ಆಧಾರ್ ಎಂದರೆ ಏನು?keyboard_arrow_down
ಆಧಾರ್ ಎಂದರೆ ಭಾರತೀಯ ಅನೇಕ ಭಾಷೆಗಳಲ್ಲಿ ಆಧಾರ ಅಥವಾ ಅಡಿಪಾಯ ಎಂಬ ಅರ್ಥವನ್ನು ಕೊಡುತ್ತದೆ, ಭಾವಿಗುಪ್ರಾವು ನೀಡುವ ವಿಶಿಷ್ಟ ಗುರುತಿನ ಸಂಖ್ಯೆಗೆ ಆ ಹೆಸರಿನಿಂದ ಕರೆಯಲ್ಪಡುತ್ತದೆ. ಅದನ್ನು ಅವರ ವೈಯಕ್ತಿಕ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಗೆ ಸಂಪರ್ಕಿಸಲಾಗುವುದರಿಂದ ಒಂದು ನಕಲು ಸಂಖ್ಯೆಯನ್ನು ಸಾಧ್ಯವಿರುವುದಿಲ್ಲ, ಅದರಿಂದಾಗಿ ಸೋರಿಕೆಗಳಲ್ಲಿ ಪರಿಣಮಿಸುವಂತಹ ನಕಲು ಮತ್ತು ಖೋಟ ಗುರುತುಗಳನ್ನು ಪತ್ತೆಹಚ್ಚಬಹುದು. ಆಧಾರ್-ಆಧಾರಿತ ಗುರುತಿಸುವಿಕೆಯ ಮೂಲಕ ನಕಲುಗಳು ಮತ್ತು ಖೋಟಾಗಳನ್ನು ತೊಡೆದುಹಾಕುವುದರಿಂದ ಮಾಡಬಹುದಾದ ಉಳಿತಾಯಗಳನ್ನು ಇತತೆ ಅರ್ಹ ನಿವಾಸಿಗಳಿಗೆ ವಿಸ್ತರಿಸುವಲ್ಲಿ ಸರ್ಕಾರಕ್ಕೆ ಅನುಕೂಲತೆಯನ್ನು ಕಲ್ಪಿಸಬಹುದು..
ಆಧಾರ್ ನ ವೈಲಕ್ಷಣಗಳು ಮತ್ತು ಪ್ರಯೋಜನಗಳು ಯಾವುವು?keyboard_arrow_down
ಏಕೈಕ ಆಧಾರ್: ಆಧಾರ್ ಒಂದು ವಿಶಿಷ್ಟ ಸಂಖ್ಯೆಯಾಗಿದೆ, ಮತ್ತು ಅದನ್ನು ಅವರ ವೈಯಕ್ತಿಕ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಗೆ ಸಂಪರ್ಕಿಸಲಾಗುವುದರಿಂದ ಯಾವುದೇ ನಿವಾಸಿಯೂ ಒಂದು ನಕಲು ಸಂಖ್ಯೆಯನ್ನು ಹೊಂದಿರಲು ಸಾಧ್ಯವಿರುವುದಿಲ್ಲ. ಅದರಿಂದಾಗಿ ಸೋರಿಕೆಗಳಲ್ಲಿ ಪರಿಣಮಿಸುವಂತಹ ನಕಲು ಮತ್ತು ಖೋಟ ಗುರುತುಗಳನ್ನು ಪತ್ತೆಹಚ್ಚಬಹುದು. ಆಧಾರ್-ಆಧಾರಿತ ಗುರುತಿಸುವಿಕೆಯ ಮೂಲಕ ನಕಲುಗಳು ಮತ್ತು ಖೋಟಾಗಳನ್ನು ತೊಡೆದುಹಾಕುವುದರಿಂದ ಮಾಡಬಹುದಾದ ಉಳಿತಾಯಗಳನ್ನು ಇತತೆ ಅರ್ಹ ನಿವಾಸಿಗಳಿಗೆ ವಿಸ್ತರಿಸುವಲ್ಲಿ ಸರ್ಕಾರಕ್ಕೆ ಅನುಕೂಲತೆಯನ್ನು ಕಲ್ಪಿಸಬಹುದು..
ಸುಲಭವಾಗಿ ಒಯ್ಯಲಾಗುವಿಕೆ: ಆಧಾರ್ ಒಂದು ಸಾರ್ವತ್ರಿಕ/ಸರ್ವವ್ಯಾಪಿ ಸಂಖ್ಯೆಯಾಗಿರುತ್ತದೆ ಮತ್ತು ಸಂಸ್ಥೆಗಳು ಮತ್ತು ಸೇವೆಗಳನ್ನು ಒದಗಿಸುವವರು ಓರ್ವ ಫಲಾನುಭವಿಯ ಗುರುತನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ದೇಶದ ಯಾವುದೇ ಸ್ಥಳದಲ್ಲಿಯೂ ಕೇಂದ್ರ ವಿಶಿಷ್ಟ ಗುರುತು ದತ್ತಸಂಚಯವನ್ನು ಸಂಪರ್ಕಿಸಬಹುದು.
ಪ್ರಸ್ತುತ ಯಾವುದೇ ಗುರುತು ದಾಖಲೆಗಳನ್ನು ಹೊಂದಿರದವರನ್ನು ಸೇರ್ಪಡೆಗೊಳಿಸುವಿಕೆ: : ಆರ್ಥಿಕವಾಗಿ ಹಿಂದುಳಿದ ಮತ್ತು ಸಮಾಜದಲ್ಲಿ ಕಡೆಗಣನೆಗೆ ಒಳಗಾದ ನಿವಾಸಿಗಳಿಗೆ ಪ್ರಯೋಜನಗಳನ್ನು ತಲುಪಿಸುವಲ್ಲಿನ ಒಂದು ಸಮಸ್ಯೆಯೆಂದರೆ, ಅವರುಗಳು ಸಾಮಾನ್ಯವಾಗಿ ಗುರುತಿನ ದಾಖಲೆಗಳನ್ನು ಅವರುಗಳು ಸಾಮಾನ್ಯವಾಗಿ ಹೊಂದಿರುವುದಿಲ್ಲ, ಭಾವಿಗುಪ್ರಾಕ್ಕಾಗಿ ಮಾಹಿತಿಯ ಪರಿಶೀಲನೆಗಾಗಿ ಅನುಮೋದಿಸಲ್ಪಟ್ಟಿರುವ “ಪರಿಚಯಗಾರ”ರ ವ್ಯವಸ್ಥೆಯು ಅಂತಹ ನಿವಾಸಿಗಳಿಗೆ ಗುರುತನ್ನು ಸಾಬೀತುಪಡಿಸಲು ಅನುಕೂಲ ಕಲ್ಪಿಸುತ್ತದೆ.
ವಿದ್ಯುನ್ಮಾನೀಯ ಪ್ರಯೋಜನಗಳ ವರ್ಗಾವಣೆ: ವಿಶಿಷ್ಟ ಗುರುತು-ಸಾಧ್ಯತೆಯಿರುವ-ಬ್ಯಾಂಕು ಖಾತೆ ಜಾಲತಾಣವು ಪ್ರಯೋಜನಗಳ ವಿತರಣೆಯಲ್ಲಿ ಇಂದಿನ ದಿನಗಳಲ್ಲಿ ಇರುವಂತಹ ಅಧಿಕ ವೆಚ್ಚಗಳು ಇಲ್ಲದಂತೆ ಮಾಡಿ ನಿವಾಸಿಗಳ ಬ್ಯಾಂಕು ಖಾತೆಗೆ ಪ್ರಯೋಜನಗಳನ್ನು ಜಮೆ ಮಾಡುತ್ತದೆ ಅಲ್ಲದೆಯೇ ತತ್ಪರಿಣಾಮವಾಗಿ ಪ್ರಸ್ತುತ ವ್ಯವಸ್ಥೆಯಲ್ಲಿ ಇರುವಂತಹ ಸೋರಿಕೆಗಳನ್ನು ತಡೆಯುತ್ತದೆ.
ಫಲಾನುಭವಿಗೆ ಅರ್ಹತೆಗಳ ವಿತರಣೆಗಳ ಆಧಾರ್-ಆಧಾರಿತ ದೃಢೀಕರಿಸುವಿಕೆ: ಓರ್ವ ನಿವಾಸಿಯ ಗುರುತನ್ನು ದೃಢೀಕರಣದ ಆಶಯವನ್ನು ವ್ಯಕ್ತಪಡಿಸುವ ಸಂಸ್ಥೆಗಳಿಗೆ ಭಾವಿಗುಪ್ರಾವು ಆನ್ ಲೈನ್ ದೃಢೀಕರಣ ಸೇವೆಗಳನ್ನು ನೀಡುತ್ತದೆ, ಈ ಸೇವೆಯು, ಉದ್ದೇಶಿತ ಫಲಾನುಭವಿಗೆ ಅರ್ಹತೆಗಳು ವಾಸ್ತವಿಕವಾಗಿ ತಲುಪಿದ್ದನ್ನು ಖಚಿತಪಡಿಸಿಕೊಳ್ಳಲು ಅನುಕೂಲ ಕಲ್ಪಿಸುತ್ತದೆ. ಅಧಿಕಗೊಳಿಸಲ್ಪಟ್ಟ ಪಾರದರ್ಶಕತೆಯ ಮೂಲಕ ಉತ್ತಮಗೊಳಿಸಲ್ಪಟ್ಟ ಸೇವೆಗಳು: ಒಂದು ಸುಸ್ಪಷ್ಟ ಉತ್ತರದಾಯಿತ್ವ ಮತ್ತು ಪಾರದರ್ಶಕತೆಯಿಂದ ಕೂಡಿದ ಮೇಲ್ವಿಚಾರಣೆಯು ಫಲಾನುಭವಿಗಳ ಅರ್ಹತೆಗಳ ಸುಲಭಗಮ್ಯತೆಯನ್ನು ಮತ್ತು ಗುಣಮಟ್ಟವನ್ನು ಗಮನಾರ್ಹವಾಗಿ ಉತ್ತಮಗೊಳಿಸುತ್ತದೆ, ಅದೇ ರೀತಿಯಲ್ಲಿ ಸೇವೆಗಳನ್ನು ಒದಗಿಸುವ ಸಂಸ್ಥೆಗಳಿಗೆ ಸಂಬಂಧಿಸಿದಂತೆಯೂ ಕೂಡ.
ಸ್ವಯಂ-ಸೇವೆಯು ನಿವಾಸಿಗಳನ್ನು ನಿಯಂತ್ರಣದಲ್ಲಿಡುತ್ತದೆ: : ಆಧಾರ್ ಅನ್ನು ಒಂದು ದೃಢೀಕರಣ ವ್ಯವಸ್ಥೆಯನ್ನಾಗಿ ಬಳಸಿಕೊಂಡು, ನಿವಾಸಿಗಳು ತಮ್ಮ ಅರ್ಹತೆಯ ಬಗ್ಗೆ ಇತ್ತೀಚಿನವರೆಗಿನ ಮಾಹಿತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗಿರತಕ್ಕದ್ದು, ಸೇವೆಗಳ ಪೂರೈಕೆಗಾಗಿ ಒತ್ತಾಯಿಸುವಂತಿರಬೇಕು ಮತ್ತು ತಮ್ಮ ಮೊಬೈಲು ದೂರವಾಣಿ, ಕಿಯಾಸ್ಕೋ ಮತ್ತಿತರ ಮಾರ್ಗಗಳ ಮೂಲಕ ತಮ್ಮ ಕುಂದುಕೊರತೆಗಳನ್ನು ನೇರವಾಗಿ ತಿಳಿಸುವಂತಿರಬೇಕು. ನಿವಾಸಿಯ ಮೊಬೈಲಿನಲ್ಲಿ ಸ್ವಯಂ-ಸೇವೆಗೆ ಸಂಬಂಧಿಸಿದಂತೆ, ಭರವಸೆಯಿಂದ ಕೂಡಿದ ಎರಡು ಅಂಶಗಳ ದೃಢೀಕರಣಗಳನ್ನು (ನಿವಾಸಿಯು ನೋಂದಾಯಿತ ಮೊಬೈಲು ಸಂಖ್ಯೆಯನ್ನು ಮತ್ತು ನಿವಾಸಿಯ ಆಧಾರ್ ಶಾಶ್ವತ ಖಾತೆ ಸಂಖ್ಯೆಯ ಅರಿವನ್ನು ಹೊಂದಿರುವುದನ್ನು ಸಾಬೀತುಪಡಿಸುವ ಮೂಲಕ) ಬಳಸಿಕೊಂಡು ಭದ್ರತೆಯ ಭರವಸೆಯನ್ನು ನೀಡಲಾಗುವುದು. ಈ ಪ್ರಮಾಣಕಗಳು ಮೊಬೈಲು ಬ್ಯಾಂಕು ವ್ಯವಹಾರಗಳಿಗಾಗಿ ಮತ್ತು ಪಾವತಿಗಳಿಗಾಗಿ ನಿರ್ಧಿಷ್ಟಪಡಿಸಲಾಗಿರುವ ಭಾರತೀಯ ರಿಸರ್ವ ಬ್ಯಾಂಕಿನ ಪ್ರಮಾಣಕಗಳ ಅನುಸಾರವೇ ಆಗಿರುತ್ತವೆ.
ಆಧಾರ್ ಅನ್ನು ಪಡೆಯುವುದು ಕಡ್ಡಾಯವಾಗಿರುತ್ತದೆಯೇ?keyboard_arrow_down
ಯಾವುದೇ ವ್ಯಕ್ತಿಯೂ ಆಧಾರ್ ಗಾಗಿ ಅರ್ಜಿಸಲ್ಲಿಸುವ ಆಯ್ಕೆಯನ್ನು ಮಾಡಿಕೊಳ್ಳಬಹುದು. ಅದೇ ರೀತಿಯಲ್ಲಿ, ಪ್ರಯೋಜನಗಳನ್ನು ಮತ್ತು ಸೇವೆಗಳನ್ನು ಒದಗಿಸುವ ಸಂಸ್ಥೆಗಳು ತಮ್ಮ ತಂತ್ರಾಂಶ ವ್ಯವಸ್ಥೆಗಳಲ್ಲಿ ಆಧಾರ್ ನ ಬಳಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಈ ಸೇವೆಗಳಿಗಾಗಿ ಫಲಾನುಭವಿಗಳು ಅಥವಾ ಗ್ರಾಹಕರು ತಮ್ಮ ಆಧಾರ್ ಅನ್ನು ಒದಗಿಸುವ ಅಗತ್ಯತೆಯನ್ನು ಹೊಂದಬಹುದು.
ಓರ್ವ ವ್ಯಯಕ್ತಿಕ ವ್ಯಕ್ತಿಯು ಆಧಾರ್ ಅನ್ನು ಪಡೆಯಲು ಯಾವ ಮಾಹಿತಿಯನ್ನು ಒದಗಿಸುವ ಅಗತ್ಯತೆಯಿರುತ್ತದೆ?keyboard_arrow_down
ಅಗತ್ಯತೆಯಿರುವ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿ:
ಹೆಸರು
ಹುಟ್ಟಿದ ದಿನಾಂಕ
ಲಿಂಗ
ವಿಳಾಸ
ತಂದೆತಾಯಿ/ಪೋಷಕರ ವಿವರಗಳೂ (ಮಕ್ಕಳಿಗೆ ಅಗತ್ಯತೆಯಿರುತ್ತದೆ, ವಯಸ್ಕರು ನೀಡಬಹುದು)
ಅಗತ್ಯತೆಯಿರುವ ಜೀವ ಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿ
ಛಾಯಾಚಿತ್ರ
10 ಬೆರಳು ಮುದ್ರಿಕೆಗಳು
ಕಣ್ಣಿನ ಪಾಪೆ
ಭಾವಿಗುಪ್ರಾವು ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯ ಪ್ರಮಾಣಕಗಳನ್ನು ನಿರ್ದಿಷ್ಟಪಡಿಸಿದೆ ಮತ್ತು ಭಾವಿಗುಪ್ರಾವು ತಾನು ಸಂಗ್ರಹಿಸಬೇಕಾದ ಮಾಹಿತಿ ಕ್ಷೇತ್ರಗಳನ್ನು ವಿವರಿಸುವುದಕ್ಕಾಗಿ ಮತ್ತು ಅನುಸರಿಸಬೇಕಾದ ಪರಿಶೀಲನಾ ಪ್ರಕ್ರಿಯೆಗಾಗಿ ಶ್ರೀ ಎನ್. ವಿಠ್ಠಲ್, ಇವರ ಅಧ್ಯಕ್ಷತೆಯಲ್ಲಿ ಪರಿಶೀಲನಾ ಕಾರ್ಯವಿಧಾನ ಸಮಿತಿಯನ್ನು ರಚಿಸಿತು. ಮಾಹಿತಿ ಪ್ರಮಾಣಕ ಸಮಿತಿಯು ತನ್ನ ವರದಿಯನ್ನು ಡಿಸೆಂಬರ್ 9, 2009ರಂದು ಸಲ್ಲಿಸಿತು. ಸಂಪೂರ್ಣ ವರದಿಯು documents/UID_DDSVP_Committee_Report_v1.0.pdf. ನಲ್ಲಿ ಲಭ್ಯವಿದೆ. ಪ್ರಮಾಣಕಗಳನ್ನು ವಿವರಿಸುವುದಕ್ಕಾಗಿ ಮತ್ತು ಸೆರೆ ಹಿಡಿಯಲು ಅಗತ್ಯವಿರುವ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯ ವಿಶಿಷ್ಟ ಅಂಶಗಳು/ಸ್ವರೂಪಗಳನ್ನು ವಿವರಿಸುವುದಕ್ಕಾಗಿ ಭಾವಿಗುಪ್ರಾವು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಪ್ರಮಾಣಕ ಸಮಿತಿಯನ್ನು ಡಾ. ಬಿ.ಕೆ. ಗೈರೋಲ (ಮಹಾ ನಿರ್ದೇಶಕರು, ರಾಷ್ಟ್ರೀಯ ಮಾಹಿತಿ ಕೇಂದ್ರ), ಇವರ ಅಧ್ಯಕ್ಷತೆಯಲ್ಲಿ ರಚಿಸಿತು. ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಪ್ರಮಾಣಕ ಸಮಿತಿಯು ತನ್ನ ವರದಿಯನ್ನು ಜನವರಿ 7, 2010ರಂದು ಸಲ್ಲಿಸಿತು, ಸಂಪೂರ್ಣ ವರದಿಯು
/documents/Biometrics_Standards_Committee_report.pdf ನಲ್ಲಿ ಲಭ್ಯವಿದೆ.
