ಕುಟುಂಬದ ನೋಂದಣಿಗಳಿಗಾಗಿ ಅನುಸರಿಸಬೇಕಾದ ಪ್ರಕ್ರಿಯೆಗಳನ್ನು ಭಾವಿಗುಪ್ರಾವು ವಿವರಿಸಿದೆಯೆ?

ಹೌದು, ಕುಟುಂಬದ ಮುಖ್ಯಸ್ಥರು ತಪ್ಪದೇ ಗುರುತಿನ ಸಾಕ್ಷಾಧಾರ/ವಿಳಾಸದ ಸಾಕ್ಷಾಧಾರಗಳನ್ನು ಪರಿಶೀಲನೆಗಾಗಿ ತರತಕ್ಕದ್ದು ಮತ್ತು ಕುಟುಂಬದ ಅರ್ಹತೆಯ ದಾಖಲೆಯ ಆಧಾರದ ಮೇರೆಗೆ ಮಾತ್ರ ಅದರಲ್ಲಿ ದಾಖಲಿಸಲಾಗಿರುವ ಹೆಸರುಗಳು ಮತ್ತು ಇತರೆ ವಿವರಗಳನ್ನು ಆಧರಿಸಿ ನೋಂದಣಿಯನ್ನು ಮಾಡಬಹುದು. ಕುಟುಂಬದ ನೋಂದಣಿಗಾಗಿ, ಕುಟುಂಬದ ಸದಸ್ಯರು ಸಾದ್ಯವಾದಷ್ಟು ಮಟ್ಟಿಗೆ ಒಟ್ಟಾಗಿ ಬರುವುದು ಅಪೇಕ್ಷಣೀಯ. ಒಂದು ವೇಳೆ ಎಲ್ಲಾ ಸದಸ್ಯರು ಒಂದೇ ದಿನ ಒಟ್ಟಾಗಿ ಬರಲು ಸಾಧ್ಯವಾಗದಿದ್ದಲ್ಲಿ ಕುಟುಂಬದ ಮುಖ್ಯಸ್ಥರು ಕುಟುಂಬದ ಸದಸ್ಯರ ಪೈಕಿ ಆತನು/ಆಕೆಯು ಬಂದಾಗಲೆಲ್ಲಾ ಅವರ ಜೊತೆಗೆ ಬರತಕ್ಕದ್ದು.