ಆಧಾರ್ ನ ವೈಶಿಷ್ಟ್ಯತೆಗಳು

ಅಸಾಧರಣತ್ವ

ಇದನ್ನು ಜನಸಂಖ್ಯಾಶಾಸ್ತ್ರ ಹಾಗೂ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯಲ್ಲಿನ ನಕಲುಗಳನ್ನು ಹೊರತೆಗೆಯುವ ಪ್ರಕ್ರಿಯೆಯ ಮೂಲಕ ಸಾಧಿಸಲಾಗುವುದು. ನಕಲನ್ನು ಹೊರತೆಗೆಯುವ ಪ್ರಕ್ರಿಯೆಯು ನೋಂದಣಿಯ ಸಮಯದಲ್ಲಿ ಸಂಗ್ರಹಿಸಲಾದಂತಹ ನಿವಾಸಿಯ ಜನಸಂಖ್ಯಾಶಾಸ್ತ್ರ ಹಾಗೂ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ನಿವಾಸಿಯು ಈಗಾಗಲೇ ದತ್ತಸಂಚಯದಲ್ಲಿ ಇರುವರೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಭಾವಿಗುಪ್ರಾದಲ್ಲಿನ ದಾಖಲೆಗಳ ಜೊತೆಯಲ್ಲಿ ಹೋಲಿಕೆ ಮಾಡುತ್ತದೆ. ಓರ್ವ ವೈಯಕ್ತಿಕ ವ್ಯಕ್ತಿಯು ಆಧಾರ್ ಗಾಗಿ ಕೇವಲ ಒಂದು ಸಲ ಮಾತ್ರ ನೋಂದಣಿ ಮಾಡಿಸಿಕೊಳ್ಳುವ ಅಗತ್ಯತೆಯಿರುತ್ತದೆ ಹಾಗೂ ನಕಲನ್ನು ಹೊರತೆಗೆಯುವ ಪ್ರಕ್ರಿಯೆಯ ನಂತರ ಕೇವಲ ಒಂದು ಆಧಾರ ಅನ್ನು ಮಾತ್ರ ತಂತ್ರಾಂಶ ಅನ್ವಯದಿಂದ ಪಡೆಯಲಾಗುವುದು. ನಿವಾಸಿಯು ಒಂದು ಸಲಕ್ಕಿಂತ ಹೆಚ್ಚಾಗಿ ನೋಂದಣಿ ಮಾಡಿಸಿಕೊಂಡಲ್ಲಿ, ತದನಂತರದ ನೋಂದಣಿಗಳು ತಿರಸ್ಕರಿಸಲ್ಪಡುತ್ತವೆ

ಸುಲಭವಾಗಿ ಸಾಗಿಸಬಹುದಾಗಿರುವುದು

ಅದನ್ನು ಎಲ್ಲಿಯೇ ಆದರೂ ಆನ್-ಲೈನ್ ಮೂಲಕ ದೃಢೀಕರಿಸಬಹುದಾದ್ದರಿಂದ, ಆದಾರ್ ನಿಮಗೆ ಸುಲಭವಾಗಿ ಸಾಗಿಸಬಹುದಾದ ಅನುಕೂಲತೆಯನ್ನು ನೀಡುತ್ತದೆ. ಲಕ್ಷಾಂತರ ಭಾರತೀಯರು ಒಂದು ರಾಜ್ಯದಿಂದ ಮತ್ತೊಂದಕ್ಕೆ ಅಥವಾ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ, ಇತ್ಯಾದಿ ವಲಸೆ ಹೋಗುವುದರಿಂದ ಅದು ನಿರ್ಣಾಯಕವಾಗಿದೆ