ಓರ್ವ ವ್ಯಕ್ತಿಯ ಹುಟ್ಟಿದ ದಿನಾಂಕವನ್ನು ಯಾವ ರೀತಿಯಲ್ಲಿ ದೃಢೀಕರಿಸಲಾಗುವುದು?keyboard_arrow_down
ಡಿ ಡಿ ಎಸ್ ವಿ ಪಿ ಸಮಿತಿಯ ವರದಿಯ ಪ್ರಕಾರ, ಹುಟ್ಟಿದ ದಿನಾಂಕವನ್ನು ಪರಿಶೀಲಿಸಲಾಗಿದೆ, ಘೋಷಿಸಲಾಗಿದೆ ಅಥವಾ ಅಂದಾಜಿನಲ್ಲಿ ನಮೂದಿಸಲಾಗಿದೆ ಎಂಬುದನ್ನು ಸೂಚಿಸುವುದಕ್ಕಾಗಿ ಆಧಾರ್ ದತ್ತಸಂಚಯದಲ್ಲಿ ಒಂದು ಗುರುತಿನ ಪತಾಕೆಯನ್ನು (ಫ್ಲ್ಯಾಗ್) ನಿರ್ವಹಿಸಲಾಗಿದೆ. ನಿಖರವಾದ ಹುಟ್ಟಿದ ದಿನಾಂಕವು ಗೊತ್ತಿಲ್ಲದಿದ್ದಲ್ಲಿ, ವಯಸ್ಸನ್ನು ಮಾತ್ರ ಸೂಚಿಸುವಂತೆ ನಿವಾಸಿಯನ್ನು ಕೇಳಲಾಗುವುದು. ವಯಸ್ಸನ್ನು ಸೆರೆಹಿಡಿದು ಹಾಗೂ ಹುಟ್ಟಿದ ವರ್ಷವನ್ನು ಲೆಕ್ಕ ಹಾಕಲು ನೋಂದಣಿ ತಂತ್ರಾಂಶವು ಅನುವನ್ನು ಹೊಂದಿದೆ.
ನೋಂದಣಿ ಅಧಿಕಾರಿಯವರು/ರಿಜಿಸ್ಟ್ರಾರ್ ರವರು ತದನಂತರದ ಹಂತದಲ್ಲಿ ಪರಿಚಯಿಸುವವರನ್ನು ಸೇರಿಸಬಹುದೆ/ ತೆಗೆದುಹಾಕಬಹುದೆ?keyboard_arrow_down
ಹೌದು. ನೋಂದಣಿ ಅಧಿಕಾರಿಗಳು/ರಿಜಿಸ್ಟ್ರಾರ್ ಗಳು ತದನಂತರದ ಹಂತದಲ್ಲಿ ಪರಿಚಯಿಸುವವರನ್ನು ಸೇರಿಸಬಹುದು/ ತೆಗೆದು ಹಾಕಬಹುದು/ ಬದಲಾಯಿಸಬಹುದು. ಓರ್ವ ಪರಿಚಯಿಸುವವರ ಕಾರ್ಯಾಚರಣೆಗಳ ಕ್ಷೇತ್ರವನ್ನೂ ಸಹ ತದನಂತರದ ಹಂತದಲ್ಲಿ ಬದಲಾವಣೆಗೊಳಿಸಬಹುದು. ಪರಿಚಯಿಸುವವರ ಕಾರ್ಯನಿರ್ವಹಣೆಯನ್ನು ನಡೆದುಕೊಂಡು ಹೋಗುತ್ತಿರುವ ಆಧಾರದ ಮೇರೆಗೆ ಸಮೀಕ್ಷಿಸಲು ಹಾಗೂ ಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಲು ಭಾವಿಗುಪ್ರಾವು ನೋಂದಣಿ ಅಧಿಕಾರಿಗಳಿಗೆ/ರಿಜಿಸ್ಟ್ರಾರ್ ಗಳಿಗೆ ಉತ್ತೇಜಿಸುತ್ತದೆ.
ವೈಯಕ್ತಿಕ ವ್ಯಕ್ತಿಗಳು ಮತ್ತು ಅವರ ಮಾಹಿತಿಯನ್ನು ಭಾವಿಗುಪ್ರಾವು ಯಾವ ರೀತಿ ಸಂರಕ್ಷಿಸುತ್ತದೆ?div> ವೈಯಕ್ತಿಕ ವ್ಯಕ್ತಿಗಳ ರಕ್ಷಣೆ ಮತ್ತು ಅವರ ಮಾಹಿತಿಯ ಸಂರಕ್ಷಣೆಯು ವಿಶಿಷ್ಟ ಗುರುತು ಯೋಜನೆಯ ರೂಪುರೇಖೆ/ವಿನ್ಯಾಸದಲ್ಲಿ keyboard_arrow_down
ಓರ್ವ ನಿವಾಸಿಯು ಭಾವಿಗುಪ್ರಾದಿಂದ ತಿರಸ್ಕರಿಸಲ್ಪಟ್ಟಲ್ಲಿ ಮತ್ತು ಆಧಾರ್ ಅನ್ನು ನೀಡದಿದ್ದಲ್ಲಿ ಏನಾಗುತ್ತದೆ?keyboard_arrow_down
ತಿರಸ್ಕರಿಸಲು ಕಾರಣವನ್ನು ತಿರಸ್ಕರಿಸಿದ ನಂತರ ತೆಗೆದುಕೊಳ್ಳಬೇಕಾದ ಕ್ರಮಗಳ ಜೊತೆಯಲ್ಲಿ ನಿವಾಸಿಗೆ ಮತ್ತು ನೋಂದಣಿ ಅಧಿಕಾರಿಯವರಿಗೆ ತಿಳಿಸಲಾಗುವುದು.
ಆಧಾರ್ ಪತ್ರ ವಿಭಾಗ – ಓರ್ವ ನಿವಾಸಿಯು ತಮ್ಮ ಆಧಾರ್ ಪತ್ರವನ್ನು ಕೈಗೆ ಸಿಗದ ಹಾಗೆ ತಪ್ಪು ಸ್ಥಳದಲ್ಲಿ ಇಟ್ಟಿದ್ದಲ್ಲಿ/ಕಳೆದುಕೊಂಡಿದ್ದಲ್ಲಿ/ಅವರ ಆಧಾರ್ ಅನ್ನು ಮರೆತಿದ್ದಲ್ಲಿ ಏನು ಮಾಡಬೇಕು?keyboard_arrow_down
ನಿವಾಸಿಯು ಸಂಪರ್ಕ ಕೇಂದ್ರವನ್ನು (ದೂರವಾಣಿ/ಪೋರ್ಟಲು/ಇ-ಮೈಲು ಮೂಲಕ) ನೋಂದಣಿ ಸಂಖ್ಯೆಯ ಜೊತೆಯಲ್ಲಿ ಸಂಪರ್ಕಿಸಬೇಕು ಮತ್ತು ಹೊಸ ಆಧಾರ್ ಪತ್ರವನ್ನು ಕಳುಹಿಸುವಂತೆ ಕೋರಬೇಕು.
ನಿವಾಸಿಯು ತಮ್ಮ ಆಧಾರ್ ಸಂಖ್ಯೆಯನ್ನು ಕಳೆದುಕೊಂಡಿದ್ದಲ್ಲಿ ಏನು ಮಾಡಬೇಕು?keyboard_arrow_down
ಎ) ಆಧಾರ್ ಸೇವೆ Retrieve Lost UID/EIDಅನ್ನು ಬಳಸಿಕೊಂಡು ನಿವಾಸಿಯು ತಮ್ಮ ಆಧಾರ್ ಸಂಖ್ಯೆಯನ್ನು ಕಂಡುಕೊಳ್ಳಬಹುದು.
ಬಿ) ನಿವಾಸಿಯು 1947ಗೆ ಕರೆ ಮಾಡಬಹುದು, ಅಲ್ಲಿ ನಮ್ಮ ಸಂಪರ್ಕ ಕೇಂದ್ರ ಪ್ರತಿನಿಧಿಯವರು ಆತನಿಗೆ/ಆಕೆಗೆ ಆತನ/ಆಕೆಯ ಇಐಡಿ ಸಂಖ್ಯೆಯನ್ನು ಪಡೆಯಲು ಸಹಾಯ ಮಾಡುವರು. ನಿವಾಸಿ ಪ್ರೋರ್ಟಲುeAadhaarನಿಂದ ಆತನ/ಆಕೆಯ ಇ-ಆಧಾರ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಲು ನಿವಾಸಿಯು ಈ ಇಐಡಿ ಸಂಖ್ಯೆಯನ್ನು ಬಳಸಿಕೊಳ್ಳಬಹುದು.
ಡಿ) ನಿವಾಸಿಯು 1947ಕ್ಕೆ ಕರೆ ಮಾಡಿ ಐ ವಿ ಆರ್ ಎಸ್ ನಲ್ಲಿ ಇಐಡಿ ಸಂಖ್ಯೆಯಿಂದ ಆತನ/ಆಕೆಯ ಆಧಾರ್ ಸಂಖ್ಯೆಯನ್ನು ಪಡೆಯಬಹುದು.
ಓರ್ವ ನಿವಾಸಿಗೆ ಆಧಾರ್ ಸಂಖ್ಯೆಯು ತಲುಪಿಲ್ಲವಾದಲ್ಲಿ ಏನು ಮಾಡಬೇಕು?keyboard_arrow_down
ನಿವಾಸಿಯು ಆಧಾರ್ ಪತ್ರವನ್ನು ಪಡೆಯದಿದ್ದಲ್ಲಿ, ಆತನು/ಆಕೆಯು ಭಾವಿಗುಪ್ರಾದ ಸಂಪರ್ಕ ಕೇಂದ್ರವನ್ನು ಆತನ/ಆಕೆಯ ನೋಂದಣಿ ಸಂಖ್ಯೆಯೊಂದಿಗೆ ಸಂಪರ್ಕಿಸತಕ್ಕದ್ದು ಅಥವಾ ಆತನು/ಆಕೆಯು https://resident.uidai.gov.in/check-aadhaarನಲ್ಲಿ ಪರೀಕ್ಷಿಸಬಹುದು.
ಆತನ/ಆಕೆಯ ನೋಂದಣಿ ಚೀಟಿಯಲ್ಲಿ ಕಾಗುಣಿತದ/ಇತರೆ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ತಪ್ಪುಗಳು ಇದ್ದಲ್ಲಿ ನಿವಾಸಿಯು ಏನನ್ನು ಮಾಡಬಹುದು (96 ಗಂಟೆಗಳ ತಿದ್ದುಪಡಿ ಗವಾಕ್ಷಿ)keyboard_arrow_down
ನೋಂದಣಿಯ ವೇಳೆಯಲ್ಲಿ ಮಾಹಿತಿಯನ್ನು ಊಡಿಕೆ ಮಾಡುವ ಸಮಯದಲ್ಲಿ ಅಂತಹ ತಪ್ಪುಗಳನ್ನು ಗಮನಿಸಲು ಮತ್ತು ತಿದ್ದುಪಡಿ ಮಾಡಿಸಲು ನಿವಾಸಿಯು ಒಂದು ಅವಕಾಶವನ್ನು ಪಡೆಯುತ್ತಾರೆ. ನೋಂದಣಿ ಕೋರಿಕೆಯನ್ನು ಅಂತಿಮಗೊಳಿಸುವ ಮತ್ತು ನೋಂದಣಿ ಸ್ವೀಕೃತಿ ಪತ್ರವನ್ನು ಮುದ್ರಿಸುವ ಮೊದಲು ತಿದ್ದುಪಡಿಗಳನ್ನು ಮಾಡಲು ನಿವಾಸಿಗೆ ಮತ್ತೊಂದು ಅವಕಾಶವನ್ನು ನೀಡಲಾಗುವುದು. ಈ ಎರಡು ಅವಕಾಶಗಳು ತಪ್ಪಿಹೋದ ಸಂದರ್ಭದಲ್ಲಿ, ನಿವಾಸಿಯು ಸಂಬಂಧಿತ ದಾಖಲೆಗಳು ಮತ್ತು ನೋಂದಣಿ ಚೀಟಿಯೊಂದಿಗೆ ನೋಂದಣಿ ಕೇಂದ್ರಕ್ಕೆ 96 ಗಂಟೆಗಳ ಒಳಗೆ ಭೇಟಿ ಕೊಟ್ಟು ಹೆಸರು, ವಿಳಾಸವನ್ನು ತಿದ್ದುಪಡಿ ಮಾಡಿಸಿಕೊಳ್ಳಬಹುದು.
ನಾನು ನೋಂದಣಿಯನ್ನು ಮಾಡಿಸಿಕೊಂಡನಂತರ, ನನ್ನ ಆಧಾರ್ ಪತ್ರವನ್ನು ಪಡೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಮತ್ತು ನಾನು ನನ್ನ ಆಧಾರ್ ಪತ್ರವನ್ನು ಯಾವ ರೀತಿ ಪಡೆಯುವೆನು?keyboard_arrow_down
ಆಧಾರ್ ಅನ್ನು ತಂತ್ರಾಂಶ ಅನ್ವಯದಿಂದ ಹೊರತೆಗೆಯಲು 90 ದಿನಗಳವರೆಗೂ ತೆಗೆದುಕೊಳ್ಳಬಹುದು. ಆಧಾರ್ ಪತ್ರವನ್ನು ಅಂಚೆಯ ಮೂಲಕ ವಿತರಿಸಲಾಗುವುದು, ಆಧಾರ್ ಅನ್ನು ತಂತ್ರಾಂಶ ಅನ್ವಯದಿಂದ ಹೊರತೆಗೆದ ಕೂಡಲೇ ನೀವು ನಿಮ್ಮ ನೋಂದಾಯಿತ ಮೊಬೈಲಿನಲ್ಲಿ ಎಸ್ ಎಂ ಎಸ್ ಸಂದೇಶವನ್ನು ಪಡೆಯುವಿರಿ (ನೋಂದಣಿಯ ಸಮಯದಲ್ಲಿ ಮೊಬೈಲು ಸಂಖ್ಯೆಯನ್ನು ನೀಡಿದ್ದಲ್ಲಿ).
ನಾನು ನನ್ನ ಆಧಾರ್ ಅನ್ನು ಇತ್ತೀಚೆಗೆ ಇಂದಿನದಿನದನ್ನಾಗಿ ಮಾಡಿಸಿಕೊಂಡಿರುವೆನು. ಆದರೆ ಅದು ಕೈಯಿಂದ ಪರೀಕ್ಷಣೆಗಳನ್ನು ಮಾಡುತ್ತಿರುವುದಾಗಿ ತೋರಿಸುತ್ತಿದೆ. ಅದು ಯಾವಾಗ ಇಂದಿನದಿನದದ್ದಾಗುತ್ತದೆ?keyboard_arrow_down
ಆಧಾರ್ ಇಂದಿನದಿನದ್ದಾಗುವುದಕ್ಕೆ 90 ದಿನಗಳವರೆಗೂ ತೆಗೆದುಕೊಳ್ಳುತ್ತದೆ. ನಿಮ್ಮ ಇಂದಿನದಿನದ್ದಾಗುವುದಕ್ಕಾಗಿನ ಕೋರಿಕೆಯು 90 ದಿನಗಳಿಗೂ ಅಧಿಕವಾಗಿದ್ದಲ್ಲಿ, ಮುಂದಿನ ಸಹಾಯಕ್ಕಾಗಿ ದಯವಿಟ್ಟು 1947ಕ್ಕೆ ಕರೆ ಮಾಡಿ (ಶುಲ್ಕ ರಹಿತ) ಅಥವಾ This email address is being protected from spambots. You need JavaScript enabled to view it. ಗೆ ಬರೆಯಿರಿ.
ನಾನು ಇತ್ತೀಚೆಗೆ ನನ್ನ ಆಧಾರ್ ಅನ್ನು ಇಂದಿನದಿನದನ್ನಾಗಿ ಮಾಡಿಸಿಕೊಂಡಿರುವೆನು. ದಯವಿಟ್ಟು ತಾವು ಅದರ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಾಧ್ಯವೆ? ನನಗೆ ಅದು ಜರೂರಾಗಿ ಬೇಕಾಗಿದೆ.keyboard_arrow_down
ಆಧಾರ್ ಇಂದಿನದಿನದನ್ನಾಗಿಸುವಿಕೆಯು ಒಂದು ನಿಗದಿತ ಪ್ರಕ್ರಿಯೆಯನ್ನು ಹೊಂದಿರುತ್ತದೆ, ಅದು ಕೋರಿಕೆಯ ದಿನಾಂಕದಿಂದ 90 ದಿನಗಳನ್ನು ತೆಗೆದುಕೊಳ್ಳುತ್ತದೆ. ಇಂದಿನದಿನದನ್ನಾಗಿ ಮಾಡುವಿಕೆಯ ಪ್ರಕ್ರಿಯೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ದಯವಿಟ್ಟು ಕಾಯಿರಿ. ನೀವು https://ssup.uidai.gov.in/checkSSUPStatus/checkupdatestatusನಿಂದ ಸ್ಥಿತಿಗತಿಯನ್ನು ಪರೀಕ್ಷಿಸಿಸಬಹುದು.
