ಆತನ/ಆಕೆಯ ನೋಂದಣಿಯು ತಿರಸ್ಕೃತಗೊಳ್ಳುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವಲ್ಲಿ ನಿವಾಸಿಯ ಜವಾಬ್ದಾರಿಗಳು ಯಾವುವು?

ನಿವಾಸಿಯು ಆತನ/ಆಕೆಯ ವಿವರಗಳನ್ನು ಆಂಗ್ಲ ಭಾಷೆಯಲ್ಲಿ ಮಾತ್ರವಲ್ಲದೆಯೇ ಸ್ಥಳೀಯ ಭಾಷೆಯಲ್ಲಿ ಆತನ/ಆಕೆಯ ಎದುರು ಲಭ್ಯವಿರುವ ಗಣಕಯಂತ್ರ ಪರದೆಯ ಮೇಲೆ ಗಮನಿಸುವ ಮೂಲಕ ಸಮೀಕ್ಷಿಸತಕ್ಕದ್ದು. ಹೆಸರು, ಲಿಂಗ, ಹುಟ್ಟಿದ ದಿನಾಂಕ, ವಿಳಾಸ, ಇತ್ಯಾದಿಗಳು ಸರಿಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು. ಮಿ. ಮಿಸೆಸ್/ಕರ್ನಲ್/ಡಾ. ಇತ್ಯಾದಿ ಪದವಿಸೂಚಕ/ಅಧಿಕಾರ ಸೂಚಕಗಳನ್ನು ಹೆಸರಿನ ಮುಂದೆ ಅಥವಾ ಹಿಂದೆ ಸೇರಿಸಲಾಗಿದೆ ಎಂಬುದನ್ನೂ ಸಹ ಖಚಿತಪಡಿಸಿಕೊಳ್ಳತಕ್ಕದ್ದು. ಉಪನಾಮದ ಮೊದಲ ಅಕ್ಷರಗಳನ್ನು ಮಾತ್ರ ನೀಡುವ ಬದಲು ಸಂಪೂರ್ಣ ಹೆಸರನ್ನು ನೀಡತಕ್ಕದ್ದು, ಉದಾಹರಣೆಗೆ ಬಿ.ಕೆ. ಶರ್ಮ ಎಂಬುದನ್ನು ಬ್ರಿಜ್ ಕುಮಾರ್ ಶರ್ಮ ಎಂಬುದಾಗಿ ಬರೆಯತಕ್ಕದ್ದು. ನಿರ್ವಾಹಕರು ಸೆರೆ ಹಿಡಿದ ಛಾಯಾಚಿತ್ರವು ಸರಿಯಾಗಿದೆ ಮತ್ತು ಗುರುತಿಸಬಹುದಾಗಿದೆ ಎಂಬುದನ್ನು ಸಮೀಕ್ಷಿಸತಕ್ಕದ್ದು.