ನಾನು ಇದೀಗ ಅನಿವಾಸಿ ಭಾರತೀಯನಾಗಿರುವೆನು ಮತ್ತು ಒಂದು ಆಧಾರ್ ಅನ್ನು ಹೊಂದಿರುವೆನು. ನಾನು ಅದನ್ನು ಶಾಶ್ವತ ಖಾತೆ ಸಂಖ್ಯೆಗೆ (ಪಿ ಎ ಎನ್) ಯಾವ ರೀತಿ ಸಂಪರ್ಕಿಸಬಹುದು?

ಶಾಶ್ವತ ಖಾತೆ ಸಂಖ್ಯೆ (ಪಿ ಎ ಎನ್) ಮತ್ತು ಆಧಾರ್ ಕಾರ್ಡುಗಳನ್ನು ಸಂಪರ್ಕಿಸುವ ಸಲುವಾಗಿ, ತೆರಿಗೆದಾರರು ಆದಾಯ ತೆರಿಗೆ ಇ-ಸಲ್ಲಿಕೆ ಪೋರ್ಟಲಿನಲ್ಲಿ ಮೊದಲು ನೋಂದಣಿ ಮಾಡಿಸಿಕೊಳ್ಳತಕ್ಕದ್ದು. ಅವರು ಆ ರೀತಿ ಮಾಡಿದ ಕೂಡಲೇ, ಅವರು ಈ ಕೆಳಗಿನ ಕ್ರಮಗಳನ್ನು ಅನುಸರಿಸತಕ್ಕದ್ದು:

ಲಾಗ್-ಇನ್ ವಿಶಿಷ್ಟ ಗುರುತು, ಸಂಕೇತಪದ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ಆದಾಯ ತೆರಿಗೆ ಇಲಾಖೆಯ ಇ-ಸಲ್ಲಿಕೆ ಪೋರ್ಟಲಿಗೆ ಲಾಗ್ ಇನ್ ಆಗಿರಿ

ಜಾಲತಾಣಕ್ಕೆ ಲಾಗ್-ಇನ್ ಆದ ಕೂಡಲೇ, ನಿಮ್ಮ ಶಾಶ್ವತ ಖಾತೆ ಸಂಖ್ಯೆಯನ್ನು (ಪಿ ಎ ಎನ್) ಆಧಾರ್ ಕಾರ್ಡ್ ಜೊತೆಗೆ ಸಂಪರ್ಕಿಸಲು ನಿಮ್ಮನ್ನು ಪ್ರೇರೇಪಿಸುವ ಒಂದು ಪಾಪ್ ಅಪ್ ಗವಾಕ್ಷಿಯು ಕಾಣಿಸಿಕೊಳ್ಳುವುದು.

ನೋಂದಣಿಯ ಸಮಯದಲ್ಲಿ ನಮೂದಿಸಲಾಗಿರುವ ಹೆಸರು, ಹುಟ್ಟಿದ ದಿನಾಂಕ ಮತ್ತು ಲಿಂಗ ಮುಂತಾದ ವಿವರಗಳು ಇ-ಸಲ್ಲಿಕೆ ಪೋರ್ಟಲಿನಲ್ಲಿ ಕಾಣಿಸಿಕೊಳ್ಳುವವು.

ಪರದೆಯ ಮೇಲೆ ಕಾಣಿಸಿಕೊಂಡಂತಹ ವಿವರಗಳನ್ನು ಆಧಾರ್ ಕಾರ್ಡಿನಲ್ಲಿ ನಮೂದಿಸಲಾಗಿರುವ ವಿವರಗಳ ಜೊತೆ ಪರಿಶೀಲಿಸಿರಿ.

ವಿವರಗಳು ತಾಳೆ ಹೊಂದಿದಲ್ಲಿ, ನಿಮ್ಮ ಆಧಾರ್ ಕಾರ್ಡು ಸಂಖ್ಯೆಯನ್ನು ನಮೂದಿಸಿರಿ ಮತ್ತು “ಇದೀಗ ಸಂಪರ್ಕಿಸಿ” (ಲಿಂಕ್ ನೌ) ಗುಂಡಿಯನ್ನು ಕ್ಲಿಕ್ ಮಾಡಿರಿ.

ಒಂದು ಪಾಪ್-ಅಪ್ ಸಂದೇಶವು ನಿಮ್ಮ ಆಧಾರ್ ಕಾರ್ಡನ್ನು ಶಾಶ್ವತ ಖಾತೆ ಸಂಖ್ಯೆಗೆ (ಪಿ ಎ ಎನ್) ಯಶಸ್ವಿಯಾಗಿ ಸಂಪರ್ಕಿಸಲಾಗಿದೆ ಎಂಬುದಾಗಿ ತಿಳಿಸುತ್ತದೆ.