ನಾನು ಈ ಮೊದಲು ಆಧಾರ್ ಗಾಗಿ ಅರ್ಜಿ ಸಲ್ಲಿಸಿದ್ದೆ, ಆದರೆ ಅದನ್ನು ಪಡೆದಿರಲಿಲ್ಲ. ಆದ್ದರಿಂದ, ನಾನು ಪುನ: ಅರ್ಜಿ ಸಲ್ಲಿಸಿದೆ. ನಾನು ನನ್ನ ಆಧಾರ್ ಅನ್ನು ಯಾವಾಗ ಪಡೆಯಬಹುದು?keyboard_arrow_down
ನಿಮ್ಮ ಆಧಾರ್ ಅನ್ನು ಮೊದಲ ನೋಂದಣಿಯಿಂದ ಹೊರತೆಗೆದಿದ್ದಲ್ಲಿ, ಪುನರ್-ನೋಂದಣಿಗಾಗಿ ಮಾಡಲಾಗುವ ಎಲ್ಲಾ ಪ್ರಯತ್ನಗಳನ್ನೂ ತಿರಸ್ಕರಿಸಲಾಗುವುದು. ಪುನ-ಅರ್ಜಿ ಸಲ್ಲಿಸಬೇಡಿ. ನೀವು ನಿಮ್ಮ ಆಧಾರ್ ಅನ್ನು ಪುನರ್-ಪಡೆಯಬಹುದು:
(ಎ) https://resident.uidai.gov.in/lost-uideid ಬಳಸಿಕೊಂಡು ಆನ್ ಲೈನ್ ಮೂಲಕ (ನೀವು ನೋಂದಾಯಿತ ಮೊಬೈಲು ಸಂಖ್ಯೆಯನ್ನು ಹೊಂದಿದ್ದಲ್ಲಿ)
(ಬಿ) ಶಾಶ್ವತ ನೋಂದಣಿ ಕೇಂದ್ರಕ್ಕೆ ಭೇಟಿ ಕೊಡುವ ಮೂಲಕ
(ಸಿ) 1947ಕ್ಕೆ ಕರೆ ಮಾಡುವ ಮೂಲಕ
ಆಧಾರ್ ಸ್ಮಾರ್ಟ್ ಕಾರ್ಡು ಅಥವಾ ಪ್ಲಾಸ್ಟಿಕ್ ಕಾರ್ಡು ಎಂದರೇನು? ಸೇವೆಗಳನ್ನು ಪಡೆದುಕೊಳ್ಳಲು ಅದು ಕಡ್ಡಾಯವೆ?keyboard_arrow_down
ಆ ರೀತಿ ಸ್ಮಾರ್ಟ್ ಆಧಾರ್ ಕಾರ್ಡಿನ ಪರಿಕಲ್ಪನೆಯು ಇರುವುದಿಲ್ಲ. ಆಧಾರ್ ಪತ್ರ ಅಥವಾ ಭಾವಿಗುಪ್ರಾದ ಜಾಲತಾಣದಿಂದ ಡೌನ್ ಲೋಡ್ ಮಾಡಿಕೊಳ್ಳಲ್ಪಟ್ಟ ಆಧಾರ್ ಸಮರ್ಪಕವಾಗಿರುತ್ತದೆ ಮತ್ತು ಆಧಾರ್ ನ ಊರ್ಜಿತ ನಮೂನೆಯಾಗಿರುತ್ತದೆ. ಆಧಾರ್ ಸಂಬಂಧಿತ ಸೇವೆಗಳಿಗಾಗಿ ಕೇವಲ ಅಧಿಕೃತ ಸಾಮಾನ್ಯ ಸೇವಾ ಕೇಂದ್ರಗಳಿಗೆ ಅಥವಾ ಆಧಾರ್ ಶಾಶ್ವತ ನೋಂದಣಿ ಕೇಂದ್ರಗಳಿಗೆ ಭೇಟಿ ಕೊಡಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಮುಂದಿನ ಪತ್ರಿಕಾ ಪ್ರಕಟಣೆಯನ್ನು ಗಮನಿಸಿರಿ: https://goo.gl/TccM9f
ನಾನು ಶಾಶ್ವತ ಖಾತೆ ಸಂಖ್ಯೆಯನ್ನು ಆಧಾರ್ ಜೊತೆ ಯಾವ ರೀತಿ ಸಂಪರ್ಕಿಸಬಹುದು?keyboard_arrow_down
ನೀವು ಈ ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ನಿಮ್ಮ ಶಾಶ್ವತ ಖಾತೆ ಸಂಖ್ಯೆಯನ್ನು ಆಧಾರ್ ಜೊತೆ ಸಂಪರ್ಕಿಸಬಹುದು:
ಎ) ಆದಾಯ ತೆರಿಗೆ ಇ-ಸಲ್ಲಿಕೆ ಪೋರ್ಟಲ್ ಅನ್ನು ತೆರೆಯಿರಿ - https://incometaxindiaefiling.gov.in/
ಬಿ) ಅದರಲ್ಲಿ ನೋಂದಣಿ ಮಾಡಿಸಿ (ಈಗಾಗಲೇ ಮಾಡಿಸಿಲ್ಲವಾದಲ್ಲಿ). ನಿಮ್ಮ ಶಾಶ್ವತ ಖಾತೆ ಸಂಖ್ಯೆಯು (ಪಿಎಎನ್) ನಿಮ್ಮ ಬಳಕೆದಾರರ ಗುರುತಿನ ಸಂಖ್ಯೆಯಾಗಿರುತ್ತದೆ.
ಸಿ) ಬಳಕೆದಾರರ ಗುರುತಿನ ಸಂಖ್ಯೆ, ಸಂಕೇತಪದ ಮತ್ತು ಹುಟ್ಟಿದ ದಿನಾಂಕವನ್ನು ಬಳಸಿಕೊಂಡು ಲಾಗ್ ಇನ್ ಆಗಿರಿ.
ಡಿ) ನಿಮ್ಮನ್ನು ಶಾಶ್ವತ ಖಾತೆ ಸಂಖ್ಯೆ ಮತ್ತು ಆಧಾರ್ ಅನ್ನು ಸಂಪರ್ಕಿಸುವಂತೆ ಪ್ರೇರೇಪಿಸುವ ಒಂದು ತುಂಡುತುಂಡು ರೂಪಕದ ಗವಾಕ್ಷಿಯು (ಪಾಪ್-ಅಪ್ ವಿಂಡೋ) ಕಾಣಿಸಿಕೊಳ್ಳುವುದು. ಇಲ್ಲವಾದಲ್ಲಿ, ಮೆನು ಬಾರ್ ನಲ್ಲಿ ಪಾರ್ಶ್ವಚಿತ್ರಣ ಸೆಟ್ಟಿಂಗ್ ಗಳಿಗೆ ಹೊಗಿರಿ ’ಆದಾರ್ ಸಂಪರ್ಕಿಸಿ’ ಮೇಲೆ ಕ್ಲಿಕ್ ಮಾಡಿರಿ.
ಇ)ಹೆಸರು,ಹುಟ್ಟಿದ ದಿನಾಂಕ ಮತ್ತು ಲಿಂಗ ಮುಂತಾದ ವಿವರಗಳನ್ನು ಶಾಶ್ವತ ಖಾತೆ ಸಂಖ್ಯೆ (ಪಿ ಎ ಎನ್) ವಿವರಗಳ ಪ್ರಕಾರ ಅದಾಗಲೇ ನಮೂದಿಸಲ್ಪಟ್ಟಿರುತ್ತವೆ.
ಎಫ್) ನಿಮ್ಮ ಆಧಾರ್ ನಲ್ಲಿ ನಮೂದಿಸಲಾಗಿರುವುದರ ಜೊತೆಗೆ ಪರದೆಯ ಮೇಲೆ ಶಾಶ್ವತ ಖಾತೆ ಸಂಖ್ಯೆಯನ್ನು (ಪಿ ಎ ಎನ್) ಪರಿಶೀಲಿಸಿರಿ. ವ್ಯತ್ಯಾಸಗಳಿದ್ದಲ್ಲಿ, ಅವುಗಳನ್ನು ಎರಡರಲ್ಲಿ ಒಂದು ದಾಖಲೆಯಲ್ಲಿ ಸರಿಪಡಿಸತಕ್ಕದ್ದು ಎಂಬುದನ್ನು ದಯವಿಟ್ಟು ಗಮನಿಸಿ.
ಜಿ) ವಿವರಗಳು ತಾಳೆ ಹೊಂದಿದಲ್ಲಿ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು “ಇದೀಗ ಸಂಪರ್ಕಿಸಿ” ಗುಂಡಿಯ ಮೇಲೆ ಕ್ಲಿಕ್ ಮಾಡಿರಿ.
ಎಚ್) ಒಂದು ತುಂಡುತುಂಡು ರೂಪಕದ (ಪಾಪ್-ಅಪ್) ಸಂದೇಶವು, ನಿಮ್ಮ ಆಧಾರ್ ಅನ್ನು ನಿಮ್ಮ ಶಾಶ್ವತ ಖಾತೆ ಸಂಖ್ಯೆಗೆ (ಪಿ ಎ ಎನ್) ಯಶಸ್ವಿಯಾಗಿ ಸಂಪರ್ಕಿಸಲಾಗಿದೆ ಎಂಬುದಾಗಿ ತಿಳಿಸುತ್ತದೆ.
ಐ)ನಿಮ್ಮ ಶಾಶ್ವತ ಖಾತೆ ಸಂಖ್ಯೆ (ಪಿ ಎ ಎನ್) ಆಧಾರ್ ಅನ್ನು ಸಂಪರ್ಕಿಸುವ ಸಲುವಾಗಿ ನೀವು ಈ ಕೆಳಗಿನ ಜಾಲತಾಣಕ್ಕೂ ಭೇಟಿ ಕೊಡಬಹುದು: https://www.utiitsl.com/ OR https://www.egov-nsdl.co.in/
ನಿವಾಸಿಯ ಗೋಪ್ಯತೆಯ ಹಕ್ಕನ್ನು ರಕ್ಷಿಸುವ ಸಲುವಾಗಿ ಇರುವಂತಹ ಗೋಪ್ಯತೆ ಸಂರಕ್ಷಣೆಗಳು ಯಾವುವು?keyboard_arrow_down
ವೈಯಕ್ತಿಕ ವ್ಯಕ್ತಿಗಳ ರಕ್ಷಣೆ ಮತ್ತು ಅವರ ಮಾಹಿತಿಯ ಸಂರಕ್ಷಣೆಯು ವಿಶಿಷ್ಟ ಗುರುತು ಯೋಜನೆಯ ಒಂದು ಅಂತರ್ಗತ ಭಾಗವಾಗಿದೆ. ಒಂದು ಯಾದೃಚ್ಛಿಕ ಸಂಖ್ಯೆಯನ್ನು ಹೊಂದಿರಿವುದರಿಂದ, ಅದು ಈ ಕೆಳಗೆ ಪಟ್ಟಿ ಮಾಡಲಾಗಿರುವ ಇತರೆ ವೈಲಕ್ಷಣಗಳ ಜೊತೆಯಲ್ಲಿ ವೈಯಕ್ತಿಕ ವ್ಯಕ್ತಿಯ ಬಗ್ಗೆ ಏನನ್ನೂ ಬಹಿರಂಗಪಡಿಸುವುದಿಲ್ಲ, ವಿಶಿಷ್ಟ ಗುರುತು ಯೋಜನೆಯು ನಿವಾಸಿಯ ಹಿತಾಸಕ್ತಿಯನ್ನು ತನ್ನ ಉದ್ದೇಶ ಮತ್ತು ಗುರಿಗಳ ಅಂತರಂಗದಲ್ಲಿ ಇಟ್ಟುಕೊಳ್ಳುತ್ತದೆ.
- ಸೀಮಿತ ಮಾಹಿತಿಯ ಸಂಗ್ರಹಣೆ
ಭಾವಿಗುಪ್ರಾವು ಕೇವಲ ಮೂಲ ಮಾಹಿತಿ ಕ್ಷೇತ್ರಗಳು – ಹೆಸರು, ಹುಟ್ಟಿದ ದಿನಾಂಕ ಲಿಂಗ, ವಿಳಾಸ, ತಂದೆತಾಯಿ/ಪೋಷಕರು (ಮಕ್ಕಳಿಗೆ ಅತ್ಯಗತ್ಯ, ಆದರೆ ಇತರರಿಗೆ ಇಲ್ಲ),10 ಬೆರಳುಗಳ ಮುದ್ರೆಗಳು ಮತ್ತು ಕಣ್ಣಿನ ಪಾಪೆಯ ಸ್ಕ್ಯಾನು, ಇವುಗಳನ್ನು ಮಾತ್ರ ಸಂಗ್ರಹಿಸುತ್ತದೆ. - ಪಾರ್ಶ್ವಚಿತ್ರಣ ಮತ್ತು ಜಾಡನ್ನು ಹಿಡಿಯುವ ಮಾಹಿತಿಯನ್ನು ಸಂಗ್ರಹಿಸಲಾಗುವುದಿಲ್ಲ.
ಅತಿ ಸೂಕ್ಷ್ಮತೆಯಿಂದ ಕೂಡಿದ ಅಂದರೆ ಜಾತಿ, ಮತ, ಸಮುದಾಯ, ವರ್ಗ, ಜನಾಂಗ, ವರಮಾನ ಮತ್ತು ಆರೋಗ್ಯ, ಇವೇ ಮುಂತಾದ ವೈಯಕ್ತಿಕ ಮಾಹಿತಿಯ ಸಂಗ್ರಹಣೆಯನ್ನು ಭಾವಿಗುಪ್ರಾದ ಕಾರ್ಯನೀತಿಯು ಪ್ರತಿಬಂಧಿಸಿದೆ. - ಮಾಹಿತಿಯ ಬಿಡುಗಡೆ – ಹೌದು ಅಥವಾ ಇಲ್ಲ ಪ್ರತಿಕ್ರಿಯೆ
ಭಾವಿಗುಪ್ರಾವು ಆಧಾರ್ ದತ್ತಸಂಚಯದಲ್ಲಿ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ – ಒಂದು ಗುರುತನ್ನು ಪರಿಶೀಲಿಸುವುದಕ್ಕಾಗಿ ಕೊಡಲಾಗುವ ಏಕೈಕ ಪ್ರತಿಕ್ರಿಯೆ ಎಂದರೆ ’ಹೌದು’ ಅಥವಾ’ ’ಇಲ್ಲ’ ಎಂಬುದಾಗಿ. - ಇತರೆ ದತ್ತಸಂಚಯಗಳ ಕಡೆಗೆ ಭಾವಿಗುಪ್ರಾದ ಮಾಹಿತಿಯನ್ನು ಒಮ್ಮುಖಗೊಳಿಸುವಿಕೆ ಮತ್ತು ಸಂಪರ್ಕಿಸುವಿಕೆ
ವಿಶಿಷ್ಟ ಗುರುತು ದತ್ತಸಂಚಯವನ್ನು ಇತರೆ ಯಾವುದೇ ದತ್ತಸಂಚಯಗಳ ಜೊತೆಗೆ ಅಥವಾ ಇತರೆ ದತ್ತಸಂಚಯಗಳಲ್ಲಿ ಹೊಂದಿರುವ ಮಾಹಿತಿಯ ಜೊತೆಗೆ ಸಂಪರ್ಕಿಸಲಾಗುವುದಿಲ್ಲ. ಅದರ ಏಕೈಕ ಉದ್ದೇಶವೆಂದರೆ ಒಂದು ಸೇವೆಯನ್ನು ಸ್ವೀಕರಿಸುವ ಸ್ಥಳದಲ್ಲಿ ಓರ್ವ ವ್ಯಕ್ತಿಯ ಗುರುತನ್ನು ಪರಿಶೀಲಿಸುವುದು, ಅದರಲ್ಲಿಯೂ ಕೂಡ ಆಧಾರ್ ಸಂಖ್ಯೆಯನ್ನು ಹೊಂದಿರುವವರ ಒಪ್ಪಿಗೆಯೊಂದಿಗೆ ಮಾತ್ರ.
ವಿಶಿಷ್ಟ ಗುರುತು ದತ್ತಸಂಚಯವನ್ನು ಉನ್ನತ ಮಟ್ಟದಲ್ಲಿ ಅನುಮೋದಿಸಲಾದ ಕೆಲವು ಆಯ್ದ ವ್ಯಕ್ತಿಗಳಿಂದ ಭೌತಿಕವಾಗಿ ಮತ್ತು ವಿದ್ಯುನ್ಮಾನೀಯವಾಗಿ ರಕ್ಷಿಸಲಾಗುವುದು. ಮಾಹಿತಿಯನ್ನು ಅತ್ಯುತ್ತಮವಾಗಿ ಲಿಪ್ಯಂತರಣಗೊಳಿಸಲಾಗುವುದು ಮತ್ತು ಅಧಿಕ ಮಟ್ಟದ ಭದ್ರತಾ ಮಾಹಿತಿ ಕೊಠಡಿ/ಛಾವಣಿಯಲ್ಲಿ. ಎಲ್ಲಾ ಪ್ರವೇಶ ವಿವರಗಳನ್ನು ಸಮರ್ಪಕವಾಗಿ ದಾಖಲಿಸಲಾಗಿರುವುದು.
