ಪರಿಚಯಿಸುವವರ ಜವಾಬ್ದಾರಿಗಳು ಯಾವುವು?

  • ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಯು ಪರಿಚಯಿಸುವವರನ್ನು ಗುರುತಿಸಿದ ಕೂಡಲೇ, ಪ್ರದೇಶವಾರು (ಪರಿಚಯಿಸುವವರಿಗೆ ಕೆಲಸ ಮಾಡಲು ಅನುಮತಿ ನೀಡಲಾಗಿರುವ ಜಿಲ್ಲೆ/ರಾಜ್ಯ ) ಅವರು ಪರಿಚಯಿಸುವವರ ಬಗ್ಗೆ ಅಧಿಸೂಚನೆ ಹೊರಡಿಸುವರು.
  • ಆಧಾರ್ ಕಾರ್ಯಕ್ರಮವನ್ನು ಪರಿಚಯಿಸಿಕೊಳ್ಳುವ ಸಲುವಾಗಿ ಮತ್ತು ಪರಿಚಯಿಸುವವರ ಜವಾಬ್ದಾರಿಗಳನ್ನು ಮತ್ತು ಹೊಣೆಗಾರಿಕೆಯನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಯು ಮತ್ತು ಭಾವಿಗುಪ್ರಾವು ನಡೆಸುವ ಪರಿಚಯಿಸುವವರು ಆಧಾರ್ ಬಗ್ಗೆ ಜಾಗೃತಿ ಕಾರ್ಯಾಗಾರಕ್ಕೆ ಹಾಜರಾಗತಕ್ಕದು.
  • ಗುರುತಿಸಲ್ಪಟ್ಟ ಪರಿಚಯಗಾರರು ಪರಿಚಯಗಾರರಾಗಿ ಕೆಲಸ ಮಾಡಲು ಸಿದ್ಧರಿದ್ದಲ್ಲಿ, ಆತನು/ಆಕೆಯು ಆಧಾರ್ ನೋಂದಣಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಓರ್ವ ಪರಿಚಯಗಾರರಾಗಿ ಕೆಲಸ ಮಾಡಲು ಮತ್ತು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಮತ್ತು ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಯು ಪರಿಚಯಗಾರರುಗಳಿಗಾಗಿ ನಿರ್ದಿಷ್ಟಪಡಿಸಲಾಗಿರುವ ಮಾರ್ಗಸೂಚಿಗಳು ಮತ್ತು ಕಾರ್ಯವಿಧಾನಗಳನ್ನು ಅನುಸರಿಸುವುದಾಗಿ ಒಂದು ಲಿಖಿತ ಒಪ್ಪಿಗೆಯನ್ನು ನೀಡತಕ್ಕದ್ದು.
  • ಕ್ಷೇತ್ರದಲ್ಲಿ ನಿವಾಸಿಗಳನ್ನು ಪರಿಚಯಿಸುವ ಕಾರ್ಯವನ್ನು ಪ್ರಾರಂಭಿಸುವುದಕ್ಕೆ ಮೊದಲು ಪರಿಚಯಿಸುವವರು ನೋಂದಣಿ ಮಾಡಿಸಿಕೊಂಡಿರತಕ್ಕದು ಮತ್ತು ತಮ್ಮ ಆಧಾರ್ ಸಂಖ್ಯೆಯನ್ನು ಪಡೆದಿರತಕ್ಕದ್ದು ಮತ್ತು ಒಪ್ಪಿಗೆ ನಮೂನೆಗೆ ಸಹಿ ಮಾಡಿರತಕ್ಕದ್ದು.
  • ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಯು ತಮ್ಮನ್ನು ಭಾವಿಗುಪ್ರಾದಲ್ಲಿ ಓರ್ವ ಪರಿಚಯಿಸುವವರನ್ನಾಗಿ ನೋಂದಣಿ ಮಾಡಿಸಿದೆ ಮತ್ತು ಸಕ್ರಿಯಗೊಳಿಸಿದೆ ಎಂಬುದನ್ನು ಅವರುಗಳು ಖಚಿತಪಡಿಸಿಕೊಳ್ಳತಕ್ಕದ್ದು.
