ನಾನು ನನ್ನ ನೋಂದಣಿ ವಿಶಿಷ್ಟ ಗುರುತು ಚೀಟಿ/ಆಧಾರ್ ಪತ್ರವನ್ನು ಕಳೆದುಕೊಂಡಿರುವೆನು, ಅದನ್ನು ಪತ್ತೆಹಚ್ಚಲು ಯಾವುದಾದರೂ ಮಾರ್ಗೋಪಾಯಗಳಿವೆಯೇ?

ಹೌದು, ನಿಮ್ಮ ಮೊಬೈಲು ಸಂಖ್ಯೆಯನ್ನು ಆಧಾರ್ ನಲ್ಲಿ ನೋಂದಣಿ ಮಾಡಿಸಿದ್ದಲ್ಲಿ, uidai.gov.in website ಅಥವಾ https://resident.uidai.gov.in/lost-uideid. ಜಾಲತಾಣದಲ್ಲಿ ““Retrieve Lost UID/EID” ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ನೋಂದಣಿ ಸಂಖ್ಯೆಯನ್ನು ಕಂಡುಕೊಳ್ಳಬಹುದು. ನೀವು ಪುನರ್-ಪಡೆದುಕೊಳ್ಳಬಯಸಿರುವ ನೋಂದಣಿ ಗುರುತಿನ ಸಂಖ್ಯೆ (ಇಐಡಿ)/ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿ)ಯನ್ನು ಆಯ್ಕೆ ಮಾಡಿಕೊಳ್ಳಿರಿ ಮತ್ತು ಆನಂತರ ನಿಮ್ಮ ಹೆಸರು ಮತ್ತು ಮೊಬೈಲು ಸಂಖ್ಯೆಯನ್ನು (ಆಧಾರ್ ನೋಂದಣಿಯ ಸಮಯದಲ್ಲಿ ನೋಂದಣಿ ಮಾಡಿಸಲಾಗಿರುವ ಸಂಖ್ಯೆ) ಊಡಿಕೆ ಮಾಡಿರಿ. ನೀವು ನಿಮ್ಮ ನೋಂದಣಿ ಗುರುತಿನ ಸಂಖ್ಯೆ (ಇಐಡಿ)/ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿ)ಯನ್ನು ನಿಮ್ಮ ಇಮೈಲು/ಮೊಬೈಲು ಸಂಖ್ಯೆಯಲ್ಲಿ ಸ್ವೀಕರಿಸುವಿರಿ. ಆಧಾರ್ ನಲ್ಲಿ ನಿಮ್ಮ ಮೊಬೈಲು ಸಂಖ್ಯೆಯನ್ನು ನೋಂದಣಿ ಮಾಡಿಸಿಲ್ಲವಾದಲ್ಲಿ, ನೀವು ನಿಮ್ಮ ಅತೀ ಸಮೀಪದ ಶಾಶ್ವತ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ಕೊಡಬೇಕಾಗುತ್ತದೆ.