ಭಾವಿಗುಪ್ರಾವು ಕೈಗೊಳ್ಳಲಾಗಿರುವ ಮಾಹಿತಿ ಸಂರಕ್ಷಣೆ ಮತ್ತು ಗೋಪ್ಯತೆಯ ಕ್ರಮಗಳು ಯಾವುವು?keyboard_arrow_down
ಭಾವಿಗುಪ್ರಾವು, ತಾನು ಸಂಗ್ರಹಿಸಿದ ಮಾಹಿತಿಯ ಭದ್ರತೆ ಮತ್ತು ಗೋಪ್ಯತೆಯನ್ನು ಖಚಿತಪಡಿಸಿಕೊಳ್ಳುವ ಬದ್ಧತೆಯನ್ನು ಹೊಂದಿದೆ. ಮಾಹಿತಿಯನ್ನು ಭಾವಿಗುಪ್ರಾವು ಒದಗಿಸಿರುವ ತಂತ್ರಾಂಶ ಅನ್ವಯದಲ್ಲಿ ಸಂಗ್ರಹಿಸಿಡಲಾಗುವುದು ಹಾಗೂ ಸಾಗಣೆಯಲ್ಲಿ ಸೋರಿಕೆಯನ್ನು ತಡೆಯುವ ಸಲುವಾಗಿ ಲಿಪ್ಯಂತರಣ/ಸಂಕೇತಿಕರಣಗೊಳಿಸಲಾಗುವುದು. ತನ್ನ ಮಾಹಿತಿಯ ಭದ್ರತೆ ಮತ್ತು ಪ್ರಾಮಾಣಿಕತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಭಾವಿಗುಪ್ರಾವು ಒಂದು ಸಮಗ್ರ ಭದ್ರತಾ ಕಾರ್ಯನೀತಿಯನ್ನು ಹೊಂದಿದೆ.
ಮಾಹಿತಿಯನ್ನು ವಂಚನೆಯಿಂದ ಅಥವಾ ಅನಧಿಕೃತವಾಗಿ ಮಾಡಲಾದ ವೀಕ್ಷಣೆಗೆ ಪ್ರತಿಯಾಗಿ ಚಿಂತಿಸಲಾಗಿರುವ ಸಂಭಾವ್ಯ ಅಪರಾಧ ದಂಡನೆಗಳು ಯಾವುವು?keyboard_arrow_down
ಬಿಲ್ಲಿನಲ್ಲಿ ಈ ಕೆಳಗಿನ ಸಂಭಾವ್ಯ ಅಪರಾಧ ದಂಡನೆಗಳು ಇರುತ್ತವೆ:
- ಜನಸಂಖ್ಯಾಶಾಸ್ತ್ರಕ್ಕೆ ಅಥವಾ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ತಪ್ಪು ಮಾಹಿತಿಯನ್ನು ನೀಡುವ ಮೂಲಕ ವ್ಯಕ್ತೀಕರಿಸಿದಲ್ಲಿ/ಮತ್ತೊಬ್ಬರಂತೆ ನಟಿಸಿದಲ್ಲಿ ಅದು ದಂಡನೀಯ ಅಪರಾಧ - 3 ವರ್ಷಗಳ ಜೈಲು ಶಿಕ್ಷೆ ಮತ್ತು ರೂ.10,000 ದಂಡ.
- ಆಧಾರ್ ಸಂಖ್ಯೆಯನ್ನು ಹೊಂದಿರುವವರ ಜನಸಂಖ್ಯಾಶಾಸ್ತ್ರಕ್ಕೆ ಅಥವಾ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಬದಲಾಯಿಸುವ ಮೂಲಕ ಅಥವಾ ಬದಲಾಯಿಸಲು ಪ್ರಯತ್ನದ ಮೂಲಕ ಆಧಾರ್ ಸಂಖ್ಯೆಯನ್ನು ಹೊಂದಿರುವವರ ಗುರುತನ್ನು ಸ್ವಾಧೀನ/ವಶಪಡಿಸಿಕೊಳ್ಳುವುದು ದಂಡನೀಯ ಅಪರಾಧ - 3 ವರ್ಷಗಳ ಜೈಲು ಶಿಕ್ಷೆ ಮತ್ತು ರೂ.10,000 ದಂಡ.
- ಓರ್ವ ನಿವಾಸಿಯ ಗುರುತಿನ ಮಾಹಿತಿಯನ್ನು ಸಂಗ್ರಹಿಸುವ ಸಲುವಾಗಿ ಅಧಿಕೃತ ಪ್ರತಿನಿಧಿ ಎಂಬುದಾಗಿ ನಟಿಸುವುದು ದಂಡನೀಯ ಅಪರಾಧ - 3 ವರ್ಷಗಳ ಜೈಲು ಶಿಕ್ಷೆ ಮತ್ತು ರೂ.10,000 ದಂಡ ಹಾಗೂ ಅದು ಕಂಪನಿಯಾಗಿದ್ದಲಿ ರೂ.1 ಲಕ್ಷ ದಂಡ.
- ನೋಂದಣಿ ಮತ್ತು ದೃಢೀಕರಣದ ವೇಳೆಯಲ್ಲಿ ಸಂಗ್ರಹಿಸಲಾದ ಮಾಹಿತಿಯನ್ನು ಓರ್ವ ಅನಧಿಕೃತ ವ್ಯಕ್ತಿಗೆ ಉದ್ದೇಶಪೂರ್ವಕವಾಗಿ ರವಾನಿಸುವುದು ದಂಡನೀಯ ಅಪರಾಧ - 3 ವರ್ಷಗಳ ಜೈಲು ಶಿಕ್ಷೆ ಮತ್ತು ರೂ.10,000 ದಂಡ ಹಾಗೂ ಅದು ಕಂಪನಿಯಾಗಿದ್ದಲಿ ರೂ.1 ಲಕ್ಷ ದಂಡ.
- ಕೇಂದ್ರ ಗುರುತುಗಳ ಮಾಹಿತಿ ಭಂಡಾರಕ್ಕೆ (ಸಿಐಡಿಆರ್) ಅನಧಿಕೃತ ಪ್ರವೇಶ ಹಾಗೂ ಮಾಹಿತಿಯನ್ನು ಕದಿಯುವಿಕೆಯು ದಂಡನೀಯ ಅಪರಾಧ - 3 ವರ್ಷಗಳ ಜೈಲು ಶಿಕ್ಷೆ ಮತ್ತು ರೂ.10,000 ದಂಡ ಹಾಗೂ ಅದು ಕಂಪನಿಯಾಗಿದ್ದಲಿ ರೂ.1 ಕೋಟಿ ಮೊತ್ತದಷ್ಟು ದಂಡ.
- ಕೇಂದ್ರ ಗುರುತುಗಳ ಮಾಹಿತಿ ಭಂಡಾರದ (ಸಿಐಡಿಆರ್) ಮಾಹಿತಿಯನ್ನು ಅನಧಿಕೃತವಾಗಿ ತಿದ್ದುವುದು/ತಿರುಚುವುದು ದಂಡನೀಯ ಅಪರಾಧ - 3 ವರ್ಷಗಳ ಜೈಲು ಶಿಕ್ಷೆ ಮತ್ತು ರೂ.10,000 ದಂಡ.
- ತನ್ನ ಸ್ವಂತದ್ದಲ್ಲದ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಒದಗಿಸುವುದು ದಂಡನೀಯ ಅಪರಾಧ - 3 ವರ್ಷಗಳ ಜೈಲು ಶಿಕ್ಷೆ ಮತ್ತು ರೂ.10,000 ದಂಡ.
ಯಾವ ಉದ್ದೇಶಕ್ಕಾಗಿ ಆಧಾರ್ ಅನ್ನು ಉಪಯೋಗಿಸಿಕೊಳ್ಳಬಹುದು? ಆಧಾರ್ ಸಾಧ್ಯತೆಗೊಳಿಸಲಾಗಿರುವ ಅನ್ವಯಗಳು ಯಾವುವು? ಓರ್ವ ನಿವಾಸಿಯು ಆಧಾರ್ ಸಾಧ್ಯತೆಗೊಳಿಸಲಾಗಿರುವ ಅನ್ವಯಗಳ ಮೂಲಕ ಯಾವ ರೀತಿಯಲ್ಲಿ ಪ್ರಯೋಜನಗಳನ್ನು ಪಡೆಯಬಹುದು?keyboard_arrow_down
ಆಧಾರ್ ಎಂದರೆ ಆಧಾರ ಅಥವಾ ಅಡಿಪಾಯ ಎಂಬ ಅರ್ಥವನ್ನು ಕೊಡುತ್ತದೆ,ಆದ್ದರಿಂದ, ಯಾವುದೇ ವಿತರಣಾ ವ್ಯವಸ್ಥೆಯನ್ನು ಅದರ ಆಧಾರದ ಮೇರೆಗೆ ಸೃಷ್ಟಿಸಬಹುದು/ನಿರ್ಮಿಸಬಹುದು.ನಿವಾಸಿಯ ಗುರುತನ್ನು ಸಾಬೀತು ಪಡಿಸುವ ಅಗತ್ಯತೆಯನ್ನು ಹೊಂದಿರುವ ಯಾವುದೇ ವ್ಯವಸ್ಥೆಯಲ್ಲಿ ಆಧಾರ್ ಅನ್ನು ಬಳಸಬಹುದು ಮತ್ತು/ಅಥವಾ ವ್ಯವಸ್ಥೆಯು ನೀಡುವ ಸೇವೆಗಳು/ಪ್ರಯೋಜನಗಳನ್ನು ಗಮನಿಸುವುದಕ್ಕಾಗಿ ನಿವಾಸಿಗೆ ಭದ್ರತೆಯ ಅವಕಾಶವನ್ನು ಒದಗಿಸಬಹುದು. ಈ ಕೆಳಗಿನ ಕಾರ್ಯಕ್ರಮಗಳ ವಿತರಣೆಯಲ್ಲಿ ಆಧಾರ್ ಅನ್ನು ಬಳಸಬಹುದು:
- ಆಹಾರ ಮತ್ತು ಪೌಷ್ಠಿಕಾಂಶಗಳು – ಸಾರ್ವಜನಿಕ ವಿತರಣಾ ವ್ಯವಸ್ಥೆ, ಆಹಾರ ಭದ್ರತೆ, ಮಧ್ಯಾಹ್ನದ ಬಿಸಿಯೂಟ ಯೋಜನೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ
- ಉದ್ಯೋಗ – ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸ್ವರ್ಣಜಯಂತಿ ಗ್ರಾಮ ಸ್ವರೋಝಗಾರ್ ಯೋಜನೆ, ಇಂದಿರಾ ಆವಾಜ್ ಯೋಜನೆ, ಪ್ರಧಾನ ಮಂತ್ರಿಗಳ ಉದ್ಯೋಗ ಖಾತರಿ ಯೋಜನೆ
- ಶಿಕ್ಷಣ – ಸರ್ವ ಶಿಕ್ಷಾ ಅಭಿಯಾನ, ಶಿಕ್ಷಣಕ್ಕಾಗಿ ಹಕ್ಕು
- ಒಳಸೇರ್ಪಡೆ ಮತ್ತು ಸಾಮಾಜಿಕ ಭದ್ರತೆ – ಜನನಿ ಸುರಕ್ಷಾ ಯೋಜನೆ, ಆದಿಮಾನವ ಬುಡಕಟ್ಟು ಗುಂಪುಗಳ ಅಭಿವೃದ್ಧಿ, ಇಂದಿರಾ ಗಾಂಧಿ ರಾಷ್ಟೀಯ ವೃದ್ಧಾಪ್ಯ ಪಿಂಚಣಿ ವ್ಯವಸ್ಥೆ
- ಆರೋಗ್ಯಪಾಲನೆ – ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ಜನಶ್ರೀ ಬಿಮಾ ಯೋಜನೆ, ಆಮ್ ಆದ್ಮಿ ಬಿಮಾ ಯೋಜನೆ
- ಆಸ್ತಿ ವ್ಯವಹಾರಗಳು, ಮತದಾರರ ಗುರುತಿನ ಚೀಟಿ, ಶಾಶ್ವತ ಖಾತೆ ಸಂಖ್ಯೆ ಕಾರ್ಡು, ಇತ್ಯಾದಿ ಇತರೆ ನಾನಾರೀತಿಯ ಉದ್ದೇಶಗಳು.
ಸರ್ಕಾರವು ನೀಡಿರುವ ಇತರೆ ಯಾವುದೇ ಗುರುತಿನ ಚೀಟಿಗಿಂತ ಆಧಾರ್ ಯಾವ ರೀತಿಯಲ್ಲಿ ವಿಭಿನ್ನವಾಗಿದೆkeyboard_arrow_down
ಆಧಾರ್, ಓರ್ವ ನಿವಾಸಿಗೆ ಒಂದು ಜೀವಿತಾವಧಿಗೆ ನೀಡಲಾಗುವ 12 ಅಂಕೆಗಳ ವಿಶಿಷ್ಟ ಯಾದೃಚ್ಛಿಕ ಸಂಖ್ಯೆ, ಆಧಾರ್ ದೃಢೀಕರಣ ವೇದಿಕೆಯನ್ನು ಬಳಸಿಕೊಂಡು ಅದನ್ನು ಆನ್ ಲೈನ್ ಮೂಲಕ ಎಲ್ಲಿಯೇ ಆದರೂ ಯಾವುದೇ ಸಮಯದಲ್ಲಿಯೇ ಆದರೂ ಪರಿಶೀಲಿಸಬಹುದು. ಆಧಾರ್ ದೃಢೀಕರಣವು “ಹೌದು/ಇಲ್ಲ” ಉತ್ತರದೊಂದಿಗೆ ಪ್ರತಿಕ್ರಿಯೆ ನೀಡುತ್ತದೆ. ಆಧಾರ್ ಯೋಜನೆಯು ಪ್ರಾಥಮಿಕವಾಗಿ, ಸೋರಿಕೆಗಳನ್ನು ಮತ್ತು ವ್ಯರ್ಥಗಳನ್ನು ತಡೆಹಿಡಿಯುವ, ನಖಲುಗಳನ್ನು ತೊಡೆದುಹಾಕುವ ಮತ್ತು ಪಾರದರ್ಶಕತೆಯನ್ನು ಮತ್ತು ಉತ್ತರದಾಯಿತ್ವವನ್ನು ಅಧಿಕಗೊಳಿಸುವ ಗುರಿಯಾಗಿಸಿಕೊಂಡಿದೆ.
ಆದಾಯ ತೆರಿಗೆ ಸಲ್ಲಿಕೆಯನ್ನು ಸಲ್ಲಿಸುವ ಸಲುವಾಗಿ ಆಧಾರ್ ಅನ್ನು ನಮೂದಿಸುವುದನ್ನು ಸರ್ಕಾರವು ಕಡ್ಡಾಯಗೊಳಿಸಿದೆಯೇ?keyboard_arrow_down
ಹೌದು, ಹಣಕಾಸು ಅಧಿನಿಯಮ, 2017ರ ಮೂಲಕ ಜಾರಿಗೆ ತರಲಾದ ಆದಾಯ ತೆರಿಗೆ ಅಧಿನಿಯಮ 1961ರ ಪರಿಚ್ಚೇದ 139ಎಎ ಆದಾಯ ತೆರಿಗೆ ಸಲ್ಲಿಕೆಯ ಸಲ್ಲಿಕೆಗಾಗಿ ಮತ್ತು ಶಾಶ್ವತ ಖಾತೆ ಸಂಖ್ಯೆಯ (ಪಿ ಎ ಎನ್) ನೀಡಿಕೆಗಾಗಿ ಅರ್ಜಿ ಸಲ್ಲಿಸುವ ಸಲುವಾಗಿ 1 ಜುಲೈ 2017ರಿಂದ ಜಾರಿಗೆ ಬರುವಂತೆ ಆಧಾರ್/ ನೋಂದಣಿ ಗುರುತಿನ ಸಂಖ್ಯೆಯ ಕಡ್ಡಾಯ ನಮೂದಿಸುವಿಕೆಗೆ ಅನುವು ಮಾಡಿದೆ.
ನನ್ನಲ್ಲಿ ಈಗಾಗಲೇ ಒಂದು ಶಾಶ್ವತ ಖಾತೆ ಸಂಖ್ಯೆ (ಪಿ ಎ ಎನ್) ಇರುವುದು, ಆದಾಯ ತೆರಿಗೆ ಸಲ್ಲಿಕೆಯನ್ನು ಸಲ್ಲಿಸುವುದಕ್ಕಾಗಿ ಅದನ್ನು ನಾನು ನಮೂದಿಸುತ್ತಿರುವೆನು. ನಾನು ಇನ್ನೂ ಆಧಾರ್ ಸಂಖ್ಯೆಯನ್ನು ನಮೂದಿಸುವ ಅಗತ್ಯತೆಯನ್ನು ಹೊಂದಿರುವೆನೆ?keyboard_arrow_down
ಹೌದು, ಆಧಾರ್ ಗೆ ಸಂಪರ್ಕಗೊಂಡಿರದ ಶಾಶ್ವತ ಖಾತೆ ಸಂಖ್ಯೆಗಳು ಡಿಸೆಂಬರ್ 2017ರ ನಂತರ ಅನೂರ್ಜಿತಗೊಳ್ಳುವ ಸಂಭಾವ್ಯತೆಯಿರುತ್ತದೆ.
ನನ್ನ ಹೆಸರು ಶಾಶ್ವತ ಖಾತೆ ಸಂಖ್ಯೆ (ಪಿ ಎ ಎನ್) ಮತ್ತು ಆಧಾರ್ ನಲ್ಲಿ ವಿಭಿನ್ನವಾಗಿದೆ. ಎರಡನ್ನೂ ಸಂಪರ್ಕಿಸುವ ಸಲುವಾಗಿ ಅದು ನನಗೆ ಅವಕಾಶವನ್ನು ನೀಡುತ್ತಿಲ್ಲವೆ. ಅಂತಹ ಸಂದರ್ಭದಲ್ಲಿ ನಾನು ಏನು ಮಾಡಬೇಕು?keyboard_arrow_down
ಆಧಾರ್ ಅನ್ನು ಶಾಶ್ವತ ಖಾತೆ ಸಂಖ್ಯೆಯ (ಪಿ ಎ ಎನ್) ಜೊತೆ ಸಂಪರ್ಕಿಸುವ ಸಲುವಾಗಿ ನಿಮ್ಮ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ವಿವರಗಳು (ಅಂದರೆ ಹೆಸರು, ಲಿಂಗ ಮತ್ತು ಹುಟ್ಟಿದ ದಿನಾಂಕ) ಎರಡೂ ದಾಖಲೆಗಳಲ್ಲಿ ತಾಳೆ ಹೊಂದತಕ್ಕದ್ದು..
