ಆಧಾರ್ ಗಾಗಿ ನಾನು ಎಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು?

ಆಧಾರ್ ನೋಂದಣಿಗಾಗಿ ನೋಂದಣಿ ಸಂಸ್ಥೆಯಿಂದ ಸ್ಥಾಪಿಸಲ್ಪಟ್ಟಿರುವ ಒಂದು ಆಧಾರ್ ನೋಂದಣಿ ಕೇಂದ್ರಕ್ಕೆ ನೀವು ಭೇಟಿ ಕೊಡುವ ಅಗತ್ಯತೆಯಿರುತ್ತದೆ. “ನೋಂದಣಿ ಕೇಂದ್ರವನ್ನು ಗುರುತಿಸಿ” “Locate Enrolment Center” ಅಥವಾhttps://appointments.uidai.gov.in/easearch.aspx ಇವುಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮಗೆ ಅತೀ ಸಮೀಪದ ನೋಂದಣಿ ಕೇಂದ್ರವನ್ನು ಹುಡುಕಬಹುದು. ಅತೀ ಸಮೀಪದ ನೋಂದಣಿ ಕೇಂದ್ರವನ್ನು ಹುಡುಕುವ ಸಲುವಾಗಿ ನೀವು ರಾಜ್ಯ, ಜಿಲ್ಲೆ ಮತ್ತು ಸ್ಥಳ/ಬಡಾವಣೆಯನ್ನು ಊಡಿಕೆ ಮಾಡುವ ಅಗತ್ಯತೆಯಿರುತ್ತದೆ.