How will children be captured in the database?keyboard_arrow_down
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸೆರೆಹಿಡಿಯುವುದಿಲ್ಲ. ವಿಶಿಷ್ಟ ಗುರುತನ್ನು ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯ ಆಧಾರದ ಮೇರೆಗೆ ಸಂಸ್ಕರಿಸಲಾಗುವುದು ಮತ್ತು ಮುಖದ ಛಾಯಾಚಿತ್ರವನ್ನು ಮಕ್ಕಳ ತಾಯಿತಂದೆಯರ ವಿಶಿಷ್ಟ ಗುರುತಿನೊಂದಿಗೆ ಸಂಪರ್ಕಿಸಲಾಗುವುದು. ಈ ಮಕ್ಕಳು ತಮ್ಮ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಅಂದರೆ 10 ಬೆರಳುಗಳು, ಕಣ್ಣಿನ ಪಾಪೆ ಮತ್ತು ಮುಖದ ಛಾಯಾಚಿತ್ರವನ್ನು ಅವರುಗಳು 5 ವರ್ಷಗಳ ವಯಸ್ಸನ್ನು ಪೂರ್ಣಗೊಳಿಸಿದಾಗ ಮತ್ತು 15 ವರ್ಷಗಳನ್ನು ಪೂರ್ಣಗೊಳಿಸಿದಾಗ ಇಂದಿನದಿನದನ್ನಾಗಿ ಮಾಡಿಕೊಳ್ಳುವ ಅಗತ್ಯತೆಯಿರುತ್ತದೆ. ಈ ನಿಟ್ಟಿನಲ್ಲಿ ಮೂಲ ಆಧಾರ್ ಪತ್ರದಲ್ಲಿ ಮಾಹಿತಿಯನ್ನು ತಿಳಿಸಲಾಗಿರುವುದು.
ವಿಭಿನ್ನವಾಗಿ ಸಧ್ಯವಾದವರ/ದಿವ್ಯಾಂಗರ ಮತ್ತು ಬೆರಳುಮುದ್ರಿಕೆಗಳನ್ನು ಹೊಂದಿರದ ಅಥವಾ ವರಟಾದ ಕೈಗಳನ್ನು ಹೊಂದಿರುವ ಉದಾಹರಣೆಗೆ ಬೀಡಿ ಕೆಲಸಗಾರರು ಅಥವಾ ಬೆರಳುಗಳನ್ನು ಹೊಂದಿರದ ಜನತೆಯ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸೆರೆಹಿಡಿಯkeyboard_arrow_down
ಕಾರ್ಯನೀತಿಯು ಈ ವಿನಾಯಿತಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಮತ್ತು ನಿರ್ದಿಷ್ಟಪಡಿಸಲಾಗಿರುವ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಪ್ರಮಾಣಕಗಳು ಈ ಗುಂಪುಗಳನ್ನು ಹೊರಗಿಡದಿರುವುದನ್ನು ಖಚಿತಪಡಿಸಿಕೊಳ್ಳುತ್ತವೆ. ಕೈಗಳನ್ನು /ಬೆರಳುಗಳನ್ನು ಹೊಂದಿರದ ಜನತೆಗೆ ಸಂಬಂಧಿಸಿದಂತೆ ಗುರುತನ್ನು ನಿರ್ಧಾರಣೆ ಮಾಡುವ ಸಲುವಾಗಿ ಕೇವಲ ಛಾಯಾಚಿತ್ರವನ್ನು ಬಳಸಲಾಗುವುದು ಮತ್ತು ವಿಶಿಷ್ಟತೆಯನ್ನು ನಿರ್ಧಾರಣೆ ಮಾಡುವ ಸಲುವಾಗಿ ಒಂದು ಗುರುತನ್ನು ಮಾಡುವ ಸಲುವಾಗಿ ಸಾಧನಗಳು/ಮಾರ್ಕರುಗಳು ಇರುತ್ತವೆ.
ತರಬೇತಿಯು ಕಡ್ಡಾಯವೆ?keyboard_arrow_down
ತರಬೇತಿಯು ಕಡ್ಡಾಯವಲ್ಲ, ಆದಾಗ್ಯೂ, ನಿರ್ವಾಹಕರಾಗಿ/ಮೇಲ್ವಿಚಾರಕರು, ಶಿಶು ನೋಂದಣಿ ಲೈಟ್ ಕ್ಲೈಂಟ್ ನ ನಿರ್ವಾಹಕರಾಗಿ ನೋಂದಣಿ ಸಂಸ್ಥೆಗಳ ಜೊತೆಯಲ್ಲಿ ಕೆಲಸ ಮಾಡಲು ಇಚ್ಚಿಸುವ ವ್ಯಕ್ತಿಗಳು ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಯು ಮತ್ತ್ತು ನೋಂದಣಿ ಸಂಸ್ಥೆಯು ನಡೆಸುವ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಶಿಫಾರಸು ಮಾಡಲಾಗುತ್ತಿದೆ.
ನೋಂದಣಿ ಸಂಸ್ಥೆಯ ನಿರ್ವಾಹಕರು/ಮೇಲ್ವಿಚಾರಕರು ಮತ್ತು ಶಿಶು ನೋಂದಣಿ ಲೈಟ್ ಕ್ಲೈಂಟ್ ನ ನಿರ್ವಾಹಕರಿಗೆ ಯಾರು ತರಬೇತಿಯನ್ನು ನೀಡುವರು?keyboard_arrow_down
ನೋಂದಣಿ ಸಿಬ್ಬಂದಿಗೆ ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಯು ಮತ್ತ್ತು ನೋಂದಣಿ ಸಂಸ್ಥೆಯು ಪ್ರಮುಖವಾಗಿ ತರಬೇತಿಯನ್ನು ನೀಡುವರು. ನೋಂದಣಿ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ತಮ್ಮ ಸ್ವಂತ ತರಬೇತುದಾರರಿಂದ ಅಥವಾ ಭಾವಿಗುಪ್ರಾದ ಪ್ರಾದೇಶಿಕ ಕಚೇರಿಗಳಿಂದ ಕೋರುವ ಮೂಲಕ ತರಬೇತಿಯನ್ನು ನೀಡಬಹುದು. ಸಿಬ್ಬಂದಿಯು
https://uidai.gov.in/enrolment-update/enrolment/testing-certification.html ನಲ್ಲಿ ಲಭ್ಯವಿರುವ ತರಬೇತಿ ವಿಷಯಗಳ ಸಹಾಯದಿಂದಲೂ ಸ್ವಯಂ-ತರಬೇತಿ ಪಡೆಯಬಹುದು.
ಭಾವಿಗುಪ್ರಾದಲ್ಲಿ ಲಭ್ಯವಿರುವ ವಿವಿಧ ಮಾದರಿಯ ತರಬೇತಿಗಳು ಯಾವುವು?keyboard_arrow_down
(ಎ) ಮಾಸ್ಟರ್ ತರಬೇತುದಾರರನ್ನು ಸೃಷ್ಟಿಸುವುದಕ್ಕಾಗಿ, ಮಾಸ್ಟರ್ ತರಬೇತುದಾರರಿಗೆ ತರಬೇತಿಯನ್ನು ಪ್ರಾದೇಶಿಕ ಕಚೇರಿಗಳು ವ್ಯವಸ್ಥೆ ಮಾಡುತ್ತವೆ, ಈ ಮಾಸ್ಟರ್ ತರಬೇತುದಾರರು ತದನಂತರ ನೋಂದಣಿ ಸಂಸ್ಥೆಯ ಇತರೆ ಸಿಬ್ಬಂದಿಗೆ ತರಬೇತಿ ನೀಡುತ್ತಾರೆ.
ಬಿ) ಗುಣಮಟ್ಟವನ್ನು ಅಧಿಕಗೊಳಿಸುವುದಕ್ಕಾಗಿ ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ಹೊಸ ಬದಲಾವಣೆಗಳನ್ನು ತಂದಾಗಲೆಲ್ಲಾ ತಮ್ಮ ಜ್ಞಾನವನ್ನು ಕಾಲಾನುಕಾಲಕ್ಕೆ ವೃದ್ಧಿಸಿಕೊಳ್ಳುವ ಸಲುವಾಗಿ ಪರಿಚಯಾತ್ಮಕ/ಪುನರ್-ಮನನ ಕಾರ್ಯಕ್ರಮಗಳನ್ನು ಪ್ರಾದೇಶಿಕ ಕಚೇರಿಗಳು ನೋಂದಣಿ ಸಂಸ್ಥೆಯ ಸಿಬ್ಬಂದಿಗೆ ವ್ಯವಸ್ಥೆ ಮಾಡುತ್ತವೆ.
c) PRI/ULB and DLO Programs are organized by ROs for Verifier, Introducer, Member Panchayati Raj Institution and District Level officer on their role in Enrolment Ecosystem.
ತರಬೇತಿಯ ಅವಧಿ ಎಷ್ಟು ಆಗಿರುತ್ತದೆ?keyboard_arrow_down
ತರಬೇತಿಯ ಅವಧಿಯು ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಯ/ನೋಂದಣಿ ಸಂಸ್ಥೆಗಳ ಅಗತ್ಯತೆಯನ್ನು ಅವಲಂಭಿಸಿರುತ್ತದೆ. ನೋಂದಣಿ ಸಂಸ್ಥೆಯು ಸ್ಥಳೀಯ ಅಗತ್ಯತೆಗಳ ಅನುಸಾರ ಸಾಮಗ್ರಿಗಳನ್ನು ತಯಾರಿಸುತ್ತದೆ ಮತ್ತು ಅಗತ್ಯ ಬಿದ್ದಲ್ಲಿ ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಯ ನಿರ್ದಿಷ್ಟ ಅಗತ್ಯತೆಗಳಿಗೆ ತಕ್ಕಂತೆ ಹೆಚ್ಚುವರಿ ವಿಷಯಗಳನ್ನು ಸೇರಿಸುತ್ತದೆ.
ಲಭ್ಯವಿರುವ ತರಬೇತಿ ಸಾಮಗ್ರಿಗಳ ವಿವಿಧ ಪ್ರವರ್ಗಗಳು ಯಾವುವು?keyboard_arrow_down
ಎ) ನೋಂದಣಿ ಸಂಸ್ಥೆಯ – ನಿರ್ವಾಹಕರು/ಮೇಲ್ಚಿಚಾರಕರು ಮತ್ತು ಶಿಶು ನೋಂದಣಿ ಲೈಟ್ ಕ್ಲೈಂಟ್ ನ ನಿರ್ವಾಹಕರಿಗೆ ಪ್ರಮಾಣೀಕರಣಕ್ಕಾಗಿ ಅಗತ್ಯವಿರುವ ವಿವಿಧ ಮಾಡ್ಯೂಲುಗಳು, ಪಿಪಿಟಿ ಮತ್ತು ಸಿಬಿಟಿ, ಇವುಗಳನ್ನು ಒಳಗೊಂಡಂತೆ ತರಬೇತಿ ಸಾಮಗ್ರಿಗಳು https://uidai.gov.in/enrolment-update/enrolment/testing-certification.html ನಲ್ಲಿ ಲಭ್ಯವಿರುತ್ತವೆ.
ಬಿ) ಪಂಚಾಯತಿ ರಾಜ್ ಸಂಸ್ಥೆಗಳಿಗೆ / ನಗರ ಸ್ಥಳೀಯ ಸಂಸ್ಥೆಗಳಿಗೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಕಾರ್ಯಕ್ರಮಕ್ಕಾಗಿ ಕೈಪಿಡಿ ಮತ್ತು ಕಾರ್ಯಕ್ರಮ ವೇಳಾಪಟ್ಟಿಯು https://uidai.gov.in/enrolment-update/enrolment.htmlನಲ್ಲಿ ಲಭ್ಯವಿರುತ್ತವೆ.
ಭಾವಿಗುಪ್ರಾದ ಅಡಿಯಲ್ಲಿ ನೋಂದಣಿ ಸಂಸ್ಥೆಯ – ನಿರ್ವಾಹಕರು/ಮೇಲ್ಚಿಚಾರಕರು ಮತ್ತು ಶಿಶು ನೋಂದಣಿ ಲೈಟ್ ಕ್ಲೈಂಟ್ ನ ನಿರ್ವಾಹಕರಾಗಿ ಕೆಲಸ ನಿರ್ವಹಿಸಲು ಪರೀಕ್ಷೆಯನ್ನು ನಡೆಸುವುದು ಕಡ್ಡಾಯವೇ?keyboard_arrow_down
ಹೌದು ನೋಂದಣಿ ಸಂಸ್ಥೆಯ – ನಿರ್ವಾಹಕರು/ಮೇಲ್ಚಿಚಾರಕರು ಮತ್ತು ಶಿಶು ನೋಂದಣಿ ಲೈಟ್ ಕ್ಲೈಂಟ್ ನ ನಿರ್ವಾಹಕರಾಗಿ ಕೆಲಸ ನಿರ್ವಹಿಸಲು ಪರೀಕ್ಷೆಯನ್ನು ನಡೆಸುವುದು ಮತ್ತು ಪ್ರಮಾಣೀಕರಿಸುವುದು ಕಡ್ಡಾಯವಾಗಿರುತ್ತದೆ. ಒಂದು ಊರ್ಜಿತ ಪ್ರಮಾಣಪತ್ರವನ್ನು ಹೊಂದಿರದೆಯೇ ಯಾವುದೇ ನೋಂದಣಿಯನ್ನೂ ನಡೆಸುವಂತಿಲ್ಲ.
ಪ್ರಮಾಣೀಕರಿಸುವ ಸಲುವಾಗಿ ಯಾವುದಾದರೂ ಮೂಲ ಅರ್ಹತೆಯ ಅಗತ್ಯತೆಯಿರುತ್ತದೆಯೇ?keyboard_arrow_down
ಮೇಲ್ವಿಚಾರಕರ ಪಾತ್ರಕ್ಕೆ ಅರ್ಹತೆಯನ್ನು ಹೊಂದುವ ಸಲುವಾಗಿ, ಓರ್ವ ವ್ಯಕ್ತಿಯು ಈ ಕೆಳಗಿನ ಮಾನದಂಡಗಳನ್ನು ಪೂರೈಸಿರತಕ್ಕದ್ದು:
ಎ) ಅಂತಹ ವ್ಯಕ್ತಿಯು 18 ವರ್ಷಗಳು ಮತ್ತು ಅದಕ್ಕೂ ಹೆಚ್ಚಿನ ವಯಸ್ಸಿನವರಾಗಿರತಕ್ಕದ್ದು
ಬಿ) ಅಂತಹ ವ್ಯಕ್ತಿಯು ಕನಿಷ್ಠ 10 + 2 ತರಗತಿಗಳನ್ನು ತೇರ್ಗಡೆ ಹೊಂದಿರತಕ್ಕದ್ದು ಮತ್ತು ಓರ್ವ ಪದವೀದರರಿಗೆ ಆಧ್ಯತೆಯನ್ನು ನೀಡತಕ್ಕದ್ದು.
ಸಿ) ಅಂತಹ ವ್ಯಕ್ತಿಯು ಗಣಕಯಂತ್ರವನ್ನು ಅರ್ಥ ಮಾಡಿಕೊಳ್ಳುವಂತಿರಬೇಕು ಮತ್ತು ಅದನ್ನು ಬಳಸುವ ಅನುಭವವನ್ನು ಹೊಂದಿರತಕ್ಕದ್ದು.
ಡಿ) ಅಂತಹ ವ್ಯಕ್ತಿಯು ಆಧಾರ್ ನೋಂದಣಿ ಕಾರ್ಯಕ್ರಮದಲ್ಲಿ ಕೆಲಸ ನಿರ್ವಹಿಸಿರುವ ಅನುಭವವಿದ್ದರೆ ಆಧ್ಯತೆಯನ್ನು ನೀಡತಕ್ಕದ್ದು.
ನಿರ್ವಾಹಕರ ಪಾತ್ರಕ್ಕೆ ಅರ್ಹತೆಯನ್ನು ಪಡೆಯುವುದಕ್ಕಾಗಿ, ಅಂತಹ ವ್ಯಕ್ತಿಯು ಈ ಕೆಳಗಿನ ಮಾನದಂಡಗಳನ್ನು ಪೂರೈಸಿರತಕ್ಕದ್ದು:
ಎ) ಅಂತಹ ವ್ಯಕ್ತಿಯು18 ವರ್ಷಗಳು ಮತ್ತು ಅದಕ್ಕೂ ಹೆಚ್ಚಿನ ವಯಸ್ಸಿನವರಾಗಿರತಕ್ಕದ್ದು.
ಬಿ) ಅಂತಹ ವ್ಯಕ್ತಿಯು ಕನಿಷ್ಠ 10 + 2 ತರಗತಿಗಳನ್ನು ತೇರ್ಗಡೆ ಹೊಂದಿರತಕ್ಕದ್ದು ಮತ್ತು ಓರ್ವ ಪದವೀದರರಿಗೆ ಆಧ್ಯತೆಯನ್ನು ನೀಡತಕ್ಕದ್ದು.
ಸಿ) ಅಂತಹ ವ್ಯಕ್ತಿಯು ಗಣಕಯಂತ್ರದ ಮೂಲ ವಿಷಯಗಳನ್ನು ಅರ್ಥ ಮಾಡಿಕೊಂಡಿರಬೇಕು ಮತ್ತು ಸ್ಥಳೀಯ ಭಾಷೆಯ ಕೀ ಬೋರ್ಡು ಮತ್ತು ಲಿಪ್ಯಂತರಣದಲ್ಲಿ ಆರಾಮವಾಗಿ ಕೆಲಸ ಮಾಡುವಂತಿರಬೇಕು
ಶಿಶು ನೋಂದಣಿ ಲೈಟ್ ಕ್ಲೈಂಟ್ ನ ನಿರ್ವಾಹಕರಾಗಿ ಕೆಲಸ ನಿರ್ವಹಿಸುವ ಸಲುವಾಗಿ, ಓರ್ವ ವ್ಯಕ್ತಿಯು ಈ ಕೆಳಗಿನ ಮಾನದಂಡಗಳನ್ನು ಪೂರೈಸಿರತಕ್ಕದ್ದು:
ಎ) ಅಂತಹ ವ್ಯಕ್ತಿಯು18 ವರ್ಷಗಳು ಮತ್ತು ಅದಕ್ಕೂ ಹೆಚ್ಚಿನ ವಯಸ್ಸಿನವರಾಗಿರತಕ್ಕದ್ದು.
ಬಿ) ಅಂತಹ ವ್ಯಕ್ತಿಯು 10 + 2 ತರಗತಿಗಳನ್ನು ತೇರ್ಗಡೆ ಹೊಂದಿರತಕ್ಕದ್ದು, ಅಂಗನವಾಡಿ ಆಶಾ ಕೆಲಸಗಾರರಿಗೆ, ಕನಿಷ್ಠ ವಿದ್ಯಾರ್ಥತೆಯು 10ನೇ ತರಗತಿಯನ್ನು ತೇರ್ಗಡೆ ಹೊಂದಿರತಕ್ಕದ್ದು.
ಅಂತಹ ವ್ಯಕ್ತಿಯು ಗಣಕಯಂತ್ರವನ್ನು ನಿರ್ವಹಿಸುವ ರೀತಿಯಲ್ಲಿ ಮೂಲ ವಿಷಯಗಳನ್ನು ಅರಿತಿರತಕ್ಕದ್ದು ಮತ್ತು ಸ್ಥಳೀಯ ಭಾಷೆಯ ಕೀ ಬೋರ್ಡ್ ಮತ್ತು ಲಿಪ್ಯಂತರಣದಲ್ಲಿ ಸುಲಲಿತವಾಗಿ ಕೆಲಸ ನಿರ್ವಹಿಸುವಂತಿರತಕ್ಕದ್ದು.
ಪ್ರಮಾಣೀಕರಿಸುವ ಸಲುವಾಗಿ ಆಧಾರ್ ಸಂಖ್ಯೆಯು ಕಡ್ಡಾಯವೆ?keyboard_arrow_down
ಹೌದು, ಪ್ರಮಾಣೀಕರಣಕ್ಕಾಗಿನ ಪರೀಕ್ಷೆಗೆ ನೋಂದಣಿ ಮಾಡಿಸುವ ಸಲುವಾಗಿ ಅಭ್ಯರ್ಥಿಯು ಒಂದು ಊರ್ಜಿತ ಆಧಾರ್ ಸಂಖ್ಯೆಯನ್ನು ಹೊಂದಿರತಕ್ಕದ್ದು. ಪರೀಕ್ಷಾ ನೋಂದಣಿ ವಿವರಗಳು ನಿಖರವಾಗಿ ಅಭ್ಯರ್ಥಿಯ ಆಧಾರ್ ನಲ್ಲಿ ನಮೂದಿಸಲಾಗಿರುವ ಮಾಹಿತಿಯಂತೆಯೇ ಇರತಕ್ಕದ್ದು.
ಪ್ರಮಾಣೀಕರಣಕ್ಕಾಗಿನ ಪರೀಕ್ಷೆಯ ರಚನೆಯು ಹೇಗಿರುವುದು?keyboard_arrow_down
ಪರೀಕ್ಷೆಯ ಅವಧಿಯು 1 ಗಂಟೆ 45 ನಿಮಿಷಗಳಾಗಿದ್ದು ವಿಷಯ ಆಧಾರಿತ ವಿವಿಧ ಆಯ್ಕೆ ಪ್ರಶ್ನೆಗಳನ್ನು ಮಾತ್ರ ಒಳಗೊಂಡಿರುತ್ತದೆ. ನಿರ್ವಾಹಕರು/ಮೇಲ್ವಿಚಾರಕರ ಪ್ರಮಾಣೀಕರಣ ಪರೀಕ್ಷೆಗೆ 75 ಪ್ರಶ್ನೆಗಳು ಮತ್ತು ಶಿಶು ನೋಂದಣಿ ಲೈಟ್ ಕ್ಲೈಂಟ್ ನ ನಿರ್ವಾಹಕರ ಪ್ರಮಾಣೀಕರಣ ಪರೀಕ್ಷೆಗೆ 50 ಪ್ರಶ್ನೆಗಳು ಒಳಗೊಂಡಿರುತ್ತವೆ. ಒಂದು ಸವಿವರ ಮಾಡ್ಯೂಲುವಾರು ಪರೀಕ್ಷಾ ರಚನೆಯು
https://uidai.gov.in/enrolment-update/enrolment/testing-certification.htmlನಲ್ಲಿ ಲಭ್ಯವಿರುತ್ತದೆ.
