ಆಧಾರ್ ಲೋಗೋ ಸಂಗ್ರಹಿಸಲಾಗಿದೆ

ಸ್ಪರ್ಧೆ

ಫೆಬ್ರವರಿ 2010ರಲ್ಲಿ ದೇಶಾದ್ಯಂತ ಆಧಾರ್ ಲಾಂಛನಕ್ಕಾಗಿ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ತದನಂತರದ ವಾರಗಳಲ್ಲಿ ದೇಶದ ಉದ್ದಗಲದಿಂದ 2000ಕ್ಕಿಂತಲೂ ಅಧಿಕ ಪ್ರವೇಶಗಳನ್ನು ಸ್ವೀಕರಿಸಲಾಯಿತು

ಗೆಲ್ಲಲ್ಪಟ್ಟ ಪ್ರವೇಶವನ್ನು ನಿರ್ಣಯಿಸುವುದಕ್ಕಾಗಿ ನಿಗದಿಗೊಳಿಸಲಾದ ಮಾನದಂಡಗಳು ಈ ಕೆಳಗಿನಂತಿದ್ದವು:

  • ಚಿಹ್ನೆಯು ಭಾವಿಗುಪ್ರಾದ ಉದ್ದೇಶ ಹಾಗೂ ಗುರಿಗಳ ಮೂಲಗುಣ/ವೈಶಿಷ್ಟ್ಯತೆಯನ್ನು ಹೊರತರತಕ್ಕದ್ದು.
  • ಚಿಹ್ನೆಯು,ಆಧಾರ್ ವೈಯಕ್ತಿಕವ್ಯಕ್ತಿಗಳಿಗೆದೇಶದಉದ್ದಗಲಕ್ಕೂಪರಿವರ್ತನೀಯಅವಕಾಶವನ್ನುಕಲ್ಪಿಸುತ್ತದೆಹಾಗೂಆರ್ಥಿಕವಾಗಿಹಿಂದುಳಿದಜನತೆಗೆಅವಕಾಶವನ್ನುಸೇವೆಗಳಿಗೆಹಾಗೂಸಂಪನ್ಮೂಲಗಳಿಗೆಸಮನಾಗಿಸುತ್ತದೆಎಂಬಸಂದೇಶವನ್ನುಸಾರತಕ್ಕದ್ದು.
  • ಚಿಹ್ನೆಯು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತಿರಬೇಕು ಹಾಗೂ ದೇಶದ ಉದ್ದಗಲಕ್ಕೂ ಅದರಲ್ಲಿರುವ ಸಂದೇಶವನ್ನು ಸಾರುವಂತಿರಬೇಕು

ಸ್ಪರ್ಧೆಗಾಗಿ ಸ್ವೀಕರಿಸಲಾದ ಚಿಹ್ನೆಯ ವಿನ್ಯಾಸಗಳ ಬಹಳಷ್ಟು ಭಾಗಗಳು, ನಾವೀನ್ಯತೆಯಿಂದ ಕೂಡಿದ್ದವು ಹಾಗೂ ಅತ್ಯಧಿಕ ಮಟ್ಟದ ಗುಣಮಟ್ಟವನ್ನು ಹೊಂದಿದ್ದವು. ಸಲ್ಲಿಸಲಾಗಿದ್ದ ವಿನ್ಯಾಸಗಳನ್ನು ಹೆಸರಾಂತ ಸಂದೇಶಗಳ ತಜ್ಞರುಗಳನ್ನು ಒಳಗೊಂಡಿದ್ದಂತಹ ಹಾಗೂ ಭಾವಿಗುಪ್ರಾದ ಒಂದು ಸಲಹಾ ತಂಡವಾಗಿರುವ“ಜಾಗೃತಿ ಹಾಗೂ ಸಂದೇಶಗಳ ಕಾರ್ಯನೀತಿ ಸಲಹಾ ಸಮಿತಿಯು ಮೌಲ್ಯಮಾಪನ ಮಾಡಿತು.