ಆಧಾರ್ ನಲ್ಲಿನ ವಾಸ್ತವಿಕ ಮಾಹಿತಿಗೆ ಹೋಲಿಸಿದಲ್ಲಿ ತೆರಿಗೆದಾರರು ಒದಗಿಸಿದ ಆಧಾರ್ ಹೆಸರಿನಲ್ಲಿ ಅಪ್ರಧಾನ/ಸಣ್ಣಪುಟ್ಟ ವ್ಯತ್ಯಾಸವಿದ್ದಲ್ಲಿ, ಒಂದು ಸಲದ ಸಂಕೇತಪದವನ್ನು (ಆಧಾರ್ ಒಟಿಪಿ) ಆಧಾರ್ ಜೊತೆ ನೋಂದಣಿ ಮಾಡಿಸಲಾಗಿರುವ ಮೊಬೈಲಿಗೆ ಕಳುಹಿಸಲಾಗುವುದು. ಹುಟ್ಟಿದ ದಿನಾಂಕ ಮತ್ತು ಲಿಂಗವು ಶಾಶ್ವತ ಖಾತೆ ಸಂಖ್ಯೆ (ಪಿ ಎ ಎನ್) ಮತ್ತು ಆಧಾರ್ ನಲ್ಲಿ ನಿಖರವಾಗಿ ಒಂದೇ ಆಗಿರುವುದನ್ನು ತೆರಿಗೆದಾರರು ಖಚಿತಪಡಿಸಿಕೊಳ್ಳತಕ್ಕದ್ದು.
ಆಧಾರ್ ಹೆಸರು ಶಾಶ್ವತ ಖಾತೆ ಸಂಖ್ಯೆಗಿಂತ (ಪಿ ಎ ಎನ್) ಸಂಪೂರ್ಣ ವಿಭಿನ್ನವಾಗಿರುವಂತಹ ವಿರಳ ಪ್ರಕರಣಗಳಲ್ಲಿ , ಸಂಪರ್ಕತೆಯು ವಿಫಲಗೊಳ್ಳುತ್ತದೆ ಮತ್ತು ಆಧಾರ್ ಅಥವಾ ಶಾಶ್ವತ ಖಾತೆ ಸಂಖ್ಯೆಯ ದತ್ತಸಂಚಯದಲ್ಲಿ ಹೆಸರನ್ನು ಬದಲಾಯಿಸುವಂತೆ ತೆರಿಗೆದಾರರಿಗೆ ಪ್ರಚೋದಿಸುವುದು.
ಟಿಪ್ಪಣಿ: ಶಾಶ್ವತ ಖಾತೆ ಸಂಖ್ಯೆಯನ್ನು (ಪಿ ಎ ಎನ್) ಇಂದಿನದಿನದನ್ನಾಗಿ ಮಾಡುವ ಬಗ್ಗೆ ಪ್ರಶ್ನೆಗಳಿಗೆ https://www.utiitsl.com.ಗೆ ಭೇಟಿ ಕೊಡಿರಿ.
ಆಧಾರ್ ಅನ್ನು ಇಂದಿನದಿನದನ್ನಾಗಿ ಮಾಡುವಿಕೆಗೆ ಸಂಬಂಧಿತ ಮಾಹಿತಿಗೆ ಭಾವಿಗುಪ್ರಾದ ಅಧಿಕೃತ ಜಾಲತಾಣ: www.uidai.gov.in.ಗೆ ಭೇಟಿ ಕೊಡಿರಿ.
ಸಂಪರ್ಕತೆಯ ಸಮಸ್ಯೆಯು ಇನ್ನೂ ಇದ್ದಲ್ಲಿ, ಆದಾಯ ತೆರಿಗೆ ಜಾಲತಾಣಕ್ಕೆ ಭೇಟಿ ಕೊಡಿರಿ ಅಥವಾ ಆಧಾಯ ತೆರಿಗೆ ಕಚೇರಿಯ ಸಹಾಯವಾಣಿಗೆ ಕರೆ ಮಾಡಿರಿ ಎಂಬುದಾಗಿ ನಿಮ್ಮನ್ನು ಕೋರಲಾಗುತ್ತಿದೆ.
ನನ್ನ ಹುಟ್ಟಿದ ತಾರೀಖು ಶಾಶ್ವತ ಖಾತೆ ಸಂಖ್ಯೆ ಮತ್ತು ಆಧಾರ್ ನಲ್ಲಿ ತಾಳೆ ಹೊಂದುವುದಿಲ್ಲ. ಅವುಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಸಹಾಯ ಮಾಡಿರಿ?keyboard_arrow_down
ಎರಡನ್ನೂ ಸಂಪರ್ಕಿಸುವುದಕ್ಕಾಗಿ ನೀವು ನಿಮ್ಮ ಹುಟ್ಟಿದ ದಿನಾಂಕವನ್ನು ಆಧಾರ್ ನಲ್ಲಿ ಅಥವಾ ಶಾಶ್ವತ ಖಾತೆ ಸಂಖ್ಯೆಯಲ್ಲಿ ಸರಿಪಡಿಸತಕ್ಕದ್ದು. ಸಂಪರ್ಕ ಸಮಸ್ಯೆಯು ಇನ್ನೂ ಇದ್ದಲ್ಲಿ, ನೀವು ಆದಾಯ ತೆರಿಗೆ ಇಲಾಖೆಯನ್ನು ದಯವಿಟ್ಟು ಸಂಪರ್ಕಿಸುವುದು.
ನನ್ನಲ್ಲಿ ಹುಟ್ಟಿದ ದಿನಾಂಕಕ್ಕೆ ಸಂಬಂಧಿತ ಯಾವುದೇ ಸಾಕ್ಷಾಧಾರಗಳಿರುವುದಿಲ್ಲ. ಸಂಪರ್ಕತೆಯನ್ನು ಪೂರ್ಣಗೊಳಿಸುವುದಕ್ಕಾಗಿ ನನ್ನ ಹುಟ್ಟಿದ ದಿನಾಂಕವನ್ನು ಆಧಾರ್ ನಲ್ಲಿ ಅಥವಾ ಶಾಶ್ವತ ಖಾತೆ ಸಂಖ್ಯೆಯಲ್ಲಿ (ಪಿ ಎ ಎನ್) ಯಾವ ರೀತಿಯಲ್ಲಿ ಇಂದಿನದಿನದkeyboard_arrow_down
ಆಧಾರ್ ನಲ್ಲಿ, ನಿವಾಸಿಯು ಹುಟ್ಟಿದ ದಿನಾಂಕದ ದಾಖಲೆಗಳ ಸಾಕ್ಷಾಧಾರವನ್ನು ಒದಗಿಸಿದಲ್ಲಿ , ಹುಟ್ಟಿದ ದಿನಾಂಕವನ್ನು “ಪರಿಶೀಲಿಸಲಾಗಿದೆ” ಎಂಬುದಾಗಿ ಪರಿಗಣಿಸಲಾಗುವುದು. ನಿವಾಸಿಯು ಹುಟ್ಟಿದ ದಿನಾಂಕವನ್ನು ಯಾವುದೇ ಸಾಕ್ಷಾಧಾರಗಳಿಲ್ಲದೆಯೇ ನಮೂದಿಸಿದ್ದಲ್ಲಿ, ಹುಟ್ಟಿಕ್ದ ದಿನಾಂಕವನ್ನು “ಘೋಷಿಸಲಾಗಿದೆ” ಎಂಬುದಾಗಿ ಪರಿಗಣಿಸಲಾಗುವುದು.
ಆಧಾರ್ ಗೆ ಸಂಪರ್ಕಿಸದಿದ್ದಲ್ಲಿ ನನ್ನ ಶಾಶ್ವತ ಖಾತೆ ಸಂಖ್ಯೆಯು ನಿಷ್ಕ್ರಿಯಗೊಳ್ಳುವುದೆ?keyboard_arrow_down
ಭಾವಿಗುಪ್ರಾವು ಆಧಾರ್ ಅನ್ನು ಮಾತ್ರ ನೀಡುವುದು ಮತ್ತು ಅದನ್ನು ದೃಢೀಕರಿಸಲು ಮಾರ್ಗವನ್ನು ಒದಗಿಸುವುದು. ಯಾವುದೇ ಉತ್ಪನ್ನ ಅಥವಾ ಯೋಜನೆಗೆ ಸಂಬಂಧಿತ ಪ್ರಶ್ನೆಗಳಿಗಾಗಿ , ಸಂಬಂಧಿತ ಉತ್ಪನ್ನ/ಯೋಜನೆಯ ಮಾಲೀಕರನ್ನು ಸಂಪರ್ಕಿಸಬೇಕಾಗಿ ನಾವು ನಿಮ್ಮನ್ನು ಕೋರುತ್ತಿದ್ದೇವೆ. ಶಾಶ್ವತ ಖಾತೆ ಸಂಖ್ಯೆಗೆ ಸಂಬಂಧಿತ ಪ್ರಶ್ನೆಗಳಿಗೆ, ಆದಾಯ ತೆರಿಗೆ ಇಲಾಖೆಯನ್ನು ಸಂಪರ್ಕಿಸಬೇಕಾಗಿ ನಾವು ನಿಮ್ಮನ್ನು ಕೋರುತ್ತಿದ್ದೇವೆ.
ಭಾರತದಲ್ಲಿ ತೆರಿಗೆ ಸಲ್ಲಿಕೆಗಳನ್ನು ಸಲ್ಲಿಸಲು ಅಥವಾ ಪಿಎಎನ್ ಗಾಗಿ ಅರ್ಜಿಸಲು ಆಧಾರ್ ಗೆ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವೇ? ಹೌದು ಎಂದಾದಲ್ಲಿ ಅನಿವಾಸಿ ಭಾರತೀಯರಿಗಾಗಿ ಯಾವ ಕಾರ್ಯವಿಧಾನಗಳಿರುತ್ತವೆ?keyboard_arrow_down
ಆದಾಯ ತೆರಿಗೆ ಸಲ್ಲಿಕೆಯನ್ನು ಸಲ್ಲಿಸುವುದಕ್ಕಾಗಿ ಮತ್ತು ಶಾಶ್ವತ ಖಾತೆ ಸಂಖ್ಯೆಯ (ಪಿ ಎ ಎನ್) ನೀಡಿಕೆಗಾಗಿ ಸಲ್ಲಿಸಲಾಗುವ ಅರ್ಜಿಗೆ 1 ಜುಲೈ 2017ರಿಂದ ಜಾರಿಗೆ ಬರುವಂತೆ ಆಧಾರ್/ಆಧಾರ್ ಅರ್ಜಿ ನಮೂನೆಯ ನೋಂದಣಿ ಗುರುತಿನ ಸಂಖ್ಯೆಯನ್ನು ನಮೂದಿಸುವುದನ್ನು ಕಡ್ಡಾಯಗೊಳಿಸುವುದನ್ನು ಹಣಕಾಸು ಅಧಿನಿಯಮ, 2017 ಎಂಬುದಾಗಿ ಜಾರಿಗೆ ತರಲಾದ ಆಧಾಯ ತೆರಿಗೆ ಅಧಿನಿಯಮ, 1961ರ ಪರಿಚ್ಚೇದ 139ಎಎ ಅನುವು ಮಾಡಿದೆ.
ಆಧಾರ್ ಅಥವಾ ನೋಂದಣಿ ಗುರುತಿನ ಸಂಖ್ಯೆಯ ಅಂತಹ ಕಡ್ಡಾಯ ನಮೂದಿಸುವಿಕೆಯು ಆಧಾರ್ ಸಂಖ್ಯೆಯನ್ನು ಪಡೆಯಲು ಅರ್ಹರಿರುವ ವ್ಯಕ್ತಿಗೆ ಮಾತ್ರ ಅನ್ವಯಿಸುತ್ತದೆ.
ಆಧಾರ್ (ಹಣಕಾಸು ಮತ್ತಿತರ ಸಹಾಯಧನ, ಪ್ರಯೋಜನಗಳೂ ಮತ್ತು ಸೇವೆಗಳು) ಅಧಿನಿಯಮ, 2016ರ ಪ್ರಕಾರ, ಕೇವಲ ಓರ್ವ ನಿವಾಸಿ ವೈಯಕ್ತಿಕ ವ್ಯಕ್ತಿಯು ಮಾತ್ರ ಆಧಾರ್ ಅನ್ನು ಪಡೆಯುವ ಅರ್ಹತೆಯನ್ನು ಹೊಂದಿರುತ್ತಾರೆ. ಮೇಲೆ ತಿಳಿಸಲಾದ ಅಧಿನಿಯಮದ ಪ್ರಕಾರ ನಿವಾಸಿ ಎಂದರೆ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸಿದ ದಿನಾಂಕಕ್ಕೆ ತತ್ ಕ್ಷಣದ ಮೊದಲಿನ ಹನ್ನೆರಡು ತಿಂಗಳುಗಳಲ್ಲಿ ಒಟ್ಟಾರೆ ಒಂದು ನೂರ ಎಂಬತ್ತ ಎರಡು ದಿನಗಳು ಅಥವಾ ಅದಕ್ಕೂ ಹೆಚ್ಚಿನ ಅವಧಿ ಅಥವಾ ಅವಧಿಗಳಲ್ಲಿ ಭಾರತದಲ್ಲಿ ನೆಲೆಸಿರುವ ಓರ್ವ ವ್ಯಕ್ತಿ.
ನಾನು ನನ್ನ ಆಧಾರ್ ಸಂಖ್ಯೆಗಾಗಿ ನೋಂದಣಿ ಮಾಡಿಸಿರುವೆನು, ಆದರೆ ಆಧಾರ್ ಸಂಖ್ಯೆಯನ್ನು ಇನ್ನೂ ಸ್ವೀಕರಿಸಿರುವುದಿಲ್ಲ, ನಾನು ನನ್ನ ಆದಾಯ ತೆರಿಗೆ ಸಲ್ಲಿಕೆಯನ್ನು ಸಲ್ಲಿಸಬಹುದೆ?keyboard_arrow_down
ಹೌದು, ನೋಂದಣಿಯ ಸಮಯದಲ್ಲಿ ನೋಂದಣಿ ಕೇಂದ್ರವು ನೀಡಿದ್ದ ಸ್ವೀಕೃತಿ ಪತ್ರ/ವಿಶಿಷ್ಟ ಗುರುತು ಚೀಟಿಯಲ್ಲಿ ನಮೂದಿಸಲಾಗಿರುವ ವಿಶಿಷ್ಟ ಗುರುತು ಸಂಖ್ಯೆಯನ್ನು ಆದಾಯ ತೆರಿಗೆ ಸಲ್ಲಿಕೆಯನ್ನು ಸಲ್ಲಿಸುವ ಸಮಯದಲ್ಲಿ ನಮೂದಿಸಬಹುದು.
ಅನಿವಾಸಿ ಭಾರತೀಯರು ಆಧಾರ್ ಅನ್ನು ಪಡೆಯಬಹುದೆ?keyboard_arrow_down
ಆಧಾರ್ (ಹಣಕಾಸು ಮತ್ತಿತರ ಸಹಾಯಧನಗಳು, ಪ್ರಯೋಜನಗಳು ಮತ್ತು ಸೇವೆಗಳು) ಅಧಿನಿಯಮ, 2016ರ ಅನುಸಾರ, ನೋಂದಣಿಗಾಗಿ ಅರ್ಜಿಸಲ್ಲಿಸಿದ ದಿನಾಂಕದಿಂದ ತತ್ ಕ್ಷಣದ ಹಿಂದಿನ 12 ತಿಂಗಳುಗಳಲ್ಲಿ 182 ದಿನಗಳು ಅಥವಾ ಅದಕ್ಕೂ ಹೆಚ್ಚಿನ ಅವಧಿಯಲ್ಲಿ ಭಾರತದಲ್ಲಿ ನೆಲೆಸಿರುವ ಓರ್ವ ನಿವಾಸಿಯು ಮಾತ್ರ ಆಧಾರ್ ಗೆ ಅರ್ಹತೆಯನ್ನು ಹೊಂದಿರುತ್ತಾರೆ.
ನಾನು ಇದೀಗ ಅನಿವಾಸಿ ಭಾರತೀಯನಾಗಿರುವೆನು ಮತ್ತು ಒಂದು ಆಧಾರ್ ಅನ್ನು ಹೊಂದಿರುವೆನು. ನಾನು ಅದನ್ನು ಶಾಶ್ವತ ಖಾತೆ ಸಂಖ್ಯೆಗೆ (ಪಿ ಎ ಎನ್) ಯಾವ ರೀತಿ ಸಂಪರ್ಕಿಸಬಹುದು?keyboard_arrow_down
ಶಾಶ್ವತ ಖಾತೆ ಸಂಖ್ಯೆ (ಪಿ ಎ ಎನ್) ಮತ್ತು ಆಧಾರ್ ಕಾರ್ಡುಗಳನ್ನು ಸಂಪರ್ಕಿಸುವ ಸಲುವಾಗಿ, ತೆರಿಗೆದಾರರು ಆದಾಯ ತೆರಿಗೆ ಇ-ಸಲ್ಲಿಕೆ ಪೋರ್ಟಲಿನಲ್ಲಿ ಮೊದಲು ನೋಂದಣಿ ಮಾಡಿಸಿಕೊಳ್ಳತಕ್ಕದ್ದು. ಅವರು ಆ ರೀತಿ ಮಾಡಿದ ಕೂಡಲೇ, ಅವರು ಈ ಕೆಳಗಿನ ಕ್ರಮಗಳನ್ನು ಅನುಸರಿಸತಕ್ಕದ್ದು:
ಲಾಗ್-ಇನ್ ವಿಶಿಷ್ಟ ಗುರುತು, ಸಂಕೇತಪದ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ಆದಾಯ ತೆರಿಗೆ ಇಲಾಖೆಯ ಇ-ಸಲ್ಲಿಕೆ ಪೋರ್ಟಲಿಗೆ ಲಾಗ್ ಇನ್ ಆಗಿರಿ
ಜಾಲತಾಣಕ್ಕೆ ಲಾಗ್-ಇನ್ ಆದ ಕೂಡಲೇ, ನಿಮ್ಮ ಶಾಶ್ವತ ಖಾತೆ ಸಂಖ್ಯೆಯನ್ನು (ಪಿ ಎ ಎನ್) ಆಧಾರ್ ಕಾರ್ಡ್ ಜೊತೆಗೆ ಸಂಪರ್ಕಿಸಲು ನಿಮ್ಮನ್ನು ಪ್ರೇರೇಪಿಸುವ ಒಂದು ಪಾಪ್ ಅಪ್ ಗವಾಕ್ಷಿಯು ಕಾಣಿಸಿಕೊಳ್ಳುವುದು.
