ಆಧಾರ್ ನೋಂದಣಿಗಾಗಿ ಅಗತ್ಯವಿರುವ ದಾಖಲೆಗಳನ್ನು ನಾನು ಹೊಂದಿರುವುದಿಲ್ಲ, ಆದಾಗ್ಯೂ ನಾನು ನೋಂದಣಿ ಮಾಡಿಸಬಹುದೆ?

ಹೌದು, ಒಂದು ಕುಟುಂಬದಲ್ಲಿ ಯಾರಾದರೂ ಅಗತ್ಯ ದಾಖಲೆಗಳನ್ನು ಹೊಂದಿಲ್ಲವಾದಲ್ಲಿ, ಹಾಗಿದ್ದೂ ನಿವಾಸಿಯು ಆತನ/ಆಕೆಯ ಹೆಸರು ಕುಟುಂಬದ ಅರ್ಹತೆಯ ದಾಖಲೆಯಲ್ಲಿ ಇದ್ದಲ್ಲಿ ನಿವಾಸಿಯು ನೋಂದಣಿ ಮಾಡಿಸಿಕೊಳ್ಳಬಹುದು. ಇಂತಹ ಪ್ರಕರಣದಲ್ಲಿ, ಅರ್ಹತೆಯ ದಾಖಲೆಯಲ್ಲಿನ ಕುಟುಂಬದ ಮುಖ್ಯಸ್ಥರು ಊರ್ಜಿತ ಗುರುತಿನ ಸಾಕ್ಷಾಧಾರ ಮತ್ತು ವಿಳಾಸದ ಸಾಕ್ಷಾಧಾರಗಳೊಂದಿಗೆ ಮೊದಲು ನೋಂದಣಿ ಮಾಡಿಸಿಕೊಳ್ಳತಕ್ಕದ್ದು ಮತ್ತು ತದನಂತರ ಕುಟುಂಬದ ಮುಖ್ಯಸ್ಥರ ಗುರುತಿನ ಸಾಕ್ಷಾಧಾರ ಮತ್ತು ವಿಳಾಸದ ಸಾಕ್ಷಾಧಾರಗಳ ಆಧಾರದ ಮೇರೆಗೆ ಕುಟುಂಬದ ಇತರೆ ಸದಸ್ಯರು ನೋಂದಣಿ ಮಾಡಿಸಿಕೊಳ್ಳತಕ್ಕದ್ದು. ಭಾವಿಗುಪ್ರಾವು ಸಂಬಂಧದ ಸಾಕ್ಷಾಧಾರವನ್ನಾಗಿ 8 ದಾಖಲೆ ಮಾದರಿಗಳನ್ನು ಒಪ್ಪಿಕೊಳ್ಳುತ್ತದೆ. ರಾಷ್ಟ್ರೀಯವಾಗಿ ಊರ್ಜಿತವಾಗಿರುವ ದಾಖಲೆಗಳ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ.