ವಿಳಾಸದ ಸಾಕ್ಷಾಧಾರದಲ್ಲಿ ಸೂಚಿಸಲಾಗಿರುವ ವಿಳಾಸವು ಅಂಚೆ ವಿತರಣೆಗೆ ಅಸಮರ್ಪಕವೆಂಬುದಾಗಿ ಕಂಡುಬಂದಲ್ಲಿ ಇರುವ ಆಯ್ಕೆ ಯಾವುದು? ನಿವಾಸಿಗಳಿಂದ ಹೆಚ್ಚುವರಿ ಮಾಹಿತಿಯನ್ನು ಒಪ್ಪಿಕೊಳ್ಳಬಹುದೆ?

ಹೌದು, ಮನೆ ಸಂಖ್ಯೆ, ಮಾರ್ಗದ ಸಂಖ್ಯೆ ಬೀದಿಯ ಹೆಸರು, ಬೆರಳಚ್ಚಿನ ತಪ್ಪುಗಳನ್ನು ಸರಿಪಡಿಸುವುದು, ಅಪ್ರಧಾನ ಬದಲಾವಣೆಗಳು, ಪಿನ್ ಕೋಡಿಗೆ ತಿದ್ದುಪಡಿ, ಇತ್ಯಾದಿ ಅಪ್ರಧಾನ ಕ್ಷೇತ್ರಗಳನ್ನು ವಿಳಾಸದ ಸಾಕ್ಷಾಧಾರದಲ್ಲಿನ ವಿಳಾಸಕ್ಕೆ ಸೇರಿಸಲು, ಈ ಸೇರ್ಪಡೆಗಳು/ಮಾರ್ಪಾಡುಗಳು ವಿಳಾಸದ ಸಾಕ್ಷಾಧಾರದಲ್ಲಿ ನಮೂದಿಸಲಾಗಿರುವ ಮೂಲ ವಿಳಾಸವನ್ನು ಬದಲಾಯಿಸದವರೆಗೆ ನಿವಾಸಿಗೆ ಅನುವು ಮಾಡಿಕೊಡಬಹುದು. ಕೋರಲಾಗಿರುವ ಬದಲಾವಣೆಗಳು ಗಮನಾರ್ಹವಾಗಿದ್ದಲ್ಲಿ ಮತ್ತು ವಿಳಾಸದ ಸಾಕ್ಷಾಧಾರದಲ್ಲಿ ಪಟ್ಟಿ ಮಾಡಲಾಗಿರುವ ಮೂಲ ವಿಳಾಸವನ್ನು ಬದಲಾಯಿಸಿದಲ್ಲಿ, ನಿವಾಸಿಯು ಬದಲಿ ವಿಳಾಸದ ಸಾಕ್ಷಾಧಾರವನ್ನು ಒದಗಿಸುವ ಅಥವಾ ಪರಿಚಯಿಸುವವರ ಮೂಲಕ ನೋಂದಣಿ ಮಾಡಿಸುವ ಅಗತ್ಯತೆಯಿರುತ್ತದೆ.