ಬಯೋಮೆಟ್ರಿಕ್ಸ್ ಅನ್ನು ಅನ್ಲಾಕ್ ಮಾಡುವುದು ಹೇಗೆ?

ಒಮ್ಮೆ ನಿವಾಸಿಯು ಬಯೋಮೆಟ್ರಿಕ್ ಲಾಕಿಂಗ್ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದರೆ ಆಧಾರ್ ಹೊಂದಿರುವವರು ಕೆಳಗೆ ನಮೂದಿಸಿದ ಯಾವುದೇ ಆಯ್ಕೆಯನ್ನು ಆರಿಸುವವರೆಗೆ ಅವರ ಬಯೋಮೆಟ್ರಿಕ್ ಲಾಕ್ ಆಗಿರುತ್ತದೆ:

ಅದನ್ನು ಅನ್ಲಾಕ್ ಮಾಡಿ (ಇದು ತಾತ್ಕಾಲಿಕವಾಗಿದೆ) ಅಥವಾ
ಲಾಕಿಂಗ್ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿ

ಬಯೋಮೆಟ್ರಿಕ್ ಅನ್ಲಾಕ್ ಅನ್ನು ನಿವಾಸಿಗಳು ಭೇಟಿ ನೀಡುವ ಮೂಲಕ ಮಾಡಬಹುದು. UIDAI ವೆಬ್‌ಸೈಟ್, ದಾಖಲಾತಿ ಕೇಂದ್ರ, ಆಧಾರ್ ಸೇವಾ ಕೇಂದ್ರ(ASK), m-Aadhaar ಮೂಲಕ.

ಗಮನಿಸಿ: ಈ ಸೇವೆಯನ್ನು ಪಡೆಯಲು ನೋಂದಾಯಿತ ಮೊಬೈಲ್ ಸಂಖ್ಯೆ ಅತ್ಯಗತ್ಯ. ನಿಮ್ಮ ಮೊಬೈಲ್ ಸಂಖ್ಯೆಯು ಆಧಾರ್‌ನೊಂದಿಗೆ ನೋಂದಾಯಿಸದಿದ್ದಲ್ಲಿ ಹತ್ತಿರದ ದಾಖಲಾತಿ ಕೇಂದ್ರ/ಮೊಬೈಲ್ ಅಪ್‌ಡೇಟ್ ಎಂಡ್ ಪಾಯಿಂಟ್‌ಗೆ ಭೇಟಿ ನೀಡಿ .