ನೋಂದಣಿಯ ಸಮಯದಲ್ಲಿ ನಮೂದಿಸಲಾಗಿರುವ ಹೆಸರು, ಹುಟ್ಟಿದ ದಿನಾಂಕ ಮತ್ತು ಲಿಂಗ ಮುಂತಾದ ವಿವರಗಳು ಇ-ಸಲ್ಲಿಕೆ ಪೋರ್ಟಲಿನಲ್ಲಿ ಕಾಣಿಸಿಕೊಳ್ಳುವವು.
ಪರದೆಯ ಮೇಲೆ ಕಾಣಿಸಿಕೊಂಡಂತಹ ವಿವರಗಳನ್ನು ಆಧಾರ್ ಕಾರ್ಡಿನಲ್ಲಿ ನಮೂದಿಸಲಾಗಿರುವ ವಿವರಗಳ ಜೊತೆ ಪರಿಶೀಲಿಸಿರಿ.
ವಿವರಗಳು ತಾಳೆ ಹೊಂದಿದಲ್ಲಿ, ನಿಮ್ಮ ಆಧಾರ್ ಕಾರ್ಡು ಸಂಖ್ಯೆಯನ್ನು ನಮೂದಿಸಿರಿ ಮತ್ತು “ಇದೀಗ ಸಂಪರ್ಕಿಸಿ” (ಲಿಂಕ್ ನೌ) ಗುಂಡಿಯನ್ನು ಕ್ಲಿಕ್ ಮಾಡಿರಿ.
ಒಂದು ಪಾಪ್-ಅಪ್ ಸಂದೇಶವು ನಿಮ್ಮ ಆಧಾರ್ ಕಾರ್ಡನ್ನು ಶಾಶ್ವತ ಖಾತೆ ಸಂಖ್ಯೆಗೆ (ಪಿ ಎ ಎನ್) ಯಶಸ್ವಿಯಾಗಿ ಸಂಪರ್ಕಿಸಲಾಗಿದೆ ಎಂಬುದಾಗಿ ತಿಳಿಸುತ್ತದೆ.
ನಾನು ಓರ್ವ ಅನಿವಾಸಿ ಭಾರತೀಯ ಮತ್ತು ನಾನು ಆಧಾರ್ ಅನ್ನು ಹೊಂದಿರುವುದಿಲ್ಲ. ನಾನು ಆಧಾರ್ ಅನ್ನು 30 ಏಪ್ರಿಲ್ ಒಳಗೆ ಒದಗಿಸದಿದ್ದಲ್ಲಿ ನನ್ನ ಶಾಶ್ವತ ಖಾತೆ ಸಂಖ್ಯೆಯನ್ನು (ಪಿ ಎ ಎನ್) ತಡೆಹಿಡಿಯಲಾಗುವುದು ಎಂಬುದು ಸತ್ಯವೇ?keyboard_arrow_down
ಹಣಕಾಸು ಅಧಿನಿಯಮ, 2017ರ ಮೂಲಕ ಜಾರಿಗೆ ತರಲಾದ ಆದಾಯ ತೆರಿಗೆ ಅಧಿನಿಯಮ 1961ರ ಪರಿಚ್ಚೇದ 139ಎಎ ಆದಾಯ ತೆರಿಗೆ ಸಲ್ಲಿಕೆಯ ಸಲ್ಲಿಕೆಗಾಗಿ ಮತ್ತು ಶಾಶ್ವತ ಖಾತೆ ಸಂಖ್ಯೆಯ (ಪಿ ಎ ಎನ್) ನೀಡಿಕೆಗಾಗಿ ಅರ್ಜಿ ಸಲ್ಲಿಸುವ ಸಲುವಾಗಿ 1 ಜುಲೈ 2017ರಿಂದ ಜಾರಿಗೆ ಬರುವಂತೆ ಆಧಾರ್/ ನೋಂದಣಿ ಗುರುತಿನ ಸಂಖ್ಯೆಯ ಕಡ್ಡಾಯ ನಮೂದಿಸುವಿಕೆಗೆ ಅನುವು ಮಾಡಿದೆ. ಆಧಾರ್ ಅನ್ನು ಪಡೆಯಲು ಅರ್ಹತೆಯಿರುವಂತಹ ಓರ್ವ ವ್ಯಕ್ತಿಗೆ ಮಾತ್ರ ಆಧಾರ್ ಅಥವಾ ನೋಂದಣಿ ಗುರುತಿನ ಸಂಖ್ಯೆಯ ಅಂತಹ ಕಡ್ಡಾಯ ನಮೂದಿಸುವಿಕೆಯು ಅನ್ವಯಗೊಳ್ಳುತ್ತದೆ ಎಂಬುದಾಗಿ ಸ್ಪಷ್ಟನೆಯನ್ನು ನೀಡಲಾಗಿದೆ. ಆಧಾರ್ (ಹಣಕಾಸು ಮತ್ತು ಇತರೆ ಸಹಾಯಧನಗಳು, ಪ್ರಯೋಜನಗಳು ಮತ್ತು ಸೇವೆಗಳು) ಅಧಿನಿಯಮ, 2016 ರ ಅನುಸಾರ, ಓರ್ವ ನಿವಾಸಿ ವೈಯಕ್ತಿಕ ವ್ಯಕ್ತಿಯು ಮಾತ್ರ ಆಧಾರ್ ಅನ್ನು ಪಡೆಯುವ ಅರ್ಹತೆಯನ್ನು ಹೊಂದಿರುತ್ತಾರೆ. ಮೇಲೆ ತಿಳಿಸಲಾದ ಅಧಿನಿಯಮದ ಅನುಸಾರ ನಿವಾಸಿ ಎಂದರೆ ನೋಂದಣಿಗಾಗಿ ಅರ್ಜಿಸಲ್ಲಿಸಿದ ದಿನಾಂಕದಿಂದ ತತ್ ಕ್ಷಣದ ಹಿಂದಿನ 12 ತಿಂಗಳುಗಳಲ್ಲಿ 182 ದಿನಗಳು ಅಥವಾ ಅದಕ್ಕೂ ಹೆಚ್ಚಿನ ಅವಧಿಯಲ್ಲಿ ಭಾರತದಲ್ಲಿ ನೆಲೆಸಿರುವ ಓರ್ವ ನಿವಾಸಿಯು ಮಾತ್ರ. ಅದರಂತೆಯೇ, ಆದಾಯ ತೆರಿಗೆ ಅಧಿನಿಯಮದ ಪರಿಚ್ಚೇದ 139 ಎಎ ಅನುಸಾರ ಆಧಾರ್ ಅನ್ನು ನಮೂದಿಸುವ ಅಗತ್ಯತೆಯು ಆಧಾರ್ ಅಧಿನಿಯಮ, 2016ರ ಪ್ರಕಾರ ನಿವಾಸಿಯಾಗಿರದ ಓರ್ವ ವೈಯಕ್ತಿಕ ವ್ಯಕ್ತಿಗೆ ಅನ್ವಯಗೊಳ್ಳುವುದಿಲ್ಲ.
ನಿವಾಸಿಯ ಗೋಪ್ಯತೆಯ ಹಕ್ಕನ್ನು ರಕ್ಷಿಸುವ ಸಲುವಾಗಿ ಇರುವಂತಹ ಗೋಪ್ಯತೆ ಸಂರಕ್ಷಣೆಗಳು ಯಾವುವು?keyboard_arrow_down
ವೈಯಕ್ತಿಕ ವ್ಯಕ್ತಿಗಳ ರಕ್ಷಣೆ ಮತ್ತು ಅವರ ಮಾಹಿತಿಯ ಸಂರಕ್ಷಣೆಯು ವಿಶಿಷ್ಟ ಗುರುತು ಯೋಜನೆಯ ಒಂದು ಅಂತರ್ಗತ ಭಾಗವಾಗಿದೆ. ಒಂದು ಯಾದೃಚ್ಛಿಕ ಸಂಖ್ಯೆಯನ್ನು ಹೊಂದಿರಿವುದರಿಂದ, ಅದು ಈ ಕೆಳಗೆ ಪಟ್ಟಿ ಮಾಡಲಾಗಿರುವ ಇತರೆ ವೈಲಕ್ಷಣಗಳ ಜೊತೆಯಲ್ಲಿ ವೈಯಕ್ತಿಕ ವ್ಯಕ್ತಿಯ ಬಗ್ಗೆ ಏನನ್ನೂ ಬಹಿರಂಗಪಡಿಸುವುದಿಲ್ಲ, ವಿಶಿಷ್ಟ ಗುರುತು ಯೋಜನೆಯು ನಿವಾಸಿಯ ಹಿತಾಸಕ್ತಿಯನ್ನು ತನ್ನ ಉದ್ದೇಶ ಮತ್ತು ಗುರಿಗಳ ಅಂತರಂಗದಲ್ಲಿ ಇಟ್ಟುಕೊಳ್ಳುತ್ತದೆ.
- ಸೀಮಿತ ಮಾಹಿತಿಯ ಸಂಗ್ರಹಣೆ
ಭಾವಿಗುಪ್ರಾವು ಸಂಗ್ರಹಿಸಿದ ಮಾಹಿತಿಯು ಪರಿಪೂರ್ಣವಾಗಿ ಆಧಾರ್ ಸಂಖ್ಯೆಗಳನ್ನು ನೀಡುವುದಕ್ಕಾಗಿ ಮತ್ತು ಆಧಾರ್ ಅನ್ನು ಹೊಂದಿರುವವರ ಗುರುತನ್ನು ಖಚಿತಪಡಿಸುವುದಕ್ಕಾಗಿ. ಭಾವಿಗುಪ್ರಾವು ಗುರುತನ್ನು ಸಾಬೀತುಪಡಿಸುವ ಸಲುವಾಗಿ ಮೂಲ ಮಾಹಿತಿ ಕ್ಷೇತ್ರಗಳನ್ನು ಸಂಗ್ರಹಿಸುತ್ತದೆ – ಇದು ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸ, ತಂದೆತಾಯಿ/ಪೋಷಕರು ಮಕ್ಕಳಿಗೆ ಅತ್ಯಗತ್ಯ, ಆದರೆ ಇತರರಿಗೆ ಇಲ್ಲ, ಮೊಬೈಲು ಸಂಖ್ಯೆ ಮತ್ತು ಇ-ಮೈಲು ವಿಳಾಸವು ಐಚ್ಛಿಕವಾಗಿರುತ್ತದೆ. ಬಾವಿಗುಪ್ರಾವು ವೈಶಿಷ್ಟ್ಯತೆಯನ್ನು ಸಾಬೀತುಪಡಿಸುವುದಕ್ಕಾಗಿ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸುತ್ತದೆ – ಆದ್ದರಿಂದ 10 ಬೆರಳುಗಳ ಮುದ್ರೆಗಳು ಮತ್ತು ಕಣ್ಣಿನ ಪಾಪೆಯ ಸ್ಕ್ಯಾನು, ಇವುಗಳನ್ನು ಸಂಗ್ರಹಿಸುತ್ತದೆ. - ಪಾರ್ಶ್ವಚಿತ್ರಣ ಮತ್ತು ಜಾಡನ್ನು ಹಿಡಿಯುವ ಮಾಹಿತಿಯನ್ನು ಸಂಗ್ರಹಿಸಲಾಗುವುದಿಲ್ಲ.
ಭಾವಿಗುಪ್ರಾದ ಕಾರ್ಯನೀತಿಯು ಜಾತಿ, ಮತ, ಸಮುದಾಯ, ವರ್ಗ, ಜನಾಂಗ, ವರಮಾನ ಮತ್ತು ಆರೋಗ್ಯ, ಇವೇ ಮುಂತಾದ ಸೂಕ್ಷ್ಮತೆಯಿಂದ ಕೂಡಿದ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದನ್ನು ಪ್ರತಿಬಂದಿಸಿದೆ. ವೈಯಕ್ತಿಕ ವ್ಯಕ್ತಿಗಳ ಪಾರ್ಶ್ವಚಿತ್ರಣವನ್ನು ಸೆರೆಹಿಡಿಯುವುದು, ಆದ್ದರಿಂದ, ಸಂಗ್ರಹಿಸಲಾದ ಮಾಹಿತಿಯು ಗುರುತಿಸುವಿಕೆ ಮತ್ತು ಖಚಿತಪಡಿಸುವಿಕೆಗೆ ಸೀಮಿತವಾಗಿರುವುದರಿಂದ ವಿಶಿಷ್ಟ ಗುರುತು ತಂತ್ರಾಂಶ ವ್ಯವಸ್ಥೆಯಲ್ಲಿ ಸಾಧ್ಯವಾಗುವುದಿಲ್ಲ. ಬಾವಿಗುಪ್ರಾವು, ವಾಸ್ತವಿಕವಾಗಿ, ಮಾಹಿತಿಯ ಪ್ರಾರಂಭಿಕ ಪಟ್ಟಿಯಲ್ಲಿ ಒಂದು ಭಾಗವಾಗಿದ್ದ ’ಹುಟ್ಟಿದ ಸ್ಥಳ’ ವನ್ನು ಅದು ಪಾರ್ಶ್ವಚಿತ್ರಣದ ಸೆರೆಹಿಡಿಯುವಿಕೆಗೆ ದಾರಿ ಮಾಡಿಕೊಡುತ್ತದೆ ಎಂಬುದಾಗಿ ಸಿ ಎಸ್ ಒಗಳು ನೀಡಿದ ಪ್ರತಿಕ್ರಿಯೆಯ ಆಧಾರದ ಮೇರೆಗೆ ಕೈಬಿಟ್ಟಿತು. ಭಾವಿಗುಪ್ರಾವು ವೈಯಕ್ತಿಕ ವ್ಯಕ್ತಿಯ ವ್ಯವಹಾರದ ದಾಖಲೆಗಳನ್ನು ಕೂಡ ಸಂಗ್ರಹಿಸುವುದಿಲ್ಲ. ಆಧಾರ್ ಮೂಲಕ ಅವರುಗಳ ಗುರುತನ್ನು ಖಚಿತಪಡಿಸುವ ವೈಯಕ್ತಿಕ ವ್ಯಕ್ತಿಗಳ ದಾಖಲೆಗಳು ಅಂತಹ ಖಚಿತಪಡಿಸುವಿಕೆಯು ಆಗಿದೆ ಎಂಬುದನ್ನು ಮಾತ್ರ ಪ್ರತಿಬಿಂಭಿಸುತ್ತದೆ. ಯಾವುದಾದರೂ ವಿವಾದಗಳು ಇದ್ದಲ್ಲಿ, ಅವುಗಳನ್ನು ಬಗೆಹರಿಸಿಕೊಳ್ಳುವುದಕ್ಕಾಗಿ ನಿವಾಸಿಯ ಹಿತಾಸಕ್ತಿಯಿಂದ ಈ ಸೀಮಿತ ಮಾಹಿತಿಯನ್ನು ಒಂದು ಅಲ್ಪಾವಧಿಗೆ ಉಳಿಸಿಕೊಳ್ಳಲಾಗುವುದು. - ಮಾಹಿತಿಯ ಬಿಡುಗಡೆ – ಹೌದು ಅಥವಾ ಇಲ್ಲ ಪ್ರತಿಕ್ರಿಯೆ ಭಾವಿಗುಪ್ರಾವು ಆಧಾರ್ ದತ್ತಸಂಚಯದಲ್ಲಿ ವೈಯಕ್ತಿಕ ಮಾಹಿತಿಯ ಬಹಿರಂಗಪಡಿಸುವಿಕೆಯನ್ನು ಪ್ರತಿಬಂಧಿಸಿರುತ್ತದೆ - – ಒಂದು ಗುರುತನ್ನು ಪರಿಶೀಲಿಸುವುದಕ್ಕಾಗಿ ಅನುಮತಿಸಲಾಗಿರುವ ಏಕೈಕ ಪ್ರತಿಕ್ರಿಯೆ ಎಂದರೆ ’ಹೌದು’ ಅಥವಾ’ ’ಇಲ್ಲ’ ಎಂಬುದಾಗಿ. ಇದಕ್ಕೆ ವಿನಾಯಿತಿ ಎಂದರೆ ಒಂದು ನ್ಯಾಯಾಲಯದ ಆದೇಶ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ, ಜಂಟಿ ಕಾರ್ಯದರ್ಶಿಯವರ ಆದೇಶ. ಇದು ಒಂದು ನ್ಯಾಯಸಮ್ಮತ ವಿನಾಯಿತಿಯಾಗಿರುತ್ತದೆ ಮತ್ತು ಸುಸ್ಪಷ್ಟವಾಗಿರುತ್ತದೆ ಮತ್ತು ಕರಾರುವಾಕ್ಕಾಗಿದೆ. ಈ ಮಾರ್ಗವು ಅಮೇರಿಕಾ ಮತ್ತು ಯೂರೋಪು ದೇಶಗಳಲ್ಲಿ ಒಂದು ಭದ್ರತೆಯ ಅಪಾಯಕ್ಕೆ ಸಂಬಂಧಿಸಿದಂತೆ ಮಾಹಿತಿಯ ವೀಕ್ಷಣೆಗೆ ಸಂಬಂಧಿಸಿದಂತೆ ಅನುಸರಿಸಲಾಗುವ ಭದ್ರತಾ ಪ್ರಮಾಣಕಗಳ ಅನುಸಾರವೇ ಆಗಿರುತ್ತದೆ.
