ನಾನು ನೋಂದಣಿ-ಪೂರ್ವ ಮಾಹಿತಿಯನ್ನು ಸ್ಥಳೀಯ ಭಾಷೆಯಲ್ಲಿ ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು?

ಈ ಸಮಯದಲ್ಲಿ ನೋಂದಣಿ-ಪೂರ್ವ ಮಾಹಿತಿಯನ್ನು ಆಂಗ್ಲ ಭಾಷೆಯಲ್ಲಿ ಪಡೆದುಕೊಳ್ಳಲು ಅನುವು ಮಾಡಲಾಗಿದೆ. ನೋಂದಣಿ ಪ್ರಕ್ರಿಯೆಯ ಸಮಯದಲ್ಲಿ, ಮಾಹಿತಿಯನ್ನು ಆಂಗ್ಲ ಭಾಷೆಯಿಂದ ಸ್ಥಳೀಯ ಭಾಷೆಗೆ ಲಿಪ್ಯಂತರಣ ಸಾಧನದಿಂದ ಪರಿವರ್ತಿಸಲಾಗುವುದು. ನಿರ್ವಾಹಕರು ಈ ಮಾಹಿತಿಯನ್ನು ನಿವಾಸಿಯ ಉಪಸ್ಥಿತಿಯಲ್ಲಿ ತಿದ್ದುಪಡಿ ಮಾಡಬಹುದು. ನೋಂದಣಿ-ಪೂರ್ವ ಮಾಹಿತಿಯನ್ನು ಆಂಗ್ಲ ಭಾಷೆಯಲ್ಲಿ ಪಡೆದುಕೊಳ್ಳುವ ರೀತಿಯಲ್ಲಿ ತಂತ್ರಾಂಶ ಅನ್ವಯವನ್ನು ಯೋಜಿಸಲಾಗಿದೆ, ಸ್ಥಳೀಯ ಭಾಷೆ ಅಥವಾ ಎರಡೂ ಭಾಷೆಗಳು ಮುಂದಿನ ಅವತರಣಿಕೆಯಲ್ಲಿರುತ್ತವೆ.

ಸ್ಥಳೀಯ ಭಾಷೆಯಲ್ಲಿ ಪಡೆದುಕೊಳ್ಳಲಾದ ನೋಂದಣಿ-ಪೂರ್ವ ಮಾಹಿತಿಗೆ, ಲಿಪ್ಯಂತರಣ ಸಾಧನದಿಂದ ಅದನ್ನು ರದ್ದುಗೊಳಿಸಲಾಗುವುದಿಲ್ಲ. ಆದಾಗ್ಯೂ, ಮಾಹಿತಿಯನ್ನು ಪರಿಷ್ಕರಿಸುವುದಕ್ಕಾಗಿ ಒಂದು ಸರಾಗವಾಗಿ ನಿರ್ವಹಿಸಬಹುದಾದ Key Pad/IME ಲಭ್ಯವಿರುತ್ತದೆ.