ಪರೀಕ್ಷೆಯನ್ನು ಯಾರು ನಡೆಸುವರು?keyboard_arrow_down
ಭಾವಿಗುಪ್ರಾವು ಸಂಪೂರ್ಣ ಪರೀಕ್ಷೆ ಮತ್ತು ಪ್ರಮಾಣೀಕರಣಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಸಂಸ್ಥೆಯು M/S NSEiT (
http://uidai.nseitexams.com) ಆಗಿರುತ್ತದೆ.
ಪ್ರಮಾಣೀಕರಣ ಪರೀಕ್ಷೆಯನ್ನು ತೆಗೆದುಕೊಳ್ಳುವ ಸಲುವಾಗಿ ನಿಗದಿಯಾಗಿರುವ ಶುಲ್ಕಗಳು ಎಷ್ಟು?keyboard_arrow_down
ಒಂದು ಪರೀಕ್ಷೆಗಾಗಿ ರೂ. 365 ಮತ್ತು ಪುನರ್-ಪರೀಕ್ಷೆಗಾಗಿ ರೂ.200 ಅನ್ವಯಗೊಳ್ಳುತ್ತದೆ. ಶುಲ್ಕವನ್ನು ಭಾರತದ ಉದ್ದಗಲಕ್ಕೂ ಇರುವಂತಹ ಭಾರತೀಯ ಸ್ಟೇಟ್ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ನಗದನ್ನು ಠೇವಣಿ ಇಡತಕ್ಕದ್ದು.
ಪರೀಕ್ಷಾ ಶುಲ್ಕವು ಎಲ್ಲಿಯವರೆಗೆ ಊರ್ಜಿತವಾಗಿರುತ್ತದೆ?keyboard_arrow_down
ಭಾವಿಗುಪ್ರಾದ ಹೊಸ ಪರೀಕ್ಷೆ ಮತ್ತು ಪ್ರಮಾಣೀಕರಣ ಕಾರ್ಯನೀತಿಯ ಅನುಸಾರ “ಅಭ್ಯರ್ಥಿಗಳು ಶುಲ್ಕವನ್ನು ಠೇವಣಿ ಇಟ್ಟ ದಿನಾಂಕದಿಂದ 6 ತಿಂಗಳುಗಳ ಒಳಗೆ ಪರೀಕ್ಷೆಯ ದಿನಾಂಕವನ್ನು ನಿಗಧಿಗೊಳಿಸಿಕೊಳ್ಳತಕ್ಕದ್ದು, ಅದಕ್ಕೆ ವಿಫಲಗೊಂಡಲ್ಲಿ, ಅವರ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ಆ ಶುಲ್ಕದ ಪ್ರತಿಯಾಗಿ ಪರೀಕ್ಷೆಗೆ ಕುಳಿತುಕೊಳ್ಳಲು ಅಭ್ಯರ್ಥಿಗೆ ಅವಕಾಶ ನೀಡಲಾಗುವುದಿಲ್ಲ
ನೋಂದಣಿ ಸಂಸ್ಥೆಯು ಅಭ್ಯರ್ಥಿಗಳ ಪರೀಕ್ಷೆ/ಮರು-ಪರೀಕ್ಷೆಯ ಸಗಟು ಮೊತ್ತವನ್ನು ಪಾವತಿಸಬಹುದೆ?keyboard_arrow_down
ಹೌದು, ನೋಂದಣಿ ಸಂಸ್ಥೆಯು ಪಾವತಿಯ ದಿನಾಂಕದಿಂದ 6 ತಿಂಗಳುಗಳ ಒಂದು ಅವಧಿಗೆ ಬದಲಿ ಜರ್ನಲ್ ಸಂಖ್ಯೆಗಳನ್ನು ನೀಡುವುದಕ್ಕಾಗಿ ಸಗಟು ಪಾವತಿಯ ಬಗ್ಗೆ NSEiT ಸಹಾಯ ಬೆಂಚನ್ನು ಸಂಪರ್ಕಿಸತಕ್ಕದ್ದು,
ಪರೀಕ್ಷೆಗಾಗಿ ನಾನು ಯಾವ ರೀತಿಯಲ್ಲಿ ನೋಂದಣಿ ಮಾಡಿಸಬಹುದು?keyboard_arrow_down
ನೋಂದಣಿ ಮಾಹಿತಿಯು NSEiT portal: http://uidai.nseitexams.com ನಲ್ಲಿ ಲಭ್ಯವಿರುವುದು.
How will this test be conducted?keyboard_arrow_down
ಅದು ಉಸ್ತುವಾರಿ ಪರಿಸರದಲ್ಲಿ ನಿರ್ಧಾರಿತ ಪರೀಕ್ಷಾ ಕೇಂದ್ರಗಳಲ್ಲಿ ಅಂತರ ಜಾಲ ಆಧಾರಿತ ಪರೀಕ್ಷೆಯಾಗಿರುತ್ತದೆ.
ಪರೀಕ್ಷಾ ಕೇಂದ್ರವು ಎಲ್ಲಿ ಇರುತ್ತದೆ?keyboard_arrow_down
ಪರೀಕ್ಷಾ ಕೇಂದ್ರಗಳು ಭಾರತದ ವಿವಿಧ ರಾಜ್ಯಗಳ ಉದ್ದಗಲಕ್ಕೂ ಲಭ್ಯವಿರುತ್ತವೆ. ಪರೀಕ್ಷಾ ಕೇಂದ್ರಗಳ ಸವಿವರ ಮಾಹಿತಿಯು NSEIT Ltd portal
http://uidai.nseitexams.comನಲ್ಲಿ ಲಭ್ಯವಿರುತ್ತದೆ.
ನಾನು ಪರೀಕ್ಷೆಯನ್ನು ಎಷ್ಟು ಸಲ ತೆಗೆದುಕೊಳ್ಳಬಹುದು?keyboard_arrow_down
ಓರ್ವ ಅಭ್ಯರ್ಥಿಯು ಪ್ರಮಾಣೀಕರಿಸುವ ಪರೀಕ್ಷೆಯನ್ನು ಪಾಸು ಮಾಡುವ ಮೊದಲು ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದಕ್ಕಾಗಿ ಅನಿಯಮಿತ ಸಂಖ್ಯೆಯ ಪ್ರಯತ್ನಗಳನ್ನು ಮಾಡಬಹುದು.
ಒಂದು ವೇಳೆ ನಾನು ಪುನರ್-ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾದಲ್ಲಿ ನಾನು ಶುಲ್ಕವನ್ನು ಪುನ: ಪಾವತಿಸಬೇಕೆ?keyboard_arrow_down
ಹೌದು, ಪುನರ್-ಪರೀಕ್ಷೆಯನ್ನು ತೆಗೆದುಕೊಳ್ಳಲಾಗುವ ಪ್ರತೀ ಬಾರಿಯೂ ಪುನರ್-ಪರೀಕ್ಷೆಯೊಂದಕ್ಕೆ ರೂ. 200ನ್ನು ಪಾವತಿಸತಕ್ಕದ್ದು.
ನಾನು ಮೊದಲ ಪ್ರಯತ್ನದಲ್ಲಿ ಕೆಲವು ಮಾಡ್ಯೂಲುಗಳಲ್ಲಿ ತೇರ್ಗಡೆ ಹೊಂದಿದ್ದಾಗ್ಯೂ ನಾನು ಎಲ್ಲಾ ಮಾಡ್ಯೂಲುಗಳಲ್ಲಿಯೂ ಪುನರ್-ಪರೀಕ್ಷೆಯನ್ನು ತೆಗೆದುಕೊಳ್ಳಬೇಕೆ?keyboard_arrow_down
ಹೌದು ಪ್ರತೀ ಬಾರಿಯೂ ಅಭ್ಯರ್ಥಿಯು ಎಲ್ಲಾ ಮಾಡ್ಯೂಲುಗಳನ್ನೂ ಒಳಗೊಂಡಂತೆ ಸಂಪೂರ್ಣ ಪರೀಕ್ಷೆಯನ್ನು ತೇರ್ಗಡೆ ಹೊಂದತಕ್ಕದ್ದು.
ಪುನರ್-ಪ್ರಮಾಣೀಕರಣದ ಅಗತ್ಯತೆಯಿರುತ್ತದೆಯೇ?keyboard_arrow_down
ಇಲ್ಲ ! ಭಾವಿಗುಪ್ರಾವು ಒಂದು ಪಾತ್ರಕ್ಕೆ - ಉದಾಹರಣೆಗೆ ನೋಂದಣಿ ನಿರ್ವಾಹಕರು/ಮೇಲ್ವಿಚಾರಕರು ಅಥವಾ ಶಿಶು ನೋಂದಣಿ ಲೈಟ್ ಕ್ಲೈಂಟ್ ನ ನಿರ್ವಾಹಕರು ಇವರುಗಳಿಗೆ ಒಂದು ಸಲದ ಪ್ರಮಾಣೀಕರಣವನ್ನು ಕಡ್ಡಾಯಗೊಳಿಸಿದೆ. ಆದರೆ ನಿರ್ವಾಹಕರ ಪಾತ್ರಕ್ಕೆ ಪ್ರಮಾಣೀಕರಿಸಲಾದ ಅಭ್ಯರ್ಥಿಯು ಮೇಲ್ವಿಚಾರಕರ ಪಾತ್ರದ ಪ್ರಮಾಣೀಕರಣ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು ಮತ್ತು ಶಿಶು ನೋಂದಣಿ ಲೈಟ್ ಕ್ಲೈಂಟ್ ನ ನಿರ್ವಾಹಕರು ನೋಂದಣಿ ನಿರ್ವಾಹಕರು/ಮೇಲ್ವಿಚಾರಕರ ಪಾತ್ರದ ಪ್ರಮಾಣೀಕರಣ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.
ಕಪ್ಪು ಪಟ್ಟಿಯಲ್ಲಿ ಇಡಲಾದ ನಿರ್ವಾಹಕರು/ಮೇಲ್ವಿಚಾರಕರು ಪುನರ್-ಪ್ರಮಾಣೀಕರಣವನ್ನು ಪಡೆಯಬಹುದೆ?keyboard_arrow_down
ಇಲ್ಲ. ಕಪ್ಪು ಪಟ್ಟಿಯಲ್ಲಿ ಇಡಲಾದ ಎಲ್ಲಾ ನಿರ್ವಾಹಕರು/ಮೇಲ್ವಿಚಾರಕರ ಆಧಾರ್ ಸಂಖ್ಯೆಯನ್ನು ತಡೆಹಿಡಿಯಲಾಗುವುದು. ಒಂದು ವೇಳೆ ಅಭ್ಯರ್ಥಿಯು ಪುನರ್-ಪ್ರಮಾಣೀಕರಣವನ್ನು ಪಡೆದುಕೊಂಡಲ್ಲಿ , ಭಾವಿಗುಪ್ರಾದಿಂದ ಆತನ/ಆಕೆಯ ಪ್ರಮಾಣಪತ್ರವನ್ನು ತಿರಸ್ಕರಿಸಲಾಗುವುದು.
ಪ್ರಮಾಣಪತ್ರವನ್ನು ಯಾರು ನೀಡುವರು? ಭಾವಿಗುಪ್ರಾ ಅಥವಾ NSEiT?keyboard_arrow_down
ಪ್ರಮಾಣಪತ್ರವನ್ನು NSEIT Ltd ನೀಡುವುದು
ಪರೀಕ್ಷೆಯ ಹರಿವಿನ/ಏರಿಳಿತಗಳ ಹರಿವಿನ ಜೊತೆ ನನಗೆ ನಾನೇ ಯಾವ ರೀತಿಯಲ್ಲಿ ಚಿರಪರಿಚಿತಗೊಳ್ಳಬಹುದು?keyboard_arrow_down
ಚಿರಪರಿಚಿತಗೊಳ್ಳುವಿಕೆಗೆ ಸಂಬಂಧಿತ ಮಾಡ್ಯೂಲು NSEIT Ltd portal:
https://uidai.nseitexams.com ನಲ್ಲಿ ಲಭ್ಯವಿರುತ್ತದೆ.
ಭಾವಿಗುಪ್ರಾದ ದತ್ತಸಂಚಯದಲ್ಲಿ ಯಾವುದೇ ಪ್ರಮಾಣಪತ್ರವು ಲಭ್ಯವಿಲ್ಲದಿದ್ದಲ್ಲಿ ನಾನು ಎಲ್ಲಿ ಸಂಪರ್ಕಿಸತಕ್ಕದ್ದು?keyboard_arrow_down
ನೀವು ಭಾವಿಗುಪ್ರಾದ ತಾಂತ್ರಿಕ ಸಹಾಯಬೆಂಚನ್ನು 080-23099400 ನಲ್ಲಿ ಸಂಪರ್ಕಿಸಬಹುದು ಅಥವಾ This email address is being protected from spambots. You need JavaScript enabled to view it. ಗೆ ಇ-ಮೇಲ್ಅನ್ನು ಕಳುಹಿಸಬಹುದು.
ಸ್ವತಂತ್ರವಾಗಿ ಕೆಲಸ ಮಾಡುವವರಿಗೆ ಸಂಬಂಧಿಸಿದಂತೆ ಪ್ರಮಾಣೀಕರಣದ ನಂತರ ಅಭ್ಯರ್ಥಿಯು ಎಲ್ಲಿ ಸಂಪರ್ಕಿಸತಕ್ಕದ್ದು?keyboard_arrow_down
ಅವರ ಜೊತೆ ನೋಂದಣಿ ಸಿಬ್ಬಂದಿಯಾಗಿ ನೇಮಕಗೊಳ್ಳುವ ಸಲುವಾಗಿ ನೀವು ಆಧಾರ್ ನೋಂದಣಿ ಸಂಸ್ಥೆಗಳು ಅಥವಾ ನಿಮ್ಮ ಸ್ಥಳದ ಸಮೀಪದಲ್ಲಿರುವ ಭಾವಿಗುಪ್ರಾದ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಬಹುದು.
ಆತನು/ಆಕೆಯು ಆಧಾರ್ ನೋಂದಣಿ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಆಸಕ್ತಿ ಹೊಂದಿದ್ದಲ್ಲಿ ಅಭ್ಯರ್ಥಿಯು ಎಲ್ಲಿ ಸಂಪರ್ಕಿಸತಕ್ಕದ್ದು?keyboard_arrow_down
ನೀವು ನಿಮ್ಮ ಪ್ರದೇಶದ ಸಕ್ರಿಯ ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಯನ್ನು ಸಂಪರ್ಕಿಸಬಹುದು. ಸಕ್ರಿಯ ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಯ ಪಟ್ಟಿಯನ್ನು ನಿಮ್ಮ ಸಂಬಂಧಿತ ಭಾವಿಗುಪ್ರಾದ ಪ್ರಾದೇಶಿಕ ಕಚೇರಿಯಿಂದ ಪಡೆದುಕೊಳ್ಳಬಹುದು.
ಆತನು/ಆಕೆಯು ಆಧಾರ್ ನೋಂದಣಿ ಕೇಂದ್ರವನ್ನು ಪ್ರಾರಂಭಿಸಲು ಆಸಕ್ತಿಯನ್ನು ಹೊಂದಿದ್ದಲ್ಲಿ ಅಭ್ಯರ್ಥಿಯು ಎಲ್ಲಿ ಸಂಪರ್ಕಿಸತಕ್ಕದ್ದು?keyboard_arrow_down
ನೋಂದಣಿ ಕೇಂದ್ರವನ್ನು ಪ್ರಾರಂಭಿಸುವ ಸಲುವಾಗಿ ಅಗತ್ಯ ನೆರವನ್ನು ಒದಗಿಸುವುದಕ್ಕಾಗಿ ನೀವು ನಿಮ್ಮ ಪ್ರದೇಶದ ಸಕ್ರಿಯ ನೋಂದಣಿ ಸಂಸ್ಥೆಯನ್ನು ಸಂಪರ್ಕಿಸಬಹುದು. ಸಕ್ರಿಯ ನೋಂದಣಿ ಸಂಸ್ಥೆಗಳ ಪಟ್ಟಿಯನ್ನು ನಿಮ್ಮ ಸಂಬಂಧಿತ ಭಾವಿಗುಪ್ರಾದ ಪ್ರಾದೇಶಿಕ ಕಚೇರಿಯಿಂದ ಪಡೆದುಕೊಳ್ಳಬಹುದು.
ರಿಜಿಸ್ಟ್ರಾರ್ ಅಥವಾ ನೋಂದಣಿ ಅಧಿಕಾರಿಗಳು ಎಂದರೆ ಯಾರು?keyboard_arrow_down
ವೈಯಕ್ತಿಕ ವ್ಯಕ್ತಿಗಳನ್ನು ವಿಶಿಷ್ಟ ಗುರುತು ಸಂಖ್ಯೆಗಳಿಗಾಗಿ ನೋಂದಣಿ ಮಾಡಿಸುವ ಉದ್ದೇಶಕ್ಕಾಗಿ ಭಾವಿಗುಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟಿರುವ ಯಾವುದೇ ಸಂಸ್ಥೆಯು ರಿಜಿಸ್ಟ್ರಾರ್ ಅಥವಾ ನೋಂದಣಿ ಸಂಸ್ಥೆಯಾಗಿರಬಹುದು. ನೋಂದಣಿ ಸಂಸ್ಥೆಯು ಪ್ರಾತಿನಿಧಿಕವಾಗಿ/ಸಾಂಕೇತಿಕವಾಗಿ ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶ, ಸಾರ್ವಜನಿಕ ವಲಯದ ಉದ್ದಿಮೆಗಳು ಅಥವಾ ಇತರೆ ಸಂಸ್ಥೆಗಳ ಇಲಾಖೆಗಳು ಅಥವಾ ಸಂಸ್ಥೆಗಳಾಗಿರುತ್ತವೆ, ಅವುಗಳು ತಮ್ಮ ಕಾರ್ಯಕ್ರಮಗಳು, ಕಾರ್ಯಚಟುವಟಿಕೆಗಳು ಅಥವಾ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸುವ ವೇಳೆಯಲ್ಲಿ ನಿವಾಸಿಗಳ ಜೊತೆ ಪರಸ್ಪರ ಚರ್ಚಿಸುತ್ತವೆ. ಅಂತಹ ನೋಂದಣಿ ಸಂಸ್ಥೆಗಳಿಗೆ ಉದಾಹರಣೆಗಳೆಂದರೆ ಗ್ರಾಮೀಣಾಭಿವೃದ್ಧಿ ಇಲಾಖೆ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಾಗಿ) ಅಥವಾ ನಾಗರಿಕ ಸರಬರಾಜುಗಳು ಮತ್ತು ಬಳಕೆದಾರರ ವ್ಯವಹಾರಗಳ ಇಲಾಖೆ (ಗುರಿಯಾಗಿಸಿಕೊಳ್ಳಲಾಗಿರುವ ಸಾರ್ವಜನಿಕ ವಿತರಣಾ ಯೋಜನೆಗಾಗಿ), ಜೀವ ವಿಮಾ ನಿಗಮದಂತಹ ವಿಮಾ ಕಂಪನಿಗಳು ಮತ್ತು ಬ್ಯಾಂಕುಗಳು.
ನೋಂದಣಿ ಸಂಸ್ಥೆಗಳು ಜನಸಂಖ್ಯಾಶಾಸ್ತ್ರಕ್ಕೆ ಮತ್ತು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ನಿವಾಸಿಗಳಿಂದ ನೇರವಾಗಿ ಅಥವಾ ನೋಂದಣಿ ಸಂಸ್ಥೆಗಳ ಮೂಲಕ ಸಂಗ್ರಹಿಸುತ್ತವೆ. ಭಾವಿಗುಪ್ರಾವು ಸಂಪೂರ್ಣ ಆಧಾರ್ ನೋಂದಣಿ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸುವ ಸಲುವಾಗಿ ಪ್ರಮಾಣಕಗಳು, ಕಾರ್ಯವಿಧಾನಗಳು ಮತ್ತು ಪ್ರಕ್ರಿಯೆಗಳು, ಮಾರ್ಗಸೂಚಿಗಳು ಮತ್ತು ತಂತ್ರಜ್ಞಾನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದೆ, ಅವುಗಳಿಗೆ ನೋಂದಣಿ ಸಂಸ್ಥೆಗಳು ಬದ್ಧವಾಗಿರುತ್ತವೆ. ಈ ಪ್ರಕ್ರಿಯೆಯಲ್ಲಿ ನೋಂದಣಿ ಸಂಸ್ಥೆಗಳಿಗೆ ಬೆಂಬಲ ನೀಡುವುದಕ್ಕಾಗಿ ಭಾವಿಗುಪ್ರಾವು ನಿರ್ಮಿಸಿರುವಂತಹ ಪರಿಸರ ವ್ಯವಸ್ಥೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು (leverage).
ನೋಂದಣಿ ಸಂಸ್ಥೆಗಳು ಭಾವಿಗುಪ್ರಾದ ಯೋಜನೆಯಲ್ಲಿ ಯಾವ ರೀತಿ ಕಾರ್ಯಾರಂಭ ಮಾಡುತ್ತವೆ?keyboard_arrow_down
ಆಧರ್ ಸಿದ್ಧಗೊಳ್ಳುವಿಕೆಯ ಹಂತಗಳ ಉದ್ದಗಲಕ್ಕೂ ನೋಂದಣಿ ಸಂಸ್ಥೆಗಳಿಗೆ ಬೆಂಬಲ ನೀಡುವ ಸಲುವಾಗಿ ಭಾವಿಗುಪ್ರಾವು ನೋಂದಣಿ ಸಂಸ್ಥೆಗಳಿಗಾಗಿ ಒಂದು ಸವಿವರ ಆನ್-ಬೋರ್ಡಿಂಗ್ ಪ್ರಕ್ರಿಯೆಯನ್ನು ಮತ್ತು ಮಾರ್ಗಸೂಚಿಯನ್ನು ವಿವರಿಸಿದೆ. ಒಂದು ಉನ್ನತ ಮಟ್ಟದ ಸಂಕ್ಷಿಪ್ತ ವಿವರಣೆಯು ಈ ದಾಖಲೆಯಲ್ಲಿದೆ:
- ಸಮಿತಿಗಳು ಮತ್ತು ಜಂಟಿ ಕಾರ್ಯೋದ್ಯುಕ್ತ ಗುಂಪುಗಳ ರಚನೆ
ಮುಖ್ಯ ಮಂತ್ರಿಯವರ ನೇತೃತ್ವದಲ್ಲಿರುವ ಒಂದು ಉನ್ನತ ಮಟ್ಟದ/ಅಧಿಕಾರಯುಕ್ತ ಸಮಿತಿಯನ್ನು ಮತ್ತು ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿರುವ ಒಂದು ಕಾರ್ಯಗತಗೊಳಿಸುವಿಕೆ ಸಮಿತಿಯನ್ನು ಸ್ಥಾಪಿಸುವುದು. ಭಾವಿಗುಪ್ರಾದ ಪ್ರಾದೇಶಿಕ ಕಚೇರಿ ಮತು ರಾಜ್ಯ ಭಾವಿಗುಪ್ರಾಐಸಿಗಳು ಸಹಭಾಗಿಗಳಲ್ಲಿ ಉತ್ತರದಾಯಿತ್ವವನ್ನು ವೃದ್ಧಿಗೊಳಿಸುವ ಸಲುವಾಗಿ ಮತ್ತು ರಾಜ್ಯೇತರ ನೋಂದಣಿ ಸಂಸ್ಥೆಗಳು ರಾಜ್ಯ ನೋಂದಣಿ ಸಂಸ್ಥೆಗಳ ಜೊತೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುವುದಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿತಮ್ಮ ರಾಜ್ಯಗಳಲ್ಲಿ ರಾಜ್ಯ ನೋಂದಣಿ ಸಂಸ್ಥೆಗಳ ಜೊತೆ ಸಹಕರಿಸತಕ್ಕದ್ದು ಎಂಬುದಾಗಿ ಶಿಫಾರಸು ಮಾಡಲಾಗಿದೆ. - ಆಧಾರ್ ಗಾಗಿ ಸಂಪರ್ಕಸೇತು ಇಲಾಖೆಯನ್ನು ಗುರುತಿಸುವುದು, ಓರ್ವ ಸಂಪರ್ಕಸೇತು ಅಧಿಕಾರಿಯ ಜೊತೆಯಲ್ಲಿ ನೋಂದಣಿ ಸಂಸ್ಥೆಯಾಗಿ ಪಾತ್ರವಹಿಸುವಂತಹ ಇಲಾಖೆಗಳನ್ನು ಗುರುತಿಸುವುದು. ನೋಂದಣಿಯ ಸಮಯದಲ್ಲಿ ಯೋಜನೆಯಲ್ಲಿ ನೋಂದಣಿ ಸಂಸ್ಥೆಗಳಾಗಿ ಸೇರಿಸಿರದ ಇತರೆ ಸಂಸ್ಥೆಗಳು, ತದನಂತರದ ದಿನಾಂಕಗಳಲ್ಲಿ ತಮ್ಮ ವ್ಯವಸ್ಥೆಗಳನ್ನು “ಆಧಾರ್ ಸಾಧ್ಯತೆಯಿರುವಂತೆ ಮಾಡುವ ಆಯ್ಕೆಯನ್ನು ಹೊಂದಿರುತ್ತವೆ. ಸಂಪರ್ಕಸೇತು ಮತ್ತು ನೋಂದಣಿ ಸಂಸ್ಥೆಗಳು ಒಂದೇ ಇಲಾಖೆಯಾಗಿರಬಹುದು ಅಥವಾ ವಿಭಿನ್ನ ಇಲಾಖೆಗಳಾಗಿರಬಹುದು. ಪರಸ್ಪರ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
- ನೊಂದಣಿಗಾಗಿ ಹಣಕಾಸಿನ ಸಹಾಯವನ್ನು ಪಡೆಯುವ ಸಂಸ್ಥೆಯನ್ನು ಗುರುತಿಸುವುದು: ಭಾವಿಗು ಪ್ರಾಧಿಕಾರವು ವಿಶಿಷ್ಟ ಗುರುತು ವ್ಯವಸ್ಥೆಗೆ ಯಶಸ್ವಿ ನೋಂದಣಿಯೊಂದಕ್ಕೆ ತನ್ನ ನೋಂದಣಿ ಸಂಸ್ಥೆಗಳಿಗೆ ಸ್ವಲ್ಪ ಹಣಕಾಸಿನ ನೆರವನ್ನು ಒದಗಿಸುತ್ತದೆ. ಈ ವ್ಯವಸ್ಥೆಯನ್ನು ಕಾರ್ಯಾಚರಣೆಗೊಳಿಸುವ ಸಲುವಾಗಿ, ನೋಂದಣಿ ಸಂಸ್ಥೆಗಳು ನೋಂದಣಿ ಸಂಸ್ಥೆಯ ವಿವರಗಳನ್ನು ಅಂದರೆ ಹೆಸರು ಮತ್ತು ಯಾವ ಖಾತೆಯ ಮೂಲಕ ಮೊತ್ತವನ್ನು ಸ್ವೀಕರಿಸಲು ಇಚ್ಚೆಸುವವೋ, ಅವುಗಳ ವಿವರಗಳನ್ನು ನೀಡತಕ್ಕದ್ದು.
- ಜಂಟಿ ಕಾರ್ಯೋದ್ಯುಕ್ತ ಗುಂಪುಗಳನ್ನು ರಚಿಸುವುದು: ಸಂಪರ್ಕಸೇತು/ನೋಂದಣಿ ಇಲಾಖೆಯ ಮುಖ್ಯಸ್ಥ ನೇತೃತ್ವದಲ್ಲಿರುವ. ಇತರೆ ಸದಸ್ಯರುಗಳು ನೊಂದಣಿ ಸಂಸ್ಥೆಗಳ ಕಡೆಯಿಂದ ತಾಂತ್ರಿಕ, ಪ್ರಕ್ರಿಯೆ, ಐಇಸಿ, ಅನ್ವಯಗಳ ತಂಡಗಳು ಆಗಿರತಕ್ಕದ್ದು. ಭಾವಿಗುಪ್ರಾವು ಸಂಪೂರ್ಣ ಪ್ರಕ್ರಿಯೆಯ ಉದ್ದಕ್ಕೂ ರಾಜ್ಯ ಸರ್ಕಾರ/ನೋಂದಣಿ ಸಂಸ್ಥೆಗಳಿಗೆ ಸಹಾಯ ಮಾದುವ ಸಲುವಾಗಿ ಸೂಕ್ತ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡುತ್ತದೆ. ಭಾವಿಗುಪ್ರಾ –ನೋಂದಣಿ ಸಂಸ್ಥೆಗಳ ಸಂಪರ್ಕತೆಯ ಸಮಯದಲ್ಲಿ ಕಾರ್ಯನಿರ್ವಹಣೆಯು ಸುಗುಮವಾಗಿರುವುದನ್ನು ಮತ್ತು ಕಾರ್ಯೋದ್ಯುಕ್ತ ಗುಂಪುಗಳ ಸಕ್ರಿಯ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವುದು.
ಭಾವಿಗುಪ್ರಾದ ನೋಂದಣಿ ಸಂಸ್ಥೆಗಳ ಸಿದ್ಧತೆಗಳನ್ನು ಖಚಿತಪಡಿಸಿಕೊಳ್ಳುವಿಕೆಗಳ ಪಟ್ಟಿಯಲ್ಲಿ ನಮೂದಿಸಲಾಗಿರುವ ರೀತಿಯಲ್ಲಿ ನೀಡಬೇಕಾಗಿರುವುಗಳನ್ನು/ಯೋಜನೆಯ ಪೂರ್ವಭಾವಿ ಯೋಜನಾ ಚಟುವಟಿಕೆಗಳನ್ನು ಖಚಿತಪಡಿಸಿಕೊಳ್ಳುವುದು. ಭಾವಿಗುಪ್ರಾದ ಸಂಪರ್ಕಸೇತು ಅಧಿಕಾರಿಯವರೊಂದಿಗೆ ಮತ್ತು ನೋಂದಣಿ ಸಂಸ್ಥೆಯೊಂದಿಗೆ ಆರ್ ಆರ್ ಸಿ ಯನ್ನು ಪ್ರತೀ ಹಂತದಲ್ಲಿಯೂ ಇಂದಿನದಿನದನ್ನಾಗಿ ಮಾಡುವಿಕೆಯನ್ನು ಖಚಿತಪಡಿಸಿಕೊಳ್ಳುವುದು. ಸಹಿ ಮಾಡಲಾಗಿರುವ ಖಚಿತಪಡಿಸಿಕೊಳ್ಳುವಿಕೆಗಳ ಪಟ್ಟಿಯನ್ನು ಪ್ರಾದೇಶಿಕ ಕಚೇರಿಗೆ/ಸಂಪರ್ಕಸೇತು ಅಧಿಕಾರಿಯವರಿಗೆ ನೀಡುವುದು.
- ಸೂಕ್ಷ್ಮಗ್ರಾಹಿಕರಣ ಕಾರ್ಯಾಗಾರಗಳು: ಆಧಾರ್, ಅನುಸರಿಸಬೇಕಾದ ನೋಂದಣಿ ಮತ್ತು ಐಇಸಿ ಮಾರ್ಗ, ರಾಜ್ಯ/ಜಿಲ್ಲೆ/ಗ್ರಾಮ ಮಟ್ಟಗಳಲ್ಲಿ ಪಾತ್ರಗಳು ಮತ್ತು ಜವಾಬ್ದಾರಿಗಳು, ನೋಂದಣಿ ಕಾರ್ಯನೀತಿ ಮತ್ತು ಪೂರ್ವಭಾವಿ ಯೋಜನೆಗಳು, ಇವುಗಳ ಬಗ್ಗೆ ಪಕ್ಷಿನೋಟವನ್ನು ಒದಗಿಸುವ ಸಲುವಾಗಿ, ಸೂಕ್ಷ್ಮಗ್ರಾಹಿಕರಣ ಕಾರ್ಯಾಗಾರಗಳ ಒಂದು ಸರಣಿಯನ್ನು ನಡೆಸಲಾಯಿತು. ಈ ಸರಣಿಯ ನಂತರ ಸಮಗ್ರತೆಯ ಪ್ರಮುಖ ಕ್ಷೇತ್ರಗಳು ಮತ್ತು ಅವುಗಳನ್ನು ಕಾರ್ಯಗತಗೊಳಿಸುವಿಕೆಯನ್ನು ಗುರುತಿಸುವ ಸಲುವಾಗಿ ಉಪ-ತಂಡಗಳ ಕಾರ್ಯಾಗಾರಗಳು ಮತ್ತು ಪ್ರಕ್ರಿಯೆ, ತಂತ್ರಜ್ಞಾನ, ಐಇಸಿ ಮತ್ತು ತಂತ್ರಾಂಶ ಅನ್ವಯ ತಂಡಗಳ ಜೊತೆ ಅನುಕ್ರಮವಾಗಿ ಕಾರ್ಯಾಗಾರಗಳು ಮತ್ತು ಸಭೆಗಳನ್ನು ನಡೆಸಲಾಯಿತು. ನೋಂದಣಿ ಸಂಸ್ಥೆಗಳ ತಂತ್ರಜ್ಞಾನ, ಪ್ರಕ್ರಿಯೆ ಮತ್ತು ಐಇಸಿ ಅಂಶವು ಭಾವಿಗುಪ್ರಾದ ಜೊತೆ ಸಂಪರ್ಕತೆಗೊಂಡಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು.
ನೋಂದಣಿಗಳು ಪ್ರಾರಂಭಗೊಳ್ಳಲು ಅಗತ್ಯವಿರುವ ಬಾಬುಗಳ ಕಾರ್ಯಗತಗೊಳಿಸುವಿಕೆಯ ಸ್ಥಿತಿಗತಿಯನ್ನು ಅರಿತುಕೊಳ್ಳುವುದಕ್ಕಾಗಿ, ತಂತ್ರಾಂಶ ಅನ್ವಯದ ಕಾರ್ಯಾರಂಭಕ್ಕೆ ಸಿದ್ಧಗೊಂಡಿರುವುದರ ಬಗ್ಗೆ ಕಾರ್ಯಾಗಾರವನ್ನು ತಂತ್ರಾಂಶ ಅನ್ವಯದ ಕಾರ್ಯಾರಂಭದ ನಿಗದಿತ ದಿನಾಂಕಕ್ಕೆ 2-3 ವಾರಗಳ ಮುಂಚಿತವಾಗಿ ನಿಗದಿಪಡಿಸಲಾಗುವುದು. ಆನ್-ಬೋರ್ಡಿಂಗ್ ಕಾರ್ಯಾಗಾರವನ್ನು ಪ್ರಾರಂಭಿಸುವ ಸಲುವಾಗಿ ನೋಂದಣಿ ಸಂಸ್ಥೆಗಳು ಭಾವಿಗುಪ್ರಾಕ್ಕೆ ಸಲಹೆ ನೀಡತಕ್ಕದ್ದು ಮತ್ತು ಅಗತ್ಯವಿರುವ ಸಹಭಾಗಿಗಳು ಮತ್ತು ಕಾರ್ಯೋದ್ಯುಕ್ತ ಗುಂಪುಗಳ ಸದಸ್ಯರುಗಳು ಕಾರ್ಯಾಗಾರದಲ್ಲಿ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳತಕ್ಕದ್ದು. ನೋಂದಣಿ ಪ್ರಕ್ರಿಯೆಯಲ್ಲಿ ನಾಗರಿಕ ಸಮಾಜ ಸಂಸ್ಥೆಗಳ (CSOs) ಪಾತ್ರವನ್ನು ವಿವರಿಸುವುದು ಮತ್ತು ಸಮಾಜದಲ್ಲಿ ಕಡೆಗಣಿಸಲ್ಪಟ್ಟಿರುವ ಸಮುದಾಯದ ನೋಂದಣಿಗಾಗಿ ಸಹಾಯ ಮಾಡಬಲ್ಲಂತಹ ಸ್ಥಳೀಯ ಮಟ್ಟದ ನಾಗರಿಕ ಸಮಾಜ ಸಂಸ್ಥೆಗಳ (CSOs) ಒಂದು ಪಟ್ಟಿಯನ್ನು ತಯಾರಿಸುವುದು. ನೋಂದಣಿ ಸಂಸ್ಥೆಗಳಿಗೆ ಸಾಮಾಜಿಕ ಕಳಕಳಿಯ ಒಳಸೇರ್ಪಡೆಗೊಳಿಸುವಿಕೆಯು ಒಂದು ಕಡ್ಡಾಯ ಅಗತ್ಯತೆಯಾಗಿರುತ್ತದೆ. ಸಮಾಜದಲ್ಲಿ ಆರ್ಥಿಕವಾಗಿ/ಶೈಕ್ಷಣಿಕವಾಗಿ ಹಿಂದುಳಿದ ಜನತೆಗಾಗಿ, ವಿವಿಧ ದೈಹಿಕವಾಗಿ/ಮಾನಸಿಕವಾಗಿ ನೊಂದವರ ಪಂಗಡ ಮತ್ತು ವಿಕಲಚೇತನ ವ್ಯಕ್ತಿಗಳಿಗಾಗಿ ನೋಂದಣಿ ಅಧಿಕಾರಿಗಳ ಜೊತೆ ಸಮಾಲೋಚಿಸುವ ಮೂಲಕ ವಿಶೇಷ ನೋಂದಣಿ ಕ್ರಮವನ್ನು ನೋಂದಣಿ ಸಂಸ್ಥೆಗಳು ಪ್ರಾರಂಭಿಸತಕ್ಕದ್ದು.
ಆಧಾರ್ ಯೋಜನೆಯ ಅಡಿಯಲ್ಲಿ ನೋಂದಣಿ ಸಂಸ್ಥೆಗಳ ಜವಾಬ್ದಾರಿಗಳೇನು?keyboard_arrow_down
ನೋಂದಣಿ ಸಂಸ್ಥೆಗಳ ಉನ್ನತ ಮಟ್ಟದ ವಿವಿಧ ಪಾತ್ರಗಳು ಮತ್ತು ಜವಾಬ್ದಾರಿಗಳು ಈ ಕೆಳಗಿನಂತಿರುತ್ತವೆ:
- ನೋಂದಣಿಯ ಪೂರ್ವಭಾವಿ ಯೋಜನೆ:
ನೋಂದಣಿಯ ಪೂರ್ವಭಾವಿ ಯೋಜನಾ ಕಾರ್ಯಾಗಾರದ ಒಂದು ಭಾಗವಾಗಿ, ಗುರಿಯಾಗಿಸಿಕೊಳ್ಳಲಾಗಿರುವ ನೋಂದಣಿಯ ಸಂಖ್ಯೆಗಳು, ವ್ಯಾಪಿಸಬೇಕಾದ ಸ್ಥಳಗಳು ಮತ್ತು ಅದಕ್ಕಾಗಿ ಕಾಲಮಿತಿಯನ್ನು ಅಂತಿಮ ರೂಪಕ್ಕೆ ತರುವಂತೆ ನೋಂದಣಿ ಸಂಸ್ಥೆಗಳಿಗೆ ಸಲಹೆಯನ್ನು ನೀಡಲಾಗುತ್ತದೆ. ಈ ಮಾಹಿತಿಯನ್ನು ಅಗತ್ಯವಿರುವ ನೋಂದಣಿ ಸ್ಟೇಷನ್ನುಗಳ ಸಂಖ್ಯೆ, ಅದಕ್ಕಾಗಿ ಸ್ಥಳಗಲು, ಅಗತ್ಯವಿರುವ ಸಾಧನಗಳು, ನೇಮಕ ಮಾಡಿಕೊಳ್ಳಬೇಕಾದ ನಿರ್ವಾಹಕರುಗಳು, ಇತ್ಯಾದಿಗಳ ಬಗ್ಗೆ ಪೂರ್ವಭಾವಿಯಾಗಿ ಯೋಜಿಸಿಕೊಳ್ಳಲು ಬಳಸಿಕೊಳ್ಳಬಹುದು. ನೋಂದಣಿ ಸಂಸ್ಥೆಗಳು ನೋಂದಣಿಗಾಗಿ ಅನುಸರಿಸಬೇಕಾದ ಮಾರ್ಗವನ್ನೂ ಸಹ ನಿರ್ಣಯಿಸುತ್ತವೆ (ಹಂತಾನುಹಂತವಾಗಿ, ಒಂದೇ ಸಲ ಸಮಗ್ರವಾಗಿ, ಇತ್ಯಾದಿ). ನೋಂದಣಿ ಸಂಸ್ಥೆಗಳು ಬಡಾವಣೆಯ ಎಲ್ಲಾ ನಿವಾಸಿಗಳನ್ನೂ ನೋಂದಣಿ ಮಾಡಿಸತಕ್ಕದ್ದು ಮತ್ತು ಅದನ್ನು ತಮ್ಮ ಫಲಾನುಭವಿಗಳಿಗೆ/ಗ್ರಾಹಕರಿಗೆ ಮಾತ್ರ ಸೀಮಿತಗೊಳಿಸಕೂಡದು ಎಂಬುದಾಗಿ ಈ ಮೂಲಕ ಬಲವಾದ ಶಿಫಾರಸನ್ನು ಮಾಡಲಾಗುತ್ತಿದೆ. ಎಲ್ಲಾ ನಿವಾಸಿಗಳನ್ನೂ ಸಮಗ್ರವಾಗಿ ವ್ಯಾಪಿಸುವುದು ನೋಂದಣಿ ಸಂಸ್ಥೆಗಳಿಗೆ ಗಾತ್ರದ ಮಿತವ್ಯಯತೆಯ ಪ್ರಯೋಜನಗಳನ್ನು ನೀಡುತ್ತದೆ ಮತ್ತು ನಿವಾಸಿಯೊಬ್ಬರಿಗೆ ನೋಂದಣಿ ವೆಚ್ಚವನ್ನು ಅತ್ಯುತ್ತಮವಾಗಿ ಕಡಿಮೆ ಗೊಳಿಸುತ್ತದೆ.
ನಾಗರಿಕ ಸಮಾಜ ಸಂಸ್ಥೆಗಳ (CSOs) ಒಳಗೊಳ್ಳುವಿಕೆಗಾಗಿ ಸಮಾಜದಲ್ಲಿ ಆರ್ಥಿಕವಾಗಿ/ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಜನತೆಗಾಗಿ, ವಿವಿಧ ದೈಹಿಕವಾಗಿ/ಮಾನಸಿಕವಾಗಿ ನೊಂದವರ ಪಂಗಡ ಮತ್ತು ವಿಕಲಚೇತನ ವ್ಯಕ್ತಿಗಳು/ ಕ್ಷೇತ್ರಗಳ ಸೇರ್ಪಡೆಗಾಗಿ ಪೂರ್ವಭಾವಿ ಯೋಜನೆಯನ್ನು ಅಂತಿಮ ರೂಪಕ್ಕೆ ತರುವುದು. ಸಮಾಜದಲ್ಲಿ ಆರ್ಥಿಕವಾಗಿ/ಶೈಕ್ಷಣಿಕವಾಗಿ ಹಿಂದುಳಿದ ಜನತೆಗಾಗಿ, ವಿವಿಧ ದೈಹಿಕವಾಗಿ/ಮಾನಸಿಕವಾಗಿ ನೊಂದವರ ಪಂಗಡ ಮತ್ತು ವಿಕಲಚೇತನ ವ್ಯಕ್ತಿಗಳಿಗಾಗಿ ನೋಂದಣಿ ಅಧಿಕಾರಿಗಳ ಜೊತೆ ಸಮಾಲೋಚಿಸುವ ಮೂಲಕ ವಿಶೇಷ ನೋಂದಣಿ ಕ್ರಮವನ್ನು ನೋಂದಣಿ ಸಂಸ್ಥೆಗಳು ಪ್ರಾರಂಭಿಸತಕ್ಕದ್ದು.