  • ಪರಿಚಯಿಸುವವರು ತಮಗೆ ವಹಿಸಲಾಗಿರುವ ಸೀಮೆ/ಭೂಪ್ರದೇಶದಲ್ಲಿನ ನೋಂದಣಿ ಕೇಂದ್ರಗಳ ನೋಂದಣಿ ವೇಳಾಪಟ್ಟಿ, ನೋಂದಣಿ ಕೇಂದ್ರ ಸ್ಥಳಗಳು ಮತ್ತು ಕಾರ್ಯಾಚರಣೆಯ ಅವಧಿಗಳನ್ನು ಸ್ವತ: ತಾವೇ ಅರಿತುಕೊಂಡಿರತಕ್ಕದು.
  • ಅವರುಗಳು ತಮ್ಮ ಸಂಪರ್ಕ ಮಾಹಿತಿಯನ್ನು ನೋಂದಣೀ ಕೇಂದ್ರದಲ್ಲಿ ಸರಿಯಾಗಿ ಪ್ರದರ್ಶಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು. ಪ್ರದರ್ಶಿಸದಿದ್ದ ಪಕ್ಷದಲ್ಲಿ ಅಥವಾ ತಪ್ಪಾದ ಮಾಹಿತಿಯನ್ನು ಪ್ರದರ್ಶಿಸಿದ್ದಲ್ಲಿ, ನೋಂದಣಿ ಕೇಂದ್ರದ ಮೇಲ್ವಿಚಾರಕರನ್ನು ಪ್ರದರ್ಶಿಸಲು/ವಿವರಗಳನ್ನು ಸರಿಪಡಿಸುವಂತೆ ಕೋರತಕ್ಕದ್ದು.
  • ಪರಿಚಯಿಸುವವರು ನಿವಾಸಿಗಳಿಗೆ ಸುಲಭವಾಗಿ ಸಿಗುವಂತಿರಬೇಕು.
  • ಪರಿಚಯಿಸುವವರು ನೋಂದಣಿಯ ನಮೂನೆಯಲ್ಲಿ ಯಥಾರ್ಥತೆಗಾಗಿ ಮತ್ತು ಪರಿಪೂರ್ಣತೆಗಾಗಿ ನಿವಾಸಿಯ ಹೆಸರು ಮತ್ತು ವಿಳಾಸವನ್ನು ಪರಿಶೀಲಿಸತಕ್ಕದ್ದು. ಪರಿಶೀಲಿಸುವವರು ಆತನ/ಆಕೆಯ ಸ್ವಂತ ವಿವರಗಳನ್ನು ನಮೂನೆಯಲ್ಲಿ ಪರಿಶೀಲಿಸತಕ್ಕದ್ದು ಮತ್ತು ತದನಂತರ ಆತನ/ಆಕೆಯ ಸಹಿಯನ್ನು/ಹೆಬ್ಬೆಟ್ಟು ಬೆರಳು ಮುದ್ರಿಕೆಯನ್ನು ನೋಂದಣಿ ನಮೂನೆಯಲ್ಲಿ ಅನುವು ಮಾಡಿರುವ ಅಂಕಣ/ಕ್ಷೇತ್ರದಲ್ಲಿ ಹಾಕತಕ್ಕದ್ದು.