- ಮಾಹಿತಿಯ ಸಂರಕ್ಷಣೆ ಮತ್ತು ಗೋಪ್ಯತೆ:ಭಾವಿಗುಪ್ರಾವು ತಾನು ಸಂಗ್ರಹಿಸಿದ ಮಾಹಿತಿಯ ಭದ್ರತೆ ಮತ್ತು ಗೋಪ್ಯತೆಯನ್ನು ಖಚಿತಪಡಿಸಿಕೊಳ್ಳುವ ಒಂದು ಬದ್ಧತೆಯನ್ನು ಹೊಂದಿದೆ. ಮಾಹಿತಿಯನ್ನು ಭಾವಿಗುಪ್ರಾವು ಒದಗಿಸಿರುವ ತಂತ್ರಾಂಶ ಅನ್ವಯದಲ್ಲಿ ಸಂಗ್ರಹಿಸಿಡಲಾಗುವುದು ಮತ್ತು ರವಾನೆ/ಸಾಗಣೆಯಲ್ಲಿ ಸೋರಿಕೆಗಳನ್ನು ತಡೆಯುವುದಕ್ಕಾಗಿ ಸಂಕೇತಿಕರಿಸಲಾಗುವುದು/ಲಿಪ್ಯಂತರಣಗೊಳಿಸಲಾಗುವುದು. ತರಬೇತಿ ಹೊಂದಿದ ಮತ್ತು ಪ್ರಮಾಣೀಕೃತ ನೋಂದಣಿದಾರರು ಮಾಹಿತಿಯನ್ನು ಸಂಗ್ರಹಿಸುವರು, ಅವರುಗಳಿಗೂ ಕೂಡ ಸಂಗ್ರಹಿಸಲಾದ ಮಾಹಿತಿಯ ವೀಕ್ಷಣೆಗೆ ಅವಕಾಶವಿರುವುದಿಲ್ಲ.
ಭಾವಿಗುಪ್ರಾವು ತನ್ನ ಮಾಹಿತಿಯ ಭದ್ರತೆ ಮತ್ತು ಪ್ರಾಮಾಣಿಕತೆಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಒಂದು ಸಮಗ್ರ ಭದ್ರತಾ ಕಾರ್ಯನೀತಿಯನ್ನು ಹೊಂದಿದೆ. ಅದು ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪ್ರಕಟಿಸುತ್ತದೆ, ಸಿಐಡಿಆರ್ ಗಾಗಿ ಮಾಹಿತಿ ಭದ್ತತೆಯ ಯೋಜನೆ ಮತ್ತು ಕಾರ್ಯನೀತಿಗಳು ಭಾವಿಗುಪ್ರಾ ಮತ್ತು ಅದರ ಗುತ್ತಿಗೆ ಸಂಸ್ಥೆಗಳಿಂದ ಅನುಸರಣೆಯ ಬಗ್ಗೆ ಲೆಕ್ಕಪರಿಶೋಧನೆಗಾಗಿ ವ್ಯವಸ್ಥೆಗಳು ಸೇರಿದಂತೆ. ಅಲ್ಲದೆಯೇ, ಕಟ್ಟುನಿಟ್ಟಿನ ಭದ್ರತೆ ಮತ್ತು ಸಂಗ್ರಹಣಾ ಶಿಷ್ಟಾಚಾರ/ನಿಯಮಾವಳಿಗಳು ಇರುತ್ತವೆ. ಭದ್ರತೆಯ ಯಾವುದೇ ಉಲ್ಲಂಘನೆಗೆ ದಂಡನಾ ಕ್ರಮಗಳು ಕಟೋರವಾಗಿರುತ್ತವೆ ಮತ್ತು ಗುರುತಿನ ಮಾಹಿತಿಯನ್ನು ಬಹಿರಂಗಗೊಳಿಸಿದ್ದಕ್ಕಾಗಿ ದಂಡನೆಗಳನ್ನೂ ಒಳಗೊಂಡಿರುತ್ತದೆ. ಸಿಐಡಿಆರ್ ಗೆ ಅನಧಿಕೃತ ಪ್ರವೇಶ ಮತ್ತು ಅಕ್ರಮ ಬಳಕೆ ಮತ್ತು ಸಿಐಡಿಆರ್ ನಲ್ಲಿನ ಮಾಹಿತಿಯನ್ನು ಕಾನೂನುಬಾಹಿರವಾಗಿ ತಿದ್ದುವಿಕೆ/ತಿರುಚುವಿಕೆಗಾಗಿ ದಂಡನಾ ಕ್ರಮಗಳ ಪರಿಣಾಮಗಳಿರುತ್ತವೆ - ಇತರೆ ದತ್ತಸಂಚಯಗಳ ಕಡೆಗೆ ಭಾವಿಗುಪ್ರಾದ ಮಾಹಿತಿಯನ್ನು ಒಮ್ಮುಖಗೊಳಿಸುವಿಕೆ ಮತ್ತು ಸಂಪರ್ಕಿಸುವಿಕೆವಿಶಿಷ್ಟ ಗುರುತು ದತ್ತಸಂಚಯವನ್ನು ಇತರೆ ಯಾವುದೇ ದತ್ತಸಂಚಯಗಳ ಜೊತೆಗೆ ಅಥವಾ ಇತರೆ ದತ್ತಸಂಚಯಗಳಲ್ಲಿ ಹೊಂದಿರುವ ಮಾಹಿತಿಯ ಜೊತೆಗೆ ಸಂಪರ್ಕಿಸಲಾಗುವುದಿಲ್ಲ. ಅದರ ಏಕೈಕ ಉದ್ದೇಶವೆಂದರೆ ಒಂದು ಸೇವೆಯನ್ನು ಸ್ವೀಕರಿಸುವ ಸ್ಥಳದಲ್ಲಿ ಓರ್ವ ವ್ಯಕ್ತಿಯ ಗುರುತನ್ನು ಪರಿಶೀಲಿಸುವುದು, ಅದರಲ್ಲಿಯೂ ಕೂಡ ಆಧಾರ್ ಸಂಖ್ಯೆಯನ್ನು ಹೊಂದಿರುವವರ ಒಪ್ಪಿಗೆಯೊಂದಿಗೆ ಮಾತ್ರ. ವಿಶಿಷ್ಟ ಗುರುತು ದತ್ತಸಂಚಯವನ್ನು ಉನ್ನತ ಮಟ್ಟದಲ್ಲಿ ಅನುಮೋದಿಸಲಾದ ಕೆಲವು ಆಯ್ದ ವ್ಯಕ್ತಿಗಳಿಂದ ಭೌತಿಕವಾಗಿ ಮತ್ತು ವಿದ್ಯುನ್ಮಾನೀಯವಾಗಿ ರಕ್ಷಿಸಲಾಗುವುದು. ಅದು ವಿಶಿಷ್ಟ ಗುರುತಿನ ಬಹಳಷ್ಟು ಸಿಬ್ಬಂದಿಗೂ ಸಹ ಲಭ್ಯವಿರುವುದಿಲ್ಲ. ಮಾಹಿತಿಯನ್ನು ಅತ್ಯುತ್ತಮವಾಗಿ ಲಿಪ್ಯಂತರಣಗೊಳಿಸಲಾಗುವುದು ಮತ್ತು ಅಧಿಕ ಮಟ್ಟದ ಭದ್ರತಾ ಮಾಹಿತಿ ಕೊಠಡಿ/ಛಾವಣಿಯಲ್ಲಿ. ಎಲ್ಲಾ ಪ್ರವೇಶ ವಿವರಗಳನ್ನು ಸಮರ್ಪಕವಾಗಿ ದಾಖಲಿಸಲಾಗಿರುವುದು.
ವಿಶಿಷ್ಟ ಗುರುತು ದತ್ತಸಂಚಯವನ್ನು ಯಾರು ವೀಕ್ಷಿಸಬಹುದು? ದತ್ತಸಂಚಯದ ಭದ್ರತೆಯನ್ನು ಯಾವ ರೀತಿ ಖಚಿತಪಡಿಸಿಕೊಳ್ಳಲಾಗುವುದು?keyboard_arrow_down
- ಆಧಾರ್ ಸಂಖ್ಯೆಗಳನ್ನು ಹೊಂದಿರುವ ನಿವಾಸಿಗಳು ವಿಶಿಷ್ಟ ಗುರುತು ದತ್ತಸಂಚಯದಲ್ಲಿ ಸಂಗ್ರಹಿಸಿಡಲಾಗಿರುವ ತಮ್ಮದೇ ಆದಂತಹ ಮಾಹಿತಿಯನ್ನು ವೀಕ್ಷಿಸುವ ಅರ್ಹತೆಯನ್ನು ಹೊಂದಿರುತ್ತಾರೆ.
- ದತ್ತಸಂಚಯದ ಪ್ರವೇಶವನ್ನು ಸೀಮಿತಗೊಳಿಸುವುದಕ್ಕಾಗಿ ಸಿಐಡಿಆರ್ ಕಾರ್ಯಾಚರಣೆಗಳು ಒಂದು ಕಟ್ಟುನಿಟ್ಟಿನ ಪ್ರವೇಶ ನಿಯಮಗಳನ್ನು ಅನುಸರಿಸುತ್ತವೆ.
- ಅತಿಕ್ರಮ ಪ್ರವೇಶ/ಬಳಕೆ ಮತ್ತು ಸೈಬರ್ ದಾಳಿಗಳ ಮತ್ತಿತರ ನಮೂನೆಗಳ ಪ್ರತಿಯಾಗಿ ದತ್ತಸಂಚಯವು ಸ್ವತ: ಭದ್ರತೆಯಿಂದ ಕೂಡಿರುವುದು.
ನಿವಾಸಿಗಳ ಕುಂದುಕೊರತೆಗಳನ್ನು ಯಾವ ರೀತಿಯಲ್ಲಿ ನಿವಾರಿಸಲಾಗುವುದು?keyboard_arrow_down
ಭಾವಿಗುಪ್ರಾವು ಎಲ್ಲಾ ಪ್ರಶ್ನೆಗಳು ಮತ್ತು ಕುಂದುಕೊರತೆಗಳ ನಿರ್ವಹಣೆಗಾಗಿ ಒಂದು ಸಂಪರ್ಕ ಕೇಂದ್ರವನ್ನು ಸ್ಥಾಪಿಸುವುದು ಮತ್ತು ಸಂಸ್ಥೆಗಾಗಿ ಏಕ ಗವಾಕ್ಷಿ ಸಂಪರ್ಕ ಕೇಂದ್ರವಾಗಿ ಸೇವೆ ಸಲ್ಲಿಸುವುದು. ಸಂಪರ್ಕ ಕೇಂದ್ರದ ವಿವರಗಳನ್ನು ನೋಂದಣಿಯು ಪ್ರಾರಂಭವಾದಂತೆಲ್ಲಾ ಜಾಲತಾಣದಲ್ಲಿ ಪ್ರಕಟಿಸಲಾಗುವುದು.
- ಈ ವ್ಯವಸ್ಥೆಯ ಬಳಕೆದಾರರು ನಿವಾಸಿಗಳು, ನೋಂದಣಿ ಅಧಿಕಾರಿಗಳು/ರಿಜಿಸ್ಟ್ರಾರ್ ಗಳು ಮತ್ತು ನೋಂದಣಿ ಸಂಸ್ಥೆಗಳು ಎಂಬುದಾಗಿ ನಿರೀಕ್ಷಿಸಲಾಗುತ್ತಿದೆ.
- ನೋಂದಣಿಯನ್ನು ನಿರೀಕ್ಷಿಸುತ್ತಿರುವ ಯಾವುದೇ ನಿವಾಸಿಗೆ ನೋಂದಣಿ ಸಂಖ್ಯೆಯೊಂದಿಗೆ ಒಂದು ಮುದ್ರಿತ ಸ್ವೀಕೃತಿ ಪತ್ರವನ್ನು ನೀಡಲಾಗುವುದು, ಅದು ಸಂಪರ್ಕ ಕೇಂದ್ರದ ಯಾವುದೇ ಸಂಪರ್ಕ ಮಾಧ್ಯಮದ ಮೂಲಕ ಆಕೆಯ/ಆತನ ನೋಂದಣಿ ಸ್ಥಿತಿಗತಿಯ ಬಗ್ಗೆ ವಿಚಾರಣೆಗಳನ್ನು ಮಾಡಲು ನಿವಾಸಿ ಅನುಕೂಲ ಕಲ್ಪಿಸುವುದು.
- ಪ್ರತಿಯೊಂದು ನೋಂದಣಿ ಸಂಸ್ಥೆಗೆ ಒಂದು ವಿಶಿಷ್ಟ ಸಂಕೇತವನ್ನು ನೀಡಲಾಗುವುದು, ಅದು ಕೂಡ ಒಂದು ತಾಂತ್ರಿಕ ಸಹಾಯ ಪೀಠವನ್ನು ಒಳಗೊಂಡಂತಹ ಸಂಪರ್ಕ ಕೇಂದ್ರದ ಒಂದು ತ್ವರಿತ ಮತ್ತು ಕೇಂದ್ರೀಕೃತ ಪ್ರವೇಶಕ್ಕೆ ಅನುಕೂಲ ಕಲ್ಪಿಸುತ್ತದೆ.
ಓರ್ವ ನಿವಾಸಿಯು ಆಧಾರ್ ಬೇಡವೆಂಬುದಾಗಿ ಆಯ್ಕೆ ಮಾಡಿಕೊಳ್ಳಬಹುದೆ?keyboard_arrow_down
ಆಧಾರ್ ಗಾಗಿ ನೋಂದಣಿ ಮಾಡಿಸಿಕೊಳ್ಳುವುದೇ ಬೇಡ ಎಂಬುದಾಗಿ ನಿವಾಸಿಯು ಮೊದಲ ದೃಷ್ಟಾಂತದಲ್ಲಿಯೇ ಆಯ್ಕೆ ಮಾಡಿಕೊಳ್ಳಬಹುದು. ಆಧಾರ್ ಒಂದು ಸೇವಾ ವಿತರಣಾ ಸಾಧನವಾಗಿರುತ್ತದೆಯೇ ಹೊರತು ಇತರೆ ಯಾವುದೇ ಉದ್ದೇಶಕ್ಕಾಗಿ ನಿರೂಪಿಸಲಾಗಿಲ್ಲ. ಆಧಾರ್ ಪ್ರತಿಯೋರ್ವ ನಿವಾಸಿಗೂ ಒಂದು ವಿಶಿಷ್ಟವಾಗಿದ್ದು, ವರ್ಗಾಯಿಸಲು ಸಾಧ್ಯವಿರುವುದಿಲ್ಲ. ನಿವಾಸಿಯು ಆಧಾರ್ ಅನ್ನು ಬಳಸಲು ಇಚ್ಚೆಪಡದಿದ್ದಲ್ಲಿ, ಬಳಕೆಯು ಓರ್ವ ವ್ಯಕ್ತಿಯ ಭೌತಿಕ ಉಪಸ್ಥಿತಿ ಮತ್ತು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯ ದೃಢೀಕರಣದ ಆಧಾರಿತವಾಗಿರುವುದರಿಂದ ಅದು ನಿಷ್ಕ್ರಿಯವಾಗಿರುತ್ತದೆ. ಆದಾಗ್ಯೂ, ಪ್ರಸ್ತುತ, ಆಧಾರ್ ದತ್ತಸಂಚಯದಿಂದ ಹೊರಹೋಗಲು ಯಾವುದೇ ಅನುವು ಇರುವುದಿಲ್ಲ, ಆದರೆ, ನಿವಾಸಿಯನ್ನು ಹೊರತುಪಡಿಸಿ, ಅವರ ಆಧಾರ್ ಅನ್ನು ಇತರೆ ಯಾವುದೇ ವ್ಯಕ್ತಿಯೂ ಬಳಸಲು ಸಾಧ್ಯವಾಗುವುದಿಲ್ಲ.
ನಿವಾಸಿಯ ಮಾಹಿತಿಯನ್ನು ಆಧಾರ್ ದತ್ತಸಂಚಯದಿಂದ ಅಳಿಸಿಹಾಕಬಹುದೆ?keyboard_arrow_down
ಸರ್ಕಾರದಿಂದ ಬಳಸಿಕೊಳ್ಳಲಾಗುವ ಇತರೆ ಸೇವೆಗಳಿಗೆ ಸಂಬಂಧಿಸಿದಂತೆಯೇ, ನಿವಾಸಿಯ ಮಾಹಿತಿಯನ್ನು ಅವರು ಆಧಾರ್ ತಮ್ಮ ಆಧಾರ್ ಅನ್ನು ಪಡೆದುಕೊಂಡನಂತರ ದತ್ತಸಂಚಯದಿಂದ ತೆಗೆದುಹಾಕಲು ಯಾವುದೇ ಅನುವು ಇರುವುದಿಲ್ಲ. ನಿವಾಸಿಯ ವೈಶಿಷ್ಟ್ಯತೆಯನ್ನು ಸಾಬೀತುಪಡಿಸುವುದಕ್ಕಾಗಿ ಪ್ರಸ್ತುತ ಇರುವ ಎಲ್ಲಾ ದಾಖಲೆಗಳ ಪ್ರತಿಯಾಗಿ ಹೊಸದಾಗಿ ಪ್ರವೇಶಿಸುವ ಪ್ರತಿಯೋರ್ವ ನಕಲುಗಳನ್ನು ತೆಗೆದುಹಾಕಲು ಕೂಡ ಮಾಹಿತಿಯ ಅಗತ್ಯತೆಯಿರುತ್ತದೆ. ಈ ಪ್ರಕ್ರಿಯೆಯು ಪೂರ್ಣಗೊಂಡನಂತರವಷ್ಟೇ ಆಧಾರ್ ಅನ್ನು ನೀಡಲಾಗುವುದು.