ಆಧಾರ್ ಸಾಧ್ಯತೆಯಿರುವ ತಂತ್ರಾಂಶ ಅನ್ವಯಗಳಿಗಾಗಿ ಆಸಕ್ತಿಯುತ ಕ್ಷೇತ್ರಗಳನ್ನು ಗುರುತಿಸುವುದು. ಆಧಾರ್ ಸಾಧ್ಯತೆಯಿರುವಂತಹ ಬ್ಯಾಂಕು ಖಾತೆಗಳ ಮೂಲಕ ಹಾದು ಹೋಗಬಹುದಾದ ಸರ್ಕಾರಿ ಪಾವತಿಗಳನ್ನು ಗುರುತಿಸುವುದು. ನೋಂದಣಿಗಳನ್ನು ಪ್ರಾರಂಭಿಸುವ ಸಲುವಾಗಿ, ನೋಂದಣಿ ಸಂಸ್ಥೆಗಳು ಈ ಕೆಳಗಿನ ಕಾರ್ಯಚಟುವಟಿಕೆಗಳನ್ನು ಪೂರ್ಣಗೊಳಿಸತಕ್ಕದ್ದು.
- • ನೋಂದಣಿ ಸಂಸ್ಥೆಯ ಆಯ್ಕೆ ಮತ್ತು ಆನ್-ಬೋರ್ಡಿಂಗ್
• ನೋಂದಣಿ ಸಂಸ್ಥೆಗಳನ್ನು ಗುರುತಿಸುವುದು
- ನಿವಾಸಿಗಳನ್ನು ಆಧಾರ್ ನ ಒಳಕ್ಕೆ ನೋಂದಣಿ ಮಾಡಿಸಿಕೊಳ್ಳುವ ಉದ್ದೇಶಕ್ಕಾಗಿ ರಿಜಿಸ್ಟ್ರಾರ್ ಗಳು/ನೋಂದಣಿ ಸಂಸ್ಥೆಗಳು ನೋಂದಣಿ ಪ್ರತಿನಿಧಿಗಳನ್ನು/ಸಂಸ್ಥೆಗಳನ್ನು ನೋಂದಣಿ ಮಾಡಿಸಿಕೊಳ್ಳಬಹುದು. ನೋಂದಣಿ ಸಂಸ್ಥೆಗಳು ಗುತ್ತಿಗೆ ಆಧಾರದ ಮೇರೆಗೆ ನೇಮಕ ಮಾಡಿಕೊಂಡ ನೋಂದಣಿ ಸಂಸ್ಥೆಗಳ ವಿವರಗಳನ್ನು ಭಾವಿಗುಪ್ರಾದ ಜೊತೆ ಹಂಚಿಕೊಳ್ಳುತ್ತಾರೆ.
- ಕೇವಲ ಭಾವಿಗುಪ್ರಾದ ಪಟ್ಟಿಯಲ್ಲಿರುವ ನೋಂದಣಿ ಪ್ರತಿನಿಧಿಗಳನ್ನು/ಸಂಸ್ಥೆಗಳನ್ನು ಮಾತ್ರ ನೇಮಕ ಮಾಡಿಕೊಳ್ಳುವಂತೆ ರಿಜಿಸ್ಟ್ರಾರುಗಳು/ನೋಂದಣಿ ಸಂಸ್ಥೆಗಳು ನೇಮಕ ಮಾಡಿಕೊಳ್ಳತಕ್ಕದ್ದು ಎಂಬುದಾಗಿ ಸಲಹೆ ನೀಡಲಾಗುತ್ತಿದೆ., ಅವುಗಳು ಪ್ರಾಧಿಕಾರದ ಪಟ್ಟಿಯಲ್ಲಿರುವ ಸಂಸ್ಥೆಗಳಿಗೆ ಅನ್ವಯಿಸುವ ಷರತ್ತುಗಳು ಮತ್ತು ನಿಬಂಧನೆಗಳಿಗೆ ಒಳಪಡತಕ್ಕದ್ದು.
- ಹೊಸ ಗುತ್ತಿಗೆಗಳು ಕಾಮಗಾರಿಯು ಮುಂದುವರಿದುಕೊಂಡು ಹೋಗುವ ಸಲುವಾಗಿ ಮುಂದುವರೆದ ಪಟ್ಟಿಯ ಬದ್ಧತೆಯ ಷರತ್ತನ್ನು ಒಳಗೊಂಡಿರತಕ್ಕದ್ದು. ಆರ್ ಎಫ್ ಪಿ/ಕ್ಯೂ ಪ್ರಾಧಿಕಾರದ ಪಟ್ಟಿಯಲ್ಲಿರುವ ಸಂಸ್ಥೆಗಳ ಪ್ರಮಾಣಕ ಫಲಕದ ಮಾದರಿಯನ್ನು ಭಾವಿಗುಪ್ರಾದ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
- ಉಪ-ಗುತ್ತಿಗೆಯನ್ನು ಕೊಡುವಂತಿಲ್ಲ – ಉಪ-ಗುತ್ತಿಗೆಯು ಮಾಹಿತಿಯ ಗುಣಮಟ್ಟ ಮತ್ತು ಭದ್ರತೆಯ ಮೇಲೆ ಗುರುತರ ಪ್ರಭಾವವನ್ನು ಭೀರುತ್ತದೆ. ನೋಂದಣಿ ಸಂಸ್ಥೆಗಳ ಜೊತೆಗಿನ ಒಡಂಬಡ
ಒಂದು ನೋಂದಣಿ ಸಂಸ್ಥೆ ಎಂದರೆ ಯಾರು (EA)?keyboard_arrow_down
ನೋಂದಣಿ ಸಂಸ್ಥೆಗಳೆಂದರೆ ವಿಶಿಷ್ಟ ಗುರುತು ನೋಂದಣಿಗಾಗಿ ಜನಸಂಖ್ಯಾಶಾಸ್ತ್ರಕ್ಕೆ ಮತ್ತು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯ ಸಂಗ್ರಹಣೆಯನ್ನು ಕೈಗೊಳ್ಳುವ ಸಲುವಾಗಿ ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಗಳು ಗುತ್ತಿಗೆ ಅಧಾರದಲ್ಲಿ ನೇಮಕ ಮಾಡಿಕೊಳ್ಳುವ ಸಂಸ್ಥೆಗಳು. ನೋಂದಣಿ ಸಂಸ್ಥೆಗಳು ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಗಳಿಂದ ನೇಮಕಗೊಳ್ಳುವ ಸಲುವಾಗಿ ಭಾವಿಗುಪ್ರಾದಿಂದ ಅವಿರತವಾಗಿ ಅದರ ಪಟ್ಟಿಯಲ್ಲಿರುವಂತೆ ಖಚಿತಪಡಿಸಿಕೊಳ್ಳತಕ್ಕದ್ದು. ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಗಳು ಪ್ರಾಧಿಕಾರದ ಪಟ್ಟಿಯಲ್ಲಿಲ್ಲದ ಸಂಸ್ಥೆಗಳನ್ನು ನೇಮಕ ಮಾಡಿಕೊಂಡಲ್ಲಿ, ಅವುಗಳು ಕೂಡ ಪ್ರಾಧಿಕಾರದ ಪಟ್ಟಿಯಲ್ಲಿರುವ ಸಂಸ್ಥೆಗಳಿಗೆ ಅನ್ವಯಗೊಳ್ಳುವ ಷರತ್ತುಗಳು ಮತ್ತು ನಿಬಂಧನೆಗಳಿಗೆ ಬದ್ಧವಾಗಿರುತ್ತವೆ.
ನೋಂದಣಿ ಕಾರ್ಯಚಟುವಟಿಕೆಗಳನ್ನು ಉಪ-ಗುತ್ತಿಗೆಗೆ ನೀಡಲು ನೋಂದಣಿ ಸಂಸ್ಥೆಗಳಿಗೆ ಅನುಮತಿ ನೀಡಲಾಗುವುದೆ?keyboard_arrow_down
ನೋಂದಣಿ ಕಾರ್ಯಚಟುವಟಿಕೆಗಳನ್ನು ಖಾಸಗಿ/ವಾಣಿಜ್ಯ ಸಂಸ್ಥೆಗಳಿಗೆ/ಸಾರ್ವಜನಿಕ ವಲಯದ ಉದ್ದಿಮೆಗಳಿಗೆ/ಸರ್ಕಾರಿ ಕಂಪನಿಗಳಿಗೆ/ಸ್ವಾಯತ್ತ ಸಂಸ್ಥೆಗಳಿಗೆ ಉಪ-ಗುತ್ತಿಗೆಗೆ ನೀಡಲು ಅನುಮತಿ ನೀಡಲಾಗುವುದಿಲ್ಲ. ಆದಾಗ್ಯೂ, ನೋಂದಣಿ ನಿರ್ವಾಹಕರು ಮತ್ತು ಮೇಲ್ವಿಚಾರಕರುಗಳಂತಹ ಕ್ಷೇತ್ರ ಮಟ್ಟದ ಸಿಬ್ಬಂದಿಯನ್ನು ಮೂರನೇ ತಂಡಗಳ ಮೂಲಕ ಗುತ್ತಿಗೆಗೆ ತೆಗೆದುಕೊಳ್ಳಬಹುದು. ನೋಂದಣಿ ಸಂಸ್ಥೆಗಳು ಈ ಸಿಬ್ಬಂದಿಯನ್ನು ಯಾವ ಕಂಪನಿಗಳಿಂದ ಗುತ್ತಿಗೆಗೆ ತೆಗೆದುಕೊಳ್ಳಲಾಗುವುದು ಎಂಬುದರ ಬಗ್ಗೆ ವಿವರಗಳನ್ನು ಒದಗಿಸತಕ್ಕದ್ದು. ಆದಾಗ್ಯೂ, ಸರ್ಕಾರಿ ಸಂಸ್ಥೆಗಳು ನೋಂದಣಿ ಕಾರ್ಯಚಟುವಟಿಕೆಯನ್ನು ಸಿ ಎಸ್ ಸಿಗಳಿಗೆ/ಸರ್ಕಾರಿ ಸ್ಥಳೀಯ ಸಂಸ್ಥೆಗಳಿಗೆ ವಹಿಸಿಕೊಡುವ ಆಯ್ಕೆಯನ್ನು ಮಾಡಿಕೊಳ್ಳಬಹುದು.
ನೋಂದಣಿಗಳನ್ನು ಪ್ರಾರಂಭಿಸುವ ಮೊದಲು ನೋಂದಣಿ ಸಂಸ್ಥೆಗಳು ಕೈಗೊಳ್ಳಬೇಕಾದ ಪೂರ್ವತಯಾರಿ ಕಾರ್ಯಚಟುವಟಿಕೆಗಳು ಯಾವುವು?keyboard_arrow_down
ಒಂದು ನೋಂದಣಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಪೂರ್ವತಯಾರಿ ಹಂತ
ನೋಂದಣಿ ಸಂಸ್ಥೆಗಳು, ಸಂಪರ್ಕಸೇತು/ ರಿಜಿಸ್ಟಾರ್/ನೋಂದಣಿ ಅಧಿಕಾರಿಯವರ ಇಲಾಖೆಯ ಮುಖ್ಯಸ್ಥರ ನೇತೃತ್ವದಲ್ಲಿರುವ ಜಂಟಿ ಕಾರ್ಯೋದ್ಯುಕ್ತ ಗುಂಪಿನ ಒಂದು ಭಾಗವಾಗುವಂತಹ ತಮ್ಮ ಯೋಜನೆ ಮತ್ತು ತಂತ್ರಜ್ಞಾನ ವ್ಯವಸ್ಥಾಪಕರುಗಳನ್ನು ಗುರುತಿಸತಕ್ಕದ್ದು. ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಗಳು ನೊಂದಣಿ ಸಂಸ್ಥೆಗಳಿಗೆ ಪ್ರಾರಂಭಿಕ ಕ್ರಮಗಳು ಮತ್ತು ಆನ್-ಬೋರ್ಡಿಂಗ್ ಕಾರ್ಯಾಗಾರಗಳನ್ನು ಸಂಘಟಿಸಬೇಕು ಮತ್ತು ಭಾವಿಗುಪ್ರವು ಸವಿವರ ನೋಂದಣಿ ಪ್ರಕ್ರಿಯೆಯನ್ನು ಮತ್ತು ಕಾರ್ಯಗತಗೊಳಿಸುವಿಕೆಯ ಸಂಕ್ಷಿಪ್ತ ಪರಿಪ್ರೇಕ್ಷಣೆಯನ್ನು ಒದಗಿಸುವುದು. ನೋಂದಣಿ ಸಂಸ್ಥೆಗಳು ನಿಯತಕಾಲಿಕ ತಿದ್ದುಪಡಿಗಳು/ಇಂದಿನದಿನದನ್ನಾಗಿರುವಿಕೆಗಳೂ ಸೇರಿದಂತೆ ನೋಂದಣಿ ಪ್ರಕ್ರಿಯೆ ಮತ್ತು ಕಾರ್ಯನೀತಿಗಳನ್ನು ಚೆನ್ನಾಗಿ ಅರಿತಿರತಕ್ಕದ್ದು. ನೋಂದಣಿ ಸಂಸ್ಥೆಯ ಕಾರ್ಯಚಟುವಟಿಕೆಗಳ ವ್ಯಾಪ್ತಿಯು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
- ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಸಾಧನಗಳೂ ಸೇರಿದಂತೆ ನೋಂದಣಿ ಯಂತ್ರಾಂಶಗಳು, ತಂತ್ರಾಂಶಗಳನ್ನು ಭಾವಿಗುಪ್ರಾದ ನಿರ್ದಿಷ್ಟ ನಿರೂಪಣೆಗಳ ಅನುಸಾರ ಖರೀದಿಸತಕ್ಕದ್ದು.
ನೋಂದಣಿ ಸಂಸ್ಥೆಗಳು ಪ್ರಮಾಣೀಕೃತ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಸಾಧನಗಳೂ (ಬೆರಳು ಮುದ್ರಿಕೆ ಮತ್ತು ಕಣ್ಣು ಪಾಪೆಗಳನ್ನು ಸೆರೆಹಿಡಿಯುವುದಕ್ಕಾಗಿ) ಸೇರಿದಂತೆ ನೋಂದಣಿ ಕೇಂದ್ರದಲ್ಲಿ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸೆರೆಹಿಡಿಯುವ ಸಲುವಾಗಿ ನೋಂದಣಿ ಯಂತ್ರಾಂಶಗಳು, ತಂತ್ರಾಂಶಗಳನ್ನು ಭಾವಿಗುಪ್ರಾದ ನಿರ್ದಿಷ್ಟ ನಿರೂಪಣೆಗಳ ಅನುಸಾರ ಖರೀದಿಸತಕ್ಕದ್ದು. ನೋಂದಣಿ ಸಂಸ್ಥೆಗಳು ಭಾವಿಗುಪ್ರಾ ಅಥವಾ ಅಧಿಕೃತವಾಗಿ ಅನುಮತಿ ನೀಡಲಾಗಿರುವ ಸಂಸ್ಥೆಯಿಂದ ಪ್ರಮಾಣೀಕೃತ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸೆರೆಹಿಡಿಯುವುದಕ್ಕಾಗಿನ ಸಾಧನಗಳನ್ನು ಮಾತ್ರ ಖರೀದಿಸತಕ್ಕದ್ದು. ಸರಬರಾಜುದಾರರು ಯಂತ್ರಾಂಶಗಳಿಗೆ ಸಂಬಂಧಿಸಿದಂತೆ ಅವಿರತ ತಾಂತ್ರಿಕ ಬೆಂಬಲವನ್ನು ನೀಡುವುದನ್ನು ನೋಂದಣಿ ಸಂಸ್ಥೆಗಳು ಖಚಿತಪಡಿಸಿಕೊಳ್ಳತಕ್ಕದ್ದು.
- ನೋಂದಣಿಗಾಗಿ ಸಿಬ್ಬಂದಿಯನ್ನು ಗುತ್ತಿಗೆಗೆ ತೆಗೆದುಕೊಳ್ಳುವುದು ಮತ್ತು ತರಬೇತಿ ನೀಡುವುದು
ನೋಂದಣಿ ಸಂಸ್ಥೆಯು, ನೋಂದಣಿ ಸ್ಟೇಷನ್ನು/ಕೇಂದ್ರದ ಕಾರ್ಯಾಚರಣೆಗಾಗಿ ಭಾವಿಗುಪ್ರಾವು ನಿರ್ದಿಷ್ಟಪಡಿಸಿರುವ ಮಾರ್ಗಸೂಚಿಗಳ ಅನುಸಾರ ಸಿಬ್ಬಂದಿ, ನಿರ್ವಾಹಕರು ಮತ್ತು ಮೇಲ್ವಿಚಾರಕರಗಳನ್ನು ಗುತ್ತಿಗೆಗೆ ಆಧಾರದ ಮೇರೆಗೆ ನೇಮಕ ಮಾಡಿಕೊಳ್ಳತಕ್ಕದ್ದು. ನೋಂದಣಿ ಸಂಸ್ಥೆಯು ನೋಂದಣಿ ಕೇಂದ್ರಗಳಲ್ಲಿ ನೋಂದಣಿಯ ಸಮಯದಲ್ಲಿ ತಾಂತ್ರಿಕ ಬೆಂಬಲವನ್ನು ನೀಡುವ ಸಲುವಾಗಿ ತಾಂತ್ರಿಕ ಸಿಬ್ಬಂದಿಯನ್ನು ಹೊಂದಿರತಕ್ಕದ್ದು/. ವಿದ್ಯುತ್ತು/ತಂತ್ರಾಂಶ ಅನ್ವಯ/ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಸಾಧನಕ್ಕೆ ಸಂಬಂಧಿತ ನಿರ್ವಹಣಾ ಸಮಸ್ಯೆಗಳ ಕಡೆಗೆ ಗಮನಹರಿಸುವ ಸಲುವಾಗಿ ತಾಂತ್ರಿಕ ಸಿಬ್ಬಂಧಿಯು ನೋಂದಣಿ ಕೇಂದ್ರದ ಕಾರ್ಯಸ್ಥಗಿತ ಸಮಯವನ್ನು ಕನಿಷ್ಠ ಮಟ್ಟಕ್ಕೆ ತರುವ ರೀತಿಯಲ್ಲಿ ಒಂದು ಸುಮಾರು ಆರು ನೋಂದಣಿ ಕೇಂದ್ರಗಳನ್ನು ವ್ಯಾಪಿಸಿದಂತೆ ಒಂದು ಕೇಂದ್ರ ಪ್ರದೇಶದಲ್ಲಿ ಕರೆದ ಕೂಡಲೇ ಲಭ್ಯವಿರತಕ್ಕದ್ದು. ನೋಂದಣಿ ಸಂಸ್ಥೆಯು ನಿರ್ವಾಹಕರುಗಳು ಮತ್ತು ಮೇಲ್ವಿಚಾರಕರುಗಳು 18 ವರ್ಷಕ್ಕೆ ಮೇಲ್ಪಟ್ಟವರಾಗಿರುವರು ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು. ನಿರ್ವಾಹಕರು ಕನಿಷ್ಠ 10+2 ತರಗತಿಗಳನ್ನು ತೇರ್ಗಡೆಹೊಂದಿರತಕ್ಕದ್ದು ಮತ್ತು ಗಣಕಯಂತ್ರವನ್ನು ಸುಲಲಿತವಾಗಿ ಬಳಸುವಂತಿರಬೇಕು. ಮೇಲ್ವಿಚಾರಕರು 10+2 ತರಗತಿಗಳನ್ನು ತೇರ್ಗಡೆ ಹೊಂದಿರಬೇಕು ಮತ್ತು ಓರ್ವ ಪದವೀದರರಿಗೆ ಆದ್ಯತೆಯನ್ನು ನೀಡತಕ್ಕದ್ದು ಮತ್ತು ಗಣಕಯಂತ್ರದ ಬಳಕೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಬಳಸುವ ಅನುಭವವಿರತಕ್ಕದ್ದು.
ನೋಂದಣಿ ಸಂಸ್ಥೆಯು ವಿವಿಧ ಕಾರ್ಮಿಕ ನಿಯಂತ್ರಣಗಳಲ್ಲಿ ಅಂದರೆ ಭವಿಷ್ಯ ನಿಧಿ, ಕಾರ್ಮಿಕ ರಾಜ್ಯ ವಿಮೆ, ಕೈಗಾರಿಕಾ ವಿವಾಧಗಳ ಅಧಿನಿಯಮ, ಗುತ್ತಿಗೆ ಕಾರ್ಮಿಕರ ಅಧಿನಿಯಮ, ಕನಿಷ್ಠ ವೇತನಗಳ ಅಧಿನಿಯಮ, ಇತ್ಯಾದಿ ಕಾರ್ಮಿಕ ಅಧಿನಿಯಮ/ನಿಯಮಗಳನ್ನು ಮತ್ತು ಎಲ್ಲಾ ಶಾಸನಬದ್ಧ ಅನುವುಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳತಕ್ಕದ್ದು.
ಸಿಬ್ಬಂದಿಗೆ ನೋಂದಣಿ ಪ್ರಕ್ರಿಯೆ ಮತ್ತು ನಿವಾಸಿ ನೋಂದಣಿ, ಸ್ಥಳೀಯ ಭಾಷೆಯಲ್ಲಿ ಲಿಪ್ಯಂತರಣ ಕೌಶಲ
ನಿರ್ವಾಹಕರು ಎಂದರೆ ಯಾರು ಮತ್ತು ಆತನ/ಆಕೆಯ ವಿದ್ಯಾರ್ಹತೆಗಳು ಏನಿರಬೇಕು?keyboard_arrow_down
ಓರ್ವ ನಿರ್ವಾಹಕರನ್ನು ಒಂದು ನೋಂದಣಿ ಸಂಸ್ಥೆಯು ನೋಂದಣಿ ಸ್ಟೇಷನ್ನುಗಳಲ್ಲಿ ನೋಂದಣಿಯನ್ನು ಕಾರ್ಯಗತಗೊಳಿಸುವ ಸಲುವಾಗಿ ನೇಮಕ ಮಾಡಿಕೊಳ್ಳುತ್ತದೆ. ಈ ಪಾತ್ರಕ್ಕೆ ಅರ್ಹತೆಯನ್ನು ಪಡೆಯುವುದಕ್ಕಾಗಿ, ವ್ಯಕ್ತಿಯು ಈ ಕೆಳಗಿನ ಮಾನದಂಡಗಳನ್ನು ಪೂರೈಸಿರತಕ್ಕದ್ದು:
- ವ್ಯಕ್ತಿಯು 18 ವರ್ಷಗಳು ಮತ್ತು ಅದಕ್ಕೂ ಹೆಚ್ಚಿನ ವಯಸ್ಸಿನವರಾಗಿರತಕ್ಕದ್ದು
- ವ್ಯಕ್ತಿಯು 10+2 ತರಗತಿಗಳನ್ನು ತೇರ್ಗಡೆಹೊಂದಿರತಕ್ಕದ್ದು ಮತ್ತು ಓರ್ವ ಪದವೀದರರಿಗೆ ಆಧ್ಯತೆಯನ್ನು ನೀಡಲಾಗುವುದು.
