SMS ಸೇವೆಯೊಂದಿಗೆ ಆಧಾರ್ ಸಂಖ್ಯೆಯನ್ನು ಲಾಕ್ ಮಾಡುವುದು/ಅನ್‌ಲಾಕ್ ಮಾಡುವುದು ಹೇಗೆ?

ಆಧಾರ್ ಸಂಖ್ಯೆಯನ್ನು ಲಾಕ್ ಮಾಡಲು:

OTP ವಿನಂತಿಯನ್ನು ಹೀಗೆ ಕಳುಹಿಸಿ -> GETOTPLAST 4 ಅಥವಾ 8 ಆಧಾರ್ ಸಂಖ್ಯೆಯ ಅಂಕೆಗಳು ನಂತರ ಲಾಕ್ ಮಾಡುವ ವಿನಂತಿಯನ್ನು ಹೀಗೆ ಕಳುಹಿಸಿ -> LOCKUID ಕೊನೆಯ 4 ಅಥವಾ 8 ಆಧಾರ್ ಸಂಖ್ಯೆ 6 DIGIT OTP

ನಿಮ್ಮ ವಿನಂತಿಗಾಗಿ ನೀವು ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ. ಒಮ್ಮೆ ಅದನ್ನು ಲಾಕ್ ಮಾಡಿದರೆ ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಯಾವುದೇ ರೀತಿಯ ದೃಢೀಕರಣವನ್ನು (ಬಯೋಮೆಟ್ರಿಕ್, ಡೆಮೊಗ್ರಾಫಿಕ್ ಅಥವಾ OTP) ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಆದಾಗ್ಯೂ, ದೃಢೀಕರಣವನ್ನು ನಿರ್ವಹಿಸಲು ನೀವು ಇನ್ನೂ ನಿಮ್ಮ ಇತ್ತೀಚಿನ ವರ್ಚುವಲ್ ಐಡಿಯನ್ನು ಬಳಸಬಹುದು.

ಆಧಾರ್ ಸಂಖ್ಯೆಯನ್ನು ಅನ್-ಲಾಕಿಂಗ್ ಮಾಡಲು ನೀವು ನಿಮ್ಮ ಇತ್ತೀಚಿನ ವರ್ಚುವಲ್ ಐಡಿಯನ್ನು ಹೊಂದಿರಬೇಕು.

ವರ್ಚುವಲ್ ಐಡಿ ಸಂಖ್ಯೆಯ ಕೊನೆಯ 6 ಅಥವಾ 10 ಅಂಕಿಗಳೊಂದಿಗೆ OTP ವಿನಂತಿಯನ್ನು -> ಎಂದು ಕಳುಹಿಸಿ

GETOTPLAST 6 ಅಥವಾ 10 ಅಂಕೆಗಳ ವರ್ಚುವಲ್ ID
ನಂತರ ಅನ್‌ಲಾಕಿಂಗ್ ವಿನಂತಿಯನ್ನು ಹೀಗೆ ಕಳುಹಿಸಿ -> UNLOCKUIDLAST 6 ಅಥವಾ 10 DIGIT ವರ್ಚುವಲ್ ID 6 DIGIT OTP