ಆನಂದ್ ದೇಶಪಾಂಡೆ ಅವರನ್ನು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಅಲ್ಪಾವಧಿ ಸದಸ್ಯರನ್ನಾಗಿ ನೇಮಿಸಲಾಗಿದೆ.

ಡಾ. ಆನಂದ್ ದೇಶಪಾಂಡೆ, ಪೆರ್ಸಿಸ್ಟನ್ಟ್ ಸಿಸ್ಟಮ್ಸ್ ಸಂಸ್ಥೆಯ ಸ್ಥಾಪಕರು, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಇವರು ಖರಗ್ ಪುರದ ಐಐಟಿಯಿಂದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ನಲ್ಲಿ ಬಿ.ಟೆಕ್ (ಹೊನೋರ್ಸ್), ಮತ್ತು ಅಮೆರಿಕದ ಇಂಡಿಯಾನಾದ ಬ್ಲೂಮಿಂಗ್ಟನ್ ನ ಇಂಡಿಯಾನಾ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಎಂ.ಎಸ್ ಮತ್ತು ಪಿಎಚ್.ಡಿ. ಪಡೆದಿರುತ್ತಾರೆ. ಇಂದು ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಮತ್ತು ಜಾಗತಿಕ ಕಂಪನಿ ಆಗಿರುವ 1990 ರಲ್ಲಿ ಪ್ರಾರಂಭವಾದ ಪೆರ್ಸಿಸ್ಟನ್ಟ್ ಸಿಸ್ಟಮ್ಸ್ ಸಂಸ್ಥೆಯ ಪ್ರೇರಕ ಶಕ್ತಿಯಾಗಿದ್ದಾರೆ.

 