- ವ್ಯಕ್ತಿಯು ಆಧಾರ್ ಗಾಗಿ ನೋಂದಣಿ ಮಾಡಿಸಿಕೊಂಡಿರತಕ್ಕದ್ದು ಮತ್ತು ಆತನ/ಆಕೆಯ ಆಧಾರ್ ಸಂಖ್ಯೆಯನ್ನು ತಂತ್ರಾಂಶ ಅನ್ವಯದಿಂದ ಹೊರತೆಗೆದಿರತಕ್ಕದ್ದು.
- ವ್ಯಕ್ತಿಯು ಒಂದು ಗಣಕಯಂತ್ರದ ಕಾರ್ಯನಿರ್ವಹಣೆ ಮಾಡುವ ಮಟ್ಟಿಗೆ ಮೂಲ ಅರಿವನ್ನು ಹೊಂದಿರತಕ್ಕದ್ದು ಮತ್ತು ಸ್ಥಳೀಯ ಭಾಷೆಯ ಕೀ-ಬೋರ್ಡಿನ ಮತ್ತು ಲಿಪ್ಯಂತರಣದ ಬಗ್ಗೆ ತೃಪ್ತಿದಾಯಕ ಅರಿವನ್ನು ಹೊಂದಿರತಕ್ಕದ್ದು.
- ವ್ಯಕ್ತಿಯು, ಭಾವಿಗುಪ್ರಾವು ನೇಮಕ ಮಾಡಿರುವ ಪರೀಕ್ಷಣೆ ಮಾಡುವ ಮತ್ತು ಪ್ರಮಾಣೀಕರಿಸುವ ಸಂಸ್ಥೆಯಿಂದ “ನಿರ್ವಾಹಕ ಪ್ರಮಾಣಪತ್ರವನ್ನು ಪಡೆದಿರತಕ್ಕದ್ದು.
ಓರ್ವ ನಿರ್ವಾಹಕರಾಗಿ ಕೆಲಸ ಪ್ರಾರಂಭಿಸುವ ಮೊದಲು:
- ನೋಂದಣಿಗಳ ಪ್ರಾರಂಭಕ್ಕೆ ಮುಂಚಿತವಾಗಿ , ಭಾವಿಗುಪ್ರದ ಮಾರ್ಗಸೂಚಿಗಳ ಅನುಸಾರ ಯಾವುದಾದರೂ ನೋಂದಣಿ ಸಂಸ್ಥೆಯಲ್ಲಿ ನಿರತವಾಗಿರಬೇಕು ಮತ್ತು ಸಕ್ರಿಯವಾಗಿರಬೇಕು
- ಆಧಾರ್ ನೋಂದಣಿ/ಇಂದಿನದಿನದನ್ನಾಗಿ ಮಾಡುವಿಕೆ ಪ್ರಕ್ರಿಯೆ ಮತ್ತು ಆಧಾರ್ ನೋಂದಣಿಯ ಸಮಯದಲ್ಲಿ ಬಳಸಲಾಗುವ ಸಾಧನಗಳ ಮೇಲೆ ಪ್ರಾದೇಶಿಕ ಕಚೇರಿಗಳು/ನೋಂದಣಿ ಸಂಸ್ಥೆಗಳು ನಡೆಸುವ ತರಬೇತಿಯನ್ನು ಪಡೆದಿರಬೇಕು.
- ವ್ಯಕ್ತಿಯು ಪ್ರಮಾಣೀಕರಣ ಪರೀಕ್ಷೆಯನ್ನು ನೀಡುವ ಮೊದಲು ಭಾವಿಗುಪ್ರಾದ ಜಾಲತಾಣದಲ್ಲಿ ಲಭ್ಯವಿರುವ ಆಧಾರ್ ನೋಂದಣಿ/ ಇಂದಿನದಿನದನ್ನಾಗಿಸುವಿಕೆಯ ಮೇಲಿನ ತರಬೇತಿ ವಿಷಯಗಳನ್ನು ಸಂಪೂರ್ಣವಾಗಿ ಓದಿರತಕ್ಕದ್ದು.
- ವ್ಯಕ್ತಿಯು ಸ್ಥಳೀಯ ಭಾಷೆಯ ಕೀ ಬೋರ್ಡ್ ಮತ್ತು ಲಿಪ್ಯಂತರಣದಲ್ಲಿ ತೃಪ್ತಿಕರ ಅನುಭವವನ್ನು ಹೊಂದಿರತಕ್ಕದ್ದು.
- ನಿರ್ವಾಹಕರು ಆತನ/ಆಕೆಯ “ಆನ್ ಬೋರ್ಡಿಂಗ್ ನಮೂನೆ”ಯನ್ನು ಅಗತ್ಯ ದಾಖಲೆಗಳ ಜೊತೆಯಲ್ಲಿ ನೋಂದಣಿ ಸಂಸ್ಥೆಗೆ ಸಲ್ಲಿಸತಕ್ಕದ್ದು, ತದನಂತರ ನೋಂದಣಿ ಸಂಸ್ಥೆಯು ಆ ನಮೂನೆಯನ್ನು ಸಂಬಂಧಿತ “ಭಾವಿಗುಪ್ರಾದ ಪ್ರಾದೇಶಿಕ ಕಚೇರಿಗಳಿಗೆ” ಪರಿಶೀಲನೆಗಾಗಿ ಸಲ್ಲಿಸುವುದು.
- ಪರಿಶೀಲನೆಯ ನಂತರ ಪ್ರಾದೇಶಿಕ ಕಚೇರಿಗಳು ಸಂಬಂಧಿತ ನೋಂದಣಿ ಸಂಸ್ಥೆಯೊಂದಿಗೆ ಆನ್ ಬೋರ್ಡಿಂಗ್ ಅನ್ನು ಅನುಮೋದಿಸುವುದು/ತಿರಸ್ಕರಿಸುವುದು.
- ನೋಂದಣಿ ಸಂಸ್ಥೆಯು, ತದನಂತರ ಆಧಾರ್ ಕ್ಲೈಂಟ್ ತಂತ್ರಾಂಶ ಅನ್ವಯದಲ್ಲಿ ಆತನ/ಆಕೆಯ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಪಡೆದುಕೊಳ್ಳುವ ಮೂಲಕ ನಿರ್ವಾಹಕರನ್ನು ಸೇರಿಸುವುದು ಮತ್ತು ನೋಂದಣಿ ಯಂತ್ರವನ್ನು/ತಂತ್ರಾಂಶ ಅನ್ವಯವನ್ನು ನಿರ್ವಹಿಸುವ ಸಲುವಾಗಿ ಬಳಕೆದಾರರ ಹೆಸರು ಮತ್ತು ಸಂಕೇತಪದವನ್ನು ನೀಡುವುದು
- ನೋಂದಾಯಿತ ಬಳಕೆದಾರ ಎಂದರೆ ಬಳಕೆದಾರರ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ವಿವರಗಳ ಪರಿಶೀಲನೆಯನ್ನು ಭಾವಿಗುಪ್ರಾದ ವ್ಯವಸ್ಥೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಮತ್ತು ನೋಂದಣಿ ಸ್ಟೇಷನ್ನಿನಲ್ಲಿ ಸ್ಥಳೀಯ ದತ್ತಸಂಚಯದಲ್ಲಿ ಸಂಗ್ರಹಿಸಿಡಲಾಗಿದೆ ಎಂಬ ಅರ್ಥವನ್ನು ಕೊಡುತ್ತದೆ.
ನಿವಾಸಿ ನೋಂದಣಿಯ ಸಮಯದಲ್ಲಿ ಓರ್ವ ನಿರ್ವಾಹಕರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಹದಿನೈದು ಕಟ್ಟಳೆಗಳು/ಷರತ್ತುಗಳು ಯಾವುವು?keyboard_arrow_down
- ನೋಂದಣಿ ಕೇಂದ್ರದಲ್ಲಿನ ನಿರ್ವಾಹಕರ ಪಾತ್ರವು ಭಾವಿಗುಪ್ರಾದ ಮಾರ್ಗಸೂಚಿಗಳ ಅನುಸಾರ ಜನಸಂಖ್ಯಾಶಾಸ್ತ್ರಕ್ಕೆ ಮತ್ತು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸೆರೆಹಿಡಿಯುವುದು. ಒಂದು ಆಧಾರ್ ನೋಂದಣಿ ಕೇಂದ್ರದಲ್ಲಿ ಓರ್ವ ನಿರ್ವಾಹಕರಾಗಿ ಆತನ/ಆಕೆಯ ಪಾತ್ರವನ್ನು ನಿರ್ವಹಿಸುತ್ತಿರುವ ವೇಳೆಯಲ್ಲಿ ಈ ಕೆಳಗಿನ “ಹದಿನೈದು ಷರತ್ತುಗಳನ್ನು” ಖಚಿತಪಡಿಸಿಕೊಳ್ಳತಕ್ಕದ್ದು:
- ನೋಂದಣಿಗಳನ್ನು ಕೈಗೊಳ್ಳುವ ಸಲುವಾಗಿ ನಿಮ್ಮ ಸ್ವಂತ ನಿರ್ವಾಹಕ ಗುರುತಿನ ಸಂಖ್ಯೆಯೊಂದಿಗೆ ಆಧಾರ್ ಕ್ಲೈಂಟಿನಲ್ಲಿ ಲಾಗ್ ಇನ್ ಆಗುವುದನ್ನು ಮತ್ತು ನೋಂದಣಿಗಳಿಗಾಗಿ ನಿಮ್ಮ ಲಾಗ್ ಇನ್ ವಿಂಡೋ ಅನ್ನು ಮತ್ಯಾರೂ ಬಳಸದಂತೆ ನಿಮ್ಮ ಆಸನದಿಂದ ಎದ್ದು ಹೋಗುವಾಗ ಲಾಗ್ ಆಫ್ ಆಗುವುದನ್ನು ಖಚಿತಪಡಿಸಿಕೊಳ್ಳುವುದು.
- ಪ್ರತಿ ದಿನವೂ ನೋಂದಣಿಗಳ ಪ್ರಾರಂಭದಲ್ಲಿ ಜಿಪಿಎಸ್ ಸುಸಂಘಟಿತಗಳನ್ನು ಸೆರೆಹಿಡಿಯುವುದು.
- ಪ್ರತಿಯೊಂದು ಸಲ ಲಾಗ್ ಇನ್ ಆದಾಗ, ಗಣಕಯಂತ್ರದಲ್ಲಿನ ದಿನಾಂಕ ಮತ್ತು ಸಮಯವು ಇಂದಿನದಾಗಿರುವುದನ್ನು ಖಚಿತಪಡಿಸಿಕೊಳ್ಳುವುದು.
- ಸ್ಟೇಷನ್ನು ವಿನ್ಯಾಸವು ಭವಿಗುಪ್ರಾದ ಮಾರ್ಗಸೂಚಿಗಳ ಅನುಸಾರ ಇರುವುದನ್ನು ಖಚಿತಪಡಿಸಿಕೊಳ್ಳುವುದು.
- ನಿವಾಸಿಯನ್ನು ಆರಾಮವಾಗಿ ಇರಿಸುವಿಕೆಗಾಗಿ ಮತ್ತು ಮಾಹಿತಿಯನ್ನು ಸೆರೆಹಿಡಿಯುವುದಕ್ಕೆ ಅನುಕೂಲ ಕಲ್ಪಿಸುವುದಕ್ಕಾಗಿ ನೋಂದಣಿ ಪ್ರಕ್ರಿಯೆಗೆ ಮೊದಲು ಮತ್ತು ಪ್ರಕ್ರಿಯೆಯ ಸಮಯದಲ್ಲಿ ನೋಂದಣಿ/ಇಂದಿನದಿನದನ್ನಾಗಿಸುವಿಕೆಯ ಪ್ರಕ್ರಿಯೆಯನ್ನು ನಿವಾಸಿಗೆ ಸಂಕ್ಷಿಪ್ತವಾಗಿ ತಿಳಿಸುವುದು.
- “ಒದಗಿಸಲಾಗಿರುವ ಆಧಾರ್ ಅನುಕೂಲತೆಯನ್ನುಕಂಡುಹಿಡಿಯಿರಿ” (“Find Aadhaar Facility”), ಇದನ್ನು ಉಪಯೋಗಿಸಿಕೊಂಡು ಒಂದು ಹೊಸದಾದ ನೋಂದಣಿಯನ್ನು ಮಾಡುವ ಮೊದಲು ನಿವಾಸಿಯು ಈ ಮೊದಲು ಆಧಾರ್ ಗಾಗಿ ನೋಂದಣಿ ಮಾಡಿಸಿಕೊಂಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು.
- ನಿವಾಸಿಯಿಂದ ಕೋರಲಾಗಿರುವ ಮತ್ತು ಯಾರ ನೋಂದಣಿ/ಇಂದಿನದಿನದನ್ನಾಗಿಸುವಿಕೆಯನ್ನು ಮಾಡಲಾಗುತ್ತಿದೆಯೋ ಅಂತಹ ನಿವಾಸಿಗೇ ಸಂಬಂಧಿಸಿರುವ ನೋಂದಣಿಯ ಮಾದರಿ/ಇಂದಿನದಿನದನ್ನಾಗಿಸುವಿಕೆಗೆ ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳು ಲಭ್ಯವಿರುವವು ಎಂಬುದನ್ನು ಖಚಿತಪಡಿಸಿಕೊಳ್ಳುವುದು.
- ನಿವಾಸಿಗೆ ಮುಂದಿನ ಮಾಹಿತಿಗಳನ್ನು ಕಳುಹಿಸುವ ಸಲುವಾಗಿ ಮತ್ತು ದೃಢೀಕರಣ ಆಧಾರಿತ ಒಂದು ಸಲದ ಸಂಕೇತಪದ ಮತ್ತು ಆನ್ ಲೈನ್ ಆಧಾರ್ ಇಂದಿನದಿನದನ್ನಾಗಿ ಮಾಡುವಿಕೆಯ ಅನುಕೂಲತೆ ಮುಂತಾದ ಇತರೆ ಬಳಕೆಗಾಗಿ ತಮ್ಮ ಮೊಬೈಲು ಸಂಖ್ಯೆಯನ್ನು ನೀಡುವಂತೆ ನಿವಾಸಿಗೆ ಪ್ರೊತ್ಸಾಹಿಸುವುದು.
- ನಿವಾಸಿಯ ಆಧಾರ್ ನೋಂದಣಿ/ಇಂದಿನದಿನದನ್ನಾಗಿಸುವಿಕೆಗಾಗಿನ ನಮೂನೆಯನ್ನು ಪರಿಶೀಲಿಸಲಾಗಿದೆ ಮತ್ತು ಪರಿಶೀಲಿಸಿದವರು ಸಹಿಯನ್ನು/ಹೆಬ್ಬೆಟ್ಟು ಮುದ್ರೆಯನ್ನು ಮೊಹರು/ಸಣ್ಣ ಸಹಿಗಳನ್ನು ಹಾಕಿರುವರು ಎಂಬುದನ್ನು ಖಚಿತಪಡಿಸಿಕೊಳ್ಳುವುದು. ನಮೂನೆಯು ನಿವಾಸಿಯ (ಅರ್ಜಿದಾರರ) ಸಹಿ/ಹೆಬ್ಬೆಟ್ಟು ಮುದ್ರೆಯನ್ನು ಹೊಂದಿರತಕ್ಕದ್ದು.
- ಆತನ/ಆಕೆಯ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಆಧಾರ್ ನೋಂದಣಿ/ಇಂದಿನದಿನದನ್ನಾಗಿ ಮಾಡುವಿಕೆಗಾಗಿ ಮಾತ್ರ ಬಳಸಲಾಗುವುದು ಮತ್ತು ಇತರೆ ಯಾವುದೇ ಉದ್ದೇಶಕ್ಕಾಗಿ ಬಳಸಲಾಗುವುದಿಲ್ಲ ಎಂಬುದನ್ನು ನಿವಾಸಿಗೆ ಅತ್ಯುತ್ತಮವಾಗಿ ಮಾಹಿತಿಯನ್ನು ನೀಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು.
- ಪರಿಚಯಿಸುವವರು/ಕುಟುಂಬದ ಮುಖ್ಯಸ್ಥರುಗಳನ್ನು ಆಧಾರಿತ ನೋಂದಣಿಗೆ ಸಂಬಂಧಿಸಿದಂತೆ, ಪರಿಚಯಿಸುವವರ/ಕುಟುಂಬದ ಮುಖ್ಯಸ್ಥರ ಸಹಿ/ಹೆಬ್ಬೆಟ್ಟು ಮುದ್ರೆಯು ಅನುಕ್ರಮವಾಗಿ ಪರಿಚಯಿಸುವವರ/ಕುಟುಂಬದ ಮುಖ್ಯಸ್ಥರಿಗಾಗಿ ಅನುವು ಮಾಡಲಾಗಿರುವ ಅಂಕಣಗಳಲ್ಲಿ ಅವರುಗಳ ವಿವರಗಳೊಂದಿಗೆ ನಮೂನೆಯಲ್ಲಿ ಲಭ್ಯವಿರತಕ್ಕದ್ದು.
- ನಿವಾಸಿಯ ಜನಸಂಖ್ಯಾಶಾಸ್ತ್ರಕ್ಕೆ ಮತ್ತು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಆಧಾರ್ ಕ್ಲೈಂಟ್ ತಂತ್ರಾಂಶ ಅನ್ವಯದಲ್ಲಿ (ಇಸಿಎಂಪಿ/ಯುಸಿಎಲ್) ಮಾಹಿತಿ ಸೆರೆಹಿಡಿಯುವಿಕೆ ಕ್ರಮಾನುಗತಿಯಲ್ಲಿ ಸೆರೆಹಿಡಿಯುವುದು.
- ನೋಂದಣಿ/ಇಂದಿನದಿನದನ್ನಾಗಿಸುವಿಕೆ ಸಮಯದಲ್ಲಿ ನಿವಾಸಿಯ ಪರದೆಯು ಆನ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಊಡಿಕೆ ಮಾಡಲಾಗಿರುವ ಮಾಹಿತಿಯನ್ನು ಅಡ್ಡ ಪರಿಶೀಲನೆ ಮಾಡುವಂತೆ ನಿವಾಸಿಯನ್ನು ಕೋರುವುದು ಮತ್ತು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೊದಲು ನಿವಾಸಿಯೊಂದಿಗೆ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸಮೀಕ್ಷಿಸುವುದು.
- ನೋಂದಣಿಯ ಅಂತ್ಯದಲ್ಲಿ ಸ್ವೀಕೃತಿ ಪತ್ರವನ್ನು ಮುದ್ರಿಸುವುದು, ಸಹಿ ಮಾಡುವುದು ಮತ್ತು ನಿವಾಸಿಗೆ ನೀಡುವುದು ಮತ್ತು ಒಪ್ಪಿಗೆ ಪತ್ರಗೆ ನಿವಾಸಿಯ ಸಹಿಯನ್ನು ಪಡೆಯುವುದು.
- ನೋಂದಣಿ/ಇಂದಿನದಿನದನ್ನಾಗಿಸುವಿಕೆಗಾಗಿನ ನಮೂನೆ, ಮೂಲ ಬೆಂಬಲಿತ ದಾಖಲೆಗಳು ಮತ್ತು ಸಹಿ ಮಾಡಲ್ಪಟ್ಟಿರುವ ಒಪ್ಪಿಗೆ ಚೀಟಿಯನ್ನು ನೋಂದಣಿ/ಇಂದಿನದಿನದನ್ನಾಗಿಸುವಿಕೆಗಾಗಿನ ಕ್ಲೈಂಟಿನಲ್ಲಿ ಊಡಿಕೆ ಮಾಡಲಾಗಿದೆ ಮತ್ತು ಎಲ್ಲಾ ದಾಖಲೆಗಳನ್ನೂ ನಿವಾಸಿಗೆ ಹಿಂತಿರುಗಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು.
ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸೆರೆಹಿಡಿಯುವ ಸಲುವಾಗಿ ಭಾವಿಗುಪ್ರಾದ ಮಾರ್ಗಸೂಚಿಗಳು ಯಾವುವು?keyboard_arrow_down
ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸೆರೆಹಿಡಿಯುವ ಸಲುವಾಗಿ ಮಾರ್ಗಸೂಚಿಗಳು:
- ಪರಿಶೀಲಿಸಲ್ಪಟ್ಟ ನೋಂದಣಿ/ಇಂದಿನದಿನದನ್ನಾಗಿಸುವಿಕೆಗಾಗಿನ ನಮೂನೆಯಿಂದ ನಿವಾಸಿಯ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯ ವಿವರಗಳನ್ನು ಊಡಿಕೆ ಮಾಡಿರಿ.
- ಆಧಾರ್ ಅನ್ನು ಇಂದಿನದಿನದನ್ನಾಗಿಸುವಿಕೆಗೆ ಸಂಬಂಧಿಸಿದಂತೆ, ಇಂದಿನದಿನದನ್ನಾಗಿ ಮಾಡಬೇಕಾದ ಅಂಕಣಗಳನ್ನು/ಕ್ಷೇತ್ರಗಳನ್ನು ಮಾತ್ರ ಗುರುತಿಸುವುದು ಮತ್ತು ಭರ್ತಿ ಮಾಡತಕ್ಕದ್ದು.