ಯಾದೃಚ್ಛಿಕಸಂಖ್ಯೆ

ಆಧಾರ್ ಸಂಖ್ಯೆಯು ಒಂದು ಯಾದೃಚ್ಛಿಕ ಸಂಖ್ಯೆಯಾಗಿದ್ದು ಯಾವುದೇ ಗುಪ್ತಚರ ಮಾಹಿತಿರಹಿತವಾಗಿರುತ್ತದೆ. ನೋಂದಣಿ ಮಾಡಿಸಿಕೊಳ್ಳಲು ಸಿದ್ಧವಿರುವ ವ್ಯಕ್ತಿಯು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯ ಜೊತೆಗೆ ಕನಿಷ್ಟ ಪ್ರಮಾಣದ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಆಧಾರ್ ನೋಂದಣೀ ಪ್ರಕ್ರಿಯೆಯು ಜಾತಿ, ಮತ, ಆದಾಯ, ಆರೋಗ್ಯ, ಭೌಗೋಳಿಕ, ಇವೇ ಮುಂತಾದ ವಿವರಗಳನ್ನು ಸೆರೆಹಿಡಿಯುವುದಿಲ್ಲ

ವೃದ್ಧಿಗೊಳಿಸಬಹುದಾದ ತಾಂತ್ರಿಕ ವಿನ್ಯಾಸ

ವಿಶಿಷ್ಟ ಗುರುತು ವಿನ್ಯಾಸವು ಮುಕ್ತವಾಗಿದೆ ಹಾಗೂ ಆರೋಹಣೀಯವಾಗಿದೆ. ನಿವಾಸಿಯ ಮಾಹಿತಿಯನ್ನು ಕೇಂದ್ರೀಯವಾಗಿ ಸಂಗ್ರಹಿಸಿಡಲಾಗುವುದು ಹಾಗೂ ದೃಢೀಕರಣವನ್ನು ದೇಶದ ಯಾವುದೇ ಪ್ರದೇಶದಲ್ಲಿಯೇ ಆದರೂ ಮಾಡಬಹುದು. ಆಧಾರ್ ದೃಢೀಕರಣ ಸೇವೆಯನ್ನು ಒಂದು ದಿನಕ್ಕೆ 100 ದಶಲಕ್ಷ ದೃಢೀಕರಣಗಳನ್ನು ನಿರ್ವಹಿಸುವ ರೀತಿಯಲ್ಲಿ ನಿರ್ಮಿಸಲಾಗಿದೆ

ಮುಕ್ತ ಸಂಪನ್ಮೂಲ ತಂತ್ರಜ್ಞಾನಗಳು

ಮುಕ್ತ ಮೂಲ ತಂತ್ರಜ್ಞಾನವು, ಒಂದು ನಿರ್ದಿಷ್ಟ ಗಣಕಯಂತ್ರ ಯಂತ್ರಾಂಶ, ನಿರ್ದಿಷ್ಟ ಸಂಗ್ರಹಣೆ, ನಿರ್ದಿಷ್ಟ ಒಎಸ್, ನಿರ್ದಿಷ್ಟ ದತ್ತಸಂಚಯ ಮಾರಾಟಗಾರರು (ವೆಂಡಾರ್) ಅಥವಾ ಯಾವುದೇ ನಿರ್ದಿಷ್ಟ ಮಾರಾಟಗಾರರ (ವೆಂಡಾರ್) ಪ್ರಮಾಣಾನುಗುಣವಾದ ತಂತ್ರಜ್ಞಾನಗಳ ಮೇಲೆ ಅವಲಂಭಿಸುವುದನ್ನು ಪ್ರತಿರೋಧಿಸುತ್ತದೆ. ಅಂತಹ ತಂತ್ರಾಂಶ ಅನ್ವಯಗಳನ್ನು ಮುಕ್ತ ಮೂಲ ಅಥವಾ ಮುಕ್ತ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ನಿರ್ಮಿಸಲಾಗುವುದು ಹಾಗೂ ಮಾರಾಟಗಾರರ (ವೆಂಡಾರ್) ತಟಸ್ಥ ರೀತಿಯಲ್ಲಿ ಆರೋಹಣೀಯವಾಗುವ ರೀತಿಯಲ್ಲಿ ನಿರ್ವಹಿಸುವುದಕ್ಕಾಗ್ತಿ ಹಾಗೂ ಅದೇ ತಂತ್ರಾಂಶ ಅನ್ವಯದಲ್ಲಿ ವೈವಿಧ್ಯತೆಯುಳ್ಳಂತಹ ಯಂತ್ರಾಂಶ ಅನ್ವಯವೂ ಜೊತೆಯಲ್ಲಿರುವ ರೀತಿಯಲ್ಲಿ ರಚಿಸಲಾಗಿದೆ