ಎಂ-ಆಧಾರ್ ತಂತ್ರಾಂಶ ಅನ್ವಯವು ಒಂದು ಸಲದ ಸಂಕೇತಪದವನ್ನು ಸ್ವಯಂಚಾಲಿತವಾಗಿ ಓದುವುದಿಲ್ಲ.keyboard_arrow_down
ಎಂ-ಆಧಾರ್ ಆಪ್ ಅನ್ನು ಸ್ಥಾಪಿಸುವ ವೇಳೆಯಲ್ಲಿ ಎಲ್ಲಾ ಅನುಮತಿಗಳನ್ನೂ ಪರಿಶೀಲಿಸಿರಿ (ಎಸ್ಎಂಎಸ್ ಅನ್ನು ಓದುವುದಕ್ಕಾಗಿ ತಂತ್ರಾಂಶ ಅನ್ವಯಕ್ಕೆ ಅವಕಾಶ ಮಾಡಿಕೊಡುವುದು)
ಅಥವಾ
- ಎ) ದೂರವಾಣಿಯ ಸೆಟ್ಟಿಂಗ್ಸ್ ಗೆ ಹೋಗಿರಿ
- ಬಿ) ಅನುಮತಿಗಳ ನಿಯಂತ್ರಣಕ್ಕೆ ಹೋಗಿರಿ
- ಸಿ) ಆಪ್ ಗಳಿಗೆ ಹೋಗಿರಿ
- ಡಿ) ಎಂ-ಆಧಾರ್ ಆಪ್ ಗೆ ಹೋಗಿರಿ
- ಎಸ್ಎಂಎಸ್ ಆಯ್ಕೆಯನ್ನು ಓದಲು ಅವಕಾಶ ಮಾಡಿಕೊಡುವುದು
ಎಂ-ಆಧಾರ್ ಆಪ್ ನಲ್ಲಿ ನಿವಾಸಿಯು ಯಾವ ರೀತಿ ತಮ್ಮ ಪಾರ್ಶ್ವಚಿತ್ರಣವನ್ನು ಸೃಷ್ಟಿಸಬಹುದು?keyboard_arrow_down
- ಎ) 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಊಡಿಕೆ ಮಾಡಿರಿ ಅಥವಾ ನಿಮ್ಮ ಆಧಾರ್ ಕಾರ್ಡ್ ಅನ್ನು ಸ್ಕ್ಯಾನ್ ಮಾಡಿರಿ
- ಬಿ) ನಿಮ್ಮ ಮೊಬೈಲು ಸಂಪರ್ಕವು ಸಕ್ರಿಯವಾಗಿದೆ ಹಾಗೂ ಮೊಬೈಲು ಸಂಖ್ಯೆಯು ಭಾವಿಗುಪ್ರಾದಲ್ಲಿ ನಿಮ್ಮ ನೊಂದಾಯಿತ ಮೊಬೈಲು ಸಂಖ್ಯೆಯೇ ಆಗಿರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ.
- ಸಿ) ಅಗತ್ಯ ಮಾಹಿತಿಯನ್ನು ಊಡಿಕೆ ಮಾಡಿದನಂತರ ಪರದೆಯ ಕೆಳಮಟ್ಟದಲ್ಲಿ ಲಭ್ಯವಿರುವ ’ ಪರಿಶೀಲಿಸಿ’ ಗುಂಡಿಯನ್ನು ಒತ್ತಿರಿ. ’ಪರಿಶೀಲಿಸಿ’ ಗುಂಡಿಯನ್ನು ಒತ್ತಿದನಂತರ ಪರದೆಯಿಂದ ದೂರ ಚಲಿಸಬೇಡಿ.
- ಡಿ) ನೀವು ಒದಗಿಸಿರುವ ವಿವರಗಳು ಸರಿಯಾಗಿವೆ ಎಂಬುದಾಗಿ ಕಂಡುಬಂದಲ್ಲಿ, ತಂತ್ರಾಂಶ ಅನ್ವಯವು ಒಂದು ಸಲದ ಸಂಕೇತಪದವನ್ನು ಸ್ವೀಕರಿಸುವುದು ಮತ್ತು ಒಂದು ಸಲದ ಸಂಕೇತಪದವನ್ನು ದೂರವಾಣಿಯಿಂದ ಸ್ವಯಂಚಾಲಿತವಾಗಿ ಓದುವುದು.
ನಿವಾಸಿಯು ತಮ್ಮ ಪಾರ್ಶ್ವಚಿತ್ರಣವನ್ನು (Profile) ಯಾವ ರೀತಿಯಲ್ಲಿ ವೀಕ್ಷಿಸಬಹುದು?keyboard_arrow_down
ಈ ಕೆಳಗಿನ ಕ್ರಮಗಳನ್ನು ಅನುಸರಿಸುವ ಮೂಲಕ ನಿವಾಸಿಯು ತಮ್ಮ ಪಾರ್ಶ್ವಚಿತ್ರಣವನ್ನು ವೀಕ್ಷಿಸಬಹುದು.
- ಎ) ಆಪ್ ನ ಮುಖಪುಟದ ಮೇಲೆ ನಿಮ್ಮ ಪಾರ್ಶ್ವಚಿತ್ರಣವನ್ನು ಒತ್ತಿರಿ
- ಬಿ) ಪಾರ್ಶ್ವಚಿತ್ರಣ ಸಂಕೇತಪದವನ್ನು ಊಡಿಕೆ ಮಾಡುವ ಮೂಲಕ ಸ್ವಯಂ ನೀವೇ ದೃಢೀಕರಿಸಿರಿ.
- ಸಿ) ಪಾರ್ಶ್ವಚಿತ್ರಣ ಪರದೆಯಲ್ಲಿ ವಿಳಾಸವನ್ನು ವೀಕ್ಷಿಸುವ ಸಲುವಾಗಿ ನಿಮ್ಮ ಪಾರ್ಶ್ವಚಿತ್ರಣವನ್ನು ಮೀಟಿರಿ.
ಎಂ-ಆಧಾರ್ ನಲ್ಲಿ ಇಂದಿನದಿನದನ್ನಾಗಿ ಮಾಡಲಾದ ಪಾರ್ಶ್ವಚಿತ್ರಣವನ್ನು ಯಾವ ರೀತಿ ವೀಕ್ಷಿಸಬಹುದು?keyboard_arrow_down
- ಎ) ನಿಮ್ಮ ಪಾರ್ಶ್ವಚಿತ್ರಣವನ್ನು ತೆರೆಯಿರಿ
- ಬಿ) ಅಪ್ ಡೇಟ್ ಮಾಡಲಾದ ಆಧಾರ್ ಮಾಹಿತಿಯ ವೀಕ್ಷಣೆಗಾಗಿ ಮೇಲ್ತುದಿಯ ಬಲ ಮೂಲೆಯಲ್ಲಿ ಅಪ್ ಡೇಟ್ ಮಾಡಲಾದ ಪಾರ್ಶ್ವಚಿತ್ರಣವನ್ನು ವೀಕ್ಷಿಸಿ’, ಇದನ್ನು ಆಯ್ಕೆ ಮಾಡಿಕೊಳ್ಳಿರಿ.
- ಸಿ) ಸಂಪರ್ಕತೆಗೊಂಡಾಗ ಒಂದು ಸಲದ ಸಂಕೇತಪದವನ್ನು (OTP) ಕಳುಹಿಸಲಾಗುವುದು ಮತ್ತು ಸ್ವಯಂಚಾಲಿತವಾಗಿ ಭರ್ತಿ ಮಾಡಲಾಗುವುದು, ಪಾರ್ಶ್ವಚಿತ್ರಣವನ್ನು ಖಚಿತಪಡಿಸಿಕೊಳ್ಳಲು ಮತ್ತು ವೀಕ್ಷಿಸಲು ’ಓಕೆ’ಯನ್ನು ಸಂಪರ್ಕಿಸಿ.
- ಪಾರ್ಶ್ವಚಿತ್ರಣ ಸಿಂಕ್ ಅನ್ನು ಪ್ರಾರಂಭಿಸುವುದಕ್ಕೆ ಮುಂಚಿತವಾಗಿ ನಿಮ್ಮ ಮೊಬೈಲು ಸಾಧನದಲ್ಲಿ ಜಾಲಸಂಪರ್ಕ ಇರುವುದನ್ನು ಖಚಿತಪಡಿಸಿಕೊಳ್ಳಿರಿ.
ಸಂಕೇತಪದವನ್ನು ಪುನರ್-ಜೋಡಣೆ ಮಾಡುವುದು ಹೇಗೆkeyboard_arrow_down
- ಎ) ಮುಖ ಪುಟ ಪರದೆಯ ಮೇಲೆ ಮೆನುವಿನಿಂದ “ಸಂಕೇತಪದ ಪುನರ್-ಜೋಡಣೆ”ಯನ್ನು ಆಯ್ಕೆ ಮಾಡಿಕೊಳ್ಳಿರಿ
- ಬಿ) ಎಲ್ಲಾ ಕಡ್ಡಾಯ ಕ್ಷೇತ್ರಗಳನ್ನೂ ಒದಗಿಸಿರಿ, ತದನಂತರ ಪರದೆಯ ಕೆಳಭಾಗದಲ್ಲಿರುವ “ಸಂಕೇತಪದ ಪುನರ್-ಜೋಡಣೆ” ಗುಂಡಿಯ ಮೇಲೆ ಕ್ಲಿಕ್ ಮಾಡಿರಿ
- ಸಿ) ಪುನರ್-ಜೋಡಣೆಗಾಗಿ ಹೊಸ ಸಂಕೇತಪದವನ್ನು ಊಡಿಕೆ ಮಾಡಿರಿ.
ನಿವಾಸಿಯು ಎಂ-ಆಧಾರ್ ಆಪ್ ನಿಂದ ಪಾರ್ಶ್ವಚಿತ್ರಣವನ್ನು ಯಾವ ರೀತಿಯಲ್ಲಿ ತೆಗೆದುಹಾಕಬಹುದು?keyboard_arrow_down
ನಿವಾಸಿಯು ಈ ಕೆಳಗಿನ ಕ್ರಮಗಳನ್ನು ಅನುಸರಿಸುವ ಮೂಲಕ ಪಾರ್ಶ್ವಚಿತ್ರಣವನ್ನು ವೀಕ್ಷಿಸಬಹುದು:
- ಎ) ನಿಮ್ಮ ಪಾರ್ಶ್ವಚಿತ್ರಣವನ್ನು ತೆರೆಯಿರಿ ಹಾಗೂ ಮೇಲ್ತುದಿಯ ಬಲಭಾಗದಲ್ಲಿ ಮೆನು ಮೇಲೆ ಕ್ಲಿಕ್ ಮಾಡಿರಿ
- ಬಿ) ಪಾರ್ಶ್ವಚಿತ್ರಣವನ್ನು ತೆಗೆದುಹಾಕುವ ಆಯ್ಕೆಯನ್ನು ಆಯ್ದುಕೊಳ್ಳಿರಿ
- ಸಿ) ಪಾರ್ಶ್ವಚಿತ್ರಣ ಸಂಕೇತಪದವನ್ನು ಊಡಿಕೆ ಮಾಡುವ ಮೂಲಕ ಸ್ವಯಂ ನೀವೇ ದೃಢೀಕರಣಗೊಳಿಸುವ ಮೊದಲು ನಿಮ್ಮ ಮೊಬೈಲು ಸಾಧನದಲ್ಲಿ ಅಂತರಜಾಲ ಸಂಪರ್ಕವಿರುವುದನ್ನು ಖಚಿತಪಡಿಸಿಕೊಳ್ಳಿರಿ.
- ಡಿ) ಆಪ್ ಪಾರ್ಶ್ವಚಿತ್ರಣವನ್ನು ತೆಗೆದುಹಾಕುವುದು.
ಆಪ್ ಅನ್ನು ತೆರೆಯುವ ವೇಳೆಯಲ್ಲಿ ಸಂಕೇತಪದವನ್ನು ಪುನ: ಪುನ: ಊಡಿಕೆ ಮಾಡುವುದನ್ನು ಹೇಗೆ ತಪ್ಪಿಸಬಹುದು?keyboard_arrow_down
- Select dropdown from the top left corner of the app.
- ಬಿ) ಸೆಟ್ಟಿಂಗ್ಸ್ ಗೆ ಹೋಗಿರಿ
- ಸಿ) ಪರಿಶೀಲನಾ ಅಂಕಣವನ್ನು ನಿರ್ಬಂಧಿಸಿರಿ: ಪ್ರತಿಯೊಂದು ಬಾರಿಗೂ ಸಂಕೇತಪದವನ್ನು ಕೇಳಿರಿ.
ಸಂಕೇತಪದವನ್ನು ಸೃಷ್ಟಿಸುವ ಸಲುವಾಗಿ ಯಾವುದಾದರೂ ನಿರ್ದಿಷ್ಟ ನಮೂನೆ ಇರುವುದೇ?keyboard_arrow_down
ಪ್ರಥಮ ಹೆಜ್ಜೆಯಾಗಿ ತಂತ್ರಾಂಶ ಅನ್ವಯವು ತೆರೆದುಕೊಂಡ ಕೂಡಲೆಯೇ ಸಂಕೇತಪದವನ್ನು ಕೇಳುವುದು. ಬಳಕೆದಾರರು ಕನಿಷ್ಠ 8 ಹಾಗೂ ಗರಿಷ್ಠ 12 ಅಕ್ಷರಗಳ ಒಂದು ಸಂಕೇತಪದವನ್ನು ಊಡಿಕೆ ಮಾಡತಕ್ಕದ್ದು. ಸಂಕೇತಪದವು ಕಡೆಯ ಪಕ್ಷ 1 ಸಂಖ್ಯೆ, 1 ಅಕ್ಷರ, 1 ವಿಶೇಷ ವೈಲಕ್ಷಣವನ್ನು(@,#,&,%,*,!,-,(,) ) ಹಾಗೂ ದೊಡ್ಡ ಅಕ್ಷರಗಳಲ್ಲಿ 1 ಅಕ್ಷರವನ್ನು ಹೊಂದಿರತಕ್ಕದ್ದು, ಉದಾಹರಣೆಗೆ: Sharma@123.
ಎಂ-ಆಧಾರ್ ಆಫ್ ಲೈನ್ ನಲ್ಲಿ ಕಾರ್ಯನಿರ್ವಹಿಸುವುದೇ?keyboard_arrow_down
ಎಂ-ಆಧಾರ್ ಅನ್ನು ಸಂಪರ್ಕ ಕಲ್ಪಿಸುವ ಮತ್ತು ಭಾವಿಗುಪ್ರಾದಿಂದ ಮಾಹಿತಿಯನ್ನು ಡೌನ್ ಲೋಡ್ ಮಾಡಿಕೊಳ್ಳುವ ಅಗತ್ಯತೆಯಿರುತ್ತದೆ.
ನೋಂದಣಿ ಮಾಡಿಸಿರದ ಮೊಬೈಲು ಸಂಖ್ಯೆಗೆ ಸಂಬಂಧಿಸಿದಂತೆ ಒಂದು ಸಲದ ಸಂಕೇತಪದವನ್ನು ಎಲ್ಲಿ ಊಡಿಕೆ ಮಾಡಬಹುದು, ಒಂದು ಸಲದ ಸಂಕೇತಪದವನ್ನು ಪಡೆದುಕೊಳ್ಳಬಹುದು?keyboard_arrow_down
ಎಂ-ಆಧಾರ್ ನಲ್ಲಿ ಒಂದು ಸಲದ ಸಂಕೇತಪದವನ್ನು ಕೈಯಿಂದ ಊಡಿಕೆ ಮಾಡಲು ಅನುವು ಇರುವುದಿಲ್ಲ. ಇದು ಒಂದು ಭದ್ರತಾ ವೈಲಕ್ಷಣವಾಗಿರುತ್ತದೆ. ಅದು ಎಸ್ಎಮ್ಎಸ್ ಗಾಗಿ ನಿರೀಕ್ಷಿಸುತ್ತಿರುವುದಾದಲ್ಲಿ, ದಯವಿಟ್ಟು ತಂತ್ರಾಂಶ ಅನ್ವಯದಿಂದ ದೂರ ಹೋಗಬೇಡಿರಿ. ಒಂದು ಸಲದ ಸಂಕೇತಪದವನ್ನು ಸ್ವೀಕರಿಸಿದ ಕೂಡಲೇ ಆಧಾರ್ ಸ್ವಯಂಚಾಲಿತವಾಗಿ ಅದನ್ನು ಓದುವುದು.
ಇ-ಕೆವೈಸಿ (ನಿಮ್ಮ ಗ್ರಾಹಕರ ಬಗ್ಗೆ ತಿಳಿದುಕೊಳ್ಳಿರಿ) ಎಂದರೆ ಏನು? ಇ-ಕೆವೈಸಿಯನ್ನು ಯಾವ ರೀತಿ ಬಳಸಿಕೊಳ್ಳಲಾಗುವುದು?keyboard_arrow_down
ವಿದ್ಯುನ್ಮಾನೀಯ ಅರಿವು ಅಥವಾ ಇ-ಕೆವೈಸಿ ಬ್ಯಾಂಕುಗಳು ಮುಂತಾದ ಸಂಸ್ಥೆಗಳು ಬಳಸಿಕೊಳ್ಳುವ ನಿವಾಸಿ ದೃಢೀಕರಣದ ಒಂದು ಮಾರ್ಗವಾಗಿರುತ್ತದೆ. ಅದನ್ನು ವಿದ್ಯುನ್ಮಾನೀಯವಾಗಿ ಒಂದು ವಿಳಾಸದ ಸಾಕ್ಷಾಧಾರವನ್ನಾಗಿ ಸಲ್ಲಿಸಲು ನಿವಾಸಿಗೆ ಅವಕಾಶ ಮಾಡಿಕೊಡುತ್ತದೆ, ಅದು ಆಧಾರ್ ಕಾರ್ಡಿನ ಒಂದು ಊರ್ಜಿತವಾದಂತಹ ಝೆರಾಕ್ಸ್ ಪ್ರತಿಯಾಗಿರುತ್ತದೆ.