- ಈ ವಿವರಗಳನ್ನು ಬಳಸಿಕೊಂಡು ಭಾವಿಗುಪ್ರಾವು ನಿವಾಸಿಯ ಜೊತೆ ಸಂಪರ್ಕವನ್ನು ಕಲ್ಪಿಸಿಕೊಳ್ಳುವ ಸಲುವಾಗಿ ಮೊಬೈಲ್ ಸಂಖ್ಯೆ ಮತ್ತು ಇ-ಮೈಲು ವಿಳಾಸವನ್ನು ನಮೂನೆಯಲ್ಲಿ ಸೇರಿಸಲು ನಿವಾಸಿಗೆ ಪ್ರೋತ್ಸಾಹಿಸುವುದು.
- ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸೆರೆಹಿಡಿಯುವ ವೇಳೆಯಲ್ಲಿ ಮಾಹಿತಿಯ ತತ್ವಗಳಿಗೆ ಗಮನ ಹರಿಸುವುದು. ಅಂತರಗಳು, ವಿರಾಮಚಿಹ್ನೆಗಳು, ದೊಡ್ಡ ಮತ್ತು ಸಣ್ಣ ಅಕ್ಷರಗಳ ಅಸಮರ್ಪಕ ಬಳಕೆಯನ್ನು ತಪ್ಪಿಸುವುದು.
- ಅಸಭ್ಯ ಭಾಷೆಯನ್ನು ಮತ್ತು ತಪ್ಪುಗಳಿಂದ ಕೂಡಿದ ಲಿಪ್ಯಂತರಣವನ್ನು ತಪ್ಪಿಸುವುದು.
- ನಿವಾಸಿಯು ಮಾಹಿತಿಯನ್ನು ನೀಡದ ಕಡ್ಡಾಯವಲ್ಲದ ಖಾಲಿ ಅಂಕಣ/ಕ್ಷೇತ್ರವನ್ನು ಬಿಟ್ಟುಬಿಡುವುದು. ನಿವಾಸಿಯು ಯಾವುದೇ ಮಾಹಿತಿಯನ್ನೂ ನೀಡದ ಕ್ಷೇತ್ರಗಳಲ್ಲಿ/ಅಂಕಣಗಳಲ್ಲಿ ಅನ್ವಯಗೊಳ್ಳುವುದಿಲ್ಲ, ಲಭ್ಯವಿಲ್ಲ, ಇತ್ಯಾದಿಗಳನ್ನು ಊಡಿಕೆ ಮಾಡಕೂಡದು.
- ಒಂದು ವೇಳೆ ವಯಸ್ಕರು ನೀಡುವ ಸ್ಥಿತಿಯಲ್ಲಿ ಇಲ್ಲವಾದಲ್ಲಿ ಅಥವಾ ನೀಡಲು ಇಚ್ಚಿಸದಿದ್ದಲ್ಲಿ, 5 ವರ್ಷಗಳಿಗೆ ಮೇಲ್ಪಟ್ಟ ನಿವಾಸಿಗಳಿಗೆ ತಂದೆ/ತಾಯಿ/ಗಂಡ/ಹೆಂಡತಿ/ಪೋಷಕರು, ಈ ಕ್ಷೇತ್ರ/ಅಂಕಣಗಳನ್ನು ಭರ್ತಿ ಮಾಡುವುದು ಕಡ್ಡಾಯವಲ್ಲ.
- 5 ವರ್ಷಗಳಿಗೆ ಕಡಿಮೆ ವಯಸ್ಸಿನ ಮಕ್ಕಳಿಗೆ ಸಂಬಂಧಿಸಿದಂತೆ, ತಂದೆತಾಯಿಯರಲ್ಲಿ ಒಬ್ಬರು ಅಥವಾ ಪೋಷಕರ ಹೆಸರು ಮತ್ತು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲಿಸತಕ್ಕದ್ದು.
- ತಂದೆತಾಯಿಯರ ಹೆಸರಿನ ಪ್ರತಿಯಾಗಿ ಕೇವಲ ತಂದೆಯ ಹೆಸರನ್ನು ದಾಖಲಿಸುವುದು ಕಡ್ಡಾಯವಲ್ಲ. ತಂದೆತಾಯಿಯರ ಹೆಸರಿನ ಪ್ರತಿಯಾಗಿ ತಾಯಿಯ ಹೆಸರನ್ನು ಮಾತ್ರ ದಾಖಲಿಸಬಹುದು ಅಥವಾ ತಂದೆತಾಯಿಯರು ಅಪೇಕ್ಷಿಸಿದಲ್ಲಿ ಪೋಷಕರ ಹೆಸರನ್ನು ದಾಖಲಿಸಬಹುದು.
- ಮಗುವಿಗೆ ಮುಂಚಿತವಾಗಿ ತಂದೆತಾಯಿಯರ ನೋಂದಣಿಯು ಕಡ್ಡಾಯ. ಮಗುವಿನ ತಂದೆ/ತಾಯಿ/ಪೋಷಕರು ನೋಂದಣಿ ಮಾಡಿಸಿಕೊಂಡಿಲ್ಲವಾದಲ್ಲಿ ಅಥವಾ ನೋಂದಣಿಯ ಸಮಯದಲ್ಲಿ ಆಧಾರ್ ಸಂಖ್ಯೆಯನ್ನು ಹೊಂದಿಲ್ಲವಾದಲ್ಲಿ, ಮಗುವಿನ ನೋಂದಣಿಯನ್ನು ಮಾಡಲಾಗುವುದಿಲ್ಲ.
- ಕುಟುಂಬದ ಮುಖ್ಯಸ್ಥರನ್ನು ಆಧಾರಿತ ಪರಿಶೀಲನೆಗೆ, ಹೆಸರು, ಕುಟುಂಬದ ಮುಖ್ಯಸ್ಥರ ಆಧಾರ್ ಸಂಖ್ಯೆ ಮತ್ತು ಕುಟುಂಬದ ಸದಸ್ಯರಿಗೆ ಕುಟುಂಬದ ಮುಖ್ಯಸ್ಥರ ಸಂಬಂಧದ ವಿವರಗಳನ್ನು ದಾಖಲಿಸತಕ್ಕದ್ದು.
ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸೆರೆಹಿಡಿಯುವ ಸಲುವಾಗಿ ಭಾವಿಗುಪ್ರಾದ ಮಾರ್ಗಸೂಚಿಗಳು ಯಾವುವು?keyboard_arrow_down
ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸೆರೆಹಿಡಿಯುವ ಸಲುವಾಗಿ ಮಾರ್ಗಸೂಚಿಗಳು:
- ಸಾಮರ್ಥ್ಯತೆ/ದೃಢತೆಯನ್ನು (ಇಲ್ಲದಿರುವುದು/ ಅಂಗಚ್ಛೇದಗೊಂಡಿರುವುದು) ಖಚಿತಪಡಿಸಿಕೊಳ್ಳುವ ಸಲುವಾಗಿ ನಿವಾಸಿಯ ಕಣ್ಣುಗಳು ಮತ್ತು ಬೆರಳುಗಳನ್ನು ಪರೀಕ್ಷಿಸುವುದು. ನಿವಾಸಿಯು ಯಾವುದಾದರೂ ಕುರೂಪತೆ/ವಿರೂಪತೆಗಳನ್ನು ಹೊಂದಿದ್ದಲ್ಲಿ, ಅದರ ಕಾರಣ ಬೆರಳುಗಳ ಮುದ್ರಿಕೆಗಳು/ಕಣ್ಣು ಪಾಪೆಗಳನ್ನು ಸೆರೆಹಿಡಿಯಲು ಸಾಧ್ಯವಾಗದಿದ್ದಲ್ಲಿ, ಇವುಗಳನ್ನೂ ಸಹ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯ ವಿನಾಯಿತಿಯಾಗಿ ಸೆರೆಹಿಡಿಯುವುದು.
- ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯ ವಿನಾಯಿತಿಗಳನ್ನು ಪರೀಕ್ಷಿಸುವುದು ಮತ್ತು ಎಲ್ಲಿ ಅನ್ವಯವೋ ಅಂತಹ ಕಡೆ ತಂತ್ರಾಂಶ ಅನ್ವಯದಲ್ಲಿ ಸೂಚಿಸುವುದು. ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸೆರೆಹಿಡಿಯಲು ಸಾಧ್ಯವಿರುವೆಡೆಯಲ್ಲಿ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯ ವಿನಾಯಿತಿಗಳು ಎಂಬುದಾಗಿ ಗುರುತಿಸಕೂಡದು. ಅದನ್ನು ’ವಂಚನೆ’ ಎಂಬುದಾಗಿ ಪರಿಗಣಿಸಲಾಗುವುದು ಮತ್ತು ಅಂತಹ ಕ್ರಮವು ಕಟ್ಟುನಿಟ್ಟಿನ ದಂಡವನ್ನು ಆಹ್ವಾನಿಸುವುದು.
- ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯ ವಿನಾಯಿತಿಗಳಿಗೆ ಸಂಬಂಧಿಸಿದಂತೆ, ವಿನಾಯಿತಿಯು ಯಾವುದೇ ರೀತಿಯಲ್ಲಿರಲಿ ನಿವಾಸಿಯ ಮುಖ ಮತ್ತು ಎರಡೂ ಕೈಗಳನ್ನು ತೋರಿಸಿದಂತೆ ನಿವಾಸಿಯ ವಿನಾಯಿತಿಗೆ ಸಂಬಂಧಿತ ಛಾಯಾಚಿತ್ರವಣವನ್ನು ತೆಗೆದುಕೊಳ್ಳತಕ್ಕದ್ದು.
- ವೃದ್ಧಾಪ್ಯ ಅಥವಾ ಖಾಯಿಲೆಗಳ ಕಾರಣ ನೋಂದಣಿ ಮಾಡಿಸಿಕೊಳ್ಳುವವರು ಆಕೆಯೇ/ಆತನೇ ಸರಿಯಾದ ಭಂಗಿಯಲ್ಲಿ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಸಾಧನಗಳ ಸಮೀಪ ಕುಳಿತುಕೊಳ್ಳಲು ಸಾಧ್ಯವಾಗದಿರಬಹುದು. ಅಂತಹ ಪ್ರಕರಣಗಳಲ್ಲಿ, ನಿರ್ವಾಹಕರು ಸಾಧನವನ್ನು ನೋಂದಣಿ ಮಾಡಿಸುವವರ ಸಮೀಪಕ್ಕೆ ತೆಗೆದುಕೊಂಡು ಹೋಗುವ ಮೂಲಕ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ತೆಗೆದುಕೊಳ್ಳಲು ವ್ಯವಸ್ಥೆಯನ್ನು ಮಾಡತಕ್ಕದ್ದು.
- ನಿವಾಸಿಯ ಬೆರಳುಗಳು/ಕಣ್ಣಿನ ಪಾಪೆಗಳು ತಾತ್ಕಾಲಿಕ ಹಾನಿಗೆ ಒಳಗಾಗಿದ್ದಲ್ಲಿ ಮತ್ತು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸೆರೆಹಿಡಿಯಲು ಸಾಧ್ಯವಿಲ್ಲದಿದ್ದಲ್ಲಿ, ನಿರ್ವಾಹಕರು ಅದನ್ನು ವಿನಾಯಿತಿಗಳಲ್ಲಿ ದಾಖಲಿಸುವರು. ನಿವಾಸಿಯು ತದನಂತರದಲ್ಲಿ ಆತನ/ಆಕೆಯ ಜೀವಸಂಖ್ಯಾಶಾಸ್ತ್ರದ ಮಾಹಿತಿಯನ್ನು ಇಂದಿನದಿನದನ್ನಾಗಿ ಮಾಡಿಸಿಕೊಳ್ಳತಕ್ಕದ್ದು.
- ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸೆರೆಹಿಡಿಯುವುದು – ಮುಖದ ಛಾಯಾಚಿತ್ರ, ಕಣ್ಣಿನ ಪಾಪೆಗಳು ಮತ್ತು ಬೆರಳು ಮುದ್ರಿಕೆಗಳು 5 ವರ್ಷಗಳಿಗಿಂತಲೂ ಹೆಚ್ಚಿನ ವಯಸ್ಸಿನ ಎಲ್ಲಾ ನಿವಾಸಿಗಳಿಗೂ.
- 5 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಂಬಂಧಿಸಿದಂತೆ, ಕೇವಲ ಮುಖದ ಛಾಯಾಚಿತ್ರವನ್ನು ಮತ್ತು ತಂದೆತಾಯಿಯರ ಪೈಕಿ ಯಾರಾದರೊಬ್ಬರ ಜೀವಸಂಖ್ಯಾಶಾಸ್ತ್ರದ ದೃಢೀಕರಣವನ್ನು ಸೆರೆಹಿಡಿಯುವುದು.
ಮುಖದ ಛಾಯಾಚಿತ್ರವನ್ನು ಸೆರೆಹಿಡಿಯುವ ಸಲುವಾಗಿ ಮಾರ್ಗಸೂಚಿಗಳು
- ನೋಂದಣಿ ಮಾಡಿಸಿಕೊಳ್ಳುವವರ ಭಂಗಿ: ಮುಖದ ಛಾಯಾಚಿತ್ರವನ್ನು ಸೆರೆಹಿಡಿಯುವ ಸಲುವಾಗಿ, ನೋಂದಣಿ ಮಾಡಿಸಿಕೊಳ್ಳುವವರು ಸ್ವತ: ಆತನು/ಆಕೆಯು ಒಂದು ಸರಿಯಾದ ಅಂತರದಲ್ಲಿ ಮತ್ತು ಒಂದು ಸರಿಯಾದ ಭಂಗಿಗೆ/ಸ್ಥಿತಿಗೆ ಬರುವ ಬದಲು ನಿರ್ವಾಹಕರೇ ಕ್ಯಾಮರಾವನ್ನು ಹೊಂದಾಣಿಕೆ ಮಾಡುವುದು ಉತ್ತಮ ಎಂಬುದಾಗಿ ಸಲಹೆಯನ್ನು ನೀಡಲಾಗುತ್ತಿದೆ ಮುಮ್ಮುಖದ ಭಂಗಿ/ನಿಲುವನ್ನು ಸೆರೆಹಿಡಿಯುವ ಅಗತ್ಯತೆಯಿರುತ್ತದೆ ಅಂದರೆ ತಲೆಯನ್ನು ತಿರುಗಿಸಬಾರದು ಅಥವಾ ಓರೆ ಮಾಡಬಾರದು. ತಮ್ಮ ಬೆನ್ನನ್ನು ನೇರವಾಗಿರುವಂತೆ ನೋಡಿಕೊಂಡು ಮತ್ತು ತಮ್ಮ ಮುಖವು ಕ್ಯಾಮರಾ ಕಡೆಗೆ ಮಾಡಿಕೊಂಡು ಸಮರ್ಪಕವಾಗಿ ಕುಳಿತುಕೊಳ್ಳುವಂತೆ ನಿವಾಸಿಗೆ ನಿರ್ದೇಶಿಸತಕ್ಕದ್ದು.
- ಕೇಂದ್ರೀಕರಿಸುವಿಕೆ/ನಾಭೀಕರಿಸುವಿಕೆ: ಛಾಯಾಚಿತ್ರವನ್ನು ಸೆರೆಹಿಡಿಯುವ ಸಾಧನವು ಸ್ವಯಂ ಕೇಂದ್ರೀಕರಿಸುವಿಕೆ/ನಾಭೀಕರಿಸುವಿಕೆಯನ್ನು ಬಳಸಿಕೊಳ್ಳತಕ್ಕದ್ದು ಮತ್ತು ಸ್ವಯಂ-ಸೆರೆಹಿಡಿಯುವಿಕೆ ಕ್ರಿಯೆಯನ್ನು ಮಾಡುವಂತಿರಬೇಕು. ಹೊರಬಂದಂತಹ ಛಾಯಾಚಿತ್ರವು ಚಲನೆಯಲ್ಲಿ ಮಸಕುಮಸಕಾಗಿರುವುದು, ಅತಿಯಾದ ಅಥವಾ ಕಡಿಮೆ ಪ್ರಮಾಣದಲ್ಲಿ ಬೆಳಕಿಗೆ ಒಡ್ಡುವುದು, ಅಸ್ವಾಭಾವಿಕ ಬಣ್ಣದ ಬೆಳಕು ಮತ್ತು ವಿಕೃತಗೊಂಡಿರುವುದು, ಇತ್ಯಾದಿಗಳಿಗೆ ಈಡಾಗಕೂಡದು.
- ಮುಖಭಾವ/ಭಂಗಿ: ಮುಖಭಾವ/ಭಂಗಿಯು ಸ್ವಯಂಚಾಲಿತ ಮುಖದ ಗುರುತಿಸುವಿಕೆಯ ಕಾರ್ಯನಿರ್ವಹಣೆಯ ಮೇಲೆ ಪ್ರಭಾವವನ್
ನಿರ್ವಾಹಕರು ನಿವಾಸಿಯ ಜೊತೆ ಮಾಹಿತಿಯನ್ನು ಯಾವ ರೀತಿಯಲ್ಲಿ ಸಮೀಕ್ಷಿಸುವರು?keyboard_arrow_down
ಸೆರೆಹಿಡಿಯಲಾಗಿರುವ ಎಲ್ಲಾ ವಿವರಗಳು ಸರಿಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ನಿರ್ವಾಹಕರು ಊಡಿಕೆ ಮಾಡಲಾದ ಮಾಹಿತಿಯನ್ನು ನಿವಾಸಿಯ ಕಡೆಗೆ ಮುಖ ಮಾಡಿರುವ ಒಂದು ಪರದೆಯಲ್ಲಿ ನಿವಾಸಿಗೆ ತೋರಿಸತಕ್ಕದ್ದು ಮತ್ತು ಅಗತ್ಯ ಬಿದ್ದಲ್ಲಿ ಅದರಲ್ಲಿರುವ ಅಡಕಗಳನ್ನು ನೋಂದಣಿಯನ್ನು ಮಾಡಿಸಿಕೊಂಡವರಿಗೆ ಓದಿ ಹೇಳಬೇಕು. ನಿವಾಸಿಯ ಜೊತೆ ನೋಂದಣಿಯ ಮಾಹಿತಿಯ ಸಮೀಕ್ಷೆಯ ವೇಳೆಯಲ್ಲಿ, ನಿರ್ವಾಹಕರು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೊದಲು ವಿಮರ್ಶಾತ್ಮಕ ಕ್ಷೇತ್ರಗಳನ್ನು/ಅಂಕಣಗಳನ್ನು ನಿವಾಸಿಗೆ ಓದಿ ಹೇಳತಕ್ಕದ್ದು.
- ನಿರ್ವಾಹಕರು ಈ ಕೆಳಗಿನ ಕ್ಷೇತ್ರಗಳನ್ನು/ಅಂಕಣಗಳನ್ನು ಪುನರ್-ಖಚಿತಪಡಿಸಿಕೊಳ್ಳತಕ್ಕದ್ದು:
- ನಿವಾಸಿಯ ಹೆಸರಿನ ಕಾಗುಣಿತ
- ಸರಿಯಾದ ಲಿಂಗ
- ಸರಿಯಾದ ವಯಸ್ಸು/ಹುಟ್ಟಿದ ದಿನಾಂಕ
- ವಿಳಾಸ – ಪಿನ್ ಕೋಡು, ಕಟ್ಟಡ, ಗ್ರಾಮ/ಪಟ್ಟಣ/ನಗರ, ಜಿಲ್ಲೆ; ರಾಜ್ಯ
- ಸಂಬಂಧದ ವಿವರಗಳು – ತಂದೆತಾಯಿ/ಗಂಡ/ಹೆಂಡತಿ/ಪೋಷಕರು, ಸಂಬಂಧಿಕರ ಹೆಸರು
- ನಿವಾಸಿಯ ಛಾಯಾಚಿತ್ರದ ಯಥಾರ್ಥತೆ ಮತ್ತು ಸ್ಪಷ್ಟತೆ
- ಮೊಬೈಲು ಸಂಖ್ಯೆ ಮತ್ತು ಇ-ಮೇಲ್ ವಿಳಾಸ
- ಯಾವುದಾದರೂ ತಪ್ಪುಗಳು ಇದ್ದಲ್ಲಿ, ನಿರ್ವಾಹಕರು ದಾಖಲಿಸಲಾಗಿರುವ ಮಾಹಿತಿಯನ್ನು ಸರಿಪಡಿಸತಕ್ಕದ್ದು ಮತ್ತು ನಿವಾಸಿಯೊಂದಿಗೆ ಅವುಗಳನ್ನು ಪುನ: ಸಮೀಕ್ಷಿಸತಕ್ಕದ್ದು. ಯಾವುದೇ ತಿದ್ದುಪಡಿಗಳ/ಸರಿಪಡಿಸುವಿಕೆಗಳ ಅಗತ್ಯತೆಯಿಲ್ಲದಿದ್ದಲ್ಲಿ , ನಿವಾಸಿಯು ಮಾಹಿತಿಗೆ ಅನುಮೋದನೆಯನ್ನು ನೀಡುವರು.
ನಿವಾಸಿಯ ಜನಸಂಖ್ಯಾಶಾಸ್ತ್ರ ಮತ್ತು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸೆರೆಹಿಡಿದನಂತರ ನಿರ್ವಾಹಕರು ಏನು ಮಾಡುವರು?keyboard_arrow_down
- ನಿರ್ವಾಹಕರು ತದನಂತರ ನಿವಾಸಿಗಾಗಿ ಸೆರೆಹಿಡಿಯಲಾದ ಮಾಹಿತಿಗೆ ಸ್ವತ: ಆತನೇ/ಆಕೆಯೇ ಸಹಿ ಮಾಡುವರು.
- ನೀವು ಮಾಡಿದ ನೋಂದಣಿಗೆ ಇತರರು ಸಹಿ ಮಾಡಲು ಅವಕಾಶ ನೀಡಕೂಡದು. ಇತರರು ಮಾಡಿದ ನೋಂದಣಿಗೆ ನೀವು ಸಹಿ ಮಾಡಕೂಡದು
- ನೋಂದಣಿ ಮಾಡಿಸಿಕೊಳ್ಳುವವರು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯಿಂದ ವಿನಾಯಿತಿಗಳನ್ನು ಹೊಂದಿದ್ದಲ್ಲಿ ನಿರ್ವಾಹಕರು ಮೇಲ್ವಿಚಾರಕರ ಸಹಿಯನ್ನು ಪಡೆಯುವರು.