"ಸಮಿತಿಯು, ಮೇಲೆ ತಿಳಿಸಲಾದಂತಹ ಮಾನದಂಡಗಳ ಆಧಾರದ ಮೇರೆಗೆ ಅಂತಿಮ ಸುತ್ತಿಗೆ ಬಂದವರ ಸಣ್ಣ ಪಟ್ಟಿಯನ್ನು ಮಾಡಿತು. “ಅಂತಿಮ ಸುತ್ತಿಗೆ ಬಂದವರನ್ನು ಆಯ್ಕೆ ಮಾಡುವಲ್ಲಿ ಹಾಗೂಸಂಭಾವ್ಯವಾಗಿ ಗೆದ್ದವರನ್ನು ಆಯ್ಕೆ ಮಾಡುವಲ್ಲಿ ನಾವು ಕಷ್ಟಕರ ತೀರ್ಮಾನವನ್ನು ಎದುರಿಸಿದೆವು” ಎಂಬುದಾಗಿ ಸಮಿತಿಯ ಒರ್ವ ಸದಸ್ಯರಾದ ಶ್ರೀ. ಕಿರಣ್ ಖಲಾಪ್ ಹೇಳುತ್ತಾರೆ, “ಕೃತಜ್ಞತಾಪೂರ್ವಕವಾಗಿ, ವಿಷಯಕ ಮನೋಧರ್ಮ ಹಾಗೂ ಪೂರ್ವಾಗ್ರಹಪೀಡಿತಗಳನ್ನು ಕನಿಷ್ಠ ಮಟ್ಟಕ್ಕೆ ತಂದಂತಹ ಆಯ್ಕೆಗಾಗಿ ನಿಗದಿಗೊಳಿಸಲಾಗಿದ್ದ ಮಾನದಂಡಗಳ ಸ್ಥಾಪನೆಗೆ ನಾವು ಒಪ್ಪಿಕೊಂಡಿದ್ದೆವು”

ಅಂತಿಮ ಸುತ್ತಿಗೆ ಬಂದವರೆಂದರೆ:

  • ಮೈಕೆಲ್ ಫೋಲೆ
  • ಸ್ಯಾಫರನ್ ಬ್ರಾಂಡ್ ಕನ್ಸಲ್ಟೆಂಟ್ಸ್
  • ಸುಧೀರ್ ಜಾನ್ ಹೋರೋ
  • ಜಯಂತ್ ಜೈನ್ ಮತ್ತು ಮಹೇಂದ್ರ ಕುಮಾರ್
  • ಅತುಲ್ ಎಸ್. ಪಾಂಡೆ

ಈ ಕೆಳಗೆ ತೋರಿಸಲಾಗಿರುವ ಗೆಲುವನ್ನು ಪಡೆದ ವಿನ್ಯಾಸವು ಮಿ. ಅತುಲ್ ಎಸ್. ಪಾಂಡೆ, ಪುಣೆ ಇವರು ಸಲ್ಲಿಸಿರುವುದು.

winning
winning2

" ಭಾವಿಗುಪ್ರಾದ ಯೋಜನೆಗೆ ಕೊಡುಗೆಯನ್ನು ನೀಡಲು ಸಿಕ್ಕಂತಹ ಈ ಅವಕಾಶವು ನನಗೆ ಒಂದು ಅತಿದೊಡ್ಡಸುಯೋಗವಾಗಿರುತ್ತದೆ.ಎಲ್ಲರಿಗೂಅವಕಾಶ, ಎಂಬುದಾಗಿಭಾವಿಗುಪ್ರಾವುನೀಡಿರುವಆಶ್ವಾಸನೆಯನ್ನುಈಸ್ಪರ್ಧೆಯುಬಲಪಡಿಸುತ್ತದೆ, ಏಕೆಂದರೆ, ಅದುನಮ್ಮಲ್ಲಿಬಹಳಷ್ಟುಜನರಿಗೆಒಂದುನೈಜಪರಿವರ್ತನೀಯಯೋಜನೆಯಒಂದುಭಾಗವಾಗಲುಅವಕಾಶವನ್ನುನೀಡಿತುಎಂಬುದಾಗಿ ಶ್ರೀ. ಪಾಂಡೆಯವರುತಿಳಿಸಿದರು.

ಲಾಂಛನದ ಅನಾವರಣ

lounch1
lounch2
lounch3

ಆಧಾರ್ ಲಾಂಛನವನ್ನು ವಿಜ್ಞಾನ ಭವನ, ನವದೆಹಲಿ, ಇಲ್ಲಿ 26 ಏಪ್ರಿಲ್ 2010ರಂದು ಭಾವಿಗುಪ್ರಾದ ಪರಿಸರವ್ಯವಸ್ಥೆಯ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು. ಲಾಂಛನದಸ್ಪರ್ಧೆಯಲ್ಲಿ ಜಯಶೀಲರಾದ ಅತುಲ್ ಎಸ್. ಪಾಂಡೆ, ಇವರು ರೂ.1,00,000ವನ್ನು ಬಹುಮಾನವಾಗಿ ಸ್ವೀಕರಿಸಿದರು. ಅಂತಿಮ ಸುತ್ತಿಗೆ ಬಂದಿದ್ದ ಇತರೆ ನಾಲ್ವರು, ಪ್ರತಿಯೊಬ್ಬರೂ ರೂ.10,000 ದಂತೆ ಬಹುಮಾನವನ್ನು ಸ್ವೀಕರಿಸಿದರು.