  • ಪರಿಚಯಿಸುವವರು ನಿವಾಸಿಗಳನ್ನು ಪರಿಚಯಿಸುವುದಕ್ಕಾಗಿ ನೋಂದಣಿ ಕೇಂದ್ರದ ಕೆಲಸದ ಅವಧಿಯಲ್ಲಿ ಸ್ವತ: ತಾವೇ ಲಭ್ಯವಿರುವಂತೆ ನೋಡಿಕೊಳ್ಳತಕ್ಕದ್ದು. ಒಂದು ವೇಳೆ ಕಾರ್ಯಾಚರಣೆಯ ವೇಳೆಯಲ್ಲಿ ಅವರು ಲಭ್ಯವಿರದಿದ್ದಲ್ಲಿ, ಅವರುಗಳು ದಿನದ ಅಂತ್ಯದಲ್ಲಿ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬಹುದು ಮತ್ತು ತಮ್ಮ ಹಿಂಬರಹ/ಅನುಮೋದನೆಗಾಗಿ ಬಾಕಿಯಿರುವ ನಿವಾಸಿಗಳ ಪಟ್ಟಿಯನ್ನು ಪರಿಶೀಲಿಸತಕ್ಕದ್ದು.
  • ಪರಿಚಯಿಸುವವರು ನಿವಾಸಿಯ ಹೆಸರು ಮತ್ತು ವಿಳಾಸದ ವಿವರಗಳನ್ನು ಜಾಗರೂಕತೆಯಿಂದ ಪರಿಶೀಲಿಸತಕ್ಕದ್ದು ಮತ್ತು ತಮ್ಮ ಅನುಮೋದನೆಯನ್ನು/ತಿರಸ್ಕಾರವನ್ನು ನೀಡತಕ್ಕದ್ದು.
  • ಪರಿಚಯಿಸುವವರು ನಿವಾಸಿಯ ನೋಂದಣಿಗೆ ಸಮ್ಮತಿಸುವ ಸಲುವಾಗಿ ತಮ್ಮ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಆಧಾರ್ ಕ್ಲೈಂಟಿಗೆ ನೀಡತಕ್ಕದ್ದು.
  • ಪರಿಚಯಿಸುವವರು ಒಪ್ಪಿಗೆ ಪತ್ರದ ಮುದ್ರಣವು ಅಗತ್ಯ ಹೊಂದಿರುವಲ್ಲಿ ಪರಿಚಯಿಸುವವರು ನೋಂದಣಿಗಾಗಿ ಒಪ್ಪಿಗೆ ಪತ್ರದ ಮೇಲೆ ಸಹಿ ಮಾಡುವರು/ಬೆರಳುಮುದ್ರಿಕೆಯನ್ನು ನೀಡುವರು.
  • ಪರಿಚಯಿಸುವವರು ತಾವು ಪರಿಚಯಿಸುವ ನಿವಾಸಿಯ ಗುರುತನ್ನು ಮತ್ತು ವಿಳಾಸವನ್ನು ಖಚಿತಪಡಿಸುವರು.
  • ಪರಿಚಯಿಸುವವರು, ಗುರುತಿನ ಅಥವಾ ವಿಳಾಸದ ದಾಖಲೆಗಳ ಸಾಕ್ಷಾಧಾರಗಳನ್ನು ಹೊಂದಿರದ ನಿವಾಸಿಗಳನ್ನು ಮಾತ್ರ ಪರಿಚಯಿಸತಕ್ಕದ್ದು.
  • ಪರಿಚಯಿಸುವವರು, ತಮ್ಮನ್ನು ಸಂಪರ್ಕಿಸುವ ಎಲ್ಲಾ ವ್ಯಕ್ತಿಗಳನ್ನೂ ಪರಿಚಯಿಸಬೇಕೆಂಬ ನಿರ್ಬಂಧವನ್ನು ಹೊಂದಿರುವುದಿಲ್ಲ.
  • ಪರಿಚಯಿಸುವವರು ನಿವಾಸಿಗಳನ್ನು ಪರಿಚಯಿಸುವುದಕ್ಕೆ ಶುಲ್ಕಗಳನ್ನು ವಿಧಿಸುವಂತಿಲ್ಲ. ಆದಾಗ್ಯೂ, ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಯು ಈ ಕೆಲಸಕ್ಕಾಗಿ ಅವರಿಗೆ ಒಂದು ಸಂಭಾವನೆಯನ್ನು ನಿಗದಿಗೊಳಿಸಬಹುದು.