- ಪರಿಶೀಲನೆಯ ಮಾದರಿಯನ್ನು ಪರಿಚಯಿಸುವವರು/ಕುಟುಂಬದ ಮುಖ್ಯಸ್ಥರಿಗೆ ಸಂಬಂಧಿಸಿದ್ದು ಎಂಬುದಾಗಿ ಆಯ್ಕೆ ಮಾಡಿದ್ದಲ್ಲಿ ಪರಿಚಯಿಸುವವರು/ಕುಟುಂಬದ ಮುಖ್ಯಸ್ಥರ ಸಹಿಯನ್ನು ಪಡೆಯತಕ್ಕದ್ದು.
- ನೋಂದಣಿಯ ಸಮಯದಲ್ಲಿ ಪರಿಚಯಿಸುವವರು ಭೌತಿಕವಾಗಿ ಉಪಸ್ಥಿತರಿಲ್ಲದಿದ್ದಲ್ಲಿ ಅಂತಹ ನೋಂದಣಿಯನ್ನು ದಿನದ ಅಂತ್ಯದಲ್ಲಿ ಪರಿಚಯಿಸುವವರು ಪರಿಶೀಲಿಸಬಹುದಾದ ಮತ್ತು ಸಹಿ ಮಾಡಬಹುದಾದ ರೀತಿಯಲ್ಲಿ ಪರಿಶೀಲನಾ ಅಂಕಣ/ಕ್ಷೇತ್ರ “ತದನಂತರ ಲಗತ್ತಿಸಲಾಗುವುದು” ("Attach later") ಅಯ್ಕೆ ಮಾಡಿಕೊಳ್ಳುವುದು.
- ನಿರ್ವಾಹಕರು ಅಡಕದಲ್ಲಿ ಮುದ್ರಿಸಬೇಕಾದ ಮುದ್ರಿತ ಸ್ವೀಕೃತಿಯ ಮೇಲೆ ಕಾನೂನಾತ್ಮಕ/ಘೋಷಣಾ ವಿಷಯವನ್ನು ಮುದ್ರಿಸ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು.
- ಸ್ವೀಕೃತಿ ಪತ್ರವನ್ನು ಯಾವ ಭಾಷೆಯಲ್ಲಿ ಮುದ್ರಿಸಬೇಕು ಎಂಬುದರ ಬಗ್ಗೆ ಆತನ/ಆಕೆಯ ಆಯ್ಕೆಯನ್ನು ನೀಡುವಂತೆ ನಿರ್ವಾಹಕರು ನಿವಾಸಿಯನ್ನು ಕೋರತಕ್ಕದ್ದು. ಘೋಷಣಾ ಭಾಷೆಯ ಆಯ್ಕೆಯನ್ನು ಮಾಡಿದನಂತರ, ಮುದ್ರಿತ ರಸೀದಿಯನ್ನು ಆಯ್ಕೆ ಮಾಡಲಾದ ಭಾಷೆಯಲ್ಲಿ ಅಂದರೆ ಆಂಗ್ಲ ಭಾಷೆಯ್ ಅಥವಾ ವಿನ್ಯಾಸ ಪರದೆಯಲ್ಲಿ ಊಡಿಕೆ ಮಾಡಲಾಗಿರುವ ಯಾವುದೇ ಸ್ಥಳೀಯ ಭಾಷೆಯಲ್ಲಿ ಮುದ್ರಿಸಲಾಗುವುದು.
- ಒಪ್ಪಿಗೆ ಪತ್ರದಲ್ಲಿ ನಿವಾಸಿಯ ಸಹಿಯನ್ನು ಪಡೆದುಕೊಳ್ಳುವುದು ಮತ್ತು ನಿವಾಸಿಯ ಇತರೆ ದಾಖಲೆಗಳ ಜೊತೆ ಇಡುವುದು. ಅವುಗಳು ಭಾವಿಗುಪ್ರಾಕ್ಕೆ ನಿವಾಸಿಯ ಒಪ್ಪಿಗೆ ಇರುವುದು/ಒಪ್ಪಿಗೆ ಇಲ್ಲದಿರದವುಗಳಾಗಿರುತ್ತವಾದ್ದರಿಂದ, ನಿವಾಸಿಯ ಒಪ್ಪಿಗೆಯು ಪ್ರಮುಖವಾದುದು.
- ಸ್ವೀಕೃತಿ ಪತ್ರಕ್ಕೆ ಸಹಿ ಮಾಡುವುದು ಮತ್ತು ನಿವಾಸಿಗೆ ನೀಡುವುದು. ಸ್ವೀಕೃತಿ ಪತ್ರವು ನಿವಾಸಿಯು ನೋಂದಣಿಯನ್ನು ಪಡೆಯುವುದಕ್ಕೆ ಲಿಖಿತ ಖಚಿತ ಭರವಸೆಯಾಗಿರುತ್ತದೆ. ಅದು ನೋಂದಣಿ ಸಂಖ್ಯೆಯನ್ನು, ಭಾವಿಗುಪ್ರಾದ ಜೊತೆಗೆ ವ್ಯವಹರಿಸುವುದಕ್ಕಾಗಿ ತಿಳಿಸಬೇಕಾದ ದಿನಾಂಕ ಮತ್ತು ಸಮಯವನ್ನು ಅದು ಹೊಂದಿರುವುದರಿಂದ ಮತ್ತು ಆತನ/ಆಕೆಯ ಆಧಾರ್ ಸ್ಥಿತಿಗತಿಗಾಗಿ ಸಂಪರ್ಕಿಸಬೇಕಾದ ಸಂಪರ್ಕ ಕೇಂದ್ರದ (1947) ವಿವರಗಳನ್ನು ಹೊಂದಿರುವುದರಿಂದ ಅದು ನಿವಾಸಿಗೆ ಪ್ರಮುಖವಾಗಿರುತ್ತದೆ.
- ತಿದ್ದುಪಡಿ ಪ್ರಕ್ರಿಯೆಯನ್ನು ಬಳಸಿಕೊಂಡು ನಿವಾಸಿಯ ಮಾಹಿತಿಗೆ ಯಾವುದಾದರೂ ತಿದ್ದುಪಡಿಗಳ ಅಗತ್ಯತೆ ಬಿದ್ದಲ್ಲಿ ನೋಂದಣಿ ಸಂಖ್ಯೆ, ದಿನಾಂಕ ಮತ್ತು ಸಮಯವೂ ಕೂಡ ಅಗತ್ಯವಾಗಿರುತ್ತದೆ. ಈ ರೀತಿಯಾಗಿ ನಿರ್ವಾಹಕರು ಸ್ವೀಕೃತಿ ಪತ್ರ ಮತ್ತು ಒಪ್ಪಿಗೆ ಪತ್ರವು ಸ್ಪಷ್ಟವಾಗಿರುವುದನ್ನು ಮತ್ತು ಸುಲಭವಾಗಿ ಓದಬಹುದಾಗಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
- ನಿವಾಸಿಗೆ ಸ್ವೀಕೃತಿ ಪತ್ರವನ್ನು ನೀಡುವ ವೇಳೆಯಲ್ಲಿ, ನಿರ್ವಾಹಕರು ಈ ಕೆಳಗಿನವುಗಳನ್ನು ನಿವಾಸಿಗೆ ತಿಳಿಸತಕ್ಕದ್ದು:
- ಸ್ವೀಕೃತಿ ಪತ್ರದಲ್ಲಿ ಮುದ್ರಿತವಾಗಿರುವ ನೋಂದಣಿ ಸಂಖ್ಯೆಯು ಆಧಾರ್ ಸಂಖ್ಯೆಯಲ್ಲ ಮತ್ತು ನಿವಾಸಿಯ ಆಧಾರ್ ಸಂಖ್ಯೆಯನ್ನು ಒಂದು ಪತ್ರದ ಮೂಲಕ ತದನಂತರದಲ್ಲಿ ತಿಳಿಸಲಾಗುವುದು. ಈ ಸಂದೇಶವನ್ನೂ ಸಹ ಸ್ವೀಕೃತಿ ಪತ್ರದಲ್ಲಿ ಮುದ್ರಿಸಲಾಗಿರುವುದು.
- ನಿವಾಸಿಯು ಆತನ/ಆಕೆಯ ಮತ್ತು ಮಕ್ಕಳ ನೋಂದಣಿ ಸ್ವೀಕೃತಿ ಪತ್ರವನ್ನು ಮುಂದೆ ಉಲ್ಲೇಖಿಸುವ ಸಲುವಾಗಿ ಜೋಪಾನವಾಗಿ ಇಟ್ಟಿರತಕ್ಕದ್ದು.
- ಪರಿಚಯಿಸುವವರನ್ನು ಆಧಾರಿತ ನೋಂದಣಿಗೆ ಸಂಬಂಧಿಸಿದಂತೆ, ಪರಿಚಯಿಸುವವರು ನಿರ್ದಿಷ್ಟ ಅವಧಿಯ ಒಳಗೆ ಸಮರ್ಪಕವಾಗಿ ಸಹಿ ಮಾಡಿರತಕ್ಕದ್ದು ಮತ್ತು ನಿವಾಸಿಯ ಆಧಾರ್ ಓರ್ವ ಊರ್ಜಿತ/ಅಧಿಕೃತ ಪರಿಚಯಿಸುವವರ ಶಿಫಾರಸಿನ ಷರತ್ತಿಗೆ ಒಳಪಟ್ಟಿರುತ್ತದೆ.
- ಯಾವುದಾದರೂ ತಪ್ಪುಗಳಿದ್ದಲ್ಲಿ ನಿವಾಸಿಯ ಮಾಹಿತಿಯನ್ನು ತಿದ್ದುಪಡಿ ಮಾಡಿಸಿಕೊಳ್ಳಲು, ನೋಂದಣಿಯ ಸಮಯದಿಂದ 96 ಗಂಟೆಗಳ ಕಾಲಾವಕಾಶ್ವಿರುತ್ತದೆ, ನಿವಾಸಿಗಳು ಈ ಅನುಕೂಲತೆಯನ್ನು ಉಪಯೋಗಿಸಿಕೊಳ್ಳತಕ್ಕದ್ದು.
- ಆಧಾರ್ ಅನ್ನು ತಂತ್ರಾಂಶ ಅನ್ವಯದಿಂದ ಹೊರತೆಗೆಯುವ ಬಗ್ಗೆ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳಲು ನಿವಾಸಿಗಳು ಕರೆ ಕೇಂದ್ರಕ್ಕೆ ಸಂಪರ್ಕಿಸಬಹುದು ಅಥವಾ ಇ-ಆಧಾರ್ ಪೋರ್ಟಲು/ಆಧಾರ್ ಪೋರ್ಟಲು/ಜಾಲತಾಣವನ್ನು (e-Aadhaar portal/Aadhaar Portal/website) ಸಂಪರ್ಕಿಸಬಹುದು.
ಭಾವಿಗುಪ್ರಾದ ದಾಖಲೆಗಳ ಸ್ಕ್ಯಾನು ಮಾಡುವುದಕ್ಕೆ ಸಂಬಂಧಿತ ಮಾರ್ಗಸೂಚಿಗಳು ಯಾವುವು?keyboard_arrow_down
ನಿರ್ವಾಹಕರು ನೋಂದಣಿಯ ಮಾದರಿಯನ್ನು ಅವಲಂಭಿಸಿದಂತೆ ಈ ಕೆಳಗಿನ ಮೂಲ ದಾಖಲೆಗಳನ್ನು ಸ್ಕ್ಯಾನು ಮಾಡುವರು:
- ನೋಂದಣೀ ನಮೂನೆ – ಪ್ರತಿಯೊಂದು ನೋಂದಣಿಗೆ
- ಗುರುತಿನ ಸಾಕ್ಷಾಧಾರ, ವಿಳಾಸದ ಸಾಕ್ಷಾಧಾರ – ನೋಂದಣಿಗಳನ್ನು ಆಧರಿಸಿದ ದಾಖಲೆಗಳಿಗಾಗಿ
- ನಿವಾಸದ ಸಾಕ್ಷಾಧಾರ – ಕುಟುಂಬದ ಮುಖ್ಯಸ್ಥರ ಆಧಾರಿತ ನೋಂದಣಿಗಳಿಗಾಗಿ
- ಒಪ್ಪಿಗೆ ಪತ್ರದ ಸಹಿತ ಸ್ವೀಕೃತಿ ಪತ್ರ – ನಿರ್ವಾಹಕರು ಮತ್ತು ನಿವಾಸಿಯ ಹಸ್ತಾಕ್ಷರದ ನಂತರ ಪ್ರತಿಯೊಂದು ನೋಂದಣಿಗೆ
- ಮೂಲ ದಾಖಲೆಗಳು ಲಭ್ಯವಿಲ್ಲದ ಸಂದರ್ಭಗಳಲ್ಲಿ, ಪ್ರತಿಗಳನ್ನು ದೃಢೀಕರಿಸಲಾಗುವುದು/ಓರ್ವ ಸಾರ್ವಜನಿಕ ನೋಟರಿ/ಪತ್ರಾಂಕಿತ ಅಧಿಕಾರಿಯವರಿಂದ ದೃಢೀಕರಿಸಲ್ಪಟ್ಟ ಪ್ರತಿಗಳನ್ನು ಒಪ್ಪಿಕೊಳ್ಳಲಾಗುವುದು.
- ದಾಖಲೆಗಳನ್ನು ಅನುಕ್ರಮಾನುಗತಿಯಲ್ಲಿ ಸ್ಕ್ಯಾನು ಮಾಡಲಾಗುವುದು ಮತ್ತು ಎಲ್ಲಾ ದಾಖಲೆಗಳನ್ನು ಎ೪ ಪ್ರಮಾಣಕ ಅಳತೆಯಲ್ಲಿ ಸ್ಕ್ಯಾನು ಮಾಡಲಾಗುವುದು.
- ದಾಖಲೆಗಳ ಅಪೇಕ್ಷಿತ ಭಾಗಗಳು (ಆಧಾರ್ ನೋಂದಣಿಯಲ್ಲಿ ಊಡಿಕೆ ಮಾಡಲಾಗಿರುವ ಮಾಹಿತಿ) ಸ್ಕ್ಯಾನು ಪ್ರತಿಯಲ್ಲಿ ಓದಬಹುದಾದ ಸ್ಥಿತಿಯಲ್ಲಿರುತ್ತವೆ ಮತ್ತು ಸ್ಪಷ್ಟತೆಯಿಂದ ಕೂಡಿರುತ್ತವೆ. ಮತ್ತು ದಾಖಲೆಗಳ ಪುಟಗಳು ಪುನರಾವರ್ತನೆಗೊಂಡಿರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
- ಪ್ರತಿಯೊಂದು ಸ್ಕ್ಯಾನು ಮಾಡಲಾದ ಪುಟವು ಸ್ಪಷ್ಟವಾಗಿರತಕ್ಕದ್ದು ಮತ್ತು ದೂಳು ಮತ್ತು ಕರೆಗಳಿಂದ ಕೂಡಿರಬಾರದು. ಹಿಂದಿನ ಸ್ಕ್ಯಾನು ಪ್ರತಿಯನ್ನು ತೆಗೆದುಹಾಕುವುದು ಮತ್ತು ಎಲ್ಲಿ ಅಗತ್ಯವೋ ಅಂತಹ ಕಡೆ ಪುನರ್-ಸ್ಕ್ಯಾನು ಮಾಡುವುದು.
- ಎಲ್ಲಾ ದಾಖಲೆಗಳನ್ನು ಸ್ಕ್ಯಾನು ಮಾಡಿದನಂತರ, ನಿರ್ವಾಹಕರು ಸ್ಕ್ಯಾನು ಮಾಡಲಾದ ಒಟ್ಟಾರೆ ಪುಟಗಳನ್ನು ನಿರ್ವಾಹಕರು ಪರಿಶೀಲಿಸಬಹುದು ಮತ್ತು ಸ್ಕ್ಯಾನು ಮಾಡಲಾದ ಒಟ್ಟಾರೆ ಪುಟಗಳನ್ನು ಖಚಿತಪಡಿಸಿಕೊಳ್ಳಬಹುದು.
- ಎಲ್ಲಾ ಮೂಲ ದಾಖಲೆಗಳನ್ನೂ ಮತ್ತು ನೋಂದಣಿ ನಮೂನೆಯನ್ನು ನಿವಾಸಿಗೆ ಹಿಂತಿರುಗಿಸುವುದು. ಅಲ್ಲದೆಯೇ ಒಪ್ಪಿಗೆ ಪತ್ರದ ಸಹಿತ ಸ್ವೀಕೃತಿ ಪತ್ರ್ವನ್ನೂ ಸಹ ನಿವಾಸಿಗೆ ನೀಡುವುದು.
ನಿರ್ವಾಹಕರು ನಿವಾಸಿಯ ಮಾಹಿತಿಯಲ್ಲಿ ಯಾವ ರೀತಿಯಲ್ಲಿ ತಿದ್ದುಪಡಿಗಳನ್ನು ಮಾಡುವರು?keyboard_arrow_down
- ನಿವಾಸಿಯ ಮೇಲೆ ತಿಳಿಸಲಾದ ಯಾವುದೇ ಮಾಹಿತಿಯ ತಿದ್ದುಪಡಿಗಾಗಿ, ನಿರ್ವಾಹಕರು ನೋಂದಣಿ ಕ್ಲೈಂಟಿನಲ್ಲಿ ತಿದ್ದುಪಡಿ ಮೆನುವನ್ನು (ಒಂದು ಸಲಕ್ಕಾಗಿರುವ) ಉಪಯೋಗಿಸಿಕೊಳ್ಳಬಹುದು. ನಿವಾಸಿಯ ಮಾಹಿತಿಯನ್ನು ನಿವಾಸಿಯ ನೋಂದಣಿಯ ಸಮಯದಿಂದ 96 ಗಂಟೆಗಳ ಒಳಗೆ ಮತ್ತು ನಿವಾಸಿಯ ಉಪಸ್ಥಿತಿಯಲ್ಲಿ ತಿದ್ದುಪಡಿ ಮಾಡಬಹುದು
- ಬದಲಾವಣೆಗಾಗಿ ಈ ಕೆಳಗಿನ ಕೋರಿಕೆಗಳು ತಿದ್ದುಪಡಿ ಪ್ರಕ್ರಿಯೆಯ ವ್ಯಾಪ್ತಿಗೆ ಬರುತ್ತವೆ:
- ಎಲ್ಲಾ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಅಂಕಣ/ಕ್ಷೇತ್ರಗಳು ಅಂದರೆ ಹೆಸರು, ವಿಳಾಸ, ಲಿಂಗ, ಹುಟ್ಟಿದ ದಿನಾಂಕ/ವಯಸ್ಸು*
- ನಿವಾಸಿಗೆ ಸಂಬಂಧ
- ಮೊಬೈಲು
- ಇ-ಮೈಲು ವಿಳಾಸ
- ಸಂಬಂಧದ ವಿವರಗಳು ( ಸಂಬಂಧದ ಮಾದರಿ, ಹೆಸರು ಮತ್ತು ಆಧಾರ್ ಸಂಖ್ಯೆ)
- ಪರಿಚಯಿಸುವವರ ಹೆಸರು ಮತ್ತು ಆಧಾರ್ ಸಂಖ್ಯೆ
- ಮೂಲತ: ನಿವಾಸಿಯು ೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನಂತೆ ನೋಂದಣಿ ಮಾಡಿಸಿಕೊಂಡಿದ್ದಲ್ಲಿ, ನಿವಾಸಿಯ ವಯಸ್ಸನ್ನು 5 ವರ್ಷಕ್ಕಿಂತ ಅಧಿಕ ಎಂಬುದಾಗಿ ತಿದ್ದುಪಡಿ ಮಾಡುವುದು ಅನೂರ್ಜಿತವಾಗಿರುತ್ತದೆ ಏಕೆಂದರೆ ಜೀವಸಂಖ್ಯಾಶಾಸ್ತ್ರದ ಮಾಹಿತಿಯನ್ನು ನೋಂದಣಿಯ ಸಮಯದಲ್ಲಿ ಸೆರೆಹಿಡಿದಿರಲಿಲ್ಲ.
- ನಿವಾಸಿಯ ಹಿಂದಿನ ನೋಂದಣಿ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನಿವಾಸಿಯ ಹಳೆಯ ಮಾಹಿತಿಗೆ ತಿದ್ದುಪಡಿಯನ್ನು ಮಾಡುವ ಸಲುವಾಗಿ ಊಡಿಕೆ ಮಾಡುವ ಅಗತ್ಯತೆಯಿರುತ್ತದೆ. ನೋಂದಣಿ ಸಂಖ್ಯೆ, ದಿನಾಂಕ ಮತ್ತು ನೋಂದಣಿಯ ಸಮಯವನ್ನು ತೆಗೆದುಕೊಳ್ಳುವುದಕ್ಕಾಗಿ ನಿವಾಸಿಯ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳುವುದು
- ತಿದ್ದುಪಡಿಯ ಮಾದರಿಯನ್ನು ಅವಲಂಭಿಸಿದಂತೆ ತಿದ್ದುಪಡಿ ಪ್ರಕ್ರಿಯೆಯ ಸಮಯದಲ್ಲಿ ಗುರುತಿನ ಸಾಕ್ಷಾಧಾರ, ವಿಳಾಸದ ಸಾಕ್ಷಾಧಾರ ಮತ್ತು ತಂದೆತಾಯಿ/ಪೋಷಕರ ಸ್ವೀಕೃತಿ ಪತ್ರದ ಅಗತ್ಯತೆಯೂ ಇರುತ್ತದೆ.
- ಹೆಸರಿನಲ್ಲಿನ ಬದಲಾವಣೆಗೆ ಒಂದು ಪರಿಶೀಲಿಸಲ್ಪಟ್ಟ ನೋಂದಣಿ ನಮೂನೆ ಮತ್ತು ಗುರುತಿನ ಸಾಕ್ಷಾಧಾರ ಅಥವಾ ಓರ್ವ ಪರಿಚಯಿಸುವವರ ಹೆಸರು ಮತ್ತು ವಿಶಿಷ್ಟ ಗುರುತಿನ ಸಂಖ್ಯೆಯ ಅಗತ್ಯತೆಯಿರುತ್ತದೆ. ವಿಳಾಸದಲ್ಲಿನ ಬದಲಾವಣೆಯು ಒಂದು ಪರಿಶೀಲಿಸಲ್ಪಟ್ಟ ನೋಂದಣಿ ನಮೂನೆ ಮತ್ತು ವಿಳಾಸದ ಸಾಕ್ಷಾಧಾರದ ದಾಖಲೆ ಅಥವಾ ಓರ್ವ ಪರಿಚಯಿಸುವವರ ಹೆಸರು ಮತ್ತು ಆಧಾರ್ ಸಂಖ್ಯೆಯ ಅಗತ್ಯತೆಯಿರುತ್ತದೆ. ಪರಿಶೀಲಿಸಲ್ಪಟ್ಟ ಹುಟ್ಟಿದ ದಿನಾಂಕದಲ್ಲಿನ ಬದಲಾವಣೆಗಾಗಿ ಒಂದು ಪರಿಶೀಲಿಸಲ್ಪಟ್ಟ ನೋಂದಣಿ ನಮೂನೆ ಮತ್ತು ಹುಟ್ಟಿದ ದಿನಾಂಕದ ಪ್ರಮಾಣ ಪತ್ರದ ಅಗತ್ಯತೆಯಿರುತ್ತದೆ.ತಿದ್ದುಪಡಿಯು 5 ವರ್ಷಗಳ ಕೆಳಗಿನ ಒಂದು ಮಗುವಿನ ಮಾಹಿತಿಯಲ್ಲಿನ ತಿದ್ದುಪಡಿಯಾಗಿದ್ದಲ್ಲಿ, ಸಂಬಂಧದ ತಂದೆತಾಯಿಯ ವಿವರಗಳು, ಸಂಬಂಧಿಯ ಹೆಸರು ಮತ್ತು ತಂದೆತಾಯಿ/ಪೋಷಕರ ಆಧಾರ್ ಸಂಖ್ಯೆಯು ಕಡ್ಡಾಯವಾಗಿ ಬೇಕಾಗಿರುತ್ತದೆ.
- ಒಂದು ತಿದ್ದುಪಡಿಯ ಅಗತ್ಯತೆಯಿರುವ ಕ್ಷೇತ್ರ/ಅಂಕಣಗಳನ್ನು ಮಾತ್ರ ತಂತ್ರಾಂಶ ಅನ್ವಯದ ತಿದ್ದುಪಡಿ ಮೆನುವಿನಲ್ಲಿ ಊಡಿಕೆ ಮಾಡಲಾಗುವುದು. ಮೂಲ ನೋಂದಣಿಯಲ್ಲಿ ಉತ್ತಮವಾಗಿರುವ ಕ್ಷೇತ್ರ/ಅಂಕಣಗಳನ್ನು ತಿದ್ದುಪಡಿಯ ಸಮಯದಲ್ಲಿ ಪುನರ್-ಬೆರಳಚ್ಚು ಮಾಡಕೂಡದು.
- ಮಾಹಿತಿಯಲ್ಲಿನ ತಿದ್ದುಪಡಿಯನ್ನು ನಿವಾಸಿಯ ಜೊತೆಯಲ್ಲಿ ಸಮೀಕ್ಷಿಸಲಾಗುವುದು ಮತ್ತು ನಿವಾಸಿಯ ಯಾವುದಾದರೊಂದು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನೂ (ಕ್ಲೈಂಟಿನ ಡ್ರಾಪ್ ಡೌನ್ ಮೆನುವಿನಲ್ಲಿ ಅನುವು ಮಾಡಿರುವಂತೆ) ಸಹ ನಿವಾಸಿಯು ತಿದ್ದುಪಡಿಗಳಿಗೆ ಒಪ್ಪಿಗೆ ಸೂಚಿಸಿರುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ತೆಗೆದುಕೊಳ್ಳಲಾಗುವುದು.
- ನಿವಾಸಿಯು 5 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಗುವಾಗಿದ್ದಲ್ಲಿ, ತಂದೆತಾಯಿ/ಪೋಷಕರ ಸಂಬಂಧದ ಅಂಕಣ/ಕ್ಷೇತ್ರದಲ್ಲಿ ಊಡಿಕೆ ಮಾಡಲಾಗಿರುವ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ತೆಗೆದುಕೊಳ್ಳಲಾಗುವುದು. ನಿರ್ವಾಹಕರು ನೋಂದಣಿಗೆ ಸಹಿ ಮಾಡುವರು, ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯ ವಿನಾಯಿತಿಗಳಿಗೆ ಸಂಬಂಧಿಸಿದಂತೆ ಪರಿಚಯಿಸುವವರ ಆಧಾರದ ಮೇರೆಗಿನ ಪರಿಶೀಲನೆಗೆ ಸಂಬಂಧಿಸಿದಂತೆ ಅನುಕ್ರಮವಾಗಿ ಮೇಲ್ವಿಚಾರಕರ ಮತ್ತು ಪರಿಚಯಿಸುವವರ ಸಹಿಯ ಅಗತ್ಯತೆಯಿರುತ್ತದೆ.
- ತಿದ್ದುಪಡಿಯ ಒಂದು ಸ್ವೀಕೃತಿ ಪತ್ರವನ್ನು ನಿವಾಸಿಯ ಛಾಯಾಚಿತ್ರದೊಂದಿಗೆ ತಿದ್ದುಪಡಿ ಪ್ರಕ್ರಿಯೆಯ ಅಂತ್ಯದಲ್ಲಿ ಮುದ್ರಿಸಲಾಗುವುದು. ತಿದ್ದುಪಡಿಯ ಸ್ವೀಕೃತಿ ಪತ್ರಕ್ಕೆ ನಿರ್ವಾಹಕರು ಸಹಿ ಮಾಡುವರು ಮತ್ತು ನಿವಾಸಿಗೆ ಒಪ್ಪಿಸುವರು. ಒಪ್ಪಿಗೆ ಪತ್ರಕ್ಕೆ ನಿವಾಸಿಯು ಸಹಿ ಮಾಡುವರು ಮತ್ತು ನಿರ್ವಾಹಕರು ನಿವಾಸಿಯ ಇತರೆ ದಾಖಲೆಗಳ ಜೊತೆಯಲ್ಲಿ ಕಡತಕ್ಕೆ ಹಾಕುವರು.
ಮೇಲ್ವಿಚಾರಕರು ಎಂದರೆ ಯಾರು ಮತ್ತು ಆತನ/ಆಕೆಯ ವಿದ್ಯಾರ್ಹತೆಗಳೇನು?keyboard_arrow_down
ಓರ್ವ ಮೇಲ್ವಿಚಾರಕರನ್ನು ಒಂದು ನೋಂದಣಿ ಸಂಸ್ಥೆಯು ನೋಂದಣಿ ಕೇಂದ್ರಗಳ ಕಾರ್ಯಾಚರಣೆಗಾಗಿ ಮತ್ತು ನೋಂದಣಿ ಕೇಂದ್ರಗಳ ನಿರ್ವಹಣೆಗಾಗಿ ನೇಮಕ ಮಾಡಲಾಗುವುದು. ಪ್ರತಿಯೊಂದು ನೋಂದಣಿ ಕೇಂದ್ರದಲ್ಲಿಯೂ ಓರ್ವ ಮೇಲ್ವಿಚಾರಕರನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ. ಈ ಪಾತ್ರಕ್ಕೆ ಅರ್ಹತೆಯನ್ನು ಹೊಂದುವುದಕ್ಕಾಗಿ ವ್ಯಕ್ತಿಯು ಈ ಕೆಳಗಿನ ಮಾನದಂಡಗಳನ್ನು ಪೂರೈಸಿರಬೇಕು:
ವ್ಯಕ್ತಿಯು 18 ವರ್ಷಗಳು ಮತ್ತು ಅದಕ್ಕೂ ಹೆಚ್ಚಿನ ವಯಸ್ಸಿನವರಾಗಿರತಕ್ಕದ್ದು
- ವ್ಯಕ್ತಿಯು 10+2 ತರಗತಿಗಳಲ್ಲಿ ತೇರ್ಗಡೆ ಹೊಂದಿರತಕ್ಕದ್ದು ಮತ್ತು ಓರ್ವ ಪದವೀದರರಿಗೆ ಆಧ್ಯತೆಯನ್ನು ನೀಡಲಾಗುವುದು.
- ವ್ಯಕ್ತಿಯು ಆಧಾರ್ ಗಾಗಿ ನೋಂದಣಿಯನ್ನು ಮಾಡಿಸಿಕೊಂಡಿರತಕ್ಕದ್ದು ಮತ್ತು ಆತನ/ಆಕೆಯ ಆಧಾರ್ ಸಂಖ್ಯೆಯು ತಂತ್ರಾಂಶ ಅನ್ವಯದಿಂದ ಹೊರತೆಗೆದಿರತಕ್ಕದ್ದು.
- ವ್ಯಕ್ತಿಯು ಗಣಕಯಂತ್ರ ನಿರ್ವಹಣೆಯಲ್ಲಿ ಉತ್ತಮ ಅರಿವನ್ನು ಮತ್ತು ಅನುಭವವನ್ನು ಹೊಂದಿರತಕ್ಕದು.
- ವ್ಯಕ್ತಿಯು ಭಾವಿಗುಪ್ರಾದಿಂದ ನೇಮಕ ಮಾಡಲ್ಪಟ್ಟಿರುವ ಒಂದು ಪರೀಕ್ಷಿಸುವ ಮತ್ತು ಪ್ರಮಾಣೀಕರಿಸುವ ಸಂಸ್ಥೆಯಿಂದ “ಮೇಲ್ವಿಚಾರಕರ ಪ್ರಮಾಣಪತ್ರವನ್ನು ಪಡೆದಿರತಕ್ಕದ್ದು.
ಓರ್ವ ಮೇಲ್ವಿಚಾರಕರಾಗಿ ಕೆಲಸ ಪ್ರಾರಂಭಿಸುವ ಮೊದಲು:
- ವ್ಯಕ್ತಿಯು ನೋಂದಣಿಯ ಪ್ರಾರಂಭಕ್ಕೆ ಮುಂಚಿತವಾಗಿ ಭಾವಿಗುಪ್ರಾದ ಮಾರ್ಗಸೂಚಿಗಳ ಅನುಸಾರ ಯಾವುದಾದರೂ ನೋಂದಣಿ ಸಂಸ್ಥೆಯಿಂದ ನೇಮಕಗೊಂಡಿರತಕ್ಕದ್ದು ಮತ್ತು ಸಕ್ರಿಯಗೊಂಡಿರತಕ್ಕದ್ದು.
- ವ್ಯಕ್ತಿಯು ಆಧಾರ್ ನೋಂದಣಿ/ಇಂದಿನದಿನದನ್ನಾಗಿಸುವಿಕೆ ಪ್ರಕ್ರಿಯೆಗಳು ಮತ್ತು ಆಧಾರ್ ನೋಂದಣಿಯಲ್ಲಿ ಉಪಯೋಗಿಸಲಾಗುವ ವಿವಿಧ ಉಪಕರಣಗಳು ಮತ್ತು ಸಾಧನಗಳ ಮೇಲೆ ಪ್ರಾದೇಶಿಕ ಕಚೇರಿಗಳು/ನೋಂದಣಿ ಸಂಸ್ಥೆಗಳು ನಡೆಸುವ ತರಬೇತಿಯನ್ನು ಪೂರ್ಣಗೊಳಿಸಿರತಕ್ಕದ್ದು.
- ವ್ಯಕ್ತಿಯು ಪ್ರಮಾಣೀಕರಣ ಪರೀಕ್ಷೆಗೆ ಹಾಜರಾಗುವ ಮೊದಲು ಭಾವಿಗುಪ್ರಾದ ಜಾಲತಾಣದಲ್ಲಿ ಲಭ್ಯವಿರುವ ಆಧಾರ್ ನೋಂದಣಿ/ಇಂದಿನದಿನದನ್ನಾಗಿ ಮಾಡುವಿಕೆಗಳ ಮೇಲಿನ ಸಂಪೂರ್ಣ ತರಬೇತಿ ವಿಷಯಕ/ಸಾಮಗ್ರಿಗಳನ್ನು ಓದಿರತಕ್ಕದ್ದು.
- ವ್ಯಕ್ತಿಯು ಸ್ಥಳಿಯ ಭಾಷೆಯಲ್ಲಿ ಕೀ ಬೋರ್ಡು ಮತ್ತು ಲಿಪ್ಯಂತರಣದಲ್ಲಿ ಸುಲಲಿತವಾಗಿ ಕಾರ್ಯನಿರ್ವಹಿಸುವಂತಿರಬೇಕು.
ನೋಂದಣಿ ಸಂಸ್ಥೆಯ ಮೇಲ್ವಿಚಾರಕರ ಕರ್ತವ್ಯಗಳು/ಜವಾಬ್ದಾರಿಗಳು ಏನೇನು?keyboard_arrow_down
ನೋಂದಣಿ ಕೇಂದ್ರದಲ್ಲಿ ಮೇಲ್ವಿಚಾರಕರ ಪಾತ್ರವು ನೊಂದಣಿ ಕೇಂದ್ರದಲ್ಲಿನ ಕಾರ್ಯಚಟುವಟಿಕೆಗಳ ಕಾರ್ಯಗತಗೊಳಿಸುವಿಕೆಯನ್ನು ನೋಂದಣಿ ಕೇಂದ್ರದ ಇತರೆ ಅಗತ್ಯತೆಗಳನ್ನು ಪೂರ್ವಭಾವಿಯಾಗಿ ಯೋಜಿಸುವುದು ಮತ್ತು ಅದಕ್ಕಾಗಿ ವ್ಯವಸ್ಥೆಗಳನ್ನು ಮಾಡುವುದು, ನೋಂದನೀ ಕೇಂದ್ರಗಳ ಸ್ಥಾಪನೆಗಾಗಿ ಖಚಿತಪಡಿಸಿಕೊಳ್ಳಬೇಕಾದ ಅಂಶಗಳ ಪಟ್ಟಿಯ ಅನುಸಾರ ಭಾವಿಗುಪ್ರಾದ ಮಾರ್ಗಸೂಚಿಗಳ ಅನುಸಾರ ನೋಂದಣಿ ಕೇಂದ್ರಗಳಲ್ಲಿ ನೋಂದಣಿ ಸ್ಟೇಷನ್ನುಗಲನ್ನು ಸ್ಥಾಪಿಸುವುದು ಮತ್ತು ಅಂತಹ ಕೇಂದ್ರದಲ್ಲಿ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುವುದು. ಆಧಾರ್ ನೋಂದಣಿ ಕೇಂದ್ರದಲ್ಲಿ ಓರ್ವ ಮೇಲ್ವಿಚಾರಕರಾಗಿ ಆತನ/ಆಕೆಯ ಪಾತ್ರ ನಿರ್ವಹಿಸುವ ವೇಳೆಯಲ್ಲಿ, ಮೇಲ್ವಿಚಾರಕರು ಈ ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳುವರು:
- ಸ್ಥಳದ ಸಿದ್ಧತೆ
- ನೋಂದಣಿ ಸ್ಟೇಷನ್ನುಗಳು ಮತ್ತು ಕೇಂದ್ರಗಳ ಸ್ಥಾಪನೆಗಾಗಿ ನೋಂದಣಿ ಸಂಸ್ಥೆಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಭಾವಿಗುಪ್ರಾವು ನೋಂದಣಿ ಕೇಂದ್ರಗಳ ಸ್ಥಾಪನೆಗಾಗಿ ಖಚಿತಪಡಿಸಿಕೊಳ್ಳಬೇಕಾದ ಅಂಶಗಳ ಪಟ್ಟಿಯನ್ನು ಒದಗಿಸಿದೆ. ತಾವು ಜವಾಬ್ದಾರರಾಗಿರುವಂತೆ, ಕೇಂದ್ರಕ್ಕಾಗಿ ಎಲ್ಲಾ ಅಗತ್ಯತೆಗಳನ್ನೂ ಪೂರೈಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಮೇಲ್ವಿಚಾರಕರು ಈ ಪಟ್ಟಿಯನ್ನು ಬಳಸಿಕೊಳ್ಳತಕ್ಕದ್ದು. ಆತನು/ಆಕೆಯು ಪ್ರತಿಯೊಂದು ನೋಂದಣಿ ಕೇಂದ್ರದ ಪ್ರಾರಂಭದಲ್ಲಿ ಮತ್ತು/ಅಥವಾ ಪ್ರತೀ ವಾರದಲ್ಲಿ ಒಂದು ಸಲ (ಯಾವುದು ಮೊದಲೊ ಅದರಂತೆ) ಖಚಿತಪಡಿಸಿಕೊಳ್ಳಬೇಕಾದ ಅಂಶಗಳ ಪಟ್ಟಿಗೆ ಸಹಿ ಮಾಡತಕ್ಕದ್ದು. ಖಚಿತಪಡಿಸಿಕೊಳ್ಳಬೇಕಾದ ಅಂಶಗಳ ಪಟ್ಟಿಯನ್ನು ಪ್ರತಿಯೊಂದು ನೋಂದಣಿ ಕೇಂದ್ರದಲ್ಲಿ ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಗಳು/ಭಾವಿಗುಪ್ರಾದಿಂದ ಮತ್ತು ಅವರುಗಳು ನಾಮನಿರ್ದೇಶಿತ ಕಾರ್ಯನಿರ್ವಹಣಾ ಮೇಲ್ವಿಚಾರಕರುಗಳು/ಸಂಸ್ಥೆಯಿಂದ ತದನಂತರದ ಸಮೀಕ್ಷೆಗಾಗಿ/ಲೆಕ್ಕಪರಿಶೋಧನೆಗಾಗಿ ನಿರ್ವಹಿಸಿರತಕ್ಕದ್ದು.
- ಸ್ಥಾಪಿಸಲಾಗಿರುವ ಮತ್ತು ಪರೀಕ್ಷಿಸಲಾಗಿರುವ, ಎಲ್ಲಾ ಸಾಧನಗಳು ಮತ್ತು ಸ್ಕ್ಯಾನರುಗಳ ಸಹಿತ ಮುದ್ರಣ ಯಂತ್ರದ ಜೊತೆಗೆ ಸಂಪರ್ಕಿಸಲಾಗಿರುವ ಸೇರಿಸಲಾಗಿರುವ ಆಧಾರ್ ಕ್ಲೈಂಟಿನ ಜೊತೆಗೆ ಲ್ಯಾಪ್ ಟಾಪ್/ಡೆಸ್ಕ್ ಟಾಪ್ ಗಳ ಸ್ಥಾಪನೆಗೆ ಮತ್ತು ಎಲ್ಲಾ ಸಾಧನಗಳು/ಉಪಕರಣಗಳು ಆಧಾರ್ ನೋಂದಣಿಗಳು/ಇಂದಿನದಿನದನ್ನಾಗಿ ಮಾಡುವ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಸಲುವಾಗಿ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರುವವು ಮೇಲ್ವಿಚಾರಕರು ಜವಾಬ್ದಾರಿಯುತರಾಗಿರುತ್ತಾರೆ.
- ಇತ್ತೀಚಿನ ಆಧಾರ್ ನೋಂದಣಿ ಕ್ಲೈಂಟು/ಇಂದಿನದಿನದನ್ನಾಗಿ ಮಾಡುವಿಕೆಯ ತಂತ್ರಾಂಶ ಅನ್ವಯವನ್ನು ಸ್ಥಾಪಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
- ನೋಂದಣಿ ಸಂಸ್ಥೆಯ ಪ್ರಾಂಗಣವನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಚವಾಗಿ, ಆರೋಗ್ಯಕರವಾಗಿ ಉತ್ತಮವಾಗಿ ನಿರ್ವಹಿಸಲಾಗಿದೆ ಮತ್ತು ವಿದ್ಯುತ್ತು/ಬೆಂಕಿ ಅಪಾಯಗಳಿಂದ ಸುಭದ್ರವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
- ಈ ಕೆಳಗೆ ನೀಡಿರುವಂತೆ ಮೂಲ ನೋಂದಣಿ ಕೇಂದ್ರ ಮಾಹಿತಿಯನ್ನು ಪ್ರತಿಯೊಂದು ನೋಂದಣಿ ಸ್ಟೇಷನ್ನಿನಲ್ಲಿಯೂ ಪ್ರದರ್ಶಿಸಲಾಗಿದೆ (ಸ್ಥಳೀಯ ಭಾಷೆ ಮತ್ತು ಆಂಗ್ಲ ಭಾಷೆಯಲ್ಲಿ) ಎಂಬುದನ್ನು ಖಚಿತಪಡಿಸಲಾಗಿದೆ.
- ರಿಜಿಸ್ಟ್ರಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಯ ಹೆಸರು ಮತ್ತು ದೂರವಾಣಿ/ಮೊಬೈಲು ಸಂಖ್ಯೆ
-
- ನೋಂದಣಿ ಸಂಸ್ಥೆಯ ಹೆಸರು ಮತ್ತು ದೂರವಾಣಿ/ಮೊಬೈಲು ಸಂಖ್ಯೆ
-
- ನೋಂದಣಿ ಕೇಂದ್ರದಲ್ಲಿನ ನೋಂದಣಿ ಸಂಸ್ಥೆಯ ಮೇಲ್ವಿಚಾರಕರ ಹೆಸರು, ಸಂಕೇತ ಮತ್ತು ದೂರವಾಣಿ/ಮೊಬೈಲು ಸಂಖ್ಯೆ
-
- ಮೇಲ್ವಿಚಾರಕರ ಪ್ರತಿಯಾಗಿ ಹೆಚ್ಚಳಗೊಂಡಿರುವ ದೂರುಗಳಿಗೆ ಏರಿಕೆ ಮ್ಯಾಟ್ರಿಕ್ಸ್
-
- ನೋಂದಣಿ ಕೇಂದ್ರದ ಕೆಲಸದ ಸಮಯ ಮತ್ತು ರಜಾ ದಿನಗಳು
-
- ಭಾವಿಗುಪ್ರಾದ ಸಹಾಯ ಕರೆ ಸಂಖ್ಯೆ: 1947 ಮತ್ತು ಇ-ಮೈಲು ವಿಳಾಸ: : This email address is being protected from spambots. You need JavaScript enabled to view it.
keyboard_arrow_up