Dr. Saurabh Garg, CEO, UIDAI

ಡಾ. ಸೌರಭ್ ಗರ್ಗ್

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿ.ಇ.ಒ), ಯುಐಡಿಎಐ

ಡಾ. ಸೌರಭ್ ಗರ್ಗ್ ಅವರು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಇದಕ್ಕೂ ಮೊದಲು ಅವರು ಒಡಿಶಾದ ಕೃಷಿ ಮತ್ತು ರೈತರ ಸಬಲೀಕರಣದ ಪ್ರಧಾನ ಕಾರ್ಯದರ್ಶಿಯಾಗಿದ್ದರು, ಅಲ್ಲಿ ಅವರು ಕೃಷಿಯನ್ನು ಡಿಜಿಟಲೀಕರಣಗೊಳಿಸುವ ಮತ್ತು ರೈತರಿಗೆ ನೇರ ಆದಾಯ ವರ್ಗಾವಣೆ ಯೋಜನೆಯನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡಿದ್ದಾರೆ. ಅವರು ಭಾರತ ಸರ್ಕಾರದ ಹಣಕಾಸು ಸಚಿವಾಲಯದಲ್ಲಿ ಕೆಲಸ ಮಾಡಿದ್ದಾರೆ. ಅಲ್ಲಿ ಅವರು ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್.ಐ.ಐ.ಎಫ್) ರಚನೆಯ ನೇತೃತ್ವ ವಹಿಸಿದ್ದರು; ವಿದೇಶಿ ನೇರ ಹೂಡಿಕೆ (ಎಫ್.ಡಿ.ಐ) ನೀತಿಗಳನ್ನು ಸುಧಾರಿಸುವಲ್ಲಿ ಕೆಲಸ ಮಾಡಿದ್ದರು; ಡಿಜಿಟಲ್ ಪಾವತಿಗಳಿಗೆ ಚೌಕಟ್ಟನ್ನು ಸಿದ್ಧಪಡಿಸಿದ್ದರು; ಚಿನ್ನದ ವಲಯದ ನೀತಿಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳ (ಬಿ.ಐ.ಟಿ) ಮಾತುಕತೆಗಳ ನೇತೃತ್ವ ವಹಿಸಿದ್ದರು. ಅವರು 'ಸಾಮಾಜಿಕ ಸ್ಟಾಕ್ ಎಕ್ಸ್ ಚೇಂಜ್ಗಳು'; 'ಸರಕುಗಳ ಸ್ಪಾಟ್ ಮತ್ತು ಡೆರಿವೇಟಿವ್ಸ್ ಮಾರುಕಟ್ಟೆಗಳ ಏಕೀಕರಣ'; 'ಡಿಜಿಟಲ್ ಪಾವತಿಗಳ ಉತ್ತೇಜನ'; ಮತ್ತು 'ವರ್ಚುವಲ್ / ಕ್ರಿಪ್ಟೋ ಕರೆನ್ಸಿಗಳಿಗೆ ಸಂಬಂಧಿಸಿದ ಚೌಕಟ್ಟು' - ಇವುಗಳಿಗೆ ಹಣಕಾಸು ಸಚಿವಾಲಯ, ನೀತಿ ಆಯೋಗ, ಆರ್.ಬಿ.ಐ ಮತ್ತು ಸೆಬಿ ಸ್ಥಾಪಿಸಿದ ತಜ್ಞರ ಸಮಿತಿಗಳು / ಕಾರ್ಯಗುಂಪುಗಳ ಸದಸ್ಯರಾಗಿದ್ದರು. ಅವರು ನಗರ ಮತ್ತು ಕೈಗಾರಿಕಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿರುತ್ತಾರೆ.
ಡಾ. ಗರ್ಗ್ ಅವರು ಒಡಿಶಾ ಕೇಡರ್ ನ ಐಎಎಸ್ ಅಧಿಕಾರಿಯಾಗಿದ್ದು, ಸರಕಾರದ ವಿವಿಧ ಹಂತಗಳಲ್ಲಿ - ಜಿಲ್ಲಾ, ರಾಜ್ಯ ಮತ್ತು ಕೇಂದ್ರ ಸರ್ಕಾರ ಮತ್ತು ಖಾಸಗಿ ವಲಯಗಳಲ್ಲೂ 30 ವರ್ಷಗಳ ಅನುಭವ ಹೊಂದಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತದ ಕಾರ್ಯನಿರ್ವಾಹಕ ನಿರ್ದೇಶಕರ ಕಛೇರಿಯಿಂದ ಅವರು ವಿಶ್ವ ಬ್ಯಾಂಕ್ ನಲ್ಲಿ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಅವರು ಸಾರ್ವಜನಿಕ ಕಂಪನಿಗಳ ಅಧ್ಯಕ್ಷ / ವ್ಯವಸ್ಥಾಪಕ ನಿರ್ದೇಶಕರು ಆಗಿದ್ದರು.
ಡಾ. ಗರ್ಗ್ ಅವರು ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಿಂದ "ಅಂತರರಾಷ್ಟ್ರೀಯ ಅರ್ಥಶಾಸ್ತ್ರ ಮತ್ತು ಅಭಿವೃದ್ಧಿ" ವಿಷಯದಲ್ಲಿ ಪಿಎಚ್.ಡಿ. ಹೊಂದಿದ್ದಾರೆ. ಅವರು ಅಹಮದಾಬಾದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಿಂದ ಎಂ.ಬಿ.ಎ ಪಡೆದಿದ್ದಾರೆ, ಅಲ್ಲಿ ಅವರಿಗೆ ಚಿನ್ನದ ಪದಕ ದೊರಕಿದೆ ಮತ್ತು ನವದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬಿ.ಟೆಕ್ ಪಡೆದಿದ್ದಾರೆ. ಅವರು ಲಂಡನ್ನಿನ ಸ್ಕೂಲ್ ಆಫ್ ಎಕನಾಮಿಕ್ಸ್ & ಪೊಲಿಟಿಕಲ್ ಸೈನ್ಸ್ನಲ್ಲಿ ಚಾವ್ನಿಂಗ್ ಗುರುಕುಲ ಫೆಲೋ ಆಗಿದ್ದರು.
ಅವರು ಆಡಳಿತದಲ್ಲಿನ ಆವಿಷ್ಕಾರಗಳು, ಮೂಲಸೌಕರ್ಯ ಹಣಕಾಸು ಮತ್ತು ಹಣಕಾಸು ಸೇರ್ಪಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪುಸ್ತಕಗಳಿಗೆ ಲೇಖನಗಳನ್ನು ಪ್ರಕಟಿಸಿದ್ದಾರೆ ಮತ್ತು ಅವುಗಳಿಗೆ ಕೊಡುಗೆ ಸಹ ನೀಡಿದ್